KPTCL JPM/JSA (KK) Provisional Selection List 2025 OUT: ಕಟ್-ಆಫ್ ಅಂಕ, ಆಯ್ಕೆ ಪಟ್ಟಿ ಇಲ್ಲಿದೆ! ಆಕ್ಷೇಪಣೆಗೆ ಜುಲೈ 31 ಕೊನೆಯ ದಿನಾಂಕ, ಈಗಲೇ ಪರಿಶೀಲಿಸಿ!

KPTCL JPM/JSA (KK) Provisional Selection List 2025 OUT: ಕಟ್-ಆಫ್ ಅಂಕ, ಆಯ್ಕೆ ಪಟ್ಟಿ ಇಲ್ಲಿದೆ! ಆಕ್ಷೇಪಣೆಗೆ ಜುಲೈ 31 ಕೊನೆಯ ದಿನಾಂಕ, ಈಗಲೇ ಪರಿಶೀಲಿಸಿ!
Share and Spread the love

KPTCL JPM/JSA (KK) Provisional Selection List: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಪವರ್‌ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಕಟ್-ಆಫ್ ಅಂಕಗಳನ್ನು ಪ್ರಕಟಿಸಿದೆ. ಸಹನಾ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳು KPTCL ವೆಬ್‌ಸೈಟ್‌ಗೆ ಭೇಟಿ ನೀಡಿ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವನ್ನು ತಪ್ಪಿಸಿಕೊಳ್ಳಬೇಡಿ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

Follow Us Section

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕಲ್ಯಾಣ ಕರ್ನಾಟಕ (ಕೆಕೆ) ವೃಂದದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು KPTCLನ ಅಧಿಕೃತ ವೆಬ್‌ಸೈಟ್ https://kptcl.karnataka.gov.in/ ಗೆ ಭೇಟಿ ನೀಡಿ ತಮ್ಮ ಆಯ್ಕೆ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ.

KPTCL JPM/JSA (KK) Provisional Selection List ಆಯ್ಕೆ ಪ್ರಕ್ರಿಯೆ ಮತ್ತು ಸಹನಾ ಶಕ್ತಿ ಪರೀಕ್ಷೆ

ಈ ಹುದ್ದೆಗಳಿಗೆ 1:5 ಅನುಪಾತದಲ್ಲಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳಿಗೆ ಮೇ 5 ರಿಂದ 8, 2025 ರವರೆಗೆ ಸಹನಾ ಶಕ್ತಿ ಪರೀಕ್ಷೆ (Endurance Test) ನಡೆಸಲಾಗಿತ್ತು. ಸದರಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅರ್ಹತೆ ಪಡೆದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಟ್-ಆಫ್ ಅಂಕಗಳನ್ನು ನಿಗಮದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಕೆಪಿಟಿಸಿಎಲ್‌ನ ಆಡಳಿತ ಮತ್ತು ಮಾನವ ಸಂಪನ್ಮೂಲ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KPTCL JPM/JSA (KK) Provisional Selection List ಆಕ್ಷೇಪಣೆ ಸಲ್ಲಿಸಲು ಅವಕಾಶ

ಪ್ರಕಟಿತ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಸಹನಾ ಶಕ್ತಿ ಪರೀಕ್ಷೆಗೆ ಅರ್ಹತೆ ಹೊಂದಿದ್ದ ಅಭ್ಯರ್ಥಿಗಳು ಮಾತ್ರ ಸೂಕ್ತ ವಿವರ ಹಾಗೂ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣಾ ಪತ್ರದ ವಿಷಯ ಸೂಚಿಯಲ್ಲಿ ‘ಕಿರಿಯ ಸ್ಟೇಷನ್ ಪರಿಚಾರಕ (ಕೆ.ಕೆ)/ಕಿರಿಯ ಪವರ್‌ಮ್ಯಾನ್ (ಕೆ.ಕೆ) – ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ‘ ಎಂದು ನಮೂದಿಸಿ, ಜುಲೈ 31, 2025ರೊಳಗೆ ನಿರ್ದೇಶಕರು (ಆಡಳಿತ ಮತ್ತು ಮಾಸಂ), ನಿಗಮ ಕಾರ್ಯಾಲಯ, ಕೆಪಿಟಿಸಿಎಲ್, ಕಾವೇರಿ ಭವನ, ಬೆಂಗಳೂರು-560009 ವಿಳಾಸಕ್ಕೆ ಸಲ್ಲಿಸುವಂತೆ ಕೋರಲಾಗಿದೆ.

How to Download KPTCL JPM/JSA (KK) Provisional Selection List: ಕೆಪಿಟಿಸಿಎಲ್ ಆಯ್ಕೆ ಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  1. ಮೊದಲು ಕೆಪಿಟಿಸಿಎಲ್‌ನ ಅಧಿಕೃತ ವೆಬ್‌ಸೈಟ್ https://kptcl.karnataka.gov.in/ ಗೆ ಭೇಟಿ ನೀಡಿ.
  2. ನಂತರ ಮುಖಪುಟದಲ್ಲಿರುವ “ನೇಮಕಾತಿ” (Recruitment) ವಿಭಾಗದ ಮೇಲೆ ಕ್ಲಿಕ್ ಮಾಡಿ.
  3. ತದನಂತರ “ನೇಮಕಾತಿ-2024” (Recruitment-2024) ಮೇಲೆ ಕ್ಲಿಕ್ ಮಾಡಿ.
  4. ಅಲ್ಲಿ “ಹೊಸದು ಏನು?” (What’s New?) ಎಂಬ ವಿಭಾಗದಲ್ಲಿ ನೀಡಲಾಗಿರುವ ‘ಕಿರಿಯ ಸ್ಟೇಷನ್ ಪರಿಚಾರಕ (ಕೆ.ಕೆ) ಹುದ್ದೆಯ ಕಟ್-ಆಫ್ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಕೆ.ಕೆ.)’ ಅಥವಾ ‘ಕಿರಿಯ ಪವರ್‌ಮ್ಯಾನ್ (ಕೆ.ಕೆ) ಹುದ್ದೆಯ ಕಟ್-ಆಫ್ ಅಂಕಗಳ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ (ಕೆ.ಕೆ.)’ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
  5. ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

KPTCL JPM/JSA (KK) Provisional Selection List: ಪ್ರಮುಖ ನೇರ ಲಿಂಕ್‌ಗಳು:

ಈ ತಾತ್ಕಾಲಿಕ ಆಯ್ಕೆ ಪಟ್ಟಿಯು ಅಭ್ಯರ್ಥಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದ್ದು, ಮುಂದಿನ ಹಂತಗಳಿಗೆ ತೆರಳುವವರಿಗೆ ಅಭಿನಂದನೆಗಳು.

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

FSNL Recruitment: ಎಫ್‌ಎಸ್‌ಎನ್‌ಎಲ್‌ನಲ್ಲಿ ಸೂಪರ್‌ವೈಸರ್ ಸೇರಿದಂತೆ 50 ಹುದ್ದೆಗಳಿಗೆ ಅರ್ಜಿ ಆಹ್ವಾನ: ಜುಲೈ 24 ಕೊನೆಯ ದಿನಾಂಕ!

BECIL Recruitment 2025: ಇಂಜಿನಿಯರ್‌ಗಳು ಮತ್ತು ಇತರೆ ಕ್ಷೇತ್ರಗಳಿಗಾಗಿ 31 ಪ್ರಮುಖ ಹುದ್ದೆಗಳು- ಜುಲೈ 30ರೊಳಗೆ ಅರ್ಜಿ ಸಲ್ಲಿಸಿ!

SSC JE Recruitment 2025: ಡಿಪ್ಲೊಮಾ, ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ:1340 ಜೆಇ ಹುದ್ದೆಗಳಿಗೆ ಬೃಹತ್ ನೇಮಕಾತಿ!

ISRO Scientist Engineer Recruitment 2025: ಬಾಹ್ಯಾಕಾಶ ಕ್ಷೇತ್ರದಲ್ಲಿ ಸುವರ್ಣಾವಕಾಶ 39 ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!

SSC CHSL Recruitment 2025: ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ: 3131 LDC, JSA & DEO ಹುದ್ದೆಗಳಿಗೆ ಅರ್ಜಿ ಆಹ್ವಾನ!

AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

MECL Recruitment 2025: ಗಣಿ ಕ್ಷೇತ್ರದಲ್ಲಿ ವೃತ್ತಿ ಅವಕಾಶ:108 ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

Indian Air Force Agniveer 2025:ನಿಮ್ಮ ಕನಸು ನನಸಾಗಿಸಿ: ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅಧಿಸೂಚನೆ ಪ್ರಕಟ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ English Blogs