KPTCL JSA/JPM [NKK] Final Selection List: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಪವರ್‌ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಮತ್ತು ಕಟ್-ಆಫ್ ಅಂಕಗಳನ್ನು ಪ್ರಕಟಿಸಿದೆ. ಅರ್ಹರಾದ ಅಭ್ಯರ್ಥಿಗಳು KPTCL ವೆಬ್‌ಸೈಟ್‌ಗೆ ಭೇಟಿ ನೀಡಿ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕಟ್-ಆಫ್ ಅಂಕಗಳು ಮತ್ತು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ವೀಕ್ಷಿಸುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ)ಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ (NKK) ಮತ್ತು ಕಿರಿಯ ಪವರ್‌ಮ್ಯಾನ್ (NKK) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ನಿಗಮವು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kptcl.karnataka.gov.in/662/recruitment-2024/en ನಲ್ಲಿ ಅಂತಿಮ ಪಟ್ಟಿಯನ್ನು ಪರಿಶೀಲಿಸಬಹುದು ಎಂದು ತಿಳಿಸಿದೆ.
ಹಿನ್ನೆಲೆ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/44953/2023-24, ದಿನಾಂಕ: 14.10.2024 ಕ್ಕೆ ಅನುಗುಣವಾಗಿ, ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ (ಎಸ್.ಎಸ್.ಎಲ್.ಸಿ/ 10ನೇ ತರಗತಿ) ಗಳಿಸಿರುವ ಅಂಕಗಳ ಜೇಷ್ಠತೆಯ ಆಧಾರದ ಮೇಲೆ, ದಿನಾಂಕ: 05.05.2025 ರಿಂದ 08.05.2025 ರವರೆಗೆ ಅಧಿಸೂಚಿತ ಹುದ್ದೆಗಳ 1:5 ರ ಅನುಪಾತದಲ್ಲಿ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ(ಎನ್.ಕೆ.ಕೆ.) ಮತ್ತು ಕಿರಿಯ ಪವರ್‌ಮ್ಯಾನ್(ಎನ್.ಕೆ.ಕೆ) ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ (Cut-all) ಅಂಕಗಳೊಂದಿಗೆ, ದಿನಾಂಕ: 06.08.2025 ರಂದು ಕವಿಪ್ರನಿನಿ ಅಂತರ್ಜಾಲ ಪ್ರಕಟಣೆ ಸೇರಿದಂತೆ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಯಿತು. ಇದೀಗ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ ಅಂತಿಮ ಆಯ್ಕೆ ಪಟ್ಟಿ ಹೊರಬಂದಿದೆ
ಪ್ರಮುಖ ಅಂಶಗಳು
- ಆಕ್ಷೇಪಣೆಗಳ ಪರಿಶೀಲನೆ ಬಳಿಕ ಪಟ್ಟಿ ಪ್ರಕಟ: ಆಗಸ್ಟ್ 6, 2025 ರಂದು ಹೊರಡಿಸಲಾಗಿದ್ದ ತಾತ್ಕಾಲಿಕ ಪಟ್ಟಿಗೆ ಕಾಲಾವಧಿಯೊಳಗೆ ಅಭ್ಯರ್ಥಿಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದ್ದು, ಅದರನ್ವಯ, ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್-ಆಫ್ (Cut-off) ಅಂಕಗಳೊಂದಿಗೆ https://kptci.karnataka.gov.in/Recruitment ನಲ್ಲಿ ಪ್ರಕಟಿಸಲಾಗಿದೆ.
- ಕೋರ್ಟ್ ತೀರ್ಪಿಗೆ ಒಳಪಟ್ಟಿರುತ್ತದೆ: ಈ ಪಟ್ಟಿ ಕರ್ನಾಟಕ ಹೈಕೋರ್ಟ್‌ನಲ್ಲಿ ಬಾಕಿ ಇರುವ ರಿಟ್ ಅರ್ಜಿ ಸಂಖ್ಯೆ 200882/2025 ರ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಬ್ಯಾಕ್‌ಲಾಗ್ ಹುದ್ದೆಗಳು: ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಖಾಲಿ ಉಳಿದ ಹುದ್ದೆಗಳನ್ನು ಬ್ಯಾಕ್‌ಲಾಗ್ ಹುದ್ದೆಗಳೆಂದು ಪರಿಗಣಿಸಲಾಗಿದ್ದು, ಅದರ ವಿವರಗಳನ್ನು ಅನುಬಂಧದಲ್ಲಿ ಪ್ರಕಟಿಸಲಾಗಿದೆ.
KPTCL JSA/JPM [NKK] Final Selection List : ಅಂತಿಮ ಪಟ್ಟಿಯನ್ನು ವೀಕ್ಷಿಸುವುದು ಹೇಗೆ?
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್ https://kptcl.karnataka.gov.in ಅಥವಾ ನೇರವಾಗಿ ನೇಮಕಾತಿ ಪೋರ್ಟಲ್ https://recruitment.kptcl.karnataka.gov.in ಗೆ ಭೇಟಿ ನೀಡಬೇಕು.
Publishing of the Final Selection List for the post of Junior Station Attendant (NKK) & Junior Powerman (NKK) in KPTCL-Reg. Click below links
ಅಲ್ಲಿ ಲಭ್ಯವಿರುವ ‘ಕಟ್-ಆಫ್’ ಅಂಕಗಳು (Cut-off Score) ಮತ್ತು ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಪಟ್ಟಿಗಳನ್ನು ವೀಕ್ಷಿಸಬಹುದು.
ಅಭ್ಯರ್ಥಿಗಳಿಗೆ ಸೂಚನೆ
ಅಂತಿಮ ಪಟ್ಟಿಯನ್ನು ಪರಿಶೀಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕವಿಪ್ರನಿನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
ಅಧಿಕೃತ ವೆಬ್‌ಸೈಟ್: kptcl.karnataka.gov.in
ವಿಳಾಸ:
ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ),
ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು.
ಈ ಅಂತಿಮ ಆಯ್ಕೆ ಪಟ್ಟಿಯು ಅಭ್ಯರ್ಥಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದ್ದು, ಮುಂದಿನ ಹಂತಗಳಿಗೆ ತೆರಳುವವರಿಗೆ ಅಭಿನಂದನೆಗಳು.
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button