HDFC Parivartan ECSS Programme 2026-27: ಎಚ್‌ಡಿಎಫ್‌ಸಿ ಬ್ಯಾಂಕ್ ಪರ್ವಿತನ್ ಇಸಿಎಸ್ಎಸ್ ಸ್ಕಾಲರ್‌ಶಿಪ್ 2026-27 ಗೆ ಅರ್ಜಿ ಆಹ್ವಾನಿಸಲಾಗಿದೆ. 1ನೇ ತರಗತಿಯಿಂದ ಡಿಗ್ರಿ ಓದುತ್ತಿರುವ ಬಡ ವಿದ್ಯಾರ್ಥಿಗಳು 75,000 ರೂ.ವರೆಗೆ ವಿದ್ಯಾರ್ಥಿವೇತನ ಪಡೆಯಬಹುದು. ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: HDFC ಬ್ಯಾಂಕ್‌ನಿಂದ 75,000 ರೂ. ಸ್ಕಾಲರ್‌ಶಿಪ್, ಇಂದೇ ಅಪ್ಲೈ ಮಾಡಿ!
ನಮಸ್ಕಾರ ಸ್ನೇಹಿತರೇ, ಇಂದಿನ ದಿನಗಳಲ್ಲಿ ಶಿಕ್ಷಣದ ಖರ್ಚು ತುಂಬಾನೇ ಹೆಚ್ಚಾಗಿದೆ. ಎಷ್ಟೋ ಬಡ ಕುಟುಂಬದ ಮಕ್ಕಳು ಓದಲು ಆಸಕ್ತಿ ಇದ್ದರೂ ಹಣಕಾಸಿನ ತೊಂದರೆಯಿಂದ ಶಾಲೆ, ಕಾಲೇಜು ಬಿಡುತ್ತಿದ್ದಾರೆ. ಇಂತಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಅದ್ಭುತವಾದ ಸ್ಕಾಲರ್‌ಶಿಪ್ ಒಂದನ್ನು ತಂದಿದೆ. ಅದೇ HDFC Bank Scholarship 2026.
ಹೌದು, ಹಣಕಾಸಿನ ತೊಂದರೆಯಿಂದ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಒಳ್ಳೆಯ ಉದ್ದೇಶದಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸಿಎಸ್‌ಆರ್ (CSR) ಕಾರ್ಯಕ್ರಮದ ಅಡಿಯಲ್ಲಿ ಈ Parivartan ECSS Programme ಅನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮೂಲಕ ಬಡ ವಿದ್ಯಾರ್ಥಿಗಳಿಗೆ 75,000 ರೂ. ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದು 1ನೇ ತರಗತಿಯಿಂದ ಹಿಡಿದು ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಡಿಗ್ರಿ (UG, PG) ಓದುತ್ತಿರುವ ಎಲ್ಲರಿಗೂ ಅನ್ವಯವಾಗುತ್ತದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಳವಾಗಿ ತಿಳಿದುಕೊಳ್ಳೋಣ.
ಏನಿದು ಪರಿವರ್ತನ್ ಇಸಿಎಸ್ಎಸ್ ಪ್ರೋಗ್ರಾಮ್ (HDFC Parivartan ECSS Programme 2026-27)?
ಇದು ಕೇವಲ ಒಂದು ಸ್ಕಾಲರ್‌ಶಿಪ್ ಅಲ್ಲ, ಬಡಮಕ್ಕಳ ಪಾಲಿನ ಆಶಾಕಿರಣ. ಕೌಟುಂಬಿಕ ಸಮಸ್ಯೆ ಅಥವಾ ಆರ್ಥಿಕ ಮುಗ್ಗಟ್ಟಿನಿಂದ ಶಾಲೆ ಬಿಡುವ ಹಂತದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಮತ್ತು ಕೌಶಲ್ಯಾಭಿವೃದ್ಧಿಗೆ ಬ್ಯಾಂಕ್ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಸ್ಕಾಲರ್‌ಶಿಪ್ ಅದರ ಒಂದು ಭಾಗವಾಗಿದೆ. ಇದು ಉತ್ತಮವಾದ Scholarship for Students ಆಗಿದ್ದು, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುತ್ತಿದೆ.
ಯಾರೆಲ್ಲಾ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು)
ಈ ಸ್ಕಾಲರ್‌ಶಿಪ್ ಪಡೆಯಲು ಕೆಲವು ಸರಳ ನಿಯಮಗಳನ್ನು ನೀಡಲಾಗಿದೆ:
- ಅಭ್ಯರ್ಥಿಯು ಪ್ರಸ್ತುತ 1 ರಿಂದ 12ನೇ ತರಗತಿಯಲ್ಲಿ, ಅಥವಾ ಡಿಪ್ಲೋಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರಬೇಕು.
- ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 2.5 ಲಕ್ಷ ರೂ. ಗಿಂತ ಕಡಿಮೆ ಇರಬೇಕು.
- ಇದು ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ.
- ಕಳೆದ ಮೂರು ವರ್ಷಗಳಲ್ಲಿ ಕುಟುಂಬದಲ್ಲಿ ಸಾವು, ಅನಾರೋಗ್ಯ, ಅಥವಾ ಉದ್ಯೋಗ ಕಳೆದುಕೊಂಡಂತಹ ಸಮಸ್ಯೆ ಎದುರಿಸಿ, ಶಿಕ್ಷಣ ಮೊಟಕುಗೊಳಿಸುವ ಭೀತಿಯಲ್ಲಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಡಿಪ್ಲೋಮಾ ಓದುತ್ತಿರುವವರು 12ನೇ ತರಗತಿ ಮುಗಿಸಿದ ನಂತರ ಸೇರಿದ್ದರೆ ಮಾತ್ರ ಅರ್ಹರು.
ಎಷ್ಟು ಹಣ ಸಿಗುತ್ತದೆ? (ಸ್ಕಾಲರ್‌ಶಿಪ್ ಮೊತ್ತ)
| ತರಗತಿ / ಕೋರ್ಸ್ | ವಿದ್ಯಾರ್ಥಿವೇತನದ ಮೊತ್ತ (ರೂ.) |
| 1 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ | 15,000 ರೂ. |
| 7 ರಿಂದ 12ನೇ ತರಗತಿ, ಡಿಪ್ಲೋಮಾ, ITI, ಪಾಲಿಟೆಕ್ನಿಕ್ | 18,000 ರೂ. |
(ಗಮನಿಸಿ: ಉನ್ನತ ಶಿಕ್ಷಣ ಓದುತ್ತಿರುವವರಿಗೆ 75,000 ರೂ. ವರೆಗೆ ಸಿಗುವ ಅವಕಾಶವಿದೆ).
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು
- ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ.
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ (2025-26).
- ಆಧಾರ್ ಕಾರ್ಡ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿ.
- ಪ್ರಸ್ತುತ ವರ್ಷದ (2026-27) ಅಡ್ಮಿಷನ್ ಪ್ರೂಫ್ (ಫೀಸ್ ರಶೀದಿ, ಐಡಿ ಕಾರ್ಡ್ ಅಥವಾ ಬೋನಫೈಡ್ ಸರ್ಟಿಫಿಕೇಟ್).
- ಬ್ಯಾಂಕ್ ಪಾಸ್‌ಬುಕ್ ಅಥವಾ ಕ್ಯಾನ್ಸಲ್ ಆದ ಚೆಕ್.
- ಆದಾಯ ಪ್ರಮಾಣಪತ್ರ (ಗ್ರಾಮ ಪಂಚಾಯತ್, ತಹಸೀಲ್ದಾರ್, ಅಥವಾ SDM ನಿಂದ ಪಡೆದದ್ದು).
- ಬಿಕ್ಕಟ್ಟಿನ ಪುರಾವೆ (ಕುಟುಂಬದಲ್ಲಿ ಯಾರಾದರೂ ತೀರಿಕೊಂಡಿದ್ದರೆ ಡೆತ್ ಸರ್ಟಿಫಿಕೇಟ್, ಕೆಲಸ ಕಳೆದುಕೊಂಡಿದ್ದರೆ ಲೆಟರ್, ಅನಾರೋಗ್ಯದ ಮೆಡಿಕಲ್ ರಿಪೋರ್ಟ್ ಇತ್ಯಾದಿ ಇದ್ದರೆ).
ಅರ್ಜಿ ಸಲ್ಲಿಸುವುದು ಹೇಗೆ? (How to Apply Parivartan ECSS Programme for School Students (Merit-cum-Need Based) 2026-27)
ಇದೊಂದು ಆನ್‌ಲೈನ್ ಪ್ರಕ್ರಿಯೆಯಾಗಿದ್ದು, Online Scholarship Apply ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ಮೊದಲಿಗೆ Buddy4Study Scholarship ಪೋರ್ಟಲ್‌ಗೆ ಭೇಟಿ ನೀಡಿ.
- ಅಲ್ಲಿ ನಿಮ್ಮ ಇಮೇಲ್, ಮೊಬೈಲ್ ನಂಬರ್ ಅಥವಾ ಗೂಗಲ್ ಅಕೌಂಟ್ ಬಳಸಿ ಲಾಗಿನ್/ರಿಜಿಸ್ಟರ್ ಆಗಿ.
- ನಂತರ “Parivartan ECSS Programme 2026-27” ಪೇಜ್ ಓಪನ್ ಆಗುತ್ತದೆ.
- ‘Start Application’ ಮೇಲೆ ಕ್ಲಿಕ್ ಮಾಡಿ.
- ಫಾರ್ಮ್‌ನಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ.
- ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಕೊನೆಯದಾಗಿ ‘Preview’ ನೋಡಿ, ಎಲ್ಲವೂ ಸರಿಯಾಗಿದ್ದರೆ ‘Submit’ ಬಟನ್ ಕ್ಲಿಕ್ ಮಾಡಿ.
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
- ಪಿಯುಸಿ ರಿಸಲ್ಟ್ ಬಂತು! ಮುಂದೇನು? ಲೈಫ್ ಸೆಟ್ ಮಾಡುವ ಬೆಸ್ಟ್ ಕೋರ್ಸ್‌ಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!
- ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ! SSP Scholarship 2026-27 ಅರ್ಜಿ ಸಲ್ಲಿಕೆ ಆರಂಭ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!
- KEA ಯಿಂದ 750 ‘ಭೂಮಾಪಕ’ ಹುದ್ದೆಗಳ ನೇಮಕಾತಿಗೆ ಅರ್ಜಿ ದಿನಾಂಕ ವಿಸ್ತರಣೆ: BE/ B.Sc/Diploma ಪಾಸಾದವರು ಕೂಡ ಅಪ್ಲೈ ಮಾಡಿ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button