Free Laptop Yojana 2025 for SSLC Topper: ಕರ್ನಾಟಕ ಸರ್ಕಾರದಿಂದ SSLC ಪ್ರತಿಭಾವಂತರಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ ಜಾರಿ – ಇಲ್ಲಿದೆ ಸಂಪೂರ್ಣ ಮಾಹಿತಿ!
ಬೆಂಗಳೂರು, ಏಪ್ರಿಲ್ 2025: ರಾಜ್ಯದ ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. 2024-25ನೇ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ನಿರ್ಧರಿಸಲಾಗಿದೆ.
ಈ ಯೋಜನೆಯು “ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮ” ಕಾರ್ಯಕ್ರಮದ ಭಾಗವಾಗಿ ಜಾರಿಯಲ್ಲಿದ್ದು, ಸರ್ಕಾರದಿಂದ ರೂ. 3.25 ಕೋಟಿ ಮೊತ್ತದ ಅನುದಾನವನ್ನು ಮಂಜೂರಿಸಲಾಗಿದೆ. ಇದರಲ್ಲಿ ₹2.80 ಕೋಟಿ ಈಗಾಗಲೇ ಬಿಡುಗಡೆ ಆಗಿದ್ದು, ಉಳಿದ ಮೊತ್ತವನ್ನು ಬೇಡಿಕೆ ಪ್ರಕಾರ ಬಿಡುಗಡೆ ಮಾಡಲಾಗುವುದು.
Free Laptop Yojana 2025 ಯೋಜನೆಯ ಪ್ರಮುಖ ಅಂಶಗಳು:
- ಅರ್ಹತೆ: ಕೇವಲ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರ
- ಮಟ್ಟಗಳು:
- ಜಿಲ್ಲಾ ಮಟ್ಟ: ಪ್ರತೀ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳು
- ಬ್ಲಾಕ್ ಮಟ್ಟ: ರಾಜ್ಯದ 204 ಬ್ಲಾಕ್‌ಗಳಲ್ಲಿ ಪ್ರತಿ ಬ್ಲಾಕ್‌ನಿಂದ 3 ವಿದ್ಯಾರ್ಥಿಗಳು
- ಒಟ್ಟು ಲಾಭದಾರರು: 756 ವಿದ್ಯಾರ್ಥಿಗಳು (115 ಜಿಲ್ಲಾ ಮಟ್ಟ + 641 ಬ್ಲಾಕ್ ಮಟ್ಟ)ಲ್ಯಾಪ್‌ಟಾಪ್‌ಗಳ ಲಾಭ ಪಡೆಯಲಿದ್ದಾರೆ
- ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪ್ರತಿ ಜಿಲ್ಲೆಯಲ್ಲಿ ಅತ್ಯುತ್ತಮ ಅಂಕ ಪಡೆದ 3 ವಿದ್ಯಾರ್ಥಿಗಳು ಲಾಭ ಪಡೆಯುತ್ತಾರೆ.
- 204 ಶಿಕ್ಷಣ ವಲಯಗಳಲ್ಲಿ (ಬ್ಲಾಕ್) ಪ್ರತಿಯೊಂದರಲ್ಲಿ ತಲಾ 3 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತದೆ.
- ಈ ಯೋಜನೆ ಮೂಲಕ SSLC ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಪರಿಚಯ ಮಾಡಿಸಿ, NEET, JEE, CET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನೆರವು ದೊರೆಯಲಿದೆ.
ಇದನ್ನೂ ಓದಿ: SSLC Result 2025: ಕರ್ನಾಟಕ SSLC ಫಲಿತಾಂಶ 2025 ನಾಳೆ ಪ್ರಕಟ – ಇಲ್ಲಿದೆ ಡೈರೆಕ್ಟ್ ಲಿಂಕ್!
(Free Laptop Yojana 2025) ಉಚಿತ ಲ್ಯಾಪ್‌ಟಾಪ್ ಯೋಜನೆ – ಮುಖ್ಯ ಷರತ್ತುಗಳು :
- ವಿತರಣೆಯ ಹೊಣೆಗಾರಿಕೆ: ಈ ಯೋಜನೆಯಡಿಯಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡುವ ಜವಾಬ್ದಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB), ಬೆಂಗಳೂರು ಅಧ್ಯಕ್ಷರ ಮೇಲಿದೆ.
- ಅರ್ಹ ಫಲಾನುಭವಿಗಳ ದೃಢೀಕರಣ: ಪ್ರತಿ ಜಿಲ್ಲಾಮಟ್ಟದಲ್ಲಿ ಪ್ರೋತ್ಸಾಹಕವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಅರ್ಹತೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಬ್ಲಾಕ್ ಮಟ್ಟದಲ್ಲಿ ಆಯ್ಕೆಯಾಗದವರನ್ನು ಜಿಲ್ಲೆಯ ಮಟ್ಟದಲ್ಲಿ ಪರಿಗಣಿಸಬಾರದು.
- ಲೆಕ್ಕಪತ್ರ ನಿರ್ವಹಣೆ: ಈ ಯೋಜನೆಯಡಿ ಬಿಡುಗಡೆಯಾದ ಅನುದಾನದ ಲೆಕ್ಕಪತ್ರಗಳನ್ನು ನಿಗದಿತ ನಿಯಮಾನುಸಾರ ಹಮ್ಮಿಕೊಳ್ಳುವ ಹೊಣೆಗಾರಿಕೆಯನ್ನು ಮಂಡಳಿ ಅಧ್ಯಕ್ಷರು ನಿರ್ವಹಿಸಬೇಕು.
- ತಕ್ಷಣದ ವಿತರಣೆ ಮತ್ತು ವರದಿ: ಲ್ಯಾಪ್‌ಟಾಪ್‌ಗಳನ್ನು ಎಲ್ಲ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ವಿತರಿಸಬೇಕು. ವಿತರಣೆಯ ನಂತರ ಸಂಪೂರ್ಣ ವಿವರಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
- ಸರ್ಕಾರಿ ಆದೇಶ ಪ್ರಕಟಣೆ: ಲ್ಯಾಪ್‌ಟಾಪ್ ವಿತರಣೆಯ ಕುರಿತು ಹೊರಡಿಸಲಾದ ಕಛೇರಿ ಜ್ಞಾಪನೆ ಹಾಗೂ ಸರ್ಕಾರದ ಅಧಿಕೃತ ಆದೇಶಗಳನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಮಂಡಳಿ ಅಧ್ಯಕ್ಷರು ತಮ್ಮ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.
- ಪಾರದರ್ಶಕ ಖರೀದಿ ಪ್ರಕ್ರಿಯೆ: ಲ್ಯಾಪ್‌ಟಾಪ್ ಖರೀದಿಯನ್ನು ಕರ್ನಾಟಕ ಸಾರ್ವಜನಿಕ ಖರೀದಿ ನಿಯಮಗಳು – 1999 ಹಾಗೂ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಪೂರ್ಣ ಪಾರದರ್ಶಕತೆಯಿಂದ ಇ-ಟೆಂಡರ್ ಪ್ರಕ್ರಿಯೆಯ ಮೂಲಕ ನಡೆಸಬೇಕು. ಈ ಸಂಬಂಧ ಹೊರಡಿಸಲಾಗುವ ಎಲ್ಲಾ ನಿಯಮ, ಆದೇಶ, ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.
ಇವುಗಳ ಮೂಲಕ ಯೋಜನೆಯ ಪರಿಣಾಮಕಾರಿ ಅನುಷ್ಟಾನ ಮತ್ತು ವಿದ್ಯಾರ್ಥಿಗಳ ನಿಖರ ಅನುಭವವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
2024ರಲ್ಲಿ SSLC ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ 756 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಗೆ ಅನುದಾನ ಖರ್ಚು ಯೋಜನೆ:
ಏಪ್ರಿಲ್ 2024ರಲ್ಲಿ ನಡೆದ SSLC ಪರೀಕ್ಷೆಯಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ಜಿಲ್ಲೆಯಿಂದ ಮೂರು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ 204 ಬ್ಲಾಕ್ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಲಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಮೂರು ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 756 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಈ ಫಲಾನುಭವಿಗಳಿಗೆ ಪ್ರೋತ್ಸಾಹದಂತೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಒಟ್ಟು ರೂ. 3,25,16,940/- ಅನುದಾನ ಅಗತ್ಯವಿದೆ. ಈ ಮೊತ್ತವನ್ನು ಕೆಳಕಂಡ ರೀತಿಯಲ್ಲಿ ವಿಭಜಿಸಲಾಗಿದೆ:
- ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮಗಳು’ ಯೋಜನೆಯ ಅಡಿಯಲ್ಲಿ ಲೆಕ್ಕ ಶೀರ್ಷಿಕೆ: 2202-01-109-0-107-059 (ಇತರೆ ವೆಚ್ಚಗಳು) ರಡಿ ಈಗಾಗಲೇ ನಿಗದಿಯಾಗಿರುವ ರೂ. 280.00 ಲಕ್ಷ
- ಕೆ.ಎಸ್.ಕ್ಯೂ.ಎ.ಎ.ಸಿ ವಿಭಾಗದಲ್ಲಿ ಉಳಿಕೆಯಿರುವ ರೂ. 9.30 ಲಕ್ಷ
- ಮಂಡಲಿಯ ಲಭ್ಯವಿರುವ ಮೊತ್ತ ರೂ. 35.86,940
ಈ ನಿಗದಿತ ಮೊತ್ತಗಳನ್ನು ಸೇರಿಸಿ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ (KSEAB), ಬೆಂಗಳೂರು, ಇವರು ನಿಯಮಾನುಸಾರ ಖರ್ಚು ಮಾಡಬೇಕಾಗಿದೆ.
ಯಾರು ಆ 756 ವಿದ್ಯಾರ್ಥಿಗಳು? ಉಚಿತ ಲ್ಯಾಪ್‌ಟಾಪ್ ಪಡೆಯುತ್ತಿರುವ SSLC ಟಾಪರ್‌ಗಳ ಪಟ್ಟಿ ಸದ್ಯದಲ್ಲೇ SSLC ಫಲಿತಾಂಶ ಬಂದ ಕೂಡಲೇ ಪ್ರಕಟ ಮಾಡಲಿದೆ!”
→ ತಡಮಾಡದೆ – ಇತರರೊಂದಿಗೆ ಶೇರ್ ಮಾಡಿ!
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗Home Guard Recruitment 2025: ದಾವಣಗೆರೆ ಜಿಲ್ಲೆಯಲ್ಲಿ ಹೋಮ್‌ಗಾರ್ಡ್ ನೇಮಕಾತಿ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!
🔗RTE Free Education 2025–26: ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಕೆ ಆರಂಭ
🔗Indian Railways New Rules:45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು 60 ವರ್ಷ ಮೇಲ್ಪಟ್ಟ ಗಂಡಸರಿಗೆ ಆಟೋಮ್ಯಾಟಿಕ್ ‘Lower Berth Allotment!
🔗Anganwadi Recruitment 2025: ಬೆಳಗಾವಿ ಜಿಲ್ಲೆ ಅಂಗನವಾಡಿ ಹುದ್ದೆಗಳ ನೇಮಕಾತಿ – SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ!
ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇