Balmer Lawrie Supervisor Trainee Recruitment: ಡಿಪ್ಲೊಮಾ ಪದವೀಧರರಿಗೆ ಸುವರ್ಣಾವಕಾಶ : 32 ಸೂಪರ್‌ವೈಸರ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

Balmer Lawrie Supervisor Trainee Recruitment: ಡಿಪ್ಲೊಮಾ ಪದವೀಧರರಿಗೆ ಸುವರ್ಣಾವಕಾಶ : 32 ಸೂಪರ್‌ವೈಸರ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನ!
Share and Spread the love

Balmer Lawrie Supervisor Trainee Recruitment: ಬಾಮರ್ ಲೌರಿಯಲ್ಲಿ 32 ಸೂಪರ್‌ವೈಸರ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಡಿಪ್ಲೊಮಾ ಪದವೀಧರರಿಗೆ 26,000 ರೂ. ಸ್ಟೆಪೆಂಡ್. ಉತ್ತಮ ವೃತ್ತಿ ಭವಿಷ್ಯಕ್ಕೆ ಜುಲೈ.22 ಕೊನೆ ದಿನ. ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

Follow Us Section

ಬೆಂಗಳೂರು, ಜುಲೈ 04, 2025: ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದ ಸಾರ್ವಜನಿಕ ವಲಯದ ಕಂಪನಿಯಾದ ಬಾಮರ್ ಲೌರಿ ಕಂಪನಿ ಲಿಮಿಟೆಡ್, 32 ಸೂಪರ್‌ವೈಸರ್ ಟ್ರೇನಿ (Supervisor Trainee) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜುಲೈ 22, 2025 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Balmer Lawrie Supervisor Trainee Recruitment ಹುದ್ದೆಗಳ ವಿವರ:

ಕಂಪನಿಯು ವಿವಿಧ ವಿಷಯಗಳಲ್ಲಿ ಸೂಪರ್‌ವೈಸರ್ ಟ್ರೇನಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಅವುಗಳ ವಿವರ ಹೀಗಿದೆ:

ಹುದ್ದೆ (ವಿಷಯ)ಸಂಖ್ಯೆ
ಲೆದರ್ ಟೆಕ್ನಾಲಜಿ02
ಪ್ರಿಂಟಿಂಗ್ ಟೆಕ್ನಾಲಜಿ03
ಎಲೆಕ್ಟ್ರಾನಿಕ್ಸ್02
ಎಲೆಕ್ಟ್ರಿಕಲ್04
ಪೆಟ್ರೊ ಕೆಮಿಕಲ್12
ಮೆಕಾನಿಕಲ್09
ಒಟ್ಟು32

Balmer Lawrie Supervisor Trainee Recruitment: ವಿದ್ಯಾರ್ಹತೆ ಮತ್ತು ವಯೋಮಿತಿ:

  • ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಡಿಪ್ಲೊಮಾ ಹೊಂದಿರಬೇಕು.
  • ವಯೋಮಿತಿ: 2025ರ ಜುಲೈ 24ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತು ಗರಿಷ್ಠ 24 ವರ್ಷದವರಾಗಿರಬೇಕು.
  • ವಯೋಸಡಿಲಿಕೆ: ಸರ್ಕಾರದ ನಿಯಮಾನುಸಾರ, ಹಿಂದುಳಿದ ವರ್ಗಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 5 ವರ್ಷ, ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ 15 ವರ್ಷಗಳ ವಯೋಸಡಿಲಿಕೆ ಅನ್ವಯವಾಗಲಿದೆ.

ಆಯ್ಕೆ ವಿಧಾನ:

ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಪರೀಕ್ಷೆಯು 1.5 ಗಂಟೆಗಳ ಅವಧಿಯ ಒಂದೇ ಪತ್ರಿಕೆ ಒಳಗೊಂಡಿರುತ್ತದೆ. ಅಂಗವಿಕಲ ಅಭ್ಯರ್ಥಿಗಳಿಗೆ ಹೆಚ್ಚುವರಿ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಅಂತಿಮವಾಗಿ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಬಿಡುಗಡೆಗೊಳಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸ್ಟೆಪೆಂಡ್ ಮತ್ತು ಭವಿಷ್ಯ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ 26,000 ರೂ.ಗಳ ಸ್ಟೆಪೆಂಡ್ ನೀಡಲಾಗುತ್ತದೆ. ಒಂದು ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರನ್ನು ಜೂನಿಯರ್ ಆಫೀಸರ್ ಆಗಿ ನೇಮಕ ಮಾಡಲಾಗುತ್ತದೆ. ತದನಂತರ ಅಭ್ಯರ್ಥಿಗೆ ₹21,750-65,000 ವೇತನ ಶ್ರೇಣಿ ಅನ್ವಯವಾಗಲಿದೆ.

ಅರ್ಜಿ ಸಲ್ಲಿಕೆ ಮಾಹಿತಿ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬಾಮರ್ ಲೌರಿ ಕಂಪನಿಯ ಅಧಿಕೃತ ನೇಮಕಾತಿ ವೆಬ್‌ಸೈಟ್ https://www.blrecruit.in/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಪ್ರತಿ ಹಂತವನ್ನು ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಸಂವಹನ ನಡೆಸುವ ಉದ್ದೇಶದಿಂದ, ಅರ್ಜಿ ಸಲ್ಲಿಸುವಾಗ ಸಕ್ರಿಯ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಹೊಂದಿರುವುದು ಕಡ್ಡಾಯ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 22, 2025

ಹೆಚ್ಚಿನ ಮಾಹಿತಿಗಾಗಿ, ಬಾಮರ್ ಲೌರಿ ಕಂಪನಿಯ ವೆಬ್‌ಸೈಟ್ www.balmerlawrie.com ಗೆ ಭೇಟಿ ನೀಡಬಹುದು.


🔗Important Links /Dates:

Balmer Lawrie Supervisor Trainee Recruitment official Website/ಬಾಮರ್ ಲೌರಿ ಸೂಪರ್‌ವೈಸರ್ ಟ್ರೇನಿ ನೇಮಕಾತಿ ಅಧಿಕೃತ ವೆಬ್‌ಸೈಟ್Official Website: Click Here
Apply On-line Here: Click Here
Balmer Lawrie Supervisor Trainee Recruitment
Detailed Advertisement/
ಬಾಮರ್ ಲೌರಿ ಸೂಪರ್‌ವೈಸರ್ ಟ್ರೇನಿ ನೇಮಕಾತಿಗಳ ಅಧಿಸೂಚನೆ
Click Here for Notification
Last Date22/07/2025

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!

🔗SSC CHSL Recruitment 2025: ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ: 3131 LDC, JSA & DEO ಹುದ್ದೆಗಳಿಗೆ ಅರ್ಜಿ ಆಹ್ವಾನ!

🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

🔗MECL Recruitment 2025: ಗಣಿ ಕ್ಷೇತ್ರದಲ್ಲಿ ವೃತ್ತಿ ಅವಕಾಶ:108 ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

🔗Indian Air Force Agniveer 2025:ನಿಮ್ಮ ಕನಸು ನನಸಾಗಿಸಿ: ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅಧಿಸೂಚನೆ ಪ್ರಕಟ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇

Follow Us Section
Share and Spread the love
Gundijalu Shwetha  के बारे में
Gundijalu Shwetha ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ. Read More
For Feedback - quicknewztoday@gmail.com