UGCET 2025-26: VTU ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ 2025-26 ಅಂತಿಮ ಸೀಟು ಹಂಚಿಕೆ ಮ್ಯಾಟ್ರಿಕ್ಸ್ ಪ್ರಕಟ! ಕೋರ್ಸ್‌ವಾರು, ಜಿಲ್ಲಾವಾರು ಸೀಟು ವಿವರ ಮತ್ತು ಮೀಸಲಾತಿ ಮಾಹಿತಿಗಾಗಿ ಇಲ್ಲಿ ನೋಡಿ
ಬೆಂಗಳೂರು, ಜುಲೈ 07, 2025: ಕರ್ನಾಟಕ ಸರ್ಕಾರವು 2025-26ನೇ ಶೈಕ್ಷಣಿಕ ಸಾಲಿಗೆ ವೃತ್ತಿಪರ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಅಂತಿಮ ಸೀಟು ಹಂಚಿಕೆ ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ನಡೆಯುವ ಈ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE), ನವದೆಹಲಿ ನೀಡಿರುವ ಅನುಮೋದಿತ ಪ್ರವೇಶಾತಿ (intake) ಮತ್ತು ರಾಜ್ಯ ಸರ್ಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರದ ಆಧಾರದ ಮೇಲೆ ಈ ಸೀಟು ಹಂಚಿಕೆಯನ್ನು ಕೈಗೊಳ್ಳಲಾಗುತ್ತಿದೆ.
ಈ ಹಿಂದೆ ಜೂನ್ 13, 2025 ರಂದು ಕರಡು ಸೀಟು ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಲಾಗಿತ್ತು. ಈ ಕರಡು ಮ್ಯಾಟ್ರಿಕ್ಸ್ ಕುರಿತು ಸಾರ್ವಜನಿಕರು ಮತ್ತು ಶಿಕ್ಷಣ ಸಂಸ್ಥೆಗಳಿಂದ ಏಳು ದಿನಗಳೊಳಗೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ನಿಗದಿತ ಅವಧಿಯೊಳಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶನಿವಾರ 2025-26ನೇ ಶೈಕ್ಷಣಿಕ ಸಾಲಿಗೆ ಇಂಜಿನಿಯರಿಂಗ್ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ 1,41,009 ಸೀಟುಗಳ ಅಂತಿಮ ಪಟ್ಟಿಯನ್ನು (ಸೀಟ್ ಮ್ಯಾಟ್ರಿಕ್ಸ್) ಬಿಡುಗಡೆ ಮಾಡಿದೆ. ಸಿಇಟಿ (CET)ಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಈ ಸೀಟುಗಳಲ್ಲಿ ವಿವಿಧ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳೂ ಸೇರಿವೆ.
2024-25ನೇ ಸಾಲಿನಲ್ಲೂ ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ ಇದೇ ಪ್ರಮಾಣದಲ್ಲಿ ಅಂದರೆ 1.41 ಲಕ್ಷ ಇತ್ತು ಎಂಬುದು ಗಮನಾರ್ಹ. ಈ ವರ್ಷವೂ ಅಷ್ಟೇ ಸಂಖ್ಯೆಯ ಸೀಟುಗಳು ಲಭ್ಯವಾಗಿವೆ.
ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆ (ED 170 TEC 2025) ಯಿಂದ VTU ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2025-26ನೇ ಸಾಲಿನ ಸೀಟು ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆ ಪ್ರಕಾರ, ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇರುವ ಸರ್ಕಾರಿ, ಅಂಕಿತ, ಖಾಸಗಿ ಮತ್ತು VTU ಭಾಗವಲ್ಲದ ಸರ್ಕಾರಿ ಕಾಲೇಜುಗಳಲ್ಲಿ ಕೋರ್ಸ್ ನಂತೆ ಸೀಟು ಹಂಚಿಕೆ ವಿವರ ನೀಡಲಾಗಿದೆ.
ಸಂಪೂರ್ಣ ಮತ್ತು ವಿವರವಾದ ಸೀಟು ಮ್ಯಾಟ್ರಿಕ್ಸ್ ಮಾಹಿತಿಗಾಗಿ ಇಲ್ಲಿ click ಮಾಡಿ.
- ಎಲ್ಲಾ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ, VTU ಅಂಗ ಸಂಸ್ಥೆಗಳಲ್ಲಿ 100% ಸೀಟುಗಳು KEA (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಗೆ ಮೀಸಲು ನೀಡಲಾಗಿದೆ.
- SNQ (Special Quota), HK/RK ಮೀಸಲಾತಿ, PWD ಅಭ್ಯರ್ಥಿಗಳಿಗೆ ವಿಶೇಷ ಸೀಟುಗಳು ಇದ್ದು, ಪ್ರತ್ಯೇಕವಾಗಿ ಹಂಚಿಕೆಯಾಗಿವೆ.
2025-26ನೇ ಸಾಲಿನ ಇಂಜಿನಿಯರಿಂಗ್ ಸೀಟುಗಳ ವಿಭಾಗವಾರು ಸಂಪೂರ್ಣ ಪಟ್ಟಿ (KEA ಅಧಿಕೃತ ಸೀಟು ಪಟ್ಟಿ ಆಧಾರದ ಮೇಲೆ):
UGCET 2025-26: ವಿಭಾಗವಾರು ಒಟ್ಟು ಸೀಟುಗಳು (Total Seats by Category in Govt quota):
ಕಾಲೇಜು ಪ್ರಕಾರ | ಲಭ್ಯವಿರುವ ಸೀಟುಗಳು (ಒಟ್ಟು) |
---|---|
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು (Govt) | 6,605 ಸೀಟುಗಳು |
ಸಹಾಯಕ ಕಾಲೇಜುಗಳು (Aided) | 1,680 ಸೀಟುಗಳು |
ಖಾಸಗಿ ಅನುದಾನವಿಲ್ಲದ ಕಾಲೇಜುಗಳು (Unaided) | 34,368 ಸೀಟುಗಳು |
ಅಲ್ಪಸಂಖ್ಯಾತ ಸಂಸ್ಥೆಗಳು (Minority Colleges) | 3,556 ಸೀಟುಗಳು |
ಒಟ್ಟು ಲಭ್ಯವಿರುವ ಸೀಟುಗಳು: 46,209
2025-26ನೇ ಸಾಲಿನ ಇಂಜಿನಿಯರಿಂಗ್ ಪ್ರವೇಶಕ್ಕೆ ಇಡೀ ಕರ್ನಾಟಕದಾದ್ಯಂತ ವಿಭಿನ್ನ ಕೋರ್ಸ್‌ಗಳ ಪ್ರಕಾರ ಲಭ್ಯವಿರುವ ಸೀಟುಗಳ ಮಾಹಿತಿ ಇಲ್ಲಿದೆ:
UGCET 2025-26: ಕೋರ್ಸ್‌ವಾರು ಲಭ್ಯವಿರುವ ಸೀಟುಗಳು (Top Courses-wise Seat Availability):
ಕೋರ್ಸ್ ಹೆಸರು (Course) | ಲಭ್ಯವಿರುವ ಸೀಟುಗಳು (Total Available Seats) |
---|---|
Computer Science and Engineering (CSE) | 12,387 ಸೀಟುಗಳು |
Electronics and Communication Engineering (ECE) | 7,451 ಸೀಟುಗಳು |
Information Science and Engineering (ISE) | 4,092 ಸೀಟುಗಳು |
Artificial Intelligence & Machine Learning (AI & ML) | 2,658 ಸೀಟುಗಳು |
Artificial Intelligence and Data Science (AI & DS) | 2,490 ಸೀಟುಗಳು |
Civil Engineering | 3,124 ಸೀಟುಗಳು |
Mechanical Engineering | 3,390 ಸೀಟುಗಳು |
Electrical & Electronics Engineering (EEE) | 2,706 ಸೀಟುಗಳು |
Robotics and Automation / AI & Robotics | 492 ಸೀಟುಗಳು |
Computer Science and Design / Cyber Security | 978 ಸೀಟುಗಳು |
Textile / Silk / Fashion Technology | 152 ಸೀಟುಗಳು |
Aeronautical / Aerospace Engineering | 252 ಸೀಟುಗಳು |
Electronics and Instrumentation Engineering | 276 ಸೀಟುಗಳು |
Mining Engineering | 60 ಸೀಟುಗಳು |
VLSI Design & Technology, Electronics (Core) | 180 ಸೀಟುಗಳು |
Computer Science and Business Systems | 360 ಸೀಟುಗಳು |
ಒಟ್ಟು ಕೋರ್ಸ್‌ಗಳ ಸಂಖ್ಯೆ: 40+
ಒಟ್ಟು ಲಭ್ಯವಿರುವ ಇಂಜಿನಿಯರಿಂಗ್ ಸರ್ಕಾರಿ ಕೋಟಾ ಸೀಟುಗಳು: 46,209+
ಈ ಪಟ್ಟಿ ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ಅಲ್ಪಸಂಖ್ಯಾತ ಕಾಲೇಜುಗಳ ಸೀಟುಗಳನ್ನು ಒಳಗೊಂಡಿದೆ.
ಸಂಪೂರ್ಣ ಮತ್ತು ವಿವರವಾದ ಸೀಟು ಮ್ಯಾಟ್ರಿಕ್ಸ್ ಮಾಹಿತಿಗಾಗಿ, ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಅಕ್ರಮ ಸೀಟ್ ಬ್ಲಾಕಿಂಗ್ ವಿರುದ್ಧ ಕಠಿಣ ಕ್ರಮ:
2024-25ನೇ ಶೈಕ್ಷಣಿಕ ಸಾಲಿನಲ್ಲಿ ಕೆಲವು ಕಾಲೇಜುಗಳಲ್ಲಿ ನಡೆದ ಅಕ್ರಮ ಸೀಟ್ ಬ್ಲಾಕಿಂಗ್ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುವುದು ಅಧಿಸೂಚನೆಯ ಪ್ರಮುಖಾಂಶವಾಗಿದೆ. ಅಂತಹ ಕಾಲೇಜುಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, 2025-26ನೇ ಸಾಲಿನಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿದ್ದ ಯಾವುದೇ ಕಾಲೇಜುಗಳಿಗೆ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ಅಥವಾ ಪ್ರವೇಶಾತಿಯನ್ನು ಹೆಚ್ಚಿಸಲು ಅನುಮತಿ ನೀಡಿಲ್ಲ.
ಈ ಅಂತಿಮ ಸೀಟು ಮ್ಯಾಟ್ರಿಕ್ಸ್ ಅನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ಮಾಹಿತಿಗಾಗಿ ಕೆಇಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶಿಸಲಾಗಿದೆ. ಈ ಮ್ಯಾಟ್ರಿಕ್ಸ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು, ವಿಟಿಯು ಘಟಕ ಕಾಲೇಜುಗಳು, ಅನುದಾನಿತ ಕಾಲೇಜುಗಳು, ಖಾಸಗಿ ಅನುದಾನರಹಿತ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ರೀತಿಯ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ವಿವರಗಳನ್ನು ವಿವಿಧ ಅನುಬಂಧಗಳಲ್ಲಿ (Annexures A, B, C, D, M, O, P, Z, E, V) ಒದಗಿಸುತ್ತದೆ. ಇದರಲ್ಲಿ ಕಂಪ್ಯೂಟರ್ ಸೈನ್ಸ್, AI&ML, ECE, ಸಿವಿಲ್, ಮೆಕ್ಯಾನಿಕಲ್ ಸೇರಿದಂತೆ ಹಲವು ಇಂಜಿನಿಯರಿಂಗ್ ಕೋರ್ಸ್‌ಗಳ ಸೀಟುಗಳ ಮಾಹಿತಿ ನೀಡಿದ್ದಾರೆ.
ಈ ಕ್ರಮವು ಇಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅನಿಯಮಿತ ಚಟುವಟಿಕೆಗಳನ್ನು ತಡೆಯಲು ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
👉Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ
🔗SDF Vidyadhan Scholarship 2025 : ಪ್ರತಿಭಾವಂತ ಎಸ್.ಎಸ್.ಎಲ್.ಸಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ!
🔗Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button