Ayodhya Ram Mandir: ಅಯೋಧ್ಯೆ ರಾಮಮಂದಿರ ಶಿಖರದ ಮೇಲೆ ರಾರಾಜಿಸಿದ ಸೂರ್ಯ, ಓಂ ಮತ್ತು ಕೋವಿಧಾರಾ ಚಿಹ್ನೆಗಳ ಧರ್ಮ ಧ್ವಜ! ಮೋದಿ ಅವರಿಂದ ಐತಿಹಾಸಿಕ ‘ಧರ್ಮ ಧ್ವಜಾರೋಹಣ’

Ayodhya Ram Mandir: ಅಯೋಧ್ಯೆ ರಾಮಮಂದಿರ ಶಿಖರದ ಮೇಲೆ ರಾರಾಜಿಸಿದ ಸೂರ್ಯ, ಓಂ ಮತ್ತು ಕೋವಿಧಾರಾ ಚಿಹ್ನೆಗಳ ಧರ್ಮ ಧ್ವಜ! ಮೋದಿ ಅವರಿಂದ ಐತಿಹಾಸಿಕ 'ಧರ್ಮ ಧ್ವಜಾರೋಹಣ'

Ayodhya Ram Mandir: ಅಯೋಧ್ಯೆ ಶ್ರೀರಾಮ ಮಂದಿರದ ಗೋಪುರದ ಮೇಲೆ ಇಂದು ತ್ರಿಯುಗ ಸಂಗಮದ ಧರ್ಮಧ್ವಜ ಅನಾವರಣಗೊಂಡಿದೆ. ರಾಮನ ರಾಜ್ಯವೃಕ್ಷ ಕೋವಿಧಾರಾ, ವಂಶದ ಪ್ರತೀಕ ಸೂರ್ಯ ಮತ್ತು ಓಂ ಚಿಹ್ನೆ ಒಳಗೊಂಡ ಈ ಧ್ವಜದ ಹಿಂದಿನ ಕೌತುಕ ಹಾಗೂ ಮಹಾಭಾರತದ ನಂಟು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಯೋಧ್ಯೆ: ಶತಮಾನಗಳ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಔಪಚಾರಿಕವಾಗಿ ಪೂರ್ಣಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇವಸ್ಥಾನದ ಶಿಖರದ ಮೇಲೆ ಧರ್ಮ ಧ್ವಜಾರೋಹಣವನ್ನು ಇಂದು ನೆರವೇರಿಸಿದರು. ಶ್ರೀರಾಮ ಮತ್ತು ಸೀತಾ ಮಾತೆ ವಿವಾಹವಾದ ಶುಭ ದಿನವಾದ ವಿವಾಹ ಪಂಚಮಿಯ ಸಂದರ್ಭದಲ್ಲಿ ಈ ಐತಿಹಾಸಿಕ ಕ್ಷಣ ನಡೆಯಿತು.

ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಸೇರಿ ‘ಧರ್ಮ ಧ್ವಜ’ವನ್ನು ದೇವಸ್ಥಾನದ ಶಿಖರದ ಮೇಲೆ ಹಾರಿಸುವ ಮೂಲಕ ದೇವಾಲಯ ನಿರ್ಮಾಣದ ಪೂರ್ಣತೆಯನ್ನು ಘೋಷಿಸಿದರು.

ಪೂರ್ಣಗೊಂಡ ಸಂಕೇತ: ಅಭಿಜಿತ್ ಮುಹೂರ್ತದಲ್ಲಿ ಧ್ವಜಾರೋಹಣ:

ಮಾರ್ಗಶಿರ ಶುಕ್ಲ ಪಕ್ಷದ ಪಂಚಮಿ ತಿಥಿಯಂದು, ಅಂದರೆ ವಿವಾಹ ಪಂಚಮಿಯಂದು ಈ ಕಾರ್ಯಕ್ರಮ ನಡೆಯಿತು. ಹಿಂದೂ ಧರ್ಮದಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲಾಗುವ ಅಭಿಜಿತ್ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ದೇವಾಲಯದ ಶಿಖರದ ಮೇಲಿರುವ 42 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಸುಮಾರು 10 ಅಡಿ ಎತ್ತರ ಮತ್ತು 20 ರಿಂದ 22 ಅಡಿ ಉದ್ದದ ತ್ರಿಕೋನಾಕೃತಿಯ ಕೇಸರಿ ಧ್ವಜವು ಈಗ ರಾರಾಜಿಸುತ್ತಿದೆ. ಈ ಧ್ವಜವು ರಾಮ ಮಂದಿರವು ಭಕ್ತರಿಗಾಗಿ ಸಂಪೂರ್ಣವಾಗಿ ಸಿದ್ಧಗೊಂಡಿದೆ ಎಂಬುದರ ಸಂಕೇತವಾಗಿದೆ.

ಯುಗ ಯುಗಾಂತರಗಳ ಇತಿಹಾಸ ಮತ್ತು ಕೌತುಕವನ್ನು ಒಳಗೊಂಡಿರುವ ಶ್ರೀರಾಮ ಮಂದಿರದ ಧರ್ಮಧ್ವಜವು ಇಂದು ಗೋಪುರದ ಮೇಲೆ ಅನಾವರಣಗೊಂಡಿದೆ. ಇದು ಕೇವಲ ಧ್ವಜದ ಅನಾವರಣವಲ್ಲ, ಬದಲಾಗಿ ಜನಮಾನಸದಿಂದ ಅಳಿದುಹೋಗಿದ್ದ ತ್ರೇತಾಯುಗದ ಹಲವಾರು ಕೌತುಕಗಳನ್ನು ಮರಳಿ ತರುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ಧ್ವಜವು ಕೋವಿಧಾರಾ ವೃಕ್ಷ, ಸೂರ್ಯನ ಚಿಹ್ನೆ ಮತ್ತು ಓಂ ಅಕ್ಷರವನ್ನು ಒಳಗೊಂಡಿರುವ ತ್ರಿಯುಗ ಸಂಗಮದ ಪ್ರತೀಕವಾಗಿದೆ.

ಧ್ವಜದಲ್ಲಿ ತ್ರಿಯುಗದ ಪ್ರತೀಕಗಳು:

ಇಂದು ಅನಾವರಣಗೊಂಡಿರುವ ಧರ್ಮಧ್ವಜದಲ್ಲಿ ಇಕ್ಷ್ವಾಕು ವಂಶದ ಮತ್ತು ಹಿಂದೂ ಧರ್ಮದ ಪ್ರಮುಖ ಪ್ರತೀಕಗಳು ಸ್ಥಾನ ಪಡೆದಿವೆ:

  • ಕೋವಿಧಾರಾ ವೃಕ್ಷ: ಸಾಕ್ಷಾತ್ ಶ್ರೀರಾಮನ ರಾಜ್ಯವೃಕ್ಷ.
  • ಸೂರ್ಯ: ಇಕ್ಷ್ವಾಕು ವಂಶದ ಪ್ರತೀಕ.
  • ಓಂ: ಹಿಂದೂ ಧರ್ಮದ ಪ್ರತೀಕ.

ಈ ಧ್ವಜಾರೋಹಣವು ರಾಮಾಯಣ ಮಹಾಭಾರತಗಳ ಇತಿಹಾಸವನ್ನು ಕಾಲ್ಪನಿಕ ಕೃತಿಗಳು ಎನ್ನುತ್ತಿದ್ದವರಿಗೆ ಸಾಕ್ಷಿ ಸಮೇತ ಸವಾಲೆಸೆದಿದ್ದು, ಜಗತ್ತಿನ ಮೊದಲ ನಾಗರೀಕತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Ayodhya Ram Mandir: ಅಯೋಧ್ಯೆ ರಾಮಮಂದಿರ ಶಿಖರದ ಮೇಲೆ ರಾರಾಜಿಸಿದ ಸೂರ್ಯ, ಓಂ ಮತ್ತು ಕೋವಿಧಾರಾ ಚಿಹ್ನೆಗಳ ಧರ್ಮ ಧ್ವಜ! ಮೋದಿ ಅವರಿಂದ ಐತಿಹಾಸಿಕ ‘ಧರ್ಮ ಧ್ವಜಾರೋಹಣ’

ಅಚ್ಚರಿ ಮೂಡಿಸಿದ ಶ್ರೀರಾಮನ ವಂಶದ ಮಹಾಭಾರತದ ನಂಟು:

ಸಾಮಾನ್ಯವಾಗಿ ನಾವು ಅಯೋಧ್ಯೆ ಮತ್ತು ಶ್ರೀರಾಮನ ವಂಶವನ್ನು ತ್ರೇತಾಯುಗಕ್ಕೆ ಮಾತ್ರ ಸೀಮಿತಗೊಳಿಸುತ್ತೇವೆ. ಆದರೆ, ಅಸಲಿ ವಿಷಯವೇನೆಂದರೆ ರಾಮನ ವಂಶದವರು ದ್ವಾಪರಯುಗದಲ್ಲೂ ಇದ್ದು, ಮಹಾಭಾರತ ಯುದ್ಧದಲ್ಲೂ ಭಾಗವಹಿಸಿದ್ದರು.

  • ಕೌರವರ ಪರ ಹೋರಾಟ: ಕರ್ಣನು ಕೋಸಲ ದೇಶವನ್ನು ಗೆದ್ದದರಿಂದ, ರಾಮ ವಂಶದ ರಾಜನಾದ ಬೃಹದ್ಬಲನು (King Brihadbala) ಮಹಾಭಾರತ ಯುದ್ಧದ ಸಮಯದಲ್ಲಿ ಅನಿವಾರ್ಯವಾಗಿ ಕೌರವರ ಪರವಾಗಿ ಹೋರಾಡಿದ್ದು ಇತಿಹಾಸ.
  • ಸಾಮ್ರಾಜ್ಯದ ಅಂತ್ಯ: ಬೃಹದ್ಬಲನು ಪಾಂಡವರ ಸೇನೆಯ ಅಭಿಮನ್ಯುವಿನ ಕೈಯಲ್ಲಿ ಸಾವನ್ನಪ್ಪುತ್ತಾನೆ. ಈತನ ಸಾವಿನೊಂದಿಗೆ ಅಯೋಧ್ಯೆಯು ಅವನತಿಯ ಹಾದಿ ಹಿಡಿದು ಸಂಪೂರ್ಣ ಅಳಿದು ಹೋಗುತ್ತದೆ. ಇದರೊಂದಿಗೇ ಈ ಸಾಮ್ರಾಜ್ಯದ ಹೆಗ್ಗುರುತಾಗಿದ್ದ ಧರ್ಮಧ್ವಜವೂ ಸಂಪೂರ್ಣ ಅಳಿದು ಹೋಗಿ ಇತಿಹಾಸದ ಪುಟಗಳಲ್ಲಿ ಮರೆಯಾಗುತ್ತದೆ.

ಇದನ್ನೂ ಓದಿ: Champa Shashti 2025: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಮಹೋತ್ಸವಕ್ಕೆ ಮುಹೂರ್ತ! ಸರ್ಪದೋಷ ನಿವಾರಣೆಗೆ ಪೂಜಾ ವಿಧಿ, ಮಹತ್ವ ಇಲ್ಲಿದೆ.


ಕೇಸರಿ ‘ಧರ್ಮ ಧ್ವಜ’ ಮತ್ತು ಕೋವಿಧಾರಾ ವೃಕ್ಷದ ಇತಿಹಾಸ (Kovidhara Tree History) :

1. ಕೇಸರಿ ‘ಧರ್ಮ ಧ್ವಜ’ದ ವಿಶೇಷತೆ:

  • ಬಣ್ಣ ಮತ್ತು ಆಕೃತಿ: ಧ್ವಜವು ಕೇಸರಿ ಬಣ್ಣದ್ದಾಗಿದ್ದು, ತ್ರಿಕೋನಾಕೃತಿಯಲ್ಲಿದೆ.
  • ಚಿಹ್ನೆಗಳು: ಧ್ವಜದ ಮೇಲೆ ಪ್ರಕಾಶಮಾನ ಸೂರ್ಯನ ಚಿತ್ರ, ಪವಿತ್ರ ಸಂಕೇತವಾದ ‘ಓಂ‘ ಮತ್ತು ಕೋವಿದಾರ ವೃಕ್ಷದ ಚಿತ್ರಗಳಿವೆ.
  • ಸಂಕೇತ: ಈ ಧ್ವಜವು ಭಗವಾನ್ ಶ್ರೀರಾಮನ ತೇಜಸ್ಸು, ಶೌರ್ಯ ಮತ್ತು ಸೂರ್ಯವಂಶವನ್ನು ಸಂಕೇತಿಸುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ರಾಮಮಂದಿರದ ಮೇಲೆ ಹಾರಾಡುತ್ತಿರುವ ಕೇಸರಿ ಧ್ವಜವು ಕೇವಲ ಧರ್ಮದ ಸಂಕೇತವಲ್ಲ, ಅದು ವಿಕಸಿತ ಭಾರತದ ಸಂಕಲ್ಪ, ಗೌರವ, ಸತ್ಯ, ನ್ಯಾಯ ಮತ್ತು ರಾಷ್ಟ್ರೀಯ ಕರ್ತವ್ಯದ ಪ್ರತೀಕವಾಗಿದೆ,” ಎಂದು ಹೇಳಿದರು.

2. ಕೋವಿಧಾರಾ ವೃಕ್ಷದ ಇತಿಹಾಸ (Kovidhara Tree History)

ವಿಶ್ವದ ಮೊದಲ ಸಂಕರ ವೃಕ್ಷದ ಕೌತುಕ:
ಅಯೋಧ್ಯೆ ರಾಮ ಮಂದಿರದ ಧರ್ಮಧ್ವಜದಲ್ಲಿ ಸ್ಥಾನ ಪಡೆದಿರುವ ಕೋವಿಧಾರಾ ವೃಕ್ಷವು ಕೇವಲ ಪೌರಾಣಿಕ ಮಹತ್ವವಲ್ಲ, ವಿಜ್ಞಾನಕ್ಕೂ ಹೊಸ ಬೆಳಕು ಚೆಲ್ಲಿದ ಇನ್ನೊಂದು ಪ್ರಮುಖ ಸಂಶೋಧನೆಯ ಫಲಿತಾಂಶವಾಗಿದೆ.

ಕೋವಿಧಾರಾ ವೃಕ್ಷದ ಇತಿಹಾಸ (Kovidhara Tree History)

DNA ಸಂಶೋಧನೆಯ ಕುತೂಹಲ:
ಬಾಹಿನಿಯಾ ವರಿಗೇಟಾ (Bauhinia variegata) ಎಂಬೇ ವೈಜ್ಞಾನಿಕ ಹೆಸರನ್ನು ಕೋವಿಧಾರಾ ಮತ್ತು ಸಾಮಾನ್ಯವಾಗಿ ಕಂಡುಬರುವ ಕಂಚನಾಳ (ಕಚ್ನಾರ್) ಎರಡೂ ಹಂಚಿಕೊಳ್ಳುತ್ತಿದ್ದರಿಂದ ಗೊಂದಲವಿತ್ತು. ಈ ಗೊಂದಲ ನಿವಾರಣೆಗೆ ವಿಜ್ಞಾನಿಗಳು ಹಲವು ವರ್ಷಗಳ ಕಾಲ ಜೆನೆಟಿಕ್ ಅಧ್ಯಯನ ನಡೆಸಿ, DNA ಗುರುತುಗಳನ್ನು ಹೋಲಿಕೆ ಮಾಡಿ ತ್ರೇತಾಯುಗದಲ್ಲಿ ಉಲ್ಲೇಖವಾಗಿರುವ ಅಸಲಿ ಕೋವಿಧಾರಾ ಪ್ರಜಾತಿಯನ್ನು ಸ್ಪಷ್ಟವಾಗಿ ಗುರುತಿಸಿದರು.

ತ್ರೇತಾಯುಗದ ಪಾವನ ಸ್ಥಾನ:
ವಾಲ್ಮೀಕಿ ರಾಮಾಯಣದ ಅಯೋಧ್ಯಾಕಾಂಡದಲ್ಲೇ ಪ್ರತ್ಯೇಕವಾಗಿ ವಿವರಿಸಲ್ಪಟ್ಟಿರುವ ಕೋವಿಧಾರಾ, ಶ್ರೀರಾಮನ ಅಯೋಧ್ಯೆಯಲ್ಲಿ ಪವಿತ್ರ ಮರವಾಗಿ ಪೂಜಿಸಲ್ಪಡುತ್ತಿತ್ತು. ಈ ಕಾರಣದಿಂದಲೇ ರಾಮ ಮಂದಿರದ ಧ್ವಜದಲ್ಲಿ ಇದರ ಚಿತ್ರವನ್ನು ಬಳಸಿರುವುದು ವಿಶೇಷ ಮಹತ್ವ ಹೊಂದಿದೆ.

ಪ್ರಾಚೀನ ಸಂಕರಗೊಳಿಸುವಿಕೆಯ ಅದ್ಭುತ:
ಪುರಾಣಗಳ ಪ್ರಕಾರ, ಈ ವೃಕ್ಷವು ಜಗತ್ತಿನ ಮೊದಲ Hybridisation (ಸಂಕರಗೊಳಿಸುವಿಕೆ) ಮೂಲಕ ಸೃಷ್ಟಿಸಲ್ಪಟ್ಟ ಮಿಶ್ರತಳಿ ಎಂಬುದು ಕೌತುಕ. ಋಷಿ ಕಶ್ಯಪರು ಮಂದಾರಾ ಮತ್ತು ಪಾರಿಜಾತ ವೃಕ್ಷಗಳನ್ನು ಸಂಕರಗೊಳಿಸಿ ಈ ಕೋವಿಧಾರಾ ಪ್ರಜಾತಿಯನ್ನು ಸೃಷ್ಟಿಸಿದ್ದರು. ನಂತರದಲ್ಲಿ ಇದು ಇಕ್ಷ್ವಾಕು ಸಾಮ್ರಾಜ್ಯದ ರಾಜ್ಯವೃಕ್ಷವಾಯಿತು.

ಪುರಾಣಗಳಲ್ಲಿ ಪವಿತ್ರತೆಯ ಸಂಕೇತ:
ಹಿಂದೂ ಪುರಾಣಗಳು ಮತ್ತು ಮಹಾಕಾವ್ಯಗಳಲ್ಲಿ ಕೋವಿಧಾರಾವನ್ನು ಶುಭ, ಪಾವಿತ್ರ್ಯ ಮತ್ತು ಕಲ್ಪವೃಕ್ಷದ ಸಮಾನವಾಗಿ ಜ್ಞಾನ, ಐಶ್ವರ್ಯಗಳನ್ನು ನೀಡುವ ಮರವೆಂದು ವರ್ಣಿಸಲಾಗಿದೆ.

ರಾಮಾಯಣದಲ್ಲಿನ ಆದರ್ಶ ಸಂಕೇತ:
ಶ್ರೀರಾಮನ ಜೀವನ, ಜಾನಪದ ಸಾಹಿತ್ಯ ಮತ್ತು ಪ್ರಾಚೀನ ಗ್ರಂಥಗಳಲ್ಲಿ ಕೋವಿಧಾರಾ ನಿರಂತರವಾಗಿ ಕಾಣಿಸಿಕೊಳ್ಳುತ್ತದೆ. ಇದು ದೈವಿಕ ರಕ್ಷಣೆ, ಸಮೃದ್ಧಿ ಮತ್ತು ರಾಮರಾಜ್ಯದ ಆದರ್ಶಗಳನ್ನು ಪ್ರತಿನಿಧಿಸುತ್ತದೆ. ಧ್ವಜದಲ್ಲಿ ಇದರ ಸ್ಥಾನವನ್ನು ಸೇರಿಸಿರುವುದು ಇದೇ ಸಾಂಸ್ಕೃತಿಕ ನಿರಂತರತೆ ಮತ್ತು ಆದರ್ಶಗಳ ಪ್ರತೀಕವಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.


ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ಭೇಟಿ ನೀಡಿದ್ದು, ಈ ಭೇಟಿ ಅನೇಕ ವಿಶೇಷ ಕ್ಷಣಗಳನ್ನೊಳಗೊಂಡಿತ್ತು. ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ನಂತರ, ಅವರು ಹೊಸದಾಗಿ ನಿರ್ಮಿಸಲಾದ ರಾಮ ಪಥ ಮಾರ್ಗವಾಗಿ ಸಾಗಿದರು. ಸಾವಿರಾರು ಭಕ್ತರು “ಜೈ ಶ್ರೀರಾಮ” ಘೋಷಣೆಗಳ ಮಧ್ಯೆ ಹೂಮಳೆ ಸುರಿಸಿ ಪ್ರಧಾನಿಯನ್ನು ಭಾವಪೂರ್ಣವಾಗಿ ಸ್ವಾಗತಿಸಿದರು. ನಂತರ ಪ್ರಧಾನಿಯವರು ರಾಮ ಲಲ್ಲಾ ಗರ್ಭಗುಡಿಯಲ್ಲಿ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಅವರು ದೇವಾಲಯ ಸಂಕೀರ್ಣದಲ್ಲಿರುವ ಸಪ್ತಮಂದಿರ, ಶೇಷಾವತಾರ ಮಂದಿರ, ಮತ್ತು ಮಾತಾ ಅನ್ನಪೂರ್ಣ ಮಂದಿರಗಳಿಗೂ ಭೇಟಿ ನೀಡಿ ಋಷಿಗಳು ಮತ್ತು ಭಕ್ತರ ಪರಂಪರೆಯನ್ನು ಗೌರವಿಸಿದರು.

ಧ್ವಜಾರೋಹಣದ ನಂತರ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ದಿನವನ್ನು “ಸಾರ್ಥಕತಾ ಕಾ ದಿವಾಸ್” ಎಂದು ವಿಶ್ಲೇಷಿಸಿದರು. ಅನೇಕ ಪೀಳಿಗಳ ಕನಸು ಇಂದು ಸಾಕಾರಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಮ ಮಂದಿರದ ನಿರ್ಮಾಣವು ಜಗತ್ತಿಗೆ ಧರ್ಮ, ಜ್ಞಾನ ಮತ್ತು ಸಂಸ್ಕೃತಿ ಹರಡುವ ನವಯುಗಕ್ಕೆ ಆರಂಭವಾಗಿದೆ ಎಂದು ಕರೆ ನೀಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಮಹತ್ಕಾರ್ಯದಲ್ಲಿ ಜೀವನ ಅರ್ಪಿಸಿದ ಸಂತರಿಗೆ, ಯೋಧರಿಗೆ ಮತ್ತು ಭಕ್ತರಿಗೆ ಕೃತಜ್ಞತೆ ಸಲ್ಲಿಸಿ, ಪ್ರಧಾನಿ ಮೋದಿಯವರ ನಾಯಕತ್ವ ದೇಶದ ಜನರಲ್ಲಿ ಹೊಸ ವಿಶ್ವಾಸ ಮತ್ತು ಸಂಘಟಿತ ಶಕ್ತಿ ಮೂಡಿಸಿದೆ ಎಂದು ಹೇಳಿದ್ದಾರೆ.

ಈ ಧರ್ಮ ಧ್ವಜಾರೋಹಣವು ಐತಿಹಾಸಿಕ ವಿವಾದಕ್ಕೆ ಅಂತ್ಯ ಹಾಡಿ, ಹೊಸ ಯುಗಕ್ಕೆ ಮತ್ತು ರಾಷ್ಟ್ರೀಯ ಏಕತೆಗೆ ನಾಂದಿ ಹಾಡಿದ ಮಹತ್ವದ ಘಳಿಗೆಯಾಗಿದೆ.

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು ನಮ್ಮ WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs