SSC JE Recruitment 2025: ಎಸ್ಎಸ್ಸಿ ಜೆಇ ನೇಮಕಾತಿ: ಕೇಂದ್ರದಲ್ಲಿ 1340 ಎಂಜಿನಿಯರ್ ಹುದ್ದೆಗಳಿಗೆ ಡಿಪ್ಲೊಮಾ/ಪದವೀಧರರಿಂದ ಅರ್ಜಿ ಆಹ್ವಾನ. ಜು.21 ಕೊನೆ ದಿನ. ನಿಮ್ಮ ವೃತ್ತಿಜೀವನಕ್ಕೆ ಉತ್ತಮ ಅವಕಾಶ! ಈಗಲೇ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು, ಜುಲೈ 05, 2025: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಅಧೀನ ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ (ಜೆಇ) ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್ಎಸ್ಸಿ) ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ವರ್ಷ ಒಟ್ಟು 1,340 ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಡಿಪ್ಲೊಮಾ ಮತ್ತು ಪದವಿ ಪೂರ್ಣಗೊಳಿಸಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಮತ್ತು ನೇಮಕಾತಿ ಇಲಾಖೆಗಳು:
ಮುಖ್ಯವಾಗಿ ಸಿವಿಲ್, ಮೆಕಾನಿಕಲ್, ಎಲೆಕ್ಟಿಕಲ್, ಕ್ವಾಲಿಟಿ ಸರ್ವೇಯಿಂಗ್ ಮತ್ತು ಕಾಂಟ್ರಾಕ್ಟ್ ವಿಭಾಗದ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಈ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತದೆ. ನೇಮಕಾತಿ ನಡೆಯುವ ಪ್ರಮುಖ ಇಲಾಖೆಗಳು/ಸಂಸ್ಥೆಗಳು ಹೀಗಿವೆ:
- ಕೇಂದ್ರ ಜಲ ಆಯೋಗ (Central Water Commission – CWC)
- ಕೇಂದ್ರ ಲೋಕೋಪಯೋಗಿ ಇಲಾಖೆ (Central Public Works Department – CPWD)
- ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ (Military Engineering Service – MES)
- ಫರಕ್ಕಾ ಬ್ಯಾರೇಜ್ ಪ್ರಾಜೆಕ್ಟ್ (Farakka Barrage Project)
- ಗಡಿ ರಸ್ತೆ ಸಂಸ್ಥೆ (Border Roads Organization – BRO)
- ಕೇಂದ್ರ ಜಲ ಮತ್ತು ವಿದ್ಯುತ್ ಸಂಶೋಧನಾ ಕೇಂದ್ರ (Central Water and Power Research Station – CWPRS)
- ನೌಕಾಪಡೆಯ ಕ್ವಾಲಿಟಿ ಅಶೂರೆನ್ಸ್ ನಿರ್ದೇಶನಾಲಯ (Directorate General of Naval Quality Assurance – DGNQA)
- ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ (Ministry of Ports, Shipping & Waterways)
- ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (National Technical Research Organisation – NTRO)
ಅರ್ಹತೆಗಳು:
- ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಅಥವಾ ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಕೆಲವು ವಿಭಾಗಗಳ ಹುದ್ದೆಗಳಿಗೆ ನಿರ್ದಿಷ್ಟ ಪದವಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನೇ ಬಯಸಲಾಗಿದೆ. ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್, ಗಡಿ ರಸ್ತೆ ಸಂಸ್ಥೆ ಮತ್ತು ನೌಕಾಪಡೆಯ ಕ್ವಾಲಿಟಿ ಅಶೂರೆನ್ಸ್ ನಿರ್ದೇಶನಾಲಯದಲ್ಲಿರುವ ಹುದ್ದೆಗಳಿಗೆ ಸಂಬಂಧಪಟ್ಟ ವಿಭಾಗಗಳಲ್ಲಿ 2 ವರ್ಷಗಳ ಅನುಭವವೂ ನಿರೀಕ್ಷಿಸಲಾಗಿದೆ.
ವಯೋಮಿತಿ:
- ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಗರಿಷ್ಠ 32 ವರ್ಷ.
- ಉಳಿದ ಎಲ್ಲಾ ಇಲಾಖೆಗಳು/ಸಂಸ್ಥೆಗಳಲ್ಲಿರುವ ಜೆಇ ಹುದ್ದೆಗೆ ಗರಿಷ್ಠ 30 ವರ್ಷ.
- ನಿಯಮಾನುಸಾರ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಹಿಂದುಳಿದ ವರ್ಗದ (ಒಬಿಸಿ) ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ/ಪಂಗಡ (ಎಸ್ಸಿ/ಎಸ್ಟಿ) ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇರುತ್ತದೆ.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧರಿತ ಪರೀಕ್ಷೆ (ಪತ್ರಿಕೆ-1) ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಎರಡನೇ ಪರೀಕ್ಷೆ (ಪತ್ರಿಕೆ-2) ಬರೆಯಲು ಅರ್ಹರಾಗುತ್ತಾರೆ. ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ, ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳೂ ಇರುತ್ತವೆ.
ಪರೀಕ್ಷಾ ಕೇಂದ್ರಗಳು (ಕರ್ನಾಟಕದಲ್ಲಿ):
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಮೂರು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರಗಳಲ್ಲಿ ತಮಗೆ ಸೂಕ್ತವಾದ ಮೂರು ಕೇಂದ್ರಗಳನ್ನು ಆಯ್ಕೆ ಮಾಡಬಹುದು. ಅರ್ಜಿ ಸಲ್ಲಿಸಿದ ಬಳಿಕ ಪರೀಕ್ಷಾ ಕೇಂದ್ರ ಬದಲಾವಣೆ ಮಾಡುವ ಯಾವುದೇ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 21, 2025 (ಸಂಜೆ 5 ಗಂಟೆಯವರೆಗೆ)
- ಆನ್ಲೈನ್ ಮೂಲಕ ಶುಲ್ಕ ಪಾವತಿಗೆ ಗಡುವು: ಜುಲೈ 22, 2025
- ಅರ್ಜಿ ತಿದ್ದುಪಡಿಗೆ ಅವಕಾಶ: ಆಗಸ್ಟ್ 01 – ಆಗಸ್ಟ್ 02, 2025
- ಮೊದಲ ತಿದ್ದುಪಡಿಗೆ: ರೂ. 200
- ಎರಡನೇ ತಿದ್ದುಪಡಿಗೆ: ರೂ. 500
- ಅರ್ಜಿ ತಿದ್ದುಪಡಿಗೆ ಅವಕಾಶ: ಆಗಸ್ಟ್ 01 – ಆಗಸ್ಟ್ 02, 2025
- ಪತ್ರಿಕೆ-1ರ ಪರೀಕ್ಷೆ: ಅಕ್ಟೋಬರ್ 27 – 31, 2025
- ಪತ್ರಿಕೆ-2ರ ಪರೀಕ್ಷೆ: ಜನವರಿ-ಫೆಬ್ರವರಿ, 2026
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಎಸ್ಎಸ್ಸಿ ಅಧಿಕೃತ ವೆಬ್ಸೈಟ್ https://ssc.gov.in ಗೆ ಭೇಟಿ ನೀಡಬಹುದು.
🔗Important Links /Dates:
SSC JE Recruitment 2025 official Website/ಎಸ್ಎಸ್ಸಿ ಜೆಇ ನೇಮಕಾತಿ ಅಧಿಕೃತ ವೆಬ್ಸೈಟ್ | Official Website: Click Here Apply On-line Here: Click Here |
---|---|
SSC JE Recruitment 2025 Detailed Advertisement/ ಎಸ್ಎಸ್ಸಿ ಜೆಇ ನೇಮಕಾತಿ ಅಧಿಸೂಚನೆ | Click Here for Notification |
Last Date | 21/07/2025 |
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!
🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button👇