ಟೀಕೆಯಿಂದ ಟ್ರೋಫಿವರೆಗೆ – KL ರಾಹುಲ್ ಭಾರತದ ವಿಜಯದ ಶಿಲ್ಪಿ! 🏆🔥

Share and Spread the love

ಹೌದು 2023 ವಿಶ್ವಕಪ್‌ನ ನಂತರ ತೀವ್ರ ಟೀಕೆಗಳಿಗೆ ಒಳಗಾದ ಈ ಆಟಗಾರ ಇದೀಗ 2025 ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿನ ಪ್ರಮುಖ ಶಿಲ್ಪಿಯಾಗಿದ್ದಾರೆ!

2023 ವಿಶ್ವಕಪ್‌ನಲ್ಲಿ ರಾಹುಲ್ ಎದುರಿಸಿದ ಟೀಕೆ:2023 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ, KL ರಾಹುಲ್ ನಿಧಾನಗತಿಯ ಬ್ಯಾಟಿಂಗ್‌ಗಾಗಿ ತೀವ್ರ ಟೀಕೆಗೊಳಗಾದರು.

ಆಸ್ಟ್ರೇಲಿಯ ವಿರುದ್ಧದ ಮಹತ್ವದ ಫೈನಲ್‌ನಲ್ಲಿ, ಅವರು 107 ಎಸೆತಗಳಲ್ಲಿ 66 ರನ್ ಗಳಿಸಿದರು. ಪಂದ್ಯದಲ್ಲಿ ಭಾರತ ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗಿದ್ದರೂ, ರಾಹುಲ್ ಅವರ ನಿಧಾನ ಬ್ಯಾಟಿಂಗ್ ತಂಡದ ಮೇಲೆ ಒತ್ತಡ ತಂದಿತು. ಫೈನಲ್‌ನಲ್ಲಿ ಭಾರತ ಸೋತಾಗ, ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಮರ್ಶಕರು ರಾಹುಲ್ ಅವರ ಬ್ಯಾಟಿಂಗ್ ಶೈಲಿಯನ್ನು ಕಟುವಾಗಿ ಟೀಕಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಹಲವರು ಅವರನ್ನು ‘ಸ್ಲೋ ಬ್ಯಾಟ್ಸ್‌ಮನ್’, ‘ಪ್ರೆಷರ್ ಸಿಟ್ಯುಯೇಷನ್ ಪ್ಲೇಯರ್ ಅಲ್ಲ’ ಎಂಬಂತೆ ತೀವ್ರ ಟೀಕೆ ಮಾಡಿದರು. ಹೀಗೆಯೇ 2023 ವಿಶ್ವಕಪ್‌ನ ನಂತರ ಅವರ ಮೇಲೆ ತೀವ್ರ ಒತ್ತಡ ಹೆಚ್ಚಾಯಿತು.

2025 ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ವಾಪಸಾತಿ:

ಆದರೆ, 2025 ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ KL ರಾಹುಲ್ ಸಂಪೂರ್ಣ ವಿಭಿನ್ನ ಆಟಗಾರನಾಗಿ ಹೊರಹೊಮ್ಮಿದರು. ಟೂರ್ನಿಯಲ್ಲಿ ಅವರ ಬ್ಯಾಟಿಂಗ್ ಶೈಲಿ ಸಂಪೂರ್ಣವಾಗಿ ಬದಲಾಗಿತ್ತು—ನೀವು ಈ ಹಿಂದಿನ ನಿಧಾನಗತಿಯ ಆಟಗಾರನನ್ನೇ ನೋಡುತ್ತಿದ್ದೀರಿ ಎಂದೇನೂ ಅನುಭವವಾಗಿಲ್ಲ!

ಫೈನಲ್‌ನಲ್ಲಿ, ಭಾರತವು 251+ ರನ್ ಗುರಿ ಹೊಂದಿದ್ದ ಸಂದರ್ಭ, ಆರಂಭಿಕ ಆಟಗಾರರ ವಿಕೆಟ್ ಕಳೆದುಕೊಂಡರು.ಈ ವೇಳೆ, ರಾಹುಲ್ ತಮ್ಮ ಶ್ರೇಷ್ಠ ಶೈಲಿಯ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು.ಅವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ, ಹಾರ್ದಿಕ ಪಾಂಡ್ಯ ಮತ್ತು ಅಕ್ಷರ ಪಟೇಲ್ ಹಾಗೂ ಜಡೇಜಾ ಜೊತೆ ಸೇರಿ ಒಳ್ಳೆ ಪಾರ್ಟನರ್ಶಿಪ್ ಮೂಲಕ ತಂಡವನ್ನು ಮುನ್ನಡೆಸಿದರು.ಕೊನೆಯ 2 ಓವರಿನಲ್ಲಿ ಭಾರತಕ್ಕೆ ಗೆಲುವಿನ ಹಾದಿ ಕಲ್ಪಿಸಿದ ಹೀರೋ ರಾಹುಲ್!

ಈ ಟೂರ್ನಿಯಲ್ಲಿ ಅವರ ಆಟದ ಗುಣಮಟ್ಟವನ್ನು ನೋಡಿ ಅಭಿಮಾನಿಗಳು, ಕ್ರಿಕೆಟ್ ಪಂಡಿತರು, ಮಾಜಿ ಆಟಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. 2023ರಲ್ಲಿ ಅವರನ್ನು ಟೀಕಿಸಿದವರು ಈಗ ರಾಹುಲ್ ಅವರನ್ನು ಹೊಗಳುತ್ತಿದ್ದಾರೆ .KL ರಾಹುಲ್ ಟೀಕೆಯಿಂದ ಟ್ರೋಫಿವರೆಗೆ ಮಾಡಿದ ಈ ಪಯಣ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯವಾಗಿರಲಿದೆ! 🔥🇮🇳


Share and Spread the love

Leave a Reply

Your email address will not be published. Required fields are marked *