Bank of Baroda Local Officer Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿ 2500 ಲೋಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಕರ್ನಾಟಕದಲ್ಲಿ 450 ಹುದ್ದೆ. ಕನ್ನಡ ಭಾಷೆ ಬಲ್ಲ ಪದವೀಧರರಿಗೆ ₹48,000+ ಸಂಬಳ. ಜುಲೈ 24 ಕೊನೆ ದಿನ. ಈಗಲೇ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು, ಜುಲೈ 05, 2025: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda), ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 2,500 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಕರ್ನಾಟಕಕ್ಕೆ 450 ಹುದ್ದೆಗಳನ್ನು ಮೀಸಲಿಡಲಾಗಿದೆ. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿದವರಿಗೆ ಮಾತ್ರ ಈ ಉದ್ಯೋಗ ನೀಡಲಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳು ಜುಲೈ 24, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
Bank of Baroda Local Officer Recruitment 2025 official Website/ಬ್ಯಾಂಕ್ ಆಫ್ ಬರೋಡಾ ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ: ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳ ವಿವರ (ಒಟ್ಟು 450):
- ಸಾಮಾನ್ಯ ವರ್ಗ: 184
- ಆರ್ಥಿಕ ದುರ್ಬಲ ವರ್ಗ (EWS): 45
- ಇತರೆ ಹಿಂದುಳಿದ ವರ್ಗ (OBC): 121
- ಪರಿಶಿಷ್ಟ ಪಂಗಡ (ST): 33
- ಪರಿಶಿಷ್ಟ ಜಾತಿ (SC): 67
ಅರ್ಹತೆಗಳು ಮತ್ತು ವಯೋಮಿತಿ:
- ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಅಥವಾ ಯಾವುದೇ ವಿಭಾಗದಲ್ಲಿ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದಿರಬೇಕು.
- ವಯೋಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ.
- ವಯೋಮಿತಿ ಸಡಿಲಿಕೆ: ನಿಗದಿಪಡಿಸಿದ ಗರಿಷ್ಠ ವಯೋಮಿತಿಯಲ್ಲಿ ಇತರೆ ಹಿಂದುಳಿದ ವರ್ಗದ (ಒಬಿಸಿ) ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪಂಗಡದ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನ ಅಭ್ಯರ್ಥಿಗಳಿಗೆ: 175 ರೂ. (ಇಂಟಿಮೇಷನ್ ಫೀ ಮತ್ತು ಜಿಎಸ್‌ಟಿ ಸೇರಿ).
- ಉಳಿದೆಲ್ಲಾ ವರ್ಗದ ಅಭ್ಯರ್ಥಿಗಳಿಗೆ: 850 ರೂ.
Bank of Baroda Local Officer Recruitment 2025 official Website/ಬ್ಯಾಂಕ್ ಆಫ್ ಬರೋಡಾ ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ: ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತದೆ:
- ರೀಸನಿಂಗ್ ಎಬಿಲಿಟಿ
- ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್
- ಜನರಲ್/ಎಕಾನಮಿ ಅವೇರ್ನೆಸ್
- ಇಂಗ್ಲಿಷ್ ಲ್ಯಾಂಗ್ವೇಜ್
- ಬ್ಯಾಂಕಿಂಗ್ ನಾಲೆಜ್
ಪರೀಕ್ಷೆಯಲ್ಲಿ ಒಟ್ಟು 120 ಪ್ರಶ್ನೆಗಳಿಗೆ 120 ಅಂಕಗಳಿರುತ್ತವೆ. ಅಭ್ಯರ್ಥಿಗಳು ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ.40ರಷ್ಟು ಅಂಕ ಪಡೆದರೆ ಮಾತ್ರ ಅರ್ಹರೆಂದು ಪರಿಗಣಿಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳು (ಕರ್ನಾಟಕದಲ್ಲಿ):
ಆನ್‌ಲೈನ್ ಪರೀಕ್ಷೆಗಾಗಿ ಬೆಂಗಳೂರು, ಕಲಬುರಗಿ, ಉಡುಪಿ, ಶಿವಮೊಗ್ಗ, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.
ವೇತನ ಮತ್ತು ವೃತ್ತಿ ಭವಿಷ್ಯ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 48,480 ರಿಂದ 85,920 ರೂ. ವೇತನ ಶ್ರೇಣಿ ಇರುತ್ತದೆ. ನೇಮಕಗೊಂಡವರಿಗೆ ಎರಡು ವರ್ಷಗಳ ಪ್ರೊಬೆಷನರಿ ಅವಧಿ ಇರುತ್ತದೆ. ಎಸ್‌ಎಂಜಿಎಸ್-IV (SMGS-IV) ಶ್ರೇಣಿಗೆ ಬಡ್ತಿ ಪಡೆಯಬೇಕಾದರೆ, ಆಯಾ ರಾಜ್ಯದಲ್ಲಿ ಕನಿಷ್ಠ 12 ವರ್ಷ ಸೇವೆ ಸಲ್ಲಿಸಿರಬೇಕು.
ಪ್ರಮುಖ ಸೂಚನೆಗಳು:
- ಪರೀಕ್ಷೆಗೆ ಸಂಬಂಧಿಸಿದ ಪ್ರವೇಶಪತ್ರವನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೆ, ಅಭ್ಯರ್ಥಿಗಳಿಗೆ ಇಮೇಲ್ ಮೂಲಕವೂ ಕಳಿಸಲಾಗುತ್ತದೆ.
- ಒಮ್ಮೆ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿದ ಬಳಿಕ ಅದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
Bank of Baroda Local Officer Recruitment 2025 official Website/ಬ್ಯಾಂಕ್ ಆಫ್ ಬರೋಡಾ ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 24, 2025
ಹೆಚ್ಚಿನ ವಿವರಗಳಿಗಾಗಿ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ www.bankofbaroda.in ಗೆ ಭೇಟಿ ನೀಡಬಹುದು.
🔗Important Links /Dates:
Bank of Baroda Local Officer Recruitment 2025 official Website/ಬ್ಯಾಂಕ್ ಆಫ್ ಬರೋಡಾ ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ ಅಧಿಕೃತ ವೆಬ್‌ಸೈಟ್ | Official Website: Click Here Apply On-line Here: Click Here |
---|---|
Bank of Baroda Local Officer Recruitment 2025 Detailed Advertisement/ ಬ್ಯಾಂಕ್ ಆಫ್ ಬರೋಡಾ ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿಗಳ ಅಧಿಸೂಚನೆ | Click Here for Notification |
Last Date | 18/07/2025 |
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!
🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!