SSLC Result 2025 Full District-wise List: ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನ? ಇಲ್ಲಿದೆ ಫುಲ್ ಡೀಟೇಲ್ಸ್! ನೋಡಿ.
ಬೆಂಗಳೂರು, ಮೇ 2:
2024–25ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಈ ಬಾರಿ ಶೇಕಡಾ 66.14% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಫಲಿತಾಂಶದ ಮೂಲಕ ಕರ್ನಾಟಕದ ವಿವಿಧ ಜಿಲ್ಲೆಗಳ ಶೈಕ್ಷಣಿಕ ಸ್ಥಿತಿಗತಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ರಾಜ್ಯದ 35 ಜಿಲ್ಲೆಗಳ ಪೈಕಿ ಯಾರಿಗೆ ಎಷ್ಟು ಶೇಕಡಾ ಫಲಿತಾಂಶ ಬಂದಿದೆ? ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ.
ಕರಾವಳಿ ಜಿಲ್ಲೆಗಳ ಉತ್ತಮ ಪ್ರದರ್ಶನ:
ಈ ಬಾರಿ ಕೂಡ ಕರಾವಳಿ ಜಿಲ್ಲೆಗಳ ಸಾಧನೆ ಶ್ಲಾಘನೀಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 91.12% ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಉಡುಪಿ ಜಿಲ್ಲೆ 89.96% ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆ 83.19% ಫಲಿತಾಂಶದೊಂದಿಗೆ ತೃತೀಯ ಸ್ಥಾನವನ್ನು ಹೊಂದಿದೆ. ಈ ಮೂಲಕ ಶೇ. 80ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸಿದ ಮೂರು ಕರಾವಳಿ ಜಿಲ್ಲೆಗಳು ರಾಜ್ಯದ ಟಾಪ್-3 ಸ್ಥಾನಗಳಲ್ಲಿವೆ.
SSLC Result: ಟಾಪ್-5 ಜಿಲ್ಲೆಗಳ ಪಟ್ಟಿ:
- ದಕ್ಷಿಣ ಕನ್ನಡ (Dakshina Kannada) – 91.12%
- ಉಡುಪಿ (Udupi) – 89.96%
- ಉತ್ತರ ಕನ್ನಡ (Uttara Kannada) – 83.19%
- ಶಿವಮೊಗ್ಗ (Shivamogga) – 82.29%
- ಕೊಡಗು (Kodagu) – 82.21%
ಈ SSLC ಫಲಿತಾಂಶದಿಂದ ಕರ್ನಾಟಕದ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಕರಾವಳಿ ಜಿಲ್ಲೆಗಳ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿದೆ., ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶ್ರೇಷ್ಠತೆ ತೋರಿಸಿರುವುದು ಪ್ರತಿ ವರ್ಷದಂತೆ ಪೋಷಕರಲ್ಲಿ ಖುಷಿ ತಂದಿದೆ.
ಅಗ್ನಿಪರೀಕ್ಷೆಯ ನಂತರವೂ ಹಿಂದುಳಿದ ಜಿಲ್ಲೆಗಳು:
- ವಿಜಯಪುರ (Vijayapura) – 49.58%
- ಯಾದಗಿರಿ (Yadgiri) – 51.6%
- ರಾಯಚೂರು (Raichur) – 52.05%
- ಬಿದರ್ (Bidar) – 53.25%
- ಕಲಬುರಗಿ (Kalaburagi) – 42.43% (ಅಂತಿಮ ಸ್ಥಾನ)
ಈ ಜಿಲ್ಲೆಗಳ ಶೈಕ್ಷಣಿಕ ಹಿನ್ನಡೆಯನ್ನು ಇನ್ನಷ್ಟು ಗಮನ ಹರಿಸಲು ಸರ್ಕಾರ ಮುಂದಾಗಬೇಕಾಗಿದೆ, ಮೂಲಭೂತ ಸೌಕರ್ಯ ಮತ್ತು ಕೆಲವು ಶೈಕ್ಷಣಿಕ ನೀತಿಗಳ ಸುಧಾಹರಣೆ ಅವಶ್ಯಕತೆಯಂತಿದೆ.
ಮುಖ್ಯ ಜಿಲ್ಲೆಯ ಫಲಿತಾಂಶ ಶೇಕಡಾವಾರು ಪಟ್ಟಿ (Top to Bottom):
SSLC Result ಹುಡುಗಿಯರ ಮೇಲುಗೈ:
ಹೆಮ್ಮೆಪಡುವಂತಹ ಸಂಗತಿಯಾದರೆ, ಹುಡುಗಿಯರು ಶೇ. 74ರಷ್ಟು ತೇರ್ಗಡೆಯಾಗಿದ್ದು, ಹುಡುಗರಿಗಿಂತ ಶೇ. 15ರಷ್ಟು ಅಧಿಕವಾಗಿದೆ. ಹುಡುಗರ ಪಾಸ್ ಪ್ರಮಾಣ ಶೇಕಡಾ 58.07 ಆಗಿದೆ. ಈ ಮೂಲಕ ಪ್ರತಿ ಬಾರಿಯಂತೆಯೇ ಈ ಬಾರಿಯೂ ಹುಡುಗಿಯರು ಹೆಚ್ಚು ಶ್ರೇಯಸ್ಸು ಸಾಧಿಸಿದ್ದಾರೆ.
ಅತ್ಯುತ್ತಮ ಮತ್ತು ಶೂನ್ಯ ಫಲಿತಾಂಶದ ಶಾಲೆಗಳು:
ಈ ಬಾರಿ ರಾಜ್ಯಾದ್ಯಂತ 921 ಶಾಲೆಗಳು ಶೇಕಡಾ 100% ಫಲಿತಾಂಶ ದಾಖಲಿಸಿದ್ದು, ಇದರಲ್ಲಿ 329 ಸರ್ಕಾರಿ ಶಾಲೆಗಳು ಸೇರಿವೆ. 6 ಸರ್ಕಾರಿ ಶಾಲೆಗಳು ಮಾತ್ರ ಶೇಕಡಾ 0% ಫಲಿತಾಂಶ ಹೊಂದಿವೆ. ಇದು ಸರ್ಕಾರಿ ಶಾಲೆಗಳ ಸಾಮರ್ಥ್ಯವನ್ನು ತೋರಿಸುತ್ತದೆ. ಅನುದಾನಿತ ಶಾಲೆಗಳು 30 ಮತ್ತು ಅನುದಾನ ರಹಿತ ಶಾಲೆಗಳು 108 ಶೂನ್ಯ ಫಲಿತಾಂಶದ ಪಟ್ಟಿಯಲ್ಲಿ ಸೇರಿವೆ.
100% ಹಾಗೂ 0% ಫಲಿತಾಂಶದ ಶಾಲೆಗಳು:
- 100% ಫಲಿತಾಂಶ ಪಡೆದ ಶಾಲೆಗಳು: 921
- ಸರ್ಕಾರಿ ಶಾಲೆ – 329
- ಅನುದಾನಿತ ಶಾಲೆ – 53
- ಅನುದಾನ ರಹಿತ ಶಾಲೆ – 530
- 0% ಫಲಿತಾಂಶ ಪಡೆದ ಶಾಲೆಗಳು: 144
- ಸರ್ಕಾರಿ ಶಾಲೆ – 6
- ಅನುದಾನಿತ – 30
- ಅನುದಾನ ರಹಿತ – 108
SSLC Result ಶ್ರೇಷ್ಠ ವಿದ್ಯಾರ್ಥಿಗಳ ಸಾಧನೆ:
ಈ ಬಾರಿ 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಇದು ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿದೆ.
ನಗರ vs ಗ್ರಾಮೀಣ:
ನಗರ ಪ್ರದೇಶದ ವಿದ್ಯಾರ್ಥಿಗಳ ಪಾಸ್ ಪ್ರಮಾಣ ಶೇ. 67.05 ಆಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಶೇಕಡಾ 65.47 ಆಗಿದೆ. ಹೀಗಾಗಿ ನಗರ ವಿದ್ಯಾರ್ಥಿಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಶ್ರೇಯಸ್ಸು ಸಾಧಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ SSLC ಫಲಿತಾಂಶ 2025: ರಿಲೀಸ್ ಅಪ್ಡೇಟ್ಸ್, ವೆಬ್ಸೈಟ್, ಡೌನ್ಲೋಡ್ ವಿಧಾನ – ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲಿದೆ
ಕಳಪೆ ಪ್ರದರ್ಶನ:
ಇನ್ನೊಂದು ಕಡೆ, ಕಲಬುರಗಿ ಜಿಲ್ಲೆ ಕೇವಲ 42.43% ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿದೆ. ವಿಜಯಪುರ, ಯಾದಗಿರಿ, ರಾಯಚೂರು, ಬಿದರ್ ಜಿಲ್ಲೆಗಳು ಕೂಡ ಕಡಿಮೆ ಫಲಿತಾಂಶ ದಾಖಲಿಸಿರುವ ಜಿಲ್ಲೆಗಳಾಗಿವೆ.
ಫಲಿತಾಂಶ ಪ್ರಕಟಣೆ ಮತ್ತು ವೆಬ್ಸೈಟ್ ಮಾಹಿತಿ:
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಧ್ಯಮಗೋಷ್ಠಿಯಲ್ಲಿ ಫಲಿತಾಂಶವನ್ನು ಘೋಷಿಸಿ, ಮಧ್ಯಾಹ್ನ 12:30 ಗಂಟೆಯಿಂದ karresults.nic.in ನಲ್ಲಿ ಫಲಿತಾಂಶ ಲಭ್ಯವಿದೆ ಎಂದು ತಿಳಿಸಿದರು.
ಫಲಿತಾಂಶ ಮೌಲ್ಯಮಾಪನ ಹಾಗೂ ಹೊಸ ವ್ಯವಸ್ಥೆಗಳು:
ಈ ಬಾರಿ ನೂರಾರು ಮೌಲ್ಯಮಾಪನಾ ಕೇಂದ್ರಗಳಲ್ಲಿ 50 ಲಕ್ಷಕ್ಕಿಂತ ಹೆಚ್ಚು ಉತ್ತರ ಪತ್ರಿಕೆಗಳನ್ನು 75 ಸಾವಿರಕ್ಕಿಂತ ಹೆಚ್ಚು ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ. ಈ ಬಾರಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಶೇ. 10ರಷ್ಟು ಹೆಚ್ಚುವರಿ ಗ್ರೇಸ್ ಅಂಕ ವ್ಯವಸ್ಥೆಯನ್ನು ಕೈಬಿಡಲಾಗಿದೆ.
ಈ SSLC ಫಲಿತಾಂಶದಿಂದ ಕರ್ನಾಟಕದ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಕರಾವಳಿ ಜಿಲ್ಲೆಗಳ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿದೆ. ಸರ್ಕಾರಿ ಶಾಲೆಗಳ ಸಾಧನೆ ಹಾಗೂ ಹುಡುಗಿಯರ ಪ್ರಭಾವ ಗಮನಾರ್ಹವಾಗಿದೆ. ಆದರೆ ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳ ಸಾಧನೆ ನಿರಾಶೆ ಹುಟ್ಟಿಸುವಂತಿದ್ದು, ಮುಂದಿನ ವರ್ಷಗಳಿಗೆ ಸಮರ್ಥ ಯೋಜನೆ ರೂಪಿಸುವ ಅಗತ್ಯವಿದೆ.
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button 👇