SSLC 2-3 Exam:2025: SSLC ಪರೀಕ್ಷೆ 2 ಮತ್ತು 3ರ ವೇಳಾಪಟ್ಟಿ ಪ್ರಕಟ – SSLC ಫಲಿತಾಂಶದಲ್ಲಿ ‘fail’ ಆದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಬೆಂಗಳೂರು: 2025ನೇ ಸಾಲಿನ SSLC ಪರೀಕ್ಷೆ-1 ಫಲಿತಾಂಶ ಮೇ 2 ರಂದು ಪ್ರಕಟವಾಗಿದ್ದು, ಶೇ.66.14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದ ಶೇ.33.86% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಅವರಿಗಾಗಿ ಕರ್ನಾಟಕ ಸರ್ಕಾರದಿಂದ ಭಾರೀ ಉತ್ತಮವಾದ ಪರಿಹಾರವೊಂದು ಪ್ರಕಟವಾಗಿದೆ. ಸರ್ಕಾರ SSLC ಪರೀಕ್ಷೆ 2 ಮತ್ತು ಪರೀಕ್ಷೆ 3 ಎಂಬ ಮತ್ತೆರಡು ಅವಕಾಶಗಳನ್ನು ನೀಡಿದ್ದು, ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಒಂದೇ ಶೈಕ್ಷಣಿಕ ವರ್ಷದಲ್ಲಿ ಮೂರು ಪರೀಕ್ಷೆಗಳ ಅವಕಾಶ
ಈ ವರ್ಷ SSLC ಪರೀಕ್ಷೆ-1ದಲ್ಲಿ ತೃಪ್ತಿಕರ ಅಂಕ ಪಡೆಯದೆ ಫೇಲ್ ಆದ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳು ಒಂದೇ ಶೈಕ್ಷಣಿಕ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವಂತಾಗಿದೆ. ಇದು ವಿದ್ಯಾರ್ಥಿಗಳಿಗೆ ದೊಡ್ಡ ಅನುಕೂಲವಾಗಲಿದ್ದು, ಶೈಕ್ಷಣಿಕ ಜೀವನದಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಮೂಲಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ಕರ್ನಾಟಕ SSLC ಫಲಿತಾಂಶ 2025: ರಿಲೀಸ್ ಅಪ್ಡೇಟ್ಸ್, ವೆಬ್ಸೈಟ್, ಡೌನ್ಲೋಡ್ ವಿಧಾನ – ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲಿದೆ
‘Fail’ ಎಂಬ ಪದವಿಲ್ಲ – ‘Progressing’ ಎಂದೇ ಉಪಯೋಗ
ಪರೀಕ್ಷೆ-1ನಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷೆ 2 ಮತ್ತು 3 ಬರೆಯುವವರೆಗೆ ಅವರ ಡಿಜಿಟಲ್ ಅಂಕಪಟ್ಟಿಯಲ್ಲಿ “Fail” ಎಂದು ನಮೂದಿಸಲಾಗದು. ಬದಲಿಗೆ “Progressing” ಎಂದು ಮಾತ್ರ ಉಲ್ಲೇಖಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಮನೋಬಲ ಕುಂದದಂತೆ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಂಡಿದೆ.
SSLC 2-3 Exam:2025 SSLC ಪರೀಕ್ಷೆ-2(26-05-2025 ರಿಂದ 02-06-2025):
ದಿನಾಂಕ | ವಿಷಯಗಳು |
---|---|
26-05-2025 | ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಇತ್ಯಾದಿ) |
27-05-2025 | ಗಣಿತ / ಸಮಾಜ ಶಾಸ್ತ್ರ |
28-05-2025 | ದ್ವಿತೀಯ ಭಾಷೆ (ಇಂಗ್ಲಿಷ್ / ಕನ್ನಡ) |
29-05-2025 | ಸಮಾಜ ವಿಜ್ಞಾನ |
30-05-2025 | ತೃತೀಯ ಭಾಷೆ (ಹಿಂದಿ, ಅರೇಬಿಕ್, ತುಳು, ಉರ್ದು ಇತ್ಯಾದಿ) |
31-05-2025 | ರಾಜ್ಯ ಶಾಸ್ತ್ರ / ಸಂಗೀತ |
02-06-2025 | ಜಿಟಿಎಸ್ ಮತ್ತು vocational ವಿಷಯಗಳು |
SSLC 2-3 Exam:2025 SSLC ಪರೀಕ್ಷೆ-3 (23-06-2025 ರಿಂದ 30-06-2025):
ಪರೀಕ್ಷೆ-2 ಬಳಿಕವೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ SSLC ಪರೀಕ್ಷೆ-3 ಆಯ್ಕೆ ನೀಡಲಾಗಿದೆ. ಇದರ ಸಂಪೂರ್ಣ ಟೈಮಟೇಬಲ್ ಈ ಕೆಳಗಿನಂತಿವೆ.
SSLC 2-3 Exam:2025 ನೋಂದಣಿ ಪ್ರಕ್ರಿಯೆ:
ಪರೀಕ್ಷೆ-2 ಬರೆಯಲು ಇಚ್ಛಿಸುವ ಅಭ್ಯರ್ಥಿಗಳು 03-05-2025 ರಿಂದ 10-05-2025ರೊಳಗೆ ತಮ್ಮ ಶಾಲೆಗಳ ಮೂಲಕ ಅಥವಾ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು.
ಉಚಿತ SSLC 2-3 Exam ನೋಂದಣಿ ಅವಕಾಶ
ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿರುವ ಪ್ರೆಷರ್ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ನೋಂದಣಿಗೆ ಅವಕಾಶ ನೀಡಿದೆ.
ನೋಂದಣಿಗೆ ಅಂತಿಮ ದಿನಾಂಕ:
ಪರೀಕ್ಷೆ-2ಕ್ಕೆ ನೋಂದಣಿ ಸಲ್ಲಿಸಲು 2025ರ ಮೇ 10ರವರೆಗೆ ಅವಕಾಶವಿದೆ.
ಪರೀಕ್ಷೆಗಳ ದಿನಾಂಕಗಳು:
- ಪರೀಕ್ಷೆ-2: 2025ರ ಮೇ 26 ರಿಂದ ಜೂನ್ 2ರವರೆಗೆ
- ಪರೀಕ್ಷೆ-3: 2025ರ ಜೂನ್ 23 ರಿಂದ ಜೂನ್ 30ರವರೆಗೆ
ಈ ಉಚಿತ ನೋಂದಣಿ ಸೌಲಭ್ಯವು ಕೇವಲ ಪ್ರಥಮ ಬಾರಿ ಪರೀಕ್ಷೆ ಬರೆವ (ಪ್ರೆಷರ್) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಿ.
ವಿದ್ಯಾರ್ಥಿಗಳಿಗೆ SSLC 2-3 Exam:2025 ಯೋಜನೆಯ ಪ್ರಯೋಜನಗಳು:
- ಪುನರ್ ಪರೀಕ್ಷೆಯ ಅವಕಾಶದಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
- ಹೆಚ್ಚಿನ ಅಂಕ ಗಳಿಸಲು ಇನ್ನೊಂದು ಪ್ರಯತ್ನ ಸಿಗುವಂತಾಗುತ್ತದೆ.
- ಡ್ರಾಪ್ ಆಗದೆ ಶೈಕ್ಷಣಿಕ ವರ್ಷ ಮುಂದುವರಿಸಬಹುದಾದ ಅವಕಾಶ ನೀಡಿದಂತಾಗುತ್ತದೆ.
- ಸರ್ಕಾರಿ ಪರಿಕ್ಷೆಗಳಿಗೆ ಅರ್ಹತೆ ಉಳಿದಂತಾಗುತ್ತದೆ.
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
ಇಂತಹ ಶಿಕ್ಷಣ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button 👇