Free Education for Hearing Impaired Children 2025: ಮೈಸೂರಿನಲ್ಲಿ ಶ್ರವಣದೋಷ ಮಕ್ಕಳಿಗೆ ಸಂಪೂರ್ಣ ಉಚಿತ ವಸತಿ-ಊಟ ಶಿಕ್ಷಣ ಯೋಜನೆ!

Free Education for Hearing Impaired Children 2025: ಮೈಸೂರಿನಲ್ಲಿ ಶ್ರವಣದೋಷ ಮಕ್ಕಳಿಗೆ ಸಂಪೂರ್ಣ ಉಚಿತ ವಸತಿ-ಊಟ ಶಿಕ್ಷಣ ಯೋಜನೆ
Share and Spread the love

Free Education for Hearing Impaired Children 2025: ಮೈಸೂರಿನಲ್ಲಿ ಶ್ರವಣದೋಷ ಮಕ್ಕಳಿಗೆ ಸಂಪೂರ್ಣ ಉಚಿತ ವಸತಿ-ಊಟ ಶಿಕ್ಷಣ ಯೋಜನೆ!ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ಮೈಸೂರು: ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಮೈಸೂರಿನ ತಿಲಕನಗರದಲ್ಲಿರುವ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ, 2025-26ನೇ ಶೈಕ್ಷಣಿಕ ವರ್ಷಕ್ಕೆ ಶ್ರವಣದೋಷ ಹೊಂದಿರುವ ಗಂಡು ಮತ್ತು ಹೆಣ್ಣು ಮಕ್ಕಳಿಗೆ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತವಾಗಿ ಶಿಕ್ಷಣ ನೀಡಲು ಅರ್ಜಿ ಆಹ್ವಾನಿಸಿದೆ.

Follow Us Section

ಈ ಶಾಲೆಯು ವಿಶೇಷ ಶ್ರದ್ಧೆಯೊಂದಿಗೆ ಕಿವುಡ ಮಕ್ಕಳ ಶಿಕ್ಷಣಕ್ಕಾಗಿ ನಿಗದಿಪಡಿಸಲಾದ ಸಂಸ್ಥೆಯಾಗಿದ್ದು, ಗಂಡು ಮಕ್ಕಳಿಗೆ ವಸತಿಯುತ ಮತ್ತು ಊಟದ ಸೌಲಭ್ಯವಿದ್ದರೆ, ಬಾಲಕಿಯರಿಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಶಿಕ್ಷಣದ ವ್ಯವಸ್ಥೆ ಇದೆ. ಮಕ್ಕಳಿಗೆ ಪಠ್ಯವಿಷಯಗಳಲ್ಲಿ ಕನ್ನಡ ಭಾಷೆ, ಗಣಿತ, ವಿಜ್ಞಾನ, ಮತ್ತು ಸಮಾಜಶಾಸ್ತ್ರ ಬೋಧನೆಯಾಗುತ್ತದೆ. ಭಾಷಾ ಕಲಿಕೆಗೆ ಅಗತ್ಯ ವಚನ ತರಬೇತಿಯೂ ನೀಡಲಾಗುತ್ತದೆ.

Free Education for Hearing Impaired Children 2025: ಶೈಕ್ಷಣಿಕ ಸೌಲಭ್ಯಗಳು:

  • ಉಚಿತ ಊಟ ಮತ್ತು ವಸತಿ
  • ಹಾಸಿಗೆ, ಹೊದಿಕೆ ಮತ್ತು ಪಠ್ಯಪುಸ್ತಕಗಳು
  • ವೈದ್ಯಕೀಯ ತಪಾಸಣೆ ಮತ್ತು ಆರೈಕೆ
  • ಮಕ್ಕಳಿಗಾಗಿ ಆಟದ ಮೈದಾನ ಮತ್ತು ಆಟೋಪಕರಣಗಳು
  • ಮಾತಿನ ತರಬೇತಿಗಾಗಿ ಸ್ಪೀಚ್ ಟೈನರ್ ಉಪಕರಣಗಳು
  • ಯಾವುದೇ ವಿಧದ ಶುಲ್ಕವಿಲ್ಲದೆ ಉಚಿತ ಪ್ರವೇಶ

Free Education for Hearing Impaired Children 2025: ಪ್ರವೇಶ ಅರ್ಹತೆ ಮತ್ತು ವಯೋಮಿತಿ:
2025ರ ಮೇ 29ರ ದೈನಾಂದಿನಂತೆ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಕನಿಷ್ಟ 5 ವರ್ಷ 5 ತಿಂಗಳು ಹಾಗೂ ಗರಿಷ್ಟ 9 ವರ್ಷಗಳೊಳಗಿರಬೇಕು. ಇದುವರೆಗೆ ಯಾವುದೇ ಶಾಲೆಗೆ ಸೇರದಿದ್ದ ಶ್ರವಣದೋಷವಿರುವ ಮಕ್ಕಳು ಅಥವಾ ಇತರೆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಈ ಶಾಲೆಗೆ ಸೇರಿಕೊಳ್ಳಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ

Free Education for Hearing Impaired Children 2025: ಅರ್ಜಿ ಸಲ್ಲಿಕೆ ವಿಧಾನ:
ತಂದೆ ತಾಯಿಗಳು ಅಥವಾ ಪೋಷಕರು ತಿಲಕ ನಗರದಲ್ಲಿರುವ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡಿ ಅರ್ಜಿ ಪಡೆಯಬಹುದು. ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಶಾಲಾ ಕಚೇರಿ ದೂರವಾಣಿ: 0821-2494104
  • ಅಧೀಕ್ಷಕರ ಮೊಬೈಲ್: 9449010499

ವಿಳಾಸ: ಅಂಗವಿಕಲರ & ಹಿರಿಯ ನಾಗರೀಕರ ಕಲ್ದಾಣ ಇಲಾಖೆ, ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆ,ತಿಲಕ್ ನಗರ. ಮೈಸೂರು-21.

ಸಾಮಾಜಿಕ ಜವಾಬ್ದಾರಿಯ ಭಾಗವಾಗಿ, ಈ ಮಾಹಿತಿಯನ್ನು ಹೆಚ್ಚುಮಂದಿಗೆ ಶೇರ್ ಮಾಡಿ. ಈ ಯೋಜನೆಯ ಮೂಲಕ ಶ್ರವಣದೋಷವಿರುವ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವ ಸಾಧ್ಯತೆ ಹೆಚ್ಚಾಗಿದ್ದು, ಅವರ ಭವಿಷ್ಯ ಬೆಳಗುವತ್ತ ಹೆಜ್ಜೆ ಇಡಲು ಇದು ಸೂಕ್ತ ಅವಕಾಶವಾಗಿದೆ.

ಈ ಶೈಕ್ಷಣಿಕ ಅವಕಾಶವನ್ನು ಬಳಸಿಕೊಳ್ಳಿ ಮತ್ತು ಮಕ್ಕಳ ಭವಿಷ್ಯವನ್ನು ಸುಧಾರಿಸಿ!

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: 2025ರಲ್ಲಿ NSP ಸ್ಕಾಲರ್‌ಶಿಪ್‌ಗಾಗಿ ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ!

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs