286 ದಿನಗಳ ಬಳಿಕ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ – ನಾಸಾ ತಂಡದ ಸಂಭ್ರಮ

286 ದಿನಗಳ ಬಳಿಕ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ – ನಾಸಾ ತಂಡದ ಸಂಭ್ರಮ

286 ದಿನಗಳ ಬಳಿಕ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ – ನಾಸಾ ತಂಡದ ಸಂಭ್ರಮ ಇದರ ಕಂಪ್ಲೀಟ್ ಡೀಟೇಲ್ಸ್ ಮತ್ತು ಎಕ್ಸ್ ಕ್ಲೂಸಿವ್ ಕ್ಲಿಪ್ ಗಳು ಇಲ್ಲಿದೆ ನೋಡಿ.

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ನೌಕೆಯ ಪ್ರಯಾಣದ 286 ದಿನಗಳ ನಂತರ ಫ್ಲೋರಿಡಾ ಕರಾವಳಿಯ ಸಮುದ್ರದಲ್ಲಿ ಮಾರ್ಚ್ 19 2025 ಬೆಳಗ್ಗೆ 03:28 AM ಗೆ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದಾರೆ.

ಹ್ಯಾಚ್ ತೆರೆಯುತ್ತಿದ್ದಂತೆಯೇ, ಸುನಿತಾ ವಿಲಿಯಮ್ಸ್ ಅವರು ನಗುನಗುತ್ತಾಥಂಬ್ಸ್-ಅಪ್ ಚಿಹ್ನೆ ತೋರಿಸಿ ಸಂಭ್ರಮ ಪಟ್ಟರು.

https://quicknewztoday.com/sunita-williams-returns-to-earth-after-286-days-nasa-celebrates

ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು 286 ದಿನಗಳ ಸುದೀರ್ಘ ಬಾಹ್ಯಾಕಾಶ ಯಾತ್ರೆಯ ನಂತರ ಇಂದು ಬೆಳಿಗ್ಗೆ SpaceX ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಿದ್ದಾರೆ.2024 ಜೂನ್ 5 ರಂದು, ಈ ಇಬ್ಬರೂ ಗಗನಯಾತ್ರಿಗಳು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗೆ ಹಾರಿದ್ದರು. ಈ ಮಿಷನ್ ಕೇವಲ 8 ದಿನಗಳ ಅವಧಿಗೆ ಯೋಜಿಸಲಾಗಿತ್ತು, ಆದರೆ ಬಾಹ್ಯಾಕಾಶ ನೌಕೆಯ ತಾಂತ್ರಿಕ ಸಮಸ್ಯೆಗಳ ಕಾರಣ 9 ತಿಂಗಳ ಕಾಲ ISS ನಲ್ಲಿ ಉಳಿಯಬೇಕಾಯಿತು.

ಈ ಸುದ್ದಿ ಓದಿ: ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲು ಸಜ್ಜು! Crew-10 ಮಿಷನ್ ಯಶಸ್ವಿ ಉಡಾವಣೆ

286 ದಿನಗಳ ಬಳಿಕ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ – ನಾಸಾ ತಂಡದ ಸಂಭ್ರಮ

286 ದಿನಗಳ ಬಳಿಕ ಭೂಮಿಗೆ ಮರಳಿದ ಕ್ಷಣ!:

ಫ್ಲೋರಿಡಾದ ಕರಾವಳಿಯ ಸಮುದ್ರದಲ್ಲಿ ಲ್ಯಾಂಡ್ ಆಗುವ ಮೊದಲು, ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಪ್ಯಾರಾಶೂಟ್ ಅನ್ನು ಯಶಸ್ವಿಯಾಗಿ ನಿಯೋಜಿಸಿ ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಮಾಡಿತು. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ನಾಸಾದ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್‌ನ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಸಹಾಯ ನೀಡಿದ್ದರು.

NASA ತಂಡವು ಹ್ಯಾಚ್ ತೆರೆಯುತ್ತಿದ್ದಂತೆಯೇ, ಸುನಿತಾ ವಿಲಿಯಮ್ಸ್ ಅವರು ನಗುನಗುತ್ತಾಥಂಬ್ಸ್-ಅಪ್ ಚಿಹ್ನೆ ತೋರಿಸಿ ಸಂಭ್ರಮ ಪಟ್ಟರು ಮತ್ತು ಗಗನಯಾತ್ರಿಗಳಿಗೆ ನಡೆದಾಡಲು ಸಹಾಯವಾಗಲು ಸ್ಟ್ರಕ್ಚರ್ ಗಳನ್ನು ಬಳಸಿ ಅವರನ್ನು ಬರಮಾಡಿಕೊಂಡರು.

ಬಾಹ್ಯಾಕಾಶದಲ್ಲಿ 286 ದಿನಗಳ ಕಾಲ ತೂಕರಹಿತ ಪರಿಸರದಲ್ಲಿ ಇದ್ದ ಅವರು, ಭೂಮಿಯ ಗುರತ್ವಾಕರ್ಷಣಕ್ಕೆ ಮತ್ತೆ ಹೊಂದಿಕೊಳ್ಳಬೇಕಾಗಿದೆ.ನಾಸಾ ತಜ್ಞರು ಅವರ ಆರೋಗ್ಯ ಪರೀಕ್ಷಿಸಿ, ಫಿಟ್‌ನೆಸ್ ಪರೀಕ್ಷೆ ನಡೆಸುತ್ತಿದ್ದಾರೆ.

🚀 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ! ಈ ಸುದ್ದಿಯನ್ನು ಶೇರ್ ಮಾಡಿ ಮತ್ತು quicknewztoday.com ನಲ್ಲಿ ಇನ್ನಷ್ಟು ಅಪ್‌ಡೇಟ್ಸ್ ಪಡೆಯಿರಿ! 😊

One thought on “286 ದಿನಗಳ ಬಳಿಕ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ – ನಾಸಾ ತಂಡದ ಸಂಭ್ರಮ

Leave a Reply

Your email address will not be published. Required fields are marked *