ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) DCET 2025 ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಒಟ್ಟು 12,282 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಆಗಸ್ಟ್ 1 ರೊಳಗೆ ಶುಲ್ಕ ಪಾವತಿಸಿ, ಆಗಸ್ಟ್ 2 ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು. ಪ್ರವೇಶ ವೇಳಾಪಟ್ಟಿ ಮತ್ತು KEA ಅಧಿಕೃತ ಸೂಚನೆಗಳ ವಿವರಗಳನ್ನು ಇಲ್ಲಿ ಪಡೆಯಿರಿ.
ಬೆಂಗಳೂರು, ಜುಲೈ 30, 2025: ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (DCET-2025) ಯ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಐಎಎಸ್ ಅಧಿಕಾರಿ ಎಚ್. ಪ್ರಸನ್ನ ಅವರು ನೀಡಿದ ಹೇಳಿಕೆಯ ಪ್ರಕಾರ, ಮೊದಲ ಮತ್ತು ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಒಟ್ಟು 12,282 ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಶುಲ್ಕ ಪಾವತಿಸಿ, ಹಂಚಿಕೆಯಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಎಚ್. ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ.
DCET 2025: ಪ್ರಮುಖ ದಿನಾಂಕಗಳು ಮತ್ತು ಸೂಚನೆಗಳು:
- ಚಲನ್ ಡೌನ್‌ಲೋಡ್: ಜುಲೈ 30 ರಿಂದ ಜುಲೈ 31ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಶುಲ್ಕ ಪಾವತಿ: ಆಗಸ್ಟ್ 1ರೊಳಗೆ ಶುಲ್ಕ ಪಾವತಿಸಬೇಕು. ಮೊದಲ ಬಾರಿಗೆ ಶುಲ್ಕ ಪಾವತಿಸುವ ಅಥವಾ ಹಿಂದಿನ ಸುತ್ತಿನಿಂದ ಶುಲ್ಕ ಹೊಂದಾಣಿಕೆ ಮಾಡುವ ಅಭ್ಯರ್ಥಿಗಳು 30-07-2025 ರಿಂದ 01-08-2025 ರವರೆಗೆ (ಬ್ಯಾಂಕಿಂಗ್ ಸಮಯಗಳಲ್ಲಿ) ಪಾವತಿಸಬಹುದು.
- ಸೀಟು ಖಚಿತತೆಯ ಚೀಟಿ ಡೌನ್‌ಲೋಡ್: ಜುಲೈ 30 ಮತ್ತು 31ರಂದು ಸೀಟು ಖಚಿತತೆಯ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಕಾಲೇಜುಗಳಿಗೆ ವರದಿ ಮಾಡಲು ಕೊನೆಯ ದಿನಾಂಕ: ಅಭ್ಯರ್ಥಿಗಳು ತಮ್ಮ ಹಂಚಿಕೆ ಮಾಡಿದ ಕಾಲೇಜುಗಳಿಗೆ ವರದಿ ಮಾಡಲು ಕೊನೆಯ ದಿನಾಂಕ 30-07-2025 ರಿಂದ 02-08-2025.
ಅಭ್ಯರ್ಥಿಗಳು ತಮ್ಮ ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದ್ದು, ಹಂಚಿಕೆಯಾದ ಸೀಟನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದು ಕೆಇಎ ತಿಳಿಸಿದೆ. ಅಲ್ಲದೆ, ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು ಯಾವುದೇ “ಛಾಯ್ಸ್” (Choice) ಸೌಲಭ್ಯ ಇರುವುದಿಲ್ಲ. ಹಾಗಾಗಿ, ಈ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ದಿನಾಂಕಗಳಂದು ತಮ್ಮ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಂತೆ ನಿರ್ದೇಶಕರು ಸೂಚಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ
Navodaya Vidyalaya Class 11 Admission 2026: ನೇರ ಲಿಂಕ್, ಅರ್ಹತೆ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ
Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button