Home Guard Recruitment 2025: ದಾವಣಗೆರೆ ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ನೇಮಕಾತಿ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!

Home Guard Recruitment 2025: ದಾವಣಗೆರೆ ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ನೇಮಕಾತಿ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!
Share and Spread the love

Home Guard Recruitment 2025: ದಾವಣಗೆರೆ ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ನೇಮಕಾತಿ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ! ಅರ್ಜಿ ಪ್ರಕ್ರಿಯೆ, ಅರ್ಹತೆ, ಮತ್ತು ನೇಮಕಾತಿ ವಿವರ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ದಾವಣಗೆರೆ: ದೇಶಸೇವೆ ಮತ್ತು ಸಾರ್ವಜನಿಕ ರಕ್ಷಣೆಯಲ್ಲಿ ಆಸಕ್ತಿಯುಳ್ಳ ಯುವಕರಿಗೆ ಒಂದು ಉತ್ತಮ ಅವಕಾಶವಿದೆ. ದಾವಣಗೆರೆ ಜಿಲ್ಲೆ ಗೃಹರಕ್ಷಕದಳವು “ಸ್ವಯಂಸೇವಕ ಪುರುಷ ಗೃಹರಕ್ಷಕ” ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ಪಾಸಾದ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾದ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

Follow Us Section

ನೇಮಕಾತಿ ವಿವರ:

  • ಸಂಸ್ಥೆ: ಗೃಹ ರಕ್ಷಕದಳ, ದಾವಣಗೆರೆ ಜಿಲ್ಲೆ
  • ಹುದ್ದೆ ಹೆಸರು: ಸ್ವಯಂಸೇವಕ ಪುರುಷ ಗೃಹರಕ್ಷಕ
  • ಒಟ್ಟು ಹುದ್ದೆಗಳು: 110
  • ಅರ್ಜಿ ವಿಧಾನ: ಆಫ್‌ಲೈನ್
  • ಉದ್ಯೋಗ ಸ್ಥಳ: ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳು
  • ಅರ್ಜಿ ಪ್ರಾರಂಭ ದಿನಾಂಕ: ಏಪ್ರಿಲ್ 24, 2025
  • ಅಂತಿಮ ದಿನಾಂಕ: ಜೂನ್ 14, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 16, 2025
Home Guard Recruitment 2025: ದಾವಣಗೆರೆ ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ನೇಮಕಾತಿ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!

ತಾಲ್ಲೂಕುವಾರು ಹುದ್ದೆಗಳ ವಿವರ:

  • ಹರಿಹರ – 19
  • ಮಲೆಬೆನ್ನೂರು – 01
  • ಹೊನ್ನಾಳಿ – 07
  • ನ್ಯಾಮತಿ – 14
  • ಚನ್ನಗಿರಿ – 25
  • ಸಂತೆಬೆನ್ನೂರು – 06
  • ಜಗಳೂರು – 04
  • ಬಿಳಿಚೋಡು – 22
  • ಬಸವನಕೋಟೆ – 12

ಅರ್ಹತಾ ಶರತ್ತುಗಳು:

  • ಕನಿಷ್ಠ ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು
  • ವಯೋಮಿತಿ: 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಹ
  • ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು
  • ಯಾವುದೇ ಕ್ರಿಮಿನಲ್ ಕೇಸ್ ಅಥವಾ ಪೊಲೀಸ್ ಪ್ರಕರಣ ಹೊಂದಿರಬಾರದು
  • ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಸಂಬಂಧ ಹೊಂದಿರಬಾರದು
  • ವಿಶೇಷ ಕೌಶಲ್ಯಗಳು (ಅಗ್ನಿಶಾಮಕ ತರಬೇತಿ, ರೈಫಲ್ ಬಳಕೆ, ಪ್ರಥಮ ಚಿಕಿತ್ಸೆ, ಟ್ರಾಫಿಕ್ ನಿಯಂತ್ರಣ) ಹೊಂದಿದವರಿಗೆ ಆದ್ಯತೆ

ಇದನ್ನೂ ಓದಿ: BMRCL: ನಮ್ಮ ಮೆಟ್ರೋದಲ್ಲಿ ಎಂಜಿನಿಯರ್ ನೇಮಕಾತಿ: ಕನ್ನಡಿಗರಿಗೆ ಆದ್ಯತೆ, ಅರ್ಜಿ ಸಲ್ಲಿಸಲು ಮೇ 7 ಕೊನೆಯ ದಿನ

ಇದನ್ನೂ ಓದಿ:ಹಾಸನ ಜಿಲ್ಲೆಯಲ್ಲಿ 672 ಅಂಗನವಾಡಿ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏಪ್ರಿಲ್ 30-2025

ಅರ್ಜಿ ಸಲ್ಲಿಕೆಯ ವಿಧಾನ:

ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರ್ಮ್‌ಗಳನ್ನು ತಾಲ್ಲೂಕು ಅಥವಾ ಘಟಕ ಕಚೇರಿಗಳಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಜೂನ್ 16ರೊಳಗೆ ಸಲ್ಲಿಸಬೇಕು:

ವಿಳಾಸ:
ಜಿಲ್ಲಾ ಸಮಾದೇಷ್ಟರ ಕಚೇರಿ,
ದೇವರಾಜ ಅರಸ್ ಬಡಾವಣೆ, ಬಿ ಬ್ಲಾಕ್,
ಶಿವಪಾರ್ವತಿ ಕಲ್ಯಾಣ ಮಂಟಪ ಪಕ್ಕ,
ಶಿವಾಲಯ ಹಿಂಭಾಗ, ದಾವಣಗೆರೆ.

ಅರ್ಜಿಗೆ ಅಗತ್ಯ ದಾಖಲೆಗಳು:

  • ಎಸ್‌ಎಸ್‌ಎಲ್‌ಸಿ ಮಾರ್ಕ್‌ಕಾರ್ಡ್
  • ಜನ್ಮ ಪ್ರಮಾಣಪತ್ರ / ವಯಸ್ಸು ದೃಢೀಕರಣ
  • ವಿಳಾಸ ಪುರಾವೆ
  • ದೈಹಿಕ ಕ್ಷಮತೆ ಪ್ರಮಾಣ ಪತ್ರ
  • ನೀಟಾಗಿ ಭರ್ತಿ ಮಾಡಿದ ಅರ್ಜಿ
  • ಪಾಸ್‌ಪೋರ್ಟ್ ಗಾತ್ರದ ಫೋಟೋಗಳು

ಸೇವೆಯ ಸದುಪಯೋಗ:

ಗೃಹರಕ್ಷಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಇವರು ತುರ್ತು ಪರಿಸ್ಥಿತಿಗಳಲ್ಲಿ ಪೋಲಿಸ್ ಇಲಾಖೆ ಅಥವಾ ಸಾರ್ವಜನಿಕ ರಕ್ಷಣಾ ಘಟಕಗಳ ಸಹಾಯಕ್ಕೆ ಇರುತ್ತಾರೆ. ತರಬೇತಿ ಕೊಡುವ ಮೂಲಕ ಅವರನ್ನು ವಿವಿಧ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಲಾಗುತ್ತದೆ.


ಸಂಪರ್ಕಕ್ಕಾಗಿ:

ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಬಹುದು.

ಇದು ನಿಮ್ಮ ಸೇವೆಯ ಮೂಲಕ ಸಮಾಜದಲ್ಲಿ ಪ್ರಭಾವ ಬೀರುವ ಅವಕಾಶ. ಸರ್ಕಾರಿ ನೌಕರಿಯ ಕನಸು ಕಂಡು ಯೋಗ್ಯತೆ ಹೊಂದಿರುವ ಯುವಕರು ತಪ್ಪದೇ ಈ ನೇಮಕಾತಿಗೆ ಅರ್ಜಿ ಹಾಕಿ.


👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗DRDO GTRE Apprentice Training 2025: ಐಟಿಐ/ಡಿಪ್ಲೊಮಾ ಮತ್ತು ಪದವೀಧರರಿಗೆ ಅರ್ಜಿ ಆಹ್ವಾನ

🔗NPCIL ನಲ್ಲಿ 400 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಏ.30ರೊಳಗೆ ಅರ್ಜಿ ಸಲ್ಲಿಸಿ
🔗NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

🔗RTE Free Education 2025–26: ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಕೆ ಆರಂಭ

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs