IPL 2025: ಮುಂಬೈ ಇಂಡಿಯನ್ಸ್ (MI)ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK)ಗೆ 4ವಿಕೆಟ್‌ಗಳಿಂದ ಭರ್ಜರಿ ಗೆಲುವು ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಐಪಿಎಲ್ 2025 ಟೂರ್ನಿಯ ಹಂಗಾಮಿ ಪಂದ್ಯಗಳಲ್ಲಿ ಇಂದು ಬಹು ನಿರೀಕ್ಷಿತ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧ 4 ವಿಕೆಟ್‌ಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಚೆನ್ನೈ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಶಕ್ತ ಪ್ರದರ್ಶನ ನೀಡಿದ ತಂಡ ತನ್ನ ಅಭಿಮಾನಿಗಳನ್ನು ಖುಷಿಪಡಿಸಿದೆ.
ಮುಂಬೈ ಇಂಡಿಯನ್ಸ್ (MI) ನ ಬ್ಯಾಟಿಂಗ್ ಪರದಾಟ:
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ಆರಂಭದಲ್ಲೇ ಶಾಕ್ ಅನುಭವಿಸಿತು. ರೋಹಿತ್ ಶರ್ಮಾ (0) ಹಾಗೂ ವಿಲ್ ಜ್ಯಾಕ್ಸ್ (11) ತ್ವರಿತವಾಗಿ ಔಟಾದರು. ಸೂರ್ಯಕುಮಾರ್ ಯಾದವ್ (29) ಮತ್ತು ತಿಲಕ್ ವರ್ಮಾ (31) ಗಳ ಉತ್ತಮ ಆಟದ ನೆರವಿನಿಂದ ಮುಂಬೈ 20 ಓವರುಗಳಲ್ಲಿ 155/9 ರನ್ ಪೇರಿಸಿತು.
ಆದರೆ ಚೆನ್ನೈ ಬೌಲರ್‌ಗಳ ಭರ್ಜರಿ ಪ್ರದರ್ಶನ ಮುಂಬೈನನ್ನು ಸಂಪೂರ್ಣ ತತ್ತರಗೊಳಿಸಿತು. ನೂರ್ ಅಹ್ಮದ್ ಅವರ ಸ್ಪಿನ್ ಮಾಯಾಜಾಲ ಮುಂಬೈನ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ನಿರ್ಗಮಿಸಲು ಕಾರಣವಾಯಿತು. ಖಲೀಲ್ ಅಹ್ಮದ್ ಕೂಡ ಸ್ಫೂರ್ತಿದಾಯಕ ಬೌಲಿಂಗ್ ನಡೆಸಿದರು.
ನೂರ್ ಅಹ್ಮದ್ (4/18) ಮತ್ತು ಖಲೀಲ್ ಅಹ್ಮದ್ (3/29) ಅವರ ಭರ್ಜರಿ ಬೌಲಿಂಗ್ ಮುಂಬೈನನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.
ಚೆನ್ನೈ ಸೂಪರ್ ಕಿಂಗ್ಸ್ (CSK)ನ ಗೆಲುವಿನ ಹಾದಿ:
156 ರನ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್, ಆರಂಭದಲ್ಲಿ ಕೆಲವು ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದ ಆಟಗಾರರು ತಂಡವನ್ನು ಗೆಲುವಿನ ದಾರಿಯತ್ತ ಮುನ್ನಡೆಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ CSK 4 ವಿಕೆಟ್ ಗಳಿಂದ ಜಯ ಸಾಧಿಸಿತು.
𝙁𝙞𝙣𝙞𝙨𝙝𝙞𝙣𝙜 𝙬𝙞𝙩𝙝 𝙖 𝘽𝘼𝙉𝙂 💪
— IndianPremierLeague (@IPL) March 23, 2025
Rachin Ravindra takes #CSK to a win over #MI with a brilliant maximum 💛
Scorecard ▶ https://t.co/QlMj4G7kV0#TATAIPL | #CSKvMI | @ChennaiIPL pic.twitter.com/rVjsGQOHyD
ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಐಪಿಎಲ್ 2025 ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ತಮ್ಮ ಬಲವನ್ನು ತೋರಿಸಲು ಉತ್ಸುಕವಾಗಿದೆ. ಅಭಿಮಾನಿಗಳು ಈಗ ಮುಂಬರುವ ಪಂದ್ಯಗಳನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ
ಐಪಿಎಲ್ 2025: ಯುವ ಆಟಗಾರ ವಿಘ್ನೇಶ್ ಪುತ್ಥೂರನ್ನು ಮೆಚ್ಚಿದ ಧೋನಿ ಮತ್ತು ಸೂರ್ಯಕುಮಾರ್ ಯಾದವ್
IPL 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದಲ್ಲಿ ಯುವ ಸ್ಪಿನ್ನರ್ ವಿಘ್ನೇಶ್ ಪುತ್ಥೂರ (Vignesh Puthur) ಗಮನಸೆಳೆದಿದ್ದಾರೆ.24 ವರ್ಷದ ಕೇರಳದ ಈ ಬೌಲರ್, ರೋಹಿತ್ ಶರ್ಮಾ ಅವರ ಬದಲಿಗೆ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿ ಆಯ್ಕೆಗೊಂಡಿದ್ದು,ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ಮಹತ್ವದ ಮೂರು ವಿಕೆಟ್ ಪಡೆದರು, ಇದರಿಂದ ಪಂದ್ಯದ ಮೇಲೆ ಬಾರಿ ಪ್ರಭಾವ ಬೀರಿತ್ತು.

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ:
IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ!

ಪಂದ್ಯದ ಬಳಿಕ, ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್, ಪುತ್ಥೂರ ಅವರ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಪ್ರಶಂಸಿಸಿದರು.ಇದೇ ವೇಳೆ, CSK ನಾಯಕ ಮಹೇಂದ್ರ ಸಿಂಗ್ ಧೋನಿ ಈ ಯುವ ಆಟಗಾರನನ್ನು ಮೆಚ್ಚಿ, ಆಟದ ಬಳಿಕ ಅವರೊಂದಿಗೆ ಮಾತುಕತೆ ನಡೆಸಿದರು. ಧೋನಿಯ ಈ ಪ್ರೋತ್ಸಾಹವು ಪುತ್ಥೂರ ಅವರ ಡೆಬ್ಯೂ ಮ್ಯಾಚ್‌ಗೆ ವಿಶೇಷ ನೆನಪಾಗಿ ಉಳಿಯುವಂತೆ ಮಾಡುವುದಂತೂ ನಿಜ.ಧೋನಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಮೆಚ್ಚುಗೆಗಳಿಂದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ಥೂರ ಭವಿಷ್ಯದಲ್ಲಿ ದೊಡ್ಡ ಆಟಗಾರನಾಗಬಹುದು ಎಂಬ ವಿಶ್ವಾಸ ಮೂಡಿದೆ.
