ಇತ್ತೀಚಿಗೆ ಬಿಡುಗಡೆಗೊಂಡ ‘ಚಾವಾ’ ಸಿನಿಮಾ ಭಾರೀ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಬಾರಿ ಗಳಿಕೆ ಗಳಿಸಿದೆ . ಲಕ್ಸ್ಮಣ್ ಉಟೇಕರ್ ನಿರ್ದೇಶನದಲ್ಲಿ, ವಿಕ್ಕಿ ಕೌಶಲ್ ಚತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ ಮತ್ತು ಕನ್ನಡದ ರಷ್ಮಿಕಾ ಮಂದಣ್ಣ ಕೂಡ ನಟಿಸಿದ್ದು ಎಲ್ಲಾ ಕಡೆಯೂ ಬಾರಿ ಪ್ರಸಂಶೆಗಳಿಸಿದ್ದಾರೆ.
ಬಾಕ್ಸ್ ಆಫೀಸ್ ಸಂಗ್ರಹ (₹ ಕೋಟಿ):
- ಮೂರು ವಾರಗಳ ಒಳಗೆ: ₹645.58 ಕೋಟಿ (ಜಗತ್ತಿನ ಮಟ್ಟದಲ್ಲಿ)
- ಭಾರತೀಯ ಕಲೆಕ್ಷನ್: ₹471.56 ಕೋಟಿ
- ವಿದೇಶೀ ಕಲೆಕ್ಷನ್: $10.25 ಮಿಲಿಯನ್ (~₹88.84 ಕೋಟಿ)
- ರಿಲೀಸ್ ಅದ ದಿನದ ಕಲೆಕ್ಷನ್: ₹33.10 ಕೋಟಿ
- ಮೊದಲ ವಾರಾಂತ್ಯ: ₹121.43 ಕೋಟಿ
- ಪ್ರಥಮ ವಾರ: ₹225.28 ಕೋಟಿ
- ಎರಡನೇ ವಾರ: ₹411.46 ಕೋಟಿ
ಆರ್. ರಹ್ಮಾನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿಮರ್ಶಕರು ಭರ್ಜರಿ ಪ್ರಶಂಸೆ ನೀಡಿದ್ದಾರೆ. ಅದ್ದೂರಿ ಸೆಟ್ಟಿಂಗ್‌ಗಳು, ನಾಟಕೀಯ ಕಥಾನಕ, ಮತ್ತು ಭಾವನಾತ್ಮಕ ಸಂಭಾಷಣೆಗಳ ಮೂಲಕ ‘ಚಾವಾ’ ಪ್ರೇಕ್ಷಕರ ಹೃದಯ ಗೆದ್ದಿದೆ.
ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಹೊಂದುತ್ತಿರುವ ಈ ಚಿತ್ರ, ಇನ್ನೂ ಹೆಚ್ಚಿನ ಸಂಗ್ರಹದ ನಿರೀಕ್ಷೆಯಲ್ಲಿದೆ.
