Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

75 ವರ್ಷ ಮೇಲ್ಪಟ್ಟ ಹಿರಿಯರಿಗೆ ಗುಡ್ ನ್ಯೂಸ್! ಇನ್ಮುಂದೆ ರೇಷನ್ ಅಂಗಡಿಗೆ ಹೋಗ್ಬೇಕಿಲ್ಲ, ಮನೆ ಬಾಗಿಲಿಗೇ ಬರುತ್ತೆ ಉಚಿತ ಅಕ್ಕಿ

  • Picture of Gundijalu Shwetha By Gundijalu Shwetha
  • Published On: February 4, 2026
Anna Suvidha Scheme Karnataka: 75 ವರ್ಷ ಮೇಲ್ಪಟ್ಟ ಹಿರಿಯರಿಗೆ ಗುಡ್ ನ್ಯೂಸ್! ಇನ್ಮುಂದೆ ರೇಷನ್ ಅಂಗಡಿಗೆ ಹೋಗ್ಬೇಕಿಲ್ಲ, ಮನೆ ಬಾಗಿಲಿಗೇ ಬರುತ್ತೆ ಉಚಿತ ಅಕ್ಕಿ

Anna Suvidha Scheme Karnataka: ಕರ್ನಾಟಕ ಸರ್ಕಾರದ ಅನ್ನ ಸುವಿಧಾ ಯೋಜನೆಯಡಿ 75 ವರ್ಷ ಮೇಲ್ಪಟ್ಟ ಒಂಟಿ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಬೇಕಾದ ಅರ್ಹತೆ ಮತ್ತು ಇ-ಕೆವೈಸಿ ವಿಧಾನವನ್ನು ಇಲ್ಲಿ ತಿಳಿಯಿರಿ.

ಹಿರಿಯ ನಾಗರಿಕರಿಗೆ ಸರ್ಕಾರದಿಂದ ಒಂದು ಬಂಪರ್ ಸುದ್ದಿ ಬಂದಿದೆ. ಇನ್ಮುಂದೆ ಅಜ್ಜ-ಅಜ್ಜಿಯರು ಪಡಿತರ ತರಲು ರೇಷನ್ ಅಂಗಡಿ ಮುಂದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಏಕೆಂದರೆ ಸರ್ಕಾರವು “ಅನ್ನ ಸುವಿಧಾ” (Anna Suvidha) ಯೋಜನೆಯಡಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮನೆ ಬಾಗಿಲಿಗೇ ನೇರವಾಗಿ ಅಕ್ಕಿ, ರಾಗಿ ಸೇರಿದಂತೆ ಪಡಿತರ ತಲುಪಿಸುವ ವ್ಯವಸ್ಥೆ ಮಾಡಿದೆ.

ಈ ಯೋಜನೆ ಯಾರಿಗೆ ಅನ್ವಯ? ಹೇಗೆ ಪಡೆಯುವುದು? ಯಾವ ಜಿಲ್ಲೆಗಳಲ್ಲಿ ಆರಂಭವಾಗಿದೆ? ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

WhatsApp Channel
Join Now
Telegram Channel
Join Now

ಏನಿದು ‘ಅನ್ನ ಸುವಿಧಾ’ ಯೋಜನೆ?

Anna Suvidha Scheme Karnataka: ವಯಸ್ಸಾದ ಮೇಲೆ ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವುದು, ಅಕ್ಕಿ ಮೂಟೆಗಳನ್ನು ಹೊತ್ತು ಮನೆಗೆ ತರುವುದು ಹಿರಿಯ ನಾಗರಿಕರಿಗೆ ಅತೀವ ಕಷ್ಟದ ಕೆಲಸ. ಅದರಲ್ಲೂ ಮನೆಯಲ್ಲಿ ತಮಗೆ ಸಹಾಯ ಮಾಡಲು ಯಾರೂ ಇಲ್ಲದೆ 75 ವರ್ಷ ಮೇಲ್ಪಟ್ಟ ಒಂಟಿಯಾಗಿರುವ ಹಿರಿಯ ಜೀವಿಗಳ ಪರಿಸ್ಥಿತಿಯಂತೂ ಮರುಕ ಹುಟ್ಟಿಸುವಂತಿದೆ. ಕೆಲವರು ಪಡಿತರ ತರಲು ಆಟೋ ಬಾಡಿಗೆ ಕಟ್ಟಿ ಹೋಗಬೇಕು, ಇಲ್ಲವೇ ನೆರೆಹೊರೆಯವರ ಸಹಾಯಕ್ಕಾಗಿ ಹಪಹಪಿಸಬೇಕು. ಹಿರಿಯರ ಈ ನೋವನ್ನು ಮನಗಂಡ ರಾಜ್ಯ ಸರ್ಕಾರವು ಅತ್ಯಂತ ಮಾನವೀಯ ನೆಲೆಯ ಉದಾತ್ತ ಯೋಜನೆಯೊಂದನ್ನು ಜಾರಿಗೆ ತಂದಿದೆ, ಅದೇ “ಅನ್ನ ಸುವಿಧಾ”ಯೋಜನೆ.

Home delivery of ration for senior citizens: ಈ ಯೋಜನೆಯಡಿ, ರೇಷನ್ ಕಾರ್ಡ್‌ನಲ್ಲಿ ಒಬ್ಬರೇ ಹೆಸರಿರುವ (ಏಕ ಸದಸ್ಯ) ಮತ್ತು 75 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರಿಗೆ ಇನ್ಮುಂದೆ ಪಡಿತರಕ್ಕಾಗಿ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಬದಲಾಗಿ, ಸರ್ಕಾರವೇ ಅವರ ಮನೆಬಾಗಿಲಿಗೆ ಬಂದು ಪಡಿತರವನ್ನು ತಲುಪಿಸಲಿದೆ. ಹಿರಿಯರ ಘನತೆಯನ್ನು ಕಾಪಾಡುವ ಮತ್ತು ಅವರ ಸಂಧ್ಯಾಕಾಲದಲ್ಲಿ ನೆಮ್ಮದಿಯ ತುತ್ತನ್ನು ನೀಡುವ ಈ ಯೋಜನೆಯು ನಿಜಕ್ಕೂ ಶ್ಲಾಘನೀಯ. ಇದರಿಂದಾಗಿ ಸಾವಿರಾರು ಒಂಟಿ ಹಿರಿಯ ಜೀವಗಳಿಗೆ ದೈಹಿಕ ಶ್ರಮ ತಪ್ಪುವುದಲ್ಲದೆ, ಅಕ್ಕಿ ತರುವ ಚಿಂತೆಯೂ ದೂರವಾಗಲಿದೆ.

Anna Suvidha Scheme Karnataka

ಯಾರೆಲ್ಲಾ ಅರ್ಹರು? (Eligibility)

  1. ವಯಸ್ಸು: ಫಲಾನುಭವಿಯ ವಯಸ್ಸು 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿರಬೇಕು.
  2. ರೇಷನ್ ಕಾರ್ಡ್: ಅವರ ಪಡಿತರ ಚೀಟಿಯಲ್ಲಿ (Ration Card) ಅವರೊಬ್ಬರ ಹೆಸರೇ ಇರಬೇಕು (Single Member Card). ಅಂದರೆ, ಅವರು ಒಂಟಿಯಾಗಿ ವಾಸಿಸುತ್ತಿರಬೇಕು.
  3. ಇ-ಕೆವೈಸಿ: ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು ಇ-ಕೆವೈಸಿ (e-KYC) ಮಾಡಿಸಿರಬೇಕು.

ಹೇಗೆ ಕೆಲಸ ಮಾಡುತ್ತೆ ಈ ಯೋಜನೆ?

ಇದು ತುಂಬಾ ಸರಳವಾಗಿದೆ. ಹಿರಿಯರು ಅಂಗಡಿಗೆ ಹೋಗುವ ಬದಲಾಗಿ, ನ್ಯಾಯಬೆಲೆ ಅಂಗಡಿಯವರೇ ಇವರ ಮನೆಗೆ ಬರುತ್ತಾರೆ!

  • ಹಂತ 1: ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳ 1 ರಿಂದ 5 ನೇ ತಾರೀಖಿನೊಳಗೆ ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ (OTP) ಮೂಲಕ ನಿಮ್ಮ ಒಪ್ಪಿಗೆ ಪಡೆಯುತ್ತಾರೆ.
  • ಹಂತ 2: ನಂತರ 6 ರಿಂದ 15 ನೇ ತಾರೀಖಿನೊಳಗೆ ಒಂದು ದಿನ ನಿಗದಿ ಮಾಡಿ, ನಿಮ್ಮ ಮನೆಗೆ ಬಂದು ಬಯೋಮೆಟ್ರಿಕ್ (ಬೆರಳಚ್ಚು) ಪಡೆದು ಪಡಿತರ ನೀಡುತ್ತಾರೆ.
  • ಹಂತ 3: ಸದ್ಯಕ್ಕೆ ಹಿರಿಯರಿಗೆ ಅನುಕೂಲವಾಗಲಿ ಎಂದು ತಿಂಗಳ ಯಾವುದೇ ದಿನದಲ್ಲೂ ಮನೆ ಬಾಗಿಲಿಗೆ ಪಡಿತರ ನೀಡಲು ಅವಕಾಶ ನೀಡಲಾಗಿದೆ.

ಯಾವ ಜಿಲ್ಲೆಗಳಲ್ಲಿ ಆರಂಭವಾಗಿದೆ?

ಸದ್ಯಕ್ಕೆ ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಈ ಯೋಜನೆ ಭರದಿಂದ ಸಾಗುತ್ತಿದೆ.

  • ಚಿತ್ರದುರ್ಗ: ಇಲ್ಲಿ ಸುಮಾರು 6,336 ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ವಿತರಣೆ ಆರಂಭವಾಗಿದೆ.
  • ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಸುಮಾರು 14,788 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಮುಂದಿನ ತಿಂಗಳಿಂದಲೇ ವಿತರಣೆ ಆರಂಭವಾಗಲಿದೆ.

ಇತರೆ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ.

ಇ-ಕೆವೈಸಿ ಮಾಡಿಸಿಲ್ಲವೇ? ಈಗಲೇ ಮಾಡಿ!

ಒಂದು ವೇಳೆ ನಿಮ್ಮ ಮನೆಯಲ್ಲಿ ಅಥವಾ ಪರಿಚಯದಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯರಿದ್ದು, ಅವರು ಒಂಟಿಯಾಗಿದ್ದರೆ, ಅವರ ರೇಷನ್ ಕಾರ್ಡ್‌ಗೆ ಇ-ಕೆವೈಸಿ ಆಗಿದೆಯೇ ಎಂದು ಪರಿಶೀಲಿಸಿ. ಆಗಿಲ್ಲದಿದ್ದರೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಿ. ಆಗ ಮಾತ್ರ ಈ ಸೌಲಭ್ಯ ಸಿಗುತ್ತದೆ.

ಹಿರಿಯರಿಗೆ ಗೌರವ, ನೆಮ್ಮದಿಯ ಬದುಕು

ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದಂತೆ ಈ ಯೋಜನೆ ಜಾರಿಗೆ ಬಂದಿದ್ದು, ಹಿರಿಯರಿಗೆ ದೊಡ್ಡ ನೆಮ್ಮದಿ ತಂದಿದೆ. ಇಳಿ ವಯಸ್ಸಿನಲ್ಲಿ ಭಾರವಾದ ಚೀಲ ಹೊತ್ತುಕೊಂಡು ಬರುವ ಕಷ್ಟ ತಪ್ಪಿದೆ.

ನಿಮ್ಮ ಊರಿನಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಾದರೂ ಇಂತಹ ಹಿರಿಯರಿದ್ದರೆ ಅವರಿಗೆ ಈ ವಿಷಯ ತಿಳಿಸಿ. ಒಂದು ಸಣ್ಣ ಮಾಹಿತಿ ಅವರ ಬದುಕನ್ನು ಹಗುರ ಮಾಡಬಹುದು. ಈ ಸುದ್ದಿಯನ್ನು ಎಲ್ಲರಿಗೂ ಶೇರ್ ಮಾಡಿ.

ಪದೇ ಪದೇ ಕೇಳುವ ಪ್ರಶ್ನೆಗಳು (FAQ’s on Anna Suvidha Scheme Karnataka):

1. ಪ್ರಶ್ನೆ: ಅನ್ನ ಸುವಿಧಾ ಯೋಜನೆ ಯಾರಿಗೆ ಅನ್ವಯಿಸುತ್ತದೆ?

ಉತ್ತರ: 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ, ರೇಷನ್ ಕಾರ್ಡ್‌ನಲ್ಲಿ ಒಬ್ಬರೇ ಇರುವ (ಏಕ ಸದಸ್ಯ) ಹಿರಿಯ ನಾಗರಿಕರಿಗೆ ಅನ್ವಯಿಸುತ್ತದೆ.

2. ಪ್ರಶ್ನೆ: ಮನೆಗೆ ರೇಷನ್ ತರಿಸಿಕೊಳ್ಳಲು ನಾವು ಏನು ಮಾಡಬೇಕು?

ಉತ್ತರ: ನೀವು ಏನೂ ಮಾಡುವ ಅಗತ್ಯವಿಲ್ಲ. ನ್ಯಾಯಬೆಲೆ ಅಂಗಡಿಯವರೇ ನಿಮ್ಮ ಮನೆಗೆ ಬಂದು ಓಟಿಪಿ ಮತ್ತು ಬಯೋಮೆಟ್ರಿಕ್ ಪಡೆದು ಪಡಿತರ ನೀಡುತ್ತಾರೆ.

4. ಪ್ರಶ್ನೆ: ನನ್ನ ರೇಷನ್ ಕಾರ್ಡ್‌ನಲ್ಲಿ ಇಬ್ಬರ ಹೆಸರಿದ್ದರೆ ಸಿಗುತ್ತಾ?

ಉತ್ತರ: ಇಲ್ಲ, ಸದ್ಯಕ್ಕೆ ರೇಷನ್ ಕಾರ್ಡ್‌ನಲ್ಲಿ ಒಬ್ಬರೇ ಇರುವ (Single Member) ಹಿರಿಯರಿಗೆ ಮಾತ್ರ ಈ ಯೋಜನೆ ಅನ್ವಯ.

4. ಪ್ರಶ್ನೆ: ಇ-ಕೆವೈಸಿ ಕಡ್ಡಾಯವೇ?

ಉತ್ತರ: ಹೌದು, ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗಿ ಇ-ಕೆವೈಸಿ ಆಗಿರಲೇಬೇಕು. ಇಲ್ಲದಿದ್ದರೆ ಸೌಲಭ್ಯ ಸಿಗುವುದಿಲ್ಲ.

5. ಪ್ರಶ್ನೆ: ಇದಕ್ಕೆ ಹೆಚ್ಚುವರಿ ಹಣ ಕೊಡಬೇಕೇ?

ಉತ್ತರ: ಇಲ್ಲ, ಇದು ಸಂಪೂರ್ಣ ಉಚಿತ ಸೇವೆಯಾಗಿದೆ. ಯಾವುದೇ ಡೆಲಿವರಿ ಚಾರ್ಜ್ ಇರುವುದಿಲ್ಲ.

Tags: Anna Suvidha Scheme Karnataka, food and civil supplies department scheme, free rice for 75 plus age people, home delivery of ration for senior citizens, Karnataka ration card news, Ration card

Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ! ಉಚಿತ ಮೇವಿನ ಬೀಜದ ಕಿಟ್ (Free Fodder Seed Kit) ಯೋಜನೆ 2026: ರೈತರು ಅರ್ಜಿ ಸಲ್ಲಿಸುವುದು ಹೇಗೆ? ಪೂರ್ಣ ವಿವರ

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Buttons

WA WhatsApp Channel
Join Now
TG Telegram Channel
Join Now
FB Facebook Page
Follow Now

Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Tulu Language: ತುಳುನಾಡಿನ ಜನತೆಗೆ ಭರ್ಜರಿ ಸುದ್ದಿ! ತುಳು ಭಾಷೆಗೆ 'ಎರಡನೇ ಅಧಿಕೃತ ಭಾಷೆ' ಪಟ್ಟ ಕಟ್ಟಿದ ರಾಜ್ಯ ಸರ್ಕಾರ!

ತುಳುನಾಡಿನ ಜನತೆಗೆ ಭರ್ಜರಿ ಸುದ್ದಿ! ತುಳು ಭಾಷೆಗೆ ‘ಎರಡನೇ ಅಧಿಕೃತ ಭಾಷೆ’ ಪಟ್ಟ ಕಟ್ಟಿದ ರಾಜ್ಯ ಸರ್ಕಾರ!

DRDO Internship 2026: ಯಾವುದೇ ಲಿಖಿತ ಪರೀಕ್ಷೆಇಲ್ಲದೆ ಬೆಂಗಳೂರಿನ DRDO-CASDIC ನಲ್ಲಿ 30 ಇಂಟರ್ನ್‌ಶಿಪ್ ಹುದ್ದೆ! ಅರ್ಜಿ ಸಲ್ಲಿಕೆ ಹೇಗೆ?

ಯಾವುದೇ ಲಿಖಿತ ಪರೀಕ್ಷೆಇಲ್ಲದೆ ಬೆಂಗಳೂರಿನ DRDO-CASDIC ನಲ್ಲಿ 30 ಇಂಟರ್ನ್‌ಶಿಪ್ ಹುದ್ದೆ! ಅರ್ಜಿ ಸಲ್ಲಿಕೆ ಹೇಗೆ?

MCC Recruitment 2026: ಮೈಸೂರು ಮಹಾನಗರ ಪಾಲಿಕೆಯಲ್ಲಿ 116 UGD ಹೆಲ್ಪರ್ ಹುದ್ದೆಗಳ ಕಾಯಂ ನೇಮಕಾತಿ!

ಮೈಸೂರು ಮಹಾನಗರ ಪಾಲಿಕೆಯಲ್ಲಿ 116 UGD ಹೆಲ್ಪರ್ ಹುದ್ದೆಗಳ ಕಾಯಂ ನೇಮಕಾತಿ!

KEA Recruitment 2026 : SSLC & ITI ಪಾಸಾದವರಿಗೆ ಬಂಪರ್ ಆಫರ್: KEA ಇಂದ 210 ವಾಟರ್ ಸಪ್ಲೈ ಆಪರೇಟರ್ ಮತ್ತು ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಶುರು!

SSLC & ITI ಪಾಸಾದವರಿಗೆ ಬಂಪರ್ ಆಫರ್: KEA ಇಂದ 210 ವಾಟರ್ ಸಪ್ಲೈ ಆಪರೇಟರ್ ಮತ್ತು ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಶುರು!

Brazil Coffee: ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಜಿಲ್ ಕಾಫಿ ದರ್ಬಾರ್: ಈ ವರ್ಷ ಕಾಫಿ ರೇಟ್ ಹೇಗಿರಲಿದೆ ಗೊತ್ತಾ? ಮಲೆನಾಡಿನ ಕಾಫಿ ಬೆಳೆಗಾರರಿಗೆ ಕಾದಿದೆಯಾ ಕಂಟಕ?

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಜಿಲ್ ಕಾಫಿ ದರ್ಬಾರ್: ಈ ವರ್ಷ ಕಾಫಿ ರೇಟ್ ಹೇಗಿರಲಿದೆ ಗೊತ್ತಾ? ಮಲೆನಾಡಿನ ಕಾಫಿ ಬೆಳೆಗಾರರಿಗೆ ಕಾದಿದೆಯಾ ಕಂಟಕ?

PrevPreviousಹಾಲು ಉತ್ಪಾದಕರಿಗೆ ಸಿಹಿ ಸುದ್ದಿ! ಉಚಿತ ಮೇವಿನ ಬೀಜದ ಕಿಟ್ (Free Fodder Seed Kit) ಯೋಜನೆ 2026: ರೈತರು ಅರ್ಜಿ ಸಲ್ಲಿಸುವುದು ಹೇಗೆ? ಪೂರ್ಣ ವಿವರ
Nextರೈತರಿಗೆ ಬಂಪರ್ ಆಫರ್! ಕೃಷಿ ಇಲಾಖೆಯಿಂದ ಶೇ. 90ರಷ್ಟು ಸಬ್ಸಿಡಿಯಲ್ಲಿ ಟಾರ್ಪಾಲಿನ್ ವಿತರಣೆ! ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಇಂದೇ ಅರ್ಜಿ ಸಲ್ಲಿಸಿNext
IBPS RRB Recruitment 2026: ಯಾವುದೇ ಡಿಗ್ರಿ ಪಾಸಾದವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶಾದ್ಯಂತ 9,995 ಕ್ಲರ್ಕ್ ಮತ್ತು ಆಫೀಸರ್ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ!

ಯಾವುದೇ ಡಿಗ್ರಿ ಪಾಸಾದವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶಾದ್ಯಂತ 9,995 ಕ್ಲರ್ಕ್ ಮತ್ತು ಆಫೀಸರ್ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ!

3 September 2026
Read More »
Kodagu District Court Recruitment 2026: ಕೊಡಗು ಜಿಲ್ಲಾ ಕೋರ್ಟ್‌ನಲ್ಲಿ 10th ಮತ್ತು PUC ಪಾಸಾದವರಿಗೆ ಬಂಪರ್ ಆಫರ್: ಜವಾನ, ಟೈಪಿಸ್ಟ್, ಜಾರಿಕಾರ & ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕೊಡಗು ಜಿಲ್ಲಾ ಕೋರ್ಟ್‌ನಲ್ಲಿ 10th ಮತ್ತು PUC ಪಾಸಾದವರಿಗೆ ಬಂಪರ್ ಆಫರ್: ಜವಾನ, ಟೈಪಿಸ್ಟ್, ಜಾರಿಕಾರ & ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

3 September 2026
Read More »
KVLDC loan: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು (KVLDCL) 2026-27ನೇ ಸಾಲಿಗೆ ವಿವಿಧ ಕಲ್ಯಾಣ ಯೋಜನೆಗಳಡಿ ಸಾಲ ಹಾಗೂ ಸಹಾಯಧನಕ್ಕಾಗಿ ಆನ್‌ಲೈನ್ ಅರ್ಜಿ!

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು (KVLDCL) 2026-27ನೇ ಸಾಲಿಗೆ ವಿವಿಧ ಕಲ್ಯಾಣ ಯೋಜನೆಗಳಡಿ ಸಾಲ ಹಾಗೂ ಸಹಾಯಧನಕ್ಕಾಗಿ ಆನ್‌ಲೈನ್ ಅರ್ಜಿ!

2 September 2026
Read More »
Page1 Page2 Page3 Page4 Page5 Page6 … Page177
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs