IPL 2025: DC vs RR: ಸೂಪರ್ ಓವರ್ ಥ್ರಿಲ್ಲರ್: ಮಿಚೆಲ್ ಸ್ಟಾರ್ಕ್ ಮ್ಯಾಜಿಕ್:ಡೆಲ್ಲಿ ಕ್ಯಾಪಿಟಲ್ಸ್ ಗೆ ಸೂಪರ್ ಗೆಲುವು ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸಂಭ್ರಮ ದಿನದಿಂದ ದಿನಕ್ಕೆ ಮತ್ತಷ್ಟು ರೋಚಕವಾಗುತ್ತಿದೆ. ಅಕ್ಟೋಬರ್ 16 ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ನಡುವೆ ನಡೆದ ಪಂದ್ಯದ ಸೋಲು-ಗೆಲುವು ಅಂತಿಮ ಕ್ಷಣಗಳಲ್ಲಿ ತೀರ್ಮಾನವಾದ ಸೂಪರ್ ಓವರ್‌ನಿಂದಲೇ ನಿರ್ಧರಿಸಿತು. ದೆಹಲಿ ಕ್ಯಾಪಿಟಲ್ಸ್ 13 ರನ್ ಗಳಿಸುವ ಮೂಲಕ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತು. ಈ ಮೂಲಕ DC 6 ಪಂದ್ಯಗಳಲ್ಲಿ 5ನೇ ಗೆಲುವು ದಾಖಲಿಸಿ 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿತು.
Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ
IPL 2025: RCB vs DC:ಕೆ.ಎಲ್ ರಾಹುಲ್ ಅವರ ಅಜೇಯ 93 ರನ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆ RCB ವಿರುದ್ಧ ರೋಚಕ ಗೆಲುವು.
ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ಭರ್ಜರಿ ಪ್ರದರ್ಶನ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ಆರಂಭಿಕ ಆಟಗಾರ ಜೇಕ್ ಪ್ರೇಸರ್ ಮೆಕ್‌ಗರ್ಕ್ ಕೇವಲ 9 ರನ್ ಗಳಿಸಿ ಔಟಾದರೂ ನಂತರ ಅಭಿಷೇಕ್ ಪೊರೆಲ್ (49) ಮತ್ತು ಕೆಎಲ್ ರಾಹುಲ್ (38) ನಡುವೆ ಉತ್ತಮ ಜೊತೆಯಾಟವಾಯಿತು. ನಾಯಕ ಅಕ್ಷರ್ ಪಟೇಲ್ 32 ರನ್, ಟ್ರಿಸ್ಟಾನ್ ಸ್ಟಬ್ 32 ರನ್ (ನಾಟ್ ಔಟ್), ಅಶುತೋಷ್ ಶರ್ಮಾ 15 ರನ್ (ನಾಟ್ ಔಟ್) ಗಳಿಸಿ ತಂಡದ ಮೊತ್ತವನ್ನು 188 ರನ್‌ಗೆ ತಲುಪಿಸಿದರು. ರಾಜಸ್ಥಾನ್ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರು.
ರಾಜಸ್ಥಾನ್ ಭರ್ಜರಿ ಆರಂಭ, ಆದರೆ ಸೂಪರ್ ಓವರ್‌ಗೆ ಹೋದ ಪಂದ್ಯ:
189 ರನ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ಆರಂಭದಿಂದಲೇ ಶಕ್ತಿಶಾಲಿ ಆಟವಾಡಿತು. ಯಶಸ್ವಿ ಜೈಸ್ವಾಲ್ (51), ನಿತೀಶ್ ರಾಣಾ (51), ಧ್ರುವ್ ಜುರೆಲ್ (26) ಹಾಗೂ ಶಿಮ್ರಾನ್ ಹೆಟ್‌ಮೈರ್ (15) ಉತ್ತಮ ಕೊಡುಗೆ ನೀಡಿದರು. ನಾಯಕ ಸಂಜು ಸ್ಯಾಂಸನ್ ಆರಂಭದಲ್ಲೇ 31 ರನ್ ಗಳಿಸಿ ರಿಟೈರ್ ಹರ್ಟ್ ಆದರು. ಕೊನೆಯ ಓವರ್‌ನಲ್ಲಿ ಗೆಲುವಿಗೆ 9 ರನ್ ಬೇಕಾಗಿದ್ದಾಗ, ಮಿಚೆಲ್ ಸ್ಟಾರ್ಕ್ ಅತ್ಯುತ್ತಮ ಬೌಲಿಂಗ್ ಮಾಡಿ ಕೇವಲ 8 ರನ್ ನೀಡುವುದರ ಮೂಲಕ ಪಂದ್ಯವನ್ನು ಟೈಗೆ ತಂದರು.
ಸೂಪರ್ ಓವರ್‌ನಲ್ಲೂ ಡಿಸಿ ಅಚ್ಚರಿ ಪ್ರದರ್ಶನ:
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 5 ಬಾಲ್‌ಗೆ 2 ವಿಕೆಟ್ ಕಳೆದುಕೊಂಡು 11 ರನ್‌ಗಳನ್ನು ಕಲೆಹಾಕುವ ಮೂಲಕ 12 ರನ್‌ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 4 ಬಾಲ್‌ಗೆ ಯಾವುದೇ ವಿಕೆಟ್ ಇಲ್ಲದೆ 13 ರನ್ ಕಲೆಹಾಕುವ ಮೂಲಕ ಗೆಲುವು ಸಾಧಿಸಿತು.

ಪಾಯಿಂಟ್ ಟೇಬಲ್‌ನಲ್ಲಿ ಡಿಸಿ ಅಗ್ರಸ್ಥಾನಕ್ಕೆ:
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐದು ಜಯಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ. ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಟ್ರಿಸ್ಟಾನ್ ಸ್ಟಬ್ ಹಾಗೂ ಅಕ್ಷರ್ ಪಟೇಲ್ ಅವರುಗಳ ಪ್ರದರ್ಶನ ಗೆಲುವಿಗೆ ಕಾರಣವಾಯಿತು.
ಈ ಆಟ ಡಿಸಿ ಮತ್ತು ಆರ್‌ಆರ್ ಅಭಿಮಾನಿಗಳಿಗೆ ಭರ್ಜರಿ ಉತ್ಸಾಹ ನೀಡಿದ ಪಂದ್ಯವಾಯಿತು. ಐಪಿಎಲ್ 2025 ರ ಈ ಥ್ರಿಲ್ಲಿಂಗ್ ಪಂದ್ಯವು ಇನ್ನೂ ಮುಂದಿರುವ ಪಂದ್ಯಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ
IPL 2025: RR vs CSK ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ರನ್‌ಗಳ ಅಂತರದಿಂದ ಸೋಲು!
ಇಂತಹ ಕ್ರೀಡಾ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇
ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಓದುಗರಿಗೆ ತಲುಪಿಸುತ್ತಿದ್ದಾರೆ.
ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.