ವಿದ್ಯಾರ್ಥಿವೇತನ ಸಮಸ್ಯೆ ನಿವಾರಿಸಲು, 5-15 ವರ್ಷದ ಮಕ್ಕಳಿಗಾಗಿ ಶಾಲೆಗಳಲ್ಲೇ ವಿಶೇಷ ಆಧಾರ್ ನವೀಕರಣ ಶಿಬಿರಗಳು ಆರಂಭ. ಈ ಪ್ರಕ್ರಿಯೆ ಸಂಪೂರ್ಣ ಉಚಿತ. ಅಗತ್ಯ ದಾಖಲೆಗಳು: ಜನನ ಪ್ರಮಾಣಪತ್ರ ಮತ್ತು ಹಳೆಯ ಆಧಾರ್ ಕಾರ್ಡ್.5 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಬಯೋಮೆಟ್ರಿಕ್ ಆಧಾರ್ ನವೀಕರಣಕ್ಕೆ (Aadhaar Biometric Update School) ಗಡುವು: 2026ರ ಮಾರ್ಚ್ 1ರೊಳಗೆ ಕಾರ್ಯ ಪೂರ್ಣಗೊಳಿಸಲು ಸರ್ಕಾರ ಸೂಚನೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಸೈಬರ್ ಸೆಂಟರ್ಗಳಲ್ಲಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಏಕೆಂದರೆ, ಶಾಲಾ-ಕಾಲೇಜುಗಳ ಆವರಣದಲ್ಲೇ ವಿಶೇಷ ಶಿಬಿರಗಳನ್ನು ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ವಿದ್ಯಾರ್ಥಿವೇತನ, ವಿವಿಧ ಪರೀಕ್ಷಾ ಅರ್ಜಿ ಸಲ್ಲಿಕೆಯಂತಹ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಆಧಾರ್ ಸಂಬಂಧಿತ ಅಡೆತಡೆಗಳನ್ನು ನಿವಾರಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಶಾಲಾ ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಈ ಕಾರ್ಯದ ಹೊಣೆ ನೀಡಲಾಗಿದ್ದು, 2026ರ ಮಾರ್ಚ್ 1ರೊಳಗೆ 5 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳ ಬಯೋಮೆಟ್ರಿಕ್ ಆಧಾರ್ ನವೀಕರಣ (5 to 15 Years Aadhaar Update) ಕಾರ್ಯವನ್ನು ಮುಗಿಸುವಂತೆ ಗಡುವು ವಿಧಿಸಲಾಗಿದೆ.
ಆಯುಕ್ತರ ಹೇಳಿಕೆ: ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಅವರು, “ಸರಕಾರದ ಸೂಚನೆಯಂತೆ ವಿದ್ಯಾರ್ಥಿಗಳ ಆಧಾರ್ ಬಯೋಮೆಟ್ರಿಕ್ ನವೀಕರಣದ ಶಿಬಿರ ನಡೆಸಲು ಸಿದ್ಧತೆ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: UIDAI ನ ಹೊಸ ಹೆಜ್ಜೆ: ಶಾಲೆಗಳಲ್ಲೇ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣ ಪ್ರಕ್ರಿಯೆ ಆರಂಭ!
ಆಧಾರ್ ನವೀಕರಣ ಏಕೆ ಅಗತ್ಯ?
ಮಗುವಿಗೆ 5 ವರ್ಷ ವಯಸ್ಸಿದ್ದಾಗ ಆಧಾರ್ ಮಾಡಿಸುವಾಗ ಬೆರಳಚ್ಚು ಮತ್ತು ಭಾವಚಿತ್ರ ದಾಖಲಿಸಲಾಗಿರುತ್ತದೆ. ಆದರೆ, ಮಗು 15 ವರ್ಷ ವಯಸ್ಸಿಗೆ ಬಂದಾಗ, ಆಧಾರ್ನಲ್ಲಿ ಭಾವಚಿತ್ರ, ಬೆರಳಚ್ಚು ಸೇರಿದಂತೆ ವಿವಿಧ ಮಾಹಿತಿಗಳನ್ನು ಕಡ್ಡಾಯವಾಗಿ ಪರಿಷ್ಕರಣೆ ಮಾಡಬೇಕು ಎಂದು ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸೂಚನೆ ನೀಡಿದೆ.
ಪ್ರಸ್ತುತ, ರಾಜ್ಯದ ಶಾಲೆಗಳಲ್ಲಿ 5 ರಿಂದ 15 ವರ್ಷ ವಯಸ್ಸಿನ 30 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಈ ವಿಶೇಷ ನವೀಕರಣ ಶಿಬಿರಗಳ ಮೂಲಕ ಅನುಕೂಲವಾಗಲಿದೆ.
ವಿಶೇಷ ಶಿಬಿರಗಳ ಆಯೋಜನೆ ಹೇಗೆ?
ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ ಮಾಹಿತಿ ಆಧರಿಸಿ, ಶಿಕ್ಷಣ ಇಲಾಖೆ ಜಿಲ್ಲಾ ಹಂತದ ಸಮಿತಿಗೆ ಮಾಹಿತಿ ಒದಗಿಸಲಿದೆ.
- ವೇಳಾಪಟ್ಟಿ ರಚನೆ: ಶಾಲೆಗಳಲ್ಲಿ ಯಾವಾಗ ಶಿಬಿರ ನಡೆಸಬೇಕು ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ ರಚಿಸುವ ಮೂಲಕ ಮೇಲ್ವಿಚಾರಣೆ ನಡೆಸಲಿದೆ.
- ಏಜೆನ್ಸಿಗಳ ಬಳಕೆ: ಮಾನ್ಯತೆ ಪಡೆದ ಆಧಾರ್ ಏಜೆನ್ಸಿಗಳ ಮೂಲಕ ಶಾಲೆಗಳ ಆವರಣದಲ್ಲೇ ಈ ವಿಶೇಷ ಶಿಬಿರಗಳನ್ನು ನಡೆಸಲಾಗುತ್ತದೆ.
- ಹೊಣೆಗಾರಿಕೆ ಹಂಚಿಕೆ: ಶಾಲಾ ಶಿಕ್ಷಣ ಇಲಾಖೆ, ಇ-ಗವರ್ನೆನ್ಸ್, UIDAI ಸಂಸ್ಥೆ ಹಾಗೂ ಜಿ.ಪಂ., ಶಾಲಾ-ಕಾಲೇಜುಗಳಿಗೂ ಸೇರಿ ನವೀಕರಣದ ಕೆಲಸವನ್ನು ಸರ್ಕಾರ ಹಂಚಿಕೆ ಮಾಡಿದೆ.
ಇತ್ತೀಚೆಗಷ್ಟೇ ತಮಿಳುನಾಡು ಹಾಗೂ ಹೊಸದಿಲ್ಲಿಯ ಕೆಲವು ಶಾಲೆಗಳಲ್ಲಿ ಇದೇ ಮಾದರಿಯ ವಿಶೇಷ ಶಿಬಿರಗಳನ್ನು ನಡೆಸಲಾಗಿತ್ತು. ಈಗ ರಾಜ್ಯದಲ್ಲೂ ಅದೇ ಮಾದರಿಯಲ್ಲಿ ಈ ಕಾರ್ಯವನ್ನು ಸುಲಭಗೊಳಿಸಲು ಸರ್ಕಾರ ಸಜ್ಜಾಗಿದೆ.
ಆಧಾರ್ ನವೀಕರಣಕ್ಕೆ ಬೇಕಾದ ಪ್ರಮುಖ ದಾಖಲೆಗಳು
ವಿದ್ಯಾರ್ಥಿಗಳಿಗೆ ಈ ಶಿಬಿರಗಳ ಮೂಲಕ ಉಚಿತವಾಗಿ ಆಧಾರ್ ನವೀಕರಣ (Free Aadhaar Renewal Karnataka) ಮಾಡಿಸಲು ಅವಕಾಶ ನೀಡಲಾಗಿದೆ. ನವೀಕರಣಕ್ಕೆ ವಿದ್ಯಾರ್ಥಿಗಳು ಸಲ್ಲಿಸಬೇಕಾದ ಪ್ರಮುಖ ದಾಖಲೆಗಳು:
- ಮಗುವಿನ ಹಳೆಯ ಆಧಾರ್ ಕಾರ್ಡ್.
- ಮಗುವಿನ ಜನನ ಪ್ರಮಾಣ ಪತ್ರ.
- ಪೋಷಕರ ಮತ್ತು ಮಗುವಿನ ವಿಳಾಸ ದಾಖಲೆ.
Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ
Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ
Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp , Facebook & Telegram ಗ್ರೂಪ್ಗಳಿಗೆ ಸೇರಿ. Click to Join Below Button