KEA K-SET 2025:ಕೆ-ಸೆಟ್ 2025 ವಿಸ್ತೃತ ಅಧಿಸೂಚನೆ ಪ್ರಕಟ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ!

KEA K-SET 2025:ಕೆ-ಸೆಟ್ 2025 ವಿಸ್ತೃತ ಅಧಿಸೂಚನೆ ಪ್ರಕಟ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ!
Share and Spread the love

KEA K-SET 2025: ಕೆ-ಸೆಟ್ 2025ರ ವಿಸ್ತೃತ ಅಧಿಸೂಚನೆ ಪ್ರಕಟವಾಗಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಜಿಯ ಕೊನೆಯ ದಿನಾಂಕ, ಪರೀಕ್ಷಾ ದಿನಾಂಕ, ಅರ್ಹತೆ, ಶುಲ್ಕ ಮತ್ತು ಪರೀಕ್ಷಾ ವಿಧಾನದ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.

ಬೆಂಗಳೂರು: ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (K-SET) ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿಸ್ತೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯ ಅಥವಾ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2025 ಅಧಿಸೂಚನೆ PDF file Click Here

ಪ್ರಮುಖ ದಿನಾಂಕಗಳು/ K-SET 2025 application Date, K-SET 2025 Exam Date:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 28, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 18, 2025
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 19, 2025
  • ಪ್ರವೇಶಪತ್ರ ಪ್ರಕಟ: ಅಕ್ಟೋಬರ್ 24, 2025
  • ಪರೀಕ್ಷಾ ದಿನಾಂಕ: ನವೆಂಬರ್ 2, 2025

ಅರ್ಹತೆಗಳು ಮತ್ತು ವಯೋಮಿತಿ:

  • ವಿದ್ಯಾರ್ಹತೆ: ಸ್ನಾತಕೋತ್ತರ ಪದವಿಯಲ್ಲಿ ಸಾಮಾನ್ಯ ವರ್ಗದವರಿಗೆ ಕನಿಷ್ಠ ಶೇ. 55 ಅಂಕಗಳು, ಪರಿಶಿಷ್ಟ ಜಾತಿ/ಪಂಗಡ, ವಿಶೇಷಚೇತನರು ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 50 ಅಂಕಗಳನ್ನು ಗಳಿಸಿರಬೇಕು.
  • ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ: ಪ್ರಸ್ತುತ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ತಾತ್ಕಾಲಿಕವಾಗಿ ಪರೀಕ್ಷೆ ತೆಗೆದುಕೊಳ್ಳಬಹುದು. ಆದರೆ, ಕೆ-ಸೆಟ್ ಫಲಿತಾಂಶ ಪ್ರಕಟವಾದ ದಿನದಿಂದ ಎರಡು ವರ್ಷದೊಳಗೆ ಸ್ನಾತಕೋತ್ತರ ಪದವಿಯ ಅಂಕಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯ.
  • ವಯೋಮಿತಿ: ಈ ಪರೀಕ್ಷೆಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
  • ವಿಷಯ: ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಪರೀಕ್ಷೆ ಬರೆಯಬೇಕು.

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2025 ಅರ್ಜಿ ಸಲ್ಲಿಸಲು ನೇರ ಲಿಂಕ್:

1000119447
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2025 ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2025 ನೇರ ಲಿಂಕ್

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ₹1,000
  • ಪ್ರವರ್ಗ-1, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನರು ಮತ್ತು ತೃತೀಯ ಲಿಂಗಿಗಳಿಗೆ: ₹700
  • ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಪರೀಕ್ಷಾ ವಿಧಾನ ಮತ್ತು ವಿಷಯಗಳು:

ಕೆ-ಸೆಟ್ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಎರಡು ಪತ್ರಿಕೆಗಳಿರುತ್ತವೆ.

  1. ಪತ್ರಿಕೆ 1 (ಸಾಮಾನ್ಯ ಪತ್ರಿಕೆ): ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಬೋಧನಾ ಮತ್ತು ಬುದ್ಧಿಮತ್ತೆ ಸಾಮರ್ಥ್ಯವನ್ನು ಪರಿಶೀಲಿಸುತ್ತದೆ. ಇದರಲ್ಲಿ 100 ಅಂಕಗಳ 50 ಪ್ರಶ್ನೆಗಳಿರುತ್ತವೆ ಮತ್ತು ಪರೀಕ್ಷಾ ಸಮಯ 1 ಗಂಟೆ. ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ.
  2. ಪತ್ರಿಕೆ 2 (ವಿಷಯ ಪತ್ರಿಕೆ): ಇದು ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿರುತ್ತದೆ. ಇದರಲ್ಲಿ 200 ಅಂಕಗಳ 100 ಪ್ರಶ್ನೆಗಳಿರುತ್ತವೆ ಮತ್ತು ಪರೀಕ್ಷಾ ಸಮಯ 2 ಗಂಟೆ.
  • ಋಣಾತ್ಮಕ ಮೌಲ್ಯಮಾಪನ: ಪರೀಕ್ಷೆಯಲ್ಲಿ ಯಾವುದೇ ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ.

ಕನಿಷ್ಠ ಅರ್ಹತಾ ಅಂಕಗಳು:

  • ಅರ್ಹತೆ ಪಡೆಯಲು, ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಹಾಜರಾಗಿ ಕನಿಷ್ಠ ಅಂಕಗಳನ್ನು ಗಳಿಸಬೇಕು.
  • ಸಾಮಾನ್ಯ ವರ್ಗದ ಅಭ್ಯರ್ಥಿಗಳು: ಎರಡೂ ಪತ್ರಿಕೆಗಳಲ್ಲಿ ಒಟ್ಟಾಗಿ ಶೇ. 40 ಅಂಕಗಳನ್ನು ಗಳಿಸಬೇಕು.
  • ಮೀಸಲಾತಿ ವರ್ಗದ (ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯುಡಿ) ಅಭ್ಯರ್ಥಿಗಳು: ಎರಡೂ ಪತ್ರಿಕೆಗಳಲ್ಲಿ ಒಟ್ಟಾಗಿ ಶೇ. 35 ಅಂಕಗಳನ್ನು ಗಳಿಸಬೇಕು.

ಕೆಲವು ಮಹತ್ವದ ಸೂಚನೆಗಳು:

  • 1991ರ ಸೆಪ್ಟೆಂಬರ್ 19 ರೊಳಗೆ ಸ್ನಾತಕೋತ್ತರ ಪರೀಕ್ಷೆ ಪೂರ್ಣಗೊಳಿಸಿರುವವರು ಮತ್ತು ಪಿಎಚ್.ಡಿ ಪದವಿ ಪಡೆದವರು ತಮ್ಮ ಒಟ್ಟು ಅಂಕಗಳಲ್ಲಿ ಶೇ. 5ರಷ್ಟು ವಿನಾಯಿತಿ ಪಡೆಯುತ್ತಾರೆ.
  • ಕರ್ನಾಟಕ ರಾಜ್ಯದ ಹೊರಗಿನ ಪರಿಶಿಷ್ಟ ಜಾತಿ/ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದಡಿ ಪರಿಗಣಿಸಲಾಗುತ್ತದೆ.
  • ಈಗಾಗಲೇ ಅದೇ ವಿಷಯದಲ್ಲಿ ಕೆ-ಸೆಟ್ ಅರ್ಹತೆ ಪಡೆದವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಹಾಗೆ ಸಲ್ಲಿಸಿದರೆ ಅವರ ಅರ್ಹತೆಯನ್ನು ರದ್ದುಪಡಿಸಲಾಗುತ್ತದೆ.
  • ಪರೀಕ್ಷೆಯಲ್ಲಿ ಮರು ಮೌಲ್ಯಮಾಪನ ಅಥವಾ ಮರು ಎಣಿಕೆಗೆ ಅವಕಾಶವಿಲ್ಲ.

ಪರೀಕ್ಷಾ ವಿಷಯಗಳು ಮತ್ತು ಕೇಂದ್ರಗಳು:

  • ಒಟ್ಟು ವಿಷಯಗಳು: 33
  • ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬಳ್ಳಾರಿ, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಮತ್ತು ವಿಜಯಪುರ.

ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in ಗೆ ಭೇಟಿ ನೀಡಬಹುದು.

KSET – 2025 ಆನ್‌ಲೈನ್ ಅಪ್ಲಿಕೇಶನ್ ಲಿಂಕ್.01-09-2025 ನೇರ ಲಿಂಕ್: https://cetonline.karnataka.gov.in/kea/kset2025

KARNATAKA STATE ELIGIBILITY TEST-2025/ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ -2025: ನೇರ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ. https://cetonline.karnataka.gov.in/KSET2025/

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2025 ಅಧಿಸೂಚನೆ: Detailed Notification PDF file Click Here

Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ

Navodaya Vidyalaya Class 11 Admission 2026: ನೇರ ಲಿಂಕ್, ಅರ್ಹತೆ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ

Navodaya Class 9 Lateral Entry 2026: ನವೋದಯ 9ನೇ ತರಗತಿಯ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಅರ್ಜಿ ಆಹ್ವಾನ! ನೇರ ಲಿಂಕ್, ಅರ್ಹತೆ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ!

LKG/UKG in Anganwadi’s: ಪೋಷಕರೇ ಇಲ್ಲಿದೆ ಸಿಹಿ ಸುದ್ದಿ! ಇನ್ಮೇಲೆ ದುಬಾರಿ ಫೀಸ್ ಚಿಂತೆ ಬಿಡಿ ಅಂಗನವಾಡಿಗಳಲ್ಲಿ ಪ್ರಾರಂಭವಾಗಲಿದೆ ಉಚಿತ LKG,UKG ಶಿಕ್ಷಣ!

PM Yasasvi 2025: ಪಿಎಂ ಯಶಸ್ವಿ ವಿದ್ಯಾರ್ಥಿವೇತನ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹1.25 ಲಕ್ಷದವರೆಗೆ ಆರ್ಥಿಕ ನೆರವು!

HDFC Bank Parivartan’s ECSS Scholarship : ಶಿಕ್ಷಣಕ್ಕೆ ಹಣದ ಚಿಂತೆ ಬಿಡಿ! 1 ರಿಂದ PG ವರೆಗೆ HDFC ಬ್ಯಾಂಕ್‌ನಿಂದ ಭರ್ಜರಿ ವಿದ್ಯಾರ್ಥಿವೇತನ! ಹೇಗೆ ಪಡೆಯುವುದು? ಸಂಪೂರ್ಣ ವಿವರ ಇಲ್ಲಿದೆ

Karnataka Scholarships 2025; ಕರ್ನಾಟಕ ಸರ್ಕಾರದ ಪ್ರಮುಖ ವಿದ್ಯಾರ್ಥಿವೇತನ (Scholarship) ಯೋಜನೆಗಳು: ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ!

Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ

ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: 2025ರಲ್ಲಿ NSP ಸ್ಕಾಲರ್‌ಶಿಪ್‌ಗಾಗಿ ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ!

Jawahar Navodaya Vidyalaya Class 6: ಪ್ರತಿಭಾನ್ವಿತ ಗ್ರಾಮೀಣ ಮಕ್ಕಳಿಗೆ ಸುವರ್ಣಾವಕಾಶ: ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ (JNVST 2026-27) ಕ್ಕೆ ಅರ್ಜಿ ಆಹ್ವಾನ!

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs