Anganwadi Jobs Karnataka: ಕಲ್ಯಾಣ ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್! ಅಫಜಲಪುರ ಶಿಶು ಅಭಿವೃದ್ಧಿ ಯೋಜನೆಯಡಿ 41 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ಅರ್ಹತೆ, ಊರುಗಳ ಪಟ್ಟಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.
ನಿಮ್ಮೂರಲ್ಲೇ ಸಿಗಲಿದೆ ಅಂಗನವಾಡಿ ಕೆಲಸ: 41 ಹುದ್ದೆಗಳಿಗೆ ಬೃಹತ್ ನೇಮಕಾತಿ ಶುರು!
WCD Kalaburagi Recruitment 2026: ನಮಸ್ಕಾರ ನಾಡಿನ ಜನತೆಗೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿ ಅಂತಾನೇ ಹೇಳಬಹುದು. ಸರ್ಕಾರಿ ಕೆಲಸ ಪಡೆಯಬೇಕು, ಸ್ವಂತ ಕಾಲ ಮೇಲೆ ನಿಲ್ಲಬೇಕು, ನಮ್ಮೂರಲ್ಲೇ ಇದ್ದುಕೊಂಡು ನಾಲ್ಕು ಕಾಸು ಸಂಪಾದನೆ ಮಾಡಬೇಕು ಅಂತ ಕನಸು ಕಾಣುತ್ತಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅತ್ಯುತ್ತಮ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ.
ಹೌದು, 2025-26ನೇ ಸಾಲಿನ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಾದ್ಯಂತ ಬರೋಬ್ಬರಿ 41 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿ Anganwadi Recruitment 2026 ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಯಾವುದೇ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ ಎನ್ನುವುದು ಮತ್ತೊಂದು ಖುಷಿಯ ವಿಚಾರ.
ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮತ್ತು ಗ್ರಾಮೀಣ ಮಟ್ಟದಲ್ಲಿ ಮಕ್ಕಳ, ಗರ್ಭಿಣಿಯರ ಆರೋಗ್ಯ ಸುಧಾರಿಸಲು ಈ ಹುದ್ದೆಗಳು ಬಹಳ ಮುಖ್ಯವಾಗಿವೆ. ನೀವು ಕೂಡ WCD Karnataka Jobs ಹುಡುಕುತ್ತಿದ್ದರೆ, ಇದಕ್ಕಿಂತ ಒಳ್ಳೆ ಅವಕಾಶ ಮತ್ತೊಂದಿಲ್ಲ. ಹಾಗಾದರೆ ಬನ್ನಿ, ಯಾವ್ಯಾವ ಗ್ರಾಮಗಳಲ್ಲಿ ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಏನೆಲ್ಲಾ ದಾಖಲೆಗಳು ಬೇಕು? ಎನ್ನುವ ಸಂಪೂರ್ಣ ಮಾಹಿತಿಯನ್ನು ಬಹಳ ಸರಳವಾಗಿ ತಿಳಿದುಕೊಳ್ಳೋಣ.
ಎಷ್ಟು ಹುದ್ದೆಗಳು ಖಾಲಿ ಇವೆ?
ಅಫಜಲಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಪ್ರವೀಣ್ ಹೇರೂರ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ತಾಲೂಕಿನಲ್ಲಿ ಒಟ್ಟು 41 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು: 06
- ಅಂಗನವಾಡಿ ಸಹಾಯಕಿ ಹುದ್ದೆಗಳು: 35
ಯಾವೆಲ್ಲಾ ಊರುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ?
ಒಟ್ಟು 6 ಊರುಗಳಲ್ಲಿ Anganwadi Worker Vacancy ಖಾಲಿ ಇದ್ದು, ಆಯಾ ಗ್ರಾಮದ ಮಹಿಳೆಯರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆ ಊರುಗಳ ಪಟ್ಟಿ ಇಲ್ಲಿದೆ:
- ಬಿಲ್ವಾಡ್ (ಕೆ)
- ಘತ್ತರಗಾ-3
- ಕರಜಗಿ-1
- ಮಾತೋಳಿ-1
- ಸಾಗನೂರ-2
- ಶಿವಪುರ
ಈ ಮೇಲಿನ ಗ್ರಾಮಗಳಲ್ಲಿ வಾಸವಾಗಿರುವ, ಕನಿಷ್ಠ 10ನೇ ತರಗತಿ (SSLC) ಪಾಸ್ ಆಗಿರುವ ಮಹಿಳೆಯರು ಕಾರ್ಯಕರ್ತೆ ಹುದ್ದೆಗೆ ಅರ್ಜಿ ಹಾಕಬಹುದು.
ಯಾವೆಲ್ಲಾ ಊರುಗಳಲ್ಲಿ ಅಂಗನವಾಡಿ ಸಹಾಯಕಿ ಹುದ್ದೆ ಖಾಲಿ ಇದೆ?
ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಗೆ ಸಹಾಯ ಮಾಡಲು, ಕೇಂದ್ರವನ್ನು ಸ್ವಚ್ಛವಾಗಿಡಲು ಮತ್ತು ಮಕ್ಕಳಿಗೆ ಊಟೋಪಚಾರ ನೋಡಿಕೊಳ್ಳಲು ಸಹಾಯಕಿಯರ ಅಗತ್ಯ ಬಹಳಷ್ಟಿದೆ. ಒಟ್ಟು 35 ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಪಟ್ಟಿ ಈ ಕೆಳಗಿನಂತಿದೆ: ಅಳ್ಳಗಿ(ಬಿ)-1, ಆನೂರ-1, ಆನೂರ-3, ಅಂಜುಣಗಿ ತಾಂಡಾ-2, ಬಡದಾಳ-3, ಬಳೂರ್ಗಿ ತಾಂಡಾ-1, ಬಂದರವಾಡ-3, ಭೈರಾಮಡಗಿ-2, ಭೈರಾಮಡಗಿ-4, ಬೋಗನಳ್ಳಿ-1, ಚಿಣಮಗೇರಾ-1, ಚಿಣಮಗೇರಾ-3, ಗೌರ(ಕೆ)-1, ಹಳ್ಳಾಳ್ ತಾಂಡಾ, ಹವಳಗಾ-1, ಹೂಗಾರ ಬಡಾವಣೆ ಅಫಜಲಪುರ, ಇಂಗಳಗಿ(ಬಿ)-2, ಕೋಗನೂರ-4, ಮಾದಬಾಳ ತಾಂಡಾ, ಮದರಾ(ಬಿ) ತಾಂಡಾ, ಮಲ್ಲಾಬಾದ-3, ಮಲ್ಲಾಬಾದ-4, ಮಣ್ಣೂರ-2, ಮಾಶಾಳ-1, ಮಾಶಾಳ ಎಸ್.ಸಿ ಕಾಲೋನಿ-1, ಮಾತೋಳಿ-1, ರೇವಣಸಿದ್ದೇಶ್ವರ ಕಾಲೋನಿ ಅಫಜಲಪುರ, ಸಾಗನೂರ-1, ಸಂಗಾಪುರ-2, ಶೇಷಗಿರಿ-2, ಶಿವೂರ-3, ಸಿದ್ದೇಶ್ವರ ಕಾಲೋನಿ ಅಫಜಲಪುರ, ಸಿರಸಗಿ, ಉಸ್ಮಾನ ಕಾಲೋನಿ ಅಫಜಲಪುರ.
ಈ ಗ್ರಾಮಗಳಲ್ಲಿ ವಾಸವಾಗಿರುವ, 4ನೇ ತರಗತಿಯಿಂದ 9ನೇ ತರಗತಿಯವರೆಗೆ ಓದಿರುವ ಅಥವಾ 10ನೇ ತರಗತಿ ಫೇಲ್ ಆಗಿರುವ ಮಹಿಳೆಯರು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
WCD-Kalaburagi-Notification-for-41-Anganwadi-Workers-Helpers-Vacancies
ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಈ ಹಿಂದೆಲ್ಲಾ ಅರ್ಜಿ ಫಾರ್ಮ್ ತಂದು, ಕೈಯಿಂದ ಬರೆದು, ಆಫೀಸ್‌ಗೆ ಹೋಗಿ ಕೊಟ್ಟು ಬರಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ನೀವು ಸುಲಭವಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಸೆಂಟರ್‌ಗೆ ಹೋಗಿ Apply Online Anganwadi ಪ್ರಕ್ರಿಯೆ ಮೂಲಕ ಅರ್ಜಿ ಸಲ್ಲಿಸಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್‌ಸೈಟ್: https://karnemakaone.kar.nic.in/abcd/ApplicationForm_JA_org.aspx ಲಿಂಕ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಬೇರೆ ಯಾವುದೇ ರೀತಿಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಕಳುಹಿಸಿದರೆ ಅದನ್ನು ಸ್ವೀಕರಿಸುವುದಿಲ್ಲ ಎಂದು ಇಲಾಖೆ ಕಟ್ಟುನಿಟ್ಟಾಗಿ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಆಸಕ್ತ ಮಹಿಳೆಯರು ಮಾರ್ಚ್ 16 ರ ಸಾಯಂಕಾಲ 5:30 ರೊಳಗಾಗಿ ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಕೊನೆಯ ದಿನಾಂಕದಂದು ಸರ್ವರ್ ಸಮಸ್ಯೆ ಆಗುವ ಸಾಧ್ಯತೆ ಇರುವುದರಿಂದ, ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಜಾಣತನ.
ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?
ನೀವು ಅರ್ಜಿ ಹಾಕಲು ಹೋಗುವ ಮುನ್ನ ಈ ಕೆಳಗಿನ ದಾಖಲೆಗಳನ್ನು (Documents) ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು:
- ಜನನ ಪ್ರಮಾಣ ಪತ್ರ ಅಥವಾ ಎಸ್‌ಎಸ್‌ಎಲ್‌ಸಿ (SSLC) ಮಾರ್ಕ್ಸ್‌ಕಾರ್ಡ್ (ವಯಸ್ಸಿನ ದೃಢೀಕರಣಕ್ಕಾಗಿ).
- ವಿದ್ಯಾರ್ಹತೆಯ ಅಂಕಪಟ್ಟಿಗಳು (ಕಾರ್ಯಕರ್ತೆಗೆ 10ನೇ ಕ್ಲಾಸ್, ಸಹಾಯಕಿಗೆ 4 ರಿಂದ 9ನೇ ಕ್ಲಾಸ್ ಪಾಸ್/ಫೇಲ್).
- ಅದೇ ಗ್ರಾಮದ ನಿವಾಸಿ ಎಂಬುದಕ್ಕೆ ತಹಶೀಲ್ದಾರ್ ಅವರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ (Resident Certificate). ಇದು ಕಡ್ಡಾಯ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೀಸಲಾತಿ ಕೋರುವವರಿಗೆ).
- ವಿಧವೆ, ವಿಕಲಚೇತನ, ಅಥವಾ ವಿಚ್ಛೇದಿತ ಮಹಿಳೆಯಾಗಿದ್ದರೆ, ಅದಕ್ಕೆ ಸಂಬಂಧಿಸಿದ ಅಧಿಕೃತ ಪ್ರಮಾಣ ಪತ್ರಗಳು. (ಇಂಥವರಿಗೆ ಆಯ್ಕೆಯಲ್ಲಿ ವಿಶೇಷ ಆದ್ಯತೆ ಸಿಗುತ್ತದೆ).
- ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
ಈ ಕೆಲಸ ಯಾಕೆ ಉತ್ತಮ?
ಗ್ರಾಮೀಣ ಮಹಿಳೆಯರಿಗೆ ಇದೊಂದು ಗೌರವಾನ್ವಿತ ವೃತ್ತಿಯಾಗಿದೆ. ತಮ್ಮದೇ ಊರಿನಲ್ಲಿ, ತಮ್ಮದೇ ಜನರ ಮಧ್ಯೆ ಕೆಲಸ ಮಾಡುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೆ ಮಾತ್ರ ಕೆಲಸವಿರುತ್ತದೆ. ಪುಟ್ಟ ಮಕ್ಕಳ ಜೊತೆ ಆಟವಾಡಿಸುತ್ತಾ, ಅವರಿಗೆ ಅಕ್ಷರ ಕಲಿಸುತ್ತಾ, ಪೌಷ್ಟಿಕ ಆಹಾರ ನೀಡುವ ಮೂಲಕ ಸಮಾಜ ಸೇವೆ ಮಾಡಿದ ತೃಪ್ತಿ ಸಿಗುತ್ತದೆ. ಜೊತೆಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ಗೌರವ ಧನ (Honorarium) ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಮುಂದಿನ ದಿನಗಳಲ್ಲಿ Karnataka Govt Jobs ಅಡಿಯಲ್ಲಿ ಸೇವಾ ಭದ್ರತೆ ಹಾಗೂ ನಿವೃತ್ತಿ ನಂತರದ ಸೌಲಭ್ಯಗಳನ್ನು ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.
ಮುಖ್ಯವಾದ ಸೂಚನೆಗಳು
ಯಾವ ಊರಿನಲ್ಲಿ ಹುದ್ದೆ ಖಾಲಿ ಇದೆಯೋ, ಅದೇ ಊರಿನ ಮಹಿಳೆಯರು ಮಾತ್ರ ಅರ್ಜಿ ಹಾಕಬೇಕು. ಪಕ್ಕದ ಊರಿನವರು ಅರ್ಜಿ ಹಾಕಿದರೆ ರಿಜೆಕ್ಟ್ ಆಗುತ್ತದೆ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯಲಿದ್ದು, ನಿಮ್ಮ ಅಂಕಗಳು (ಮೆರಿಟ್) ಹಾಗೂ ಮೀಸಲಾತಿಯ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ. ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ಇಂಟರ್ವ್ಯೂ ಇರುವುದಿಲ್ಲ. ಯಾರಿಗೂ ದುಡ್ಡು ಕೊಟ್ಟು ಮೋಸ ಹೋಗಬೇಡಿ.
ಈ ಕೂಡಲೇ ನಿಮ್ಮೂರಿನಲ್ಲಿರುವ ಸೈಬರ್ ಸೆಂಟರ್, ಗ್ರಾಮ ಒನ್ (Grama One) ಅಥವಾ ಸಿಎಸ್‌ಸಿ (CSC) ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ನಿಮ್ಮ ಅಕ್ಕ-ತಂಗಿಯರು, ಪರಿಚಯದ ಬಡ ಮಹಿಳೆಯರು ಇದ್ದರೆ ಅವರಿಗೆ ಈ ಮಾಹಿತಿಯನ್ನು ವಾಟ್ಸಾಪ್ ಮೂಲಕ ಶೇರ್ ಮಾಡಿ. ಒಂದು ಸಣ್ಣ ಸಹಾಯ ಅವರ ಬದುಕನ್ನೇ ಬದಲಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಪ್ರಮುಖ ಲಿಂಕ್ ಗಳು/Important Links:
| ವಿವರ (Details) | ಡೌನ್‌ಲೋಡ್ ಲಿಂಕ್ (Download Link) |
| WCD Kalaburagi Recruitment 2026 Official Notification PDF | Click Here |
| WCD Kalaburagi Recruitment 2026 Apply Online Direct Link | Click here |
| Last Date | 16/03/2026 |
| ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ | https://quicknewztoday.com/category/jobs/ |
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
- UPSC IES/ ISS Recruitment 2026
- UPSC IFoS 2026 Recruitment 2026
- UPSC Civil Services Examination 2026 IAS/IPS
- HPCL Recruitment 2026
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button