GAIL Recruitment 2025: GAIL ನಲ್ಲಿ ₹90,000 ವೇತನದ Senior Officer/Engineer ಹುದ್ದೆಗಳು: ಅರ್ಹತೆ, ವೇತನ ಮತ್ತು ಅರ್ಜಿ ವಿಧಾನ ಇಲ್ಲಿದೆ

GAIL Recruitment 2025: GAIL ನಲ್ಲಿ ₹90,000 ವೇತನದ Senior Officer/Engineer ಹುದ್ದೆಗಳು: ಅರ್ಹತೆ, ವೇತನ ಮತ್ತು ಅರ್ಜಿ ವಿಧಾನ ಇಲ್ಲಿದೆ

GAIL Recruitment 2025: GAIL (India) Limited ನಿಂದ 29 ಬ್ಯಾಕ್‌ಲಾಗ್ ಹುದ್ದೆಗಳಿಗೆ (Chief Manager, Senior Officer, Engineer) ವಿಶೇಷ ನೇಮಕಾತಿ ಅಧಿಸೂಚನೆ ಪ್ರಕಟ. SC/ST/OBC/PwBD ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕ 23.12.2025. ವಿದ್ಯಾರ್ಹತೆ, ಸಂಬಳ (₹50,000 ರಿಂದ) ಮತ್ತು ಆನ್‌ಲೈನ್ ಅರ್ಜಿ ಲಿಂಕ್ ವಿವರಗಳು ಇಲ್ಲಿವೆ

ಭಾರತದ ಪ್ರಮುಖ ಮಹಾರತ್ನ PSU ಮತ್ತು ನೈಸರ್ಗಿಕ ಅನಿಲ ಕಂಪನಿಯಾದ GAIL (India) Limited ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗ (OBC-NCL), ಮತ್ತು ವಿಕಲಚೇತನ ಅಭ್ಯರ್ಥಿಗಳಿಗಾಗಿ (PwBD) ವಿವಿಧ ವಿಭಾಗಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ಡ್ರೈವ್ ಕುರಿತು ಅಧಿಸೂಚನೆ ಹೊರಡಿಸಿದೆ. ಅರ್ಹ ಭಾರತೀಯ ಪ್ರಜೆಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.


ಪ್ರಮುಖ ದಿನಾಂಕಗಳು ಮತ್ತು ಹುದ್ದೆಗಳ ವಿವರ: GAIL Recruitment 2025 Important Dates and Vacancy Details):

  • ಆನ್‌ಲೈನ್ ಅರ್ಜಿ ನೋಂದಣಿ ಪ್ರಾರಂಭ: 24.11.2025 (ಬೆಳಗ್ಗೆ 11:00 ರಿಂದ)
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.12.2025 (ಸಂಜೆ 18:00 ರವರೆಗೆ)

ಈ ವಿಶೇಷ ನೇಮಕಾತಿ ಡ್ರೈವ್ ಅಡಿಯಲ್ಲಿ ಒಟ್ಟು 29 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಮುಖ್ಯ ಹುದ್ದೆಗಳು ಮತ್ತು ಶ್ರೇಣಿಗಳು (GAIL Recruitment 2025 Grade)

  • ಚೀಫ್ ಮ್ಯಾನೇಜರ್ (ಕಾನೂನು) (Chief Manager (Law)): E-5 ಶ್ರೇಣಿ (1 ಹುದ್ದೆ – OBC)
  • ಸೀನಿಯರ್ ಆಫೀಸರ್ (Senior Officer): E-2 ಶ್ರೇಣಿ (F&A, F&S, BIS, C&P, ಮಾರ್ಕೆಟಿಂಗ್, HR, ಕಾನೂನು, ವೈದ್ಯಕೀಯ ಸೇವೆಗಳು)
  • ಸೀನಿಯರ್ ಇಂಜಿನಿಯರ್ (Senior Engineer) : E-2 ಶ್ರೇಣಿ (ಗೈಲ್ಟೆಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಇನ್‌ಸ್ಟ್ರುಮೆಂಟೇಶನ್, ಬಾಯ್ಲರ್ ಆಪರೇಷನ್ಸ್, ಸಿವಿಲ್, ಪರಿಸರ ಇಂಜಿನಿಯರಿಂಗ್)
  • ಆಫೀಸರ್ (Officer) (ಅಧಿಕೃತ ಭಾಷೆ): E-1 ಶ್ರೇಣಿ

ವಿದ್ಯಾರ್ಹತೆ ಮತ್ತು ಅನುಭವ (Essential Qualifications & Experience)

ಎಲ್ಲಾ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಲೆಕ್ಕಹಾಕಲು ಕೊನೆಯ ದಿನಾಂಕ 23.12.2025 ಆಗಿರುತ್ತದೆ. SC/ST/OBC(NCL)/PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಪ್ರಮುಖ ಹುದ್ದೆಗಳ ಅರ್ಹತೆಗಳು:

  • ಚೀಫ್ ಮ್ಯಾನೇಜರ್ (ಕಾನೂನು) (E-5):
    • ವಿದ್ಯಾರ್ಹತೆ: ಕನಿಷ್ಠ 55% ಅಂಕಗಳೊಂದಿಗೆ ಪದವಿ ಮತ್ತು LLB (3 ವರ್ಷ) ಅಥವಾ 5 ವರ್ಷಗಳ ಇಂಟಿಗ್ರೇಟೆಡ್ LLB (ಕನಿಷ್ಠ 55% ಅಂಕಗಳು).
    • ಅನುಭವ: ಕಾನೂನು ಕಾರ್ಯನಿರ್ವಾಹಕರಾಗಿ ಕನಿಷ್ಠ 12 ವರ್ಷಗಳ ಅನುಭವ.
    • ಗರಿಷ್ಠ ವಯಸ್ಸು: OBC(NCL) ಗೆ 46 ವರ್ಷಗಳು.
  • ಸೀನಿಯರ್ ಇಂಜಿನಿಯರ್ (E-2) (ಎಲ್ಲಾ ವಿಭಾಗಗಳು):
    • ವಿದ್ಯಾರ್ಹತೆ: ಸಂಬಂಧಿತ ಇಂಜಿನಿಯರಿಂಗ್ ಪದವಿ (ಕನಿಷ್ಠ 60% ಅಂಕಗಳು).
    • ಅನುಭವ: ಪ್ರಾಜೆಕ್ಟ್ ಕಮಿಷನಿಂಗ್/ನಿರ್ವಹಣೆ/O&M ಕಾರ್ಯಗಳಲ್ಲಿ ಕನಿಷ್ಠ 1 ವರ್ಷದ ಅನುಭವ.
    • ಗರಿಷ್ಠ ವಯಸ್ಸು: SC/ST ಗೆ 33 ವರ್ಷಗಳು (E-2 ಹುದ್ದೆಗಳಿಗೆ).
  • ಸೀನಿಯರ್ ಆಫೀಸರ್ (ಫೈನಾನ್ಸ್ & ಅಕೌಂಟ್ಸ್) (E-2):
    • ವಿದ್ಯಾರ್ಹತೆ: CA/CMA (ICWA) ಅಥವಾ B.Com/ಇಂಜಿನಿಯರಿಂಗ್ ಪದವಿ ಜೊತೆಗೆ ಫೈನಾನ್ಸ್‌ನಲ್ಲಿ 2 ವರ್ಷಗಳ MBA (ಕನಿಷ್ಠ 60% ಅಂಕಗಳು).
    • ಅನುಭವ: ಫೈನಾನ್ಸ್/ಅಕೌಂಟ್ಸ್‌ನಲ್ಲಿ ಕನಿಷ್ಠ 1 ವರ್ಷದ ಅನುಭವ.

ವೇತನ ಶ್ರೇಣಿ ಮತ್ತು ಭತ್ಯೆಗಳು:

ಆಯ್ಕೆಯಾದ ಅಭ್ಯರ್ಥಿಗಳು ಶ್ರೇಣಿಯ ಪ್ರಕಾರ ಈ ಕೆಳಗಿನ ಆರಂಭಿಕ ಮೂಲ ವೇತನವನ್ನು ಪಡೆಯುತ್ತಾರೆ:

  • E-5 ಶ್ರೇಣಿ (Chief Manager): ಆರಂಭಿಕ ಮೂಲ ವೇತನ ₹90,000/- (ಶ್ರೇಣಿ: ₹90,000 – 2,40,000/-).
  • E-2 ಶ್ರೇಣಿ (Senior Officer/Engineer): ಆರಂಭಿಕ ಮೂಲ ವೇತನ ₹60,000/- (ಶ್ರೇಣಿ: ₹60,000 – 1,80,000/-).
  • E-1 ಶ್ರೇಣಿ (Officer): ಆರಂಭಿಕ ಮೂಲ ವೇತನ ₹50,000/- (ಶ್ರೇಣಿ: ₹50,000 – 1,60,000/-).

ಈ ವೇತನದ ಜೊತೆಗೆ ವೇರಿಯಬಲ್ ಡಿಯರ್‌ನೆಸ್ ಅಲೌನ್ಸ್ (VDA), ಭತ್ಯೆಗಳು, ವಸತಿ/HRA, ವೈದ್ಯಕೀಯ ಸೌಲಭ್ಯ, ಮತ್ತು ಗ್ರೂಪ್ ವಿಮೆಯಂತಹ ಇತರ ಪ್ರಯೋಜನಗಳು ಲಭ್ಯವಿರುತ್ತವೆ.


ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ: (How To Apply Online for GAIL Recruitment 2025):

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು GAIL ವೆಬ್‌ಸೈಟ್ (https://gailonline.com) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
  • ನೋಂದಣಿ —>ಲಾಗ್ ಇನ್ —> ಹುದ್ದೆ ಆಯ್ಕೆ —–>ಮಾಹಿತಿ ಭರ್ತಿ——>ಶುಲ್ಕ ಪಾವತಿ —-> ಸಲ್ಲಿಸಿ ಎಂಬ ಹಂತಗಳನ್ನು ಅನುಸರಿಸಬೇಕು.
  • ಅರ್ಜಿ ಶುಲ್ಕ: OBC (NCL) ಅಭ್ಯರ್ಥಿಗಳಿಗೆ ₹200/-. SC/ST/PwBD ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
  • ಫಾರ್ಮ್ ಸಲ್ಲಿಸುವ ಮೊದಲು “Final Preview” ಬಳಸಿ ಎಲ್ಲಾ ವಿವರಗಳನ್ನು ಪರಿಶೀಲಿಸಿ, ಏಕೆಂದರೆ ಒಮ್ಮೆ ಸಲ್ಲಿಸಿದ ನಂತರ ಎಡಿಟ್ ಮಾಡಲು ಸಾಧ್ಯವಿಲ್ಲ.

ಆಯ್ಕೆ ಪ್ರಕ್ರಿಯೆ:

  • ಅರ್ಹ ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಕರೆಯಲಾಗುತ್ತದೆ.
  • ಹೆಚ್ಚಿನ ಹುದ್ದೆಗಳಿಗೆ ಗ್ರೂಪ್ ಡಿಸ್ಕಷನ್ (GD) ಮತ್ತು/ಅಥವಾ ಸಂದರ್ಶನ (Interview) ಪ್ರಕ್ರಿಯೆ ಇರುತ್ತದೆ.
  • ವಿಶೇಷ ಹುದ್ದೆಗಳಿಗೆ:
    • ಸೀನಿಯರ್ ಆಫೀಸರ್ (F&S) ಗೆ ದೈಹಿಕ ಸಹಿಷ್ಣುತಾ ಪರೀಕ್ಷೆ (PET) ಮತ್ತು ಸಂದರ್ಶನ.
    • ಆಫೀಸರ್ (ಅಧಿಕೃತ ಭಾಷೆ) ಗೆ ಕೌಶಲ್ಯ ಪರೀಕ್ಷೆ (ಭಾಷಾಂತರ ಕೌಶಲ್ಯ) ಮತ್ತು ಸಂದರ್ಶನ.
  • ಕನಿಷ್ಠ ಅರ್ಹತಾ ಅಂಕಗಳು: ಸಂದರ್ಶನದಲ್ಲಿ UR/OBC(NCL) ಗೆ 60%, SC/ST ಗೆ 55%, ಮತ್ತು PwBD ಗೆ 50% ಕನಿಷ್ಠ ಅಂಕಗಳು ಕಡ್ಡಾಯ.

ನಿಮ್ಮ ಅರ್ಹತೆಗೆ ಅನುಗುಣವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ GAIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

GAIL-Notification-for-29-Senior-Officer-Engineer-Posts Download Here:

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
GAIL (India) Limited ನಿಂದ 29 ಬ್ಯಾಕ್‌ಲಾಗ್ ಹುದ್ದೆಗಳಿಗೆ (Senior Officer, Engineer, Chief Manager) ವಿಶೇಷ ನೇಮಕಾತಿ ಅಧಿಕೃತ ಅಧಿಸೂಚನೆ PDF
(GAIL Recruitment 2025 Official Notification PDF )
Official Notification PDF file: Download Here
GAIL (India) Limited ನಿಂದ 29 ಬ್ಯಾಕ್‌ಲಾಗ್ ಹುದ್ದೆಗಳಿಗೆ (Senior Officer, Engineer, Chief Manager) ವಿಶೇಷ ನೇಮಕಾತಿಗಳಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನೇರ ಲಿಂಕ್
(GAIL Recruitment 2025 Apply Online Here)
Apply online Here
ಕೊನೆಯ ದಿನಾಂಕ (Last Date)23.12.2025
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

BSNL Recruitment 2025: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು; B.E/B.Tech/CA/CMA ಅರ್ಹರಿಗೆ ಸುವರ್ಣಾವಕಾಶ!

NABARD Grade A Recruitment 2025: ರಾಷ್ಟ್ರೀಯ ಬ್ಯಾಂಕ್‌ನಲ್ಲಿ 91 ಗ್ರೇಡ್ ‘ಎ’ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣಾವಕಾಶ!

BEML Junior Executive Jobs 2025: ಬೆಂಗಳೂರಿನ BEMLನಲ್ಲಿ BE/B.Tech ಇಂಜಿನಿಯರ್‌ಗಳಿಗೆ 100 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

BEL Probationary Engineer Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ 340 ಇಂಜಿನಿಯರ್ ಹುದ್ದೆ; B.E/B.Tech ಪದವೀಧರರು ತಕ್ಷಣ ಅರ್ಜಿ ಹಾಕಿ!

ಕರ್ನಾಟಕ ಗ್ರಾಮ ಒನ್ ಫ್ರಾಂಚೈಸಿ ನೇಮಕಾತಿ 2025: 7 ಜಿಲ್ಲೆಗಳಲ್ಲಿ ಆನ್‍ಲೈನ್ ಅರ್ಜಿ ಪ್ರಾರಂಭ! ಸಂಪೂರ್ಣ ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಮಾಹಿತಿ

ಭಾರತ್ ಎಲೆಕ್ಟ್ರಾನಿಕ್ಸ್ (BEL) ನೇಮಕಾತಿ 2025: ಇಂಜಿನಿಯರಿಂಗ್ ಅಸಿಸ್ಟೆಂಟ್, ಟೆಕ್ನಿಷಿಯನ್ ಹುದ್ದೆಗಳು – ಡಿಪ್ಲೋಮಾ, ITI ಆದವರಿಗೆ ಸುವರ್ಣಾವಕಾಶ!

Bank of Baroda Recruitment 2025: 50 ಮ್ಯಾನೇಜರ್ ಹುದ್ದೆಗಳಿಗೆ ಬೃಹತ್ ಅವಕಾಶ! ₹1.20 ಲಕ್ಷದವರೆಗೆ ವೇತನ!

RRB NTPC 2025:ರೈಲ್ವೆ ಇಲಾಖೆಯಿಂದ ಪದವಿ/ಪಿಯುಸಿ ಆದವರಿಗೆ 8,850 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs