ಜಡೇಜಾ ಸ್ಪೆಲ್ ಬಳಿಕ ಕೊಹ್ಲಿಯಿಂದ ಭಾವುಕ ಅಪ್ಪುಗೆ – ಓಡಿಐಗೆ(ODI ) ವಿದಾಯವೇ?

Share and Spread the love

2025 ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸ್ಪೆಲ್ ಪೂರ್ಣಗೊಂಡ ಬಳಿಕ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳುವ ದೃಶ್ಯವು ಕ್ರಿಕೆಟ್ ಅಭಿಮಾನಿಗಳನ್ನು ಭಾವುಕರನ್ನು ಮಾಡಿತು.

ಜಡೇಜಾ ತಮ್ಮ 10 ಓವರ್‌ಗಳ ಸ್ಪೆಲ್‌ನಲ್ಲಿ 30 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಭಾರತ 40 ಓವರ್‌ಗೆ ನ್ಯೂಜಿಲ್ಯಾಂಡ್ ಅನ್ನು 172/5ರ ಸ್ಥಿತಿಗೆ ತಲುಪಿಸಿತ್ತು. ಈ ಸಂದರ್ಭ ಕೊಹ್ಲಿ ಅವರು ಜಡೇಜಾ ಅವರ ಪ್ರಭಾವಶಾಲಿ ಬೌಲಿಂಗ್‌ಗೆ ಗೌರವ ಸೂಚಿಸುವಂತೆ ಅವರನ್ನು ಭಾವುಕವಾಗಿ ಅಪ್ಪಿಕೊಂಡರು.ಇದಾದ ನಂತರ, ಅಭಿಮಾನಿಗಳಲ್ಲಿ “ಇದು ಜಡೇಜಾ ಅವರ ಅಂತಿಮ ಓಡಿಐ ಸ್ಪೆಲ್ ಆಗಿರಬಹುದಾ?” ಎಂಬ ಚರ್ಚೆ ಶುರುವಾಗಿದೆ.

ಜಡೇಜಾ ಅವರ ಮುಂಬರುವ ಭವಿಷ್ಯದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲದಿದ್ದರೂ, ಈ ಕ್ಷಣವು ಅಭಿಮಾನಿಗಳಲ್ಲಿ ಭಾವುಕತೆಯನ್ನು ಉಂಟುಮಾಡಿದೆ

ಜಡೇಜಾ ಅವರ ODI ಗೆ ನಿವೃತ್ತಿ?

ಜಡೇಜಾ ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.ಅವರು ಟಿ20 ವಿಶ್ವಕಪ್ ಅಥವಾ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಬಹುದು.

2025 ಚಾಂಪಿಯನ್ಸ್ ಟ್ರೋಫಿಯು ಅವರ ಕೊನೆಯ ಐಸಿಸಿ ಟೂರ್ನಿಯಾಗಬಹುದಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಕ್ರಿಕೆಟ್ ಪ್ರೇಮಿಗಳಿಗೆ ಈ ಕ್ಷಣ ಒಂದು ಅಮೂಲ್ಯವಾದ ನೆನಪಾಗಿ ಉಳಿಯಲಿದೆ!#Jadeja #ViratKohli #ChampionsTrophy2025 #INDvsNZ #TeamIndia #CricketNews


Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs