ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 2025 ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತಕ್ಕೆ ಹಿಂದಿನ ಐಸಿಸಿ ಟೂರ್ನಿಗಳ ಫೈನಲ್‌ಗಳಲ್ಲಿ ನ್ಯೂಜಿಲೆಂಡ್ ಎದುರು ಅನುಭವಿಸಿದ ಸೋಲುಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ.
ಭಾರತವನ್ನು ನ್ಯೂಜಿಲೆಂಡ್ ಐಸಿಸಿ ಟೂರ್ನಿಗಳ ಹಲವು ಮಹತ್ವದ ಪಂದ್ಯಗಳಲ್ಲಿ ಸೋಲಿಸಿದೆ:
- 2019 ವಿಶ್ವಕಪ್ ಸೆಮಿಫೈನಲ್ – ನ್ಯೂಜಿಲೆಂಡ್ 18 ರನ್ ಗೆ ಗೆದ್ದು, ಭಾರತವನ್ನು ಫೈನಲ್‌ಗೆ ಪ್ರವೇಶಿಸಲು ಬಿಡಲಿಲ್ಲ.
- 2021 ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ – ನ್ಯೂಜಿಲೆಂಡ್ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು.
ಈ ಹಿಂದಿನ ಸೋಲುಗಳ ಹಿನ್ನೆಲೆಯು ಈ ಬಾರಿ ಭಾರತ ತಂಡವನ್ನು ಮತ್ತಷ್ಟು ಪ್ರೇರೇಪಿಸುತ್ತಿದ್ದು. ಈ ಬಾರಿ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ತಂಡವು ಕಾದಾಡಲು ಸಜ್ಜಾಗಿದೆ.
ಭಾರತ ಗುಂಪು ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ 44 ರನ್ ಗೆ ಜಯ ಸಾಧಿಸಿತು. ವರೂಣ್ ಚಕ್ರವರ್ತಿ 5/42 ವಿಕೆಟ್ ಪಡೆದು ಗೆಲುವು ತಂದಿದ್ದರು.ಸೆಮಿಫೈನಲ್ ನಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ಗೆ ಜಯ ಸಾಧಿಸಿತು.ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದೆ.
ಫೈನಲ್‌ನಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ನಲ್ಲಿ ಪ್ರಮುಖ ಪಾತ್ರವಹಿಸಬಹುದು.ವರುಣ್ ಚಕ್ರವರ್ತಿ , ಶಮಿ , ಪಾಂಡ್ಯ ಬೌಲಿಂಗ್ ನಲ್ಲಿ ಭಾರತಕ್ಕೆ ಬಲ ಕೊಡಬಹುದು.ನ್ಯೂಜಿಲೆಂಡ್ ತಂಡದಲ್ಲಿ ಕೇನ್ ವಿಲಿಯಂಸನ್ ಮತ್ತು ರಚಿನ್ ರವೀಂದ್ರ ಭರವಸೆ ಮೂಡಿಸಿದ್ದಾರೆ.ಮಾರ್ಚ್ 9 ರಂದು ನಡೆಯುವ ಈ ಮಹತ್ವದ ಫೈನಲ್‌ನಲ್ಲಿ ಭಾರತ ತನ್ನ ಐಸಿಸಿ ಫೈನಲ್ ಸೋಲುಗಳ ಸರಣಿಯನ್ನು ಮುಗಿಸಿ ಚಾಂಪಿಯನ್ ಆಗಿ ಬರಲಿ ಎಂಬುದು ನಮ್ಮೆಲ್ಲರ ಆಶಯ

ಇತ್ತ ನ್ಯೂಜಿಲೆಂಡ್ ಕೋಚ್: “ನಾವು ಕೇವಲ ಗೆಲುವಿನತ್ತ ಗಮನಹರಿಸಿದ್ದೇವೆ” ಎಂದು ತಿಳಿಸಿದ್ದಾರೆ