IBPS PO SO Recruitment 2025: IBPS 6215 PO & SO ಹುದ್ದೆಗಳಿಗೆ ಬೃಹತ್ ನೇಮಕಾತಿ ಶುರು! ಅಧಿಸೂಚನೆ, ಅರ್ಹತೆಗಳು, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ.
ಬೆಂಗಳೂರು, ಜುಲೈ 03, 2025: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಬೃಹತ್ ಸುವರ್ಣಾವಕಾಶ! ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2025-26ನೇ ಸಾಲಿಗೆ ದೇಶಾದ್ಯಂತ 11 ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾಲಿ ಇರುವ ಒಟ್ಟು 6215 ಪ್ರೊಬೇಷನರಿ ಆಫೀಸರ್ (PO) ಮತ್ತು ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕಳೆದ ಮಂಗಳವಾರದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 21, 2025 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
IBPS ಪ್ರಕಟಣೆಯ ಪ್ರಕಾರ, ಆಗಸ್ಟ್ನಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು ಅಕ್ಟೋಬರ್/ನವೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.
IBPS PO SO Recruitment 2025 Post Details: ಹುದ್ದೆಗಳ ವಿವರ ಮತ್ತು ಮೀಸಲಾತಿ:
- ಪ್ರೊಬೇಷನರಿ ಆಫೀಸರ್ (PO): ಒಟ್ಟು 5,208 ಹುದ್ದೆಗಳು ಲಭ್ಯವಿವೆ. ಇವುಗಳಲ್ಲಿ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ 782, ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ 365, ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 1337, ಆರ್ಥಿಕವಾಗಿ ದುರ್ಬಲ ವರ್ಗದ (EWS) ಅಭ್ಯರ್ಥಿಗಳಿಗೆ 520, ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2,204 ಹುದ್ದೆಗಳನ್ನು ಮೀಸಲಿಡಲಾಗಿದೆ. ಪ್ರೊಬೇಷನರಿ ಆಫೀಸರ್ ಹುದ್ದೆಗಳಲ್ಲಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ತಲಾ 1000 ಹುದ್ದೆಗಳಿಗೆ ಹೆಚ್ಚಿನ ನೇಮಕಾತಿ ನಡೆಯಲಿದೆ.
- ಸ್ಪೆಷಲಿಸ್ಟ್ ಆಫೀಸರ್ (SO): ಒಟ್ಟು 1,007 ಹುದ್ದೆಗಳಿವೆ. ಇವುಗಳಲ್ಲಿ ಐಟಿ ಆಫೀಸರ್ – 203, ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ – 346, ರಾಜಭಾಷಾ ಅಧಿಕಾರಿ – 78, ಲಾ ಆಫೀಸರ್ – 56, ಪರ್ಸನಲ್ ಆಫೀಸರ್ (HR) – 10, ಹಾಗೂ ಮಾರ್ಕೆಟಿಂಗ್ ಆಫೀಸರ್ – 350 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
IBPS PO SO Recruitment 2025 Eligibility : ಅರ್ಹತೆಗಳೇನು?
- ಪ್ರೊಬೇಷನರಿ ಆಫೀಸರ್: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಪಡೆದ ಶೇಕಡಾವಾರು ಅಂಕಗಳು/ ಅಂಕಪಟ್ಟಿಗಳನ್ನು ದಾಖಲಿಸಬೇಕು. 2025ರ ಜುಲೈ 21ರೊಳಗೆ ಅಂತಿಮ ಫಲಿತಾಂಶ ಪಡೆದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
- ಸ್ಪೆಷಲಿಸ್ಟ್ ಆಫೀಸರ್: ಆಯಾ ಹುದ್ದೆಗನುಗುಣವಾಗಿ ಬೇರೆ ಬೇರೆ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ:
- ಐಟಿ ಆಫೀಸರ್: ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್/ಇನ್ಫಾರ್ಮೇಷನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್/ಟೆಕ್ನಾಲಜಿ ಪದವಿ ಅಥವಾ ಅದೇ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ.
- ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್: ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶುವಿಜ್ಞಾನ/ಡೈರಿ ಸೈನ್ಸ್/ಅಗ್ರಿ ಎಂಜಿನಿಯರಿಂಗ್/ಮೀನುಗಾರಿಕೆ ವಿಜ್ಞಾನ/ಮೀನು ಸಾಕಣೆ/ಅಗ್ರಿ ಮಾರ್ಕೆಟಿಂಗ್ ಅಂಡ್ ಕೋ-ಆಪರೇಷನ್/ಕೋ-ಆಪರೇಷನ್ ಅಂಡ್ ಬ್ಯಾಂಕಿಂಗ್/ಆಗ್ರೋ ಫಾರೆಸ್ಟ್ರಿಯಲ್ಲಿ ನಾಲ್ಕು ವರ್ಷಗಳ ಪದವಿ.
- ಲಾ ಆಫೀಸರ್: ಎಲ್ಎಲ್ಬಿ ಪದವಿ ಪಡೆದಿರಬೇಕು ಮತ್ತು ಬಾರ್ ಕೌನ್ಸಿಲ್ ಸದಸ್ಯತ್ವ ಪಡೆದಿರಬೇಕು.
- ರಾಜಭಾಷಾ ಅಧಿಕಾರಿ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ (ಪದವಿಯಲ್ಲಿ ಇಂಗ್ಲಿಷ್ ಒಂದು ವಿಷಯವಾಗಿರಬೇಕು) ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ (ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ವಿಷಯಗಳಾಗಿರಬೇಕು).
- ಎಚ್.ಆರ್/ಪರ್ಸನಲ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್/ಎಚ್.ಆರ್/ಎಚ್.ಆರ್.ಡಿ/ಸೋಷಿಯಲ್ ವರ್ಕ್/ಕಾರ್ಮಿಕ ಕಾನೂನು ಇವುಗಳಲ್ಲಿ ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಡಿಪ್ಲೊಮಾ.
- ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್ -1): ಪದವೀಧರರಾಗಿರಬೇಕು ಮತ್ತು ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್)/ಎಂಬಿಎ (ಮಾರ್ಕೆಟಿಂಗ್) ಅಥವಾ ಪಿಜಿಡಿಬಿಎ ವ್ಯಾಸಂಗ ಮಾಡಿರಬೇಕು.
IBPS PO SO Recruitment 2025: Age Relaxation and Application Fees: ವಯೋಮಿತಿ ಮತ್ತು ಅರ್ಜಿ ಶುಲ್ಕ:
ಪ್ರೊಬೇಷನರಿ ಆಫೀಸರ್ ಮತ್ತು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ನಿಯಮಾನುಸಾರ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕವಾಗಿ ಎಸ್ಸಿ/ಎಸ್ಟಿ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ₹175 ರೂ. ಹಾಗೂ ಉಳಿದೆಲ್ಲಾ ಅಭ್ಯರ್ಥಿಗಳಿಗೆ ₹850 ರೂ. ನಿಗದಿಪಡಿಸಲಾಗಿದ್ದು, ಶುಲ್ಕವನ್ನು ಆನ್ಲೈನ್ನಲ್ಲಿ ಮಾತ್ರ ಪಾವತಿಸಬಹುದಾಗಿದೆ.
IBPS PO SO Recruitment 2025: Selection Procedure and Exam Centers: ಆಯ್ಕೆ ವಿಧಾನ ಮತ್ತು ಪರೀಕ್ಷಾ ಕೇಂದ್ರಗಳು:
ಈ ಎರಡೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎರಡು ಹಂತದ ಪರೀಕ್ಷೆ ನಡೆಸಲಾಗುತ್ತದೆ: ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಖ್ಯ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸುವಾಗ ಮುಖ್ಯ ಪರೀಕ್ಷೆಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಭಾಗವಹಿಸುವ ರಾಷ್ಟ್ರೀಕೃತ ಬ್ಯಾಂಕ್ಗಳು ಸಂದರ್ಶನ ನಡೆಸಲಿದ್ದು, ಪ್ರತಿ ರಾಜ್ಯದ ನೋಡಲ್ ಬ್ಯಾಂಕ್ಗಳು ಸಂದರ್ಶನವನ್ನು ಕೋ-ಆರ್ಡಿನೇಟ್ ಮಾಡುತ್ತವೆ. ಆಯ್ದ ಕೇಂದ್ರಗಳಲ್ಲಿ ಮಾತ್ರ ಸಂದರ್ಶನ ನಡೆಯಲಿದೆ.
ಪರೀಕ್ಷಾ ಕೇಂದ್ರಗಳು ಬೆಂಗಳೂರು, ಬೆಳಗಾವಿ, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಲಭ್ಯವಿವೆ. ಇದೇ ಮೊದಲ ಬಾರಿಗೆ ಪೂರ್ವಭಾವಿ ಪರೀಕ್ಷೆಗೆ ಮಾತ್ರವಲ್ಲದೆ ಮುಖ್ಯ ಪರೀಕ್ಷೆಗೂ ಈ ಎಂಟು ಪರೀಕ್ಷಾ ಕೇಂದ್ರಗಳು ಇರಲಿವೆ.
ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಮಂಗಳವಾರದಿಂದ ಆರಂಭ.
- ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಜುಲೈ 21, 2025.
- ಪೂರ್ವಭಾವಿ ಪರೀಕ್ಷೆ: ಆಗಸ್ಟ್, 2025.
- ಮುಖ್ಯ ಪರೀಕ್ಷೆ: ಅಕ್ಟೋಬರ್/ನವೆಂಬರ್, 2025.
- ಸಂದರ್ಶನ: ಡಿಸೆಂಬರ್ 2025 / ಜನವರಿ 2026.
- ನೇಮಕಾತಿಗೆ ಶಿಫಾರಸು: ಜನವರಿ/ಫೆಬ್ರವರಿ 2026.
ಪೂರ್ವ-ಪರೀಕ್ಷಾ ತರಬೇತಿ (Pre-Exam Training):
ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಲ್ಪಸಂಖ್ಯಾತ ಸಮುದಾಯದ ಸೀಮಿತ ಸಂಖ್ಯೆಯ ಅಭ್ಯರ್ಥಿಗಳಿಗೆ IBPS ಆಗಸ್ಟ್ನಲ್ಲಿ ಪರೀಕ್ಷಾ ಪೂರ್ವ ತರಬೇತಿ ನಡೆಸಲಿದೆ. ಇಂತಹ ತರಬೇಟಿ ಪಡೆಯಲು ಬಯಸುವವರು ಆನ್ಲೈನ್ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಸಂಬಂಧಪಟ್ಟ ವಿಭಾಗದಲ್ಲಿ ಟಿಕ್ ಮಾಡಬೇಕು.
ವೇತನ (PO): ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ವೇತನ ಶ್ರೇಣಿಯು ₹48,480-₹85,920 ಎಂದು ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು IBPS ನ ಅಧಿಕೃತ ವೆಬ್ಸೈಟ್ www.ibps.in ಗೆ ಭೇಟಿ ನೀಡಬಹುದು. ಅರ್ಹ ಆಕಾಂಕ್ಷಿಗಳು ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳದೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
🔗Important Links /Dates:
IBPS PO SO Recruitment 2025 official Website/IBPS ನೇಮಕಾತಿ 2025 | Click Here to official Website |
---|---|
IBPS PO SO Recruitment 2025 official Notification/IBPS SO ನೇಮಕಾತಿ 2025 ಅಧಿಸೂಚನೆ | Click Here for Notification |
Last Date | 21/07/2025 |
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!
🔗BEL Recruitment 2025: ಬಿಇಎಲ್ನಲ್ಲಿ 40 ಸಾಫ್ಟ್ವೇರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವೀಧರರಿಗೆ ಸುವರ್ಣಾವಕಾಶ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button👇