Anganwadi Recruitment 2025: ಬೆಳಗಾವಿ ಜಿಲ್ಲೆ ಅಂಗನವಾಡಿ ಹುದ್ದೆಗಳ ನೇಮಕಾತಿ – SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ!

Anganwadi Recruitment 2025: ಬೆಳಗಾವಿ ಜಿಲ್ಲೆ ಅಂಗನವಾಡಿ ಹುದ್ದೆಗಳ ನೇಮಕಾತಿ - SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ!
Share and Spread the love

Anganwadi Recruitment 2025: ಬೆಳಗಾವಿ ಜಿಲ್ಲೆ ಅಂಗನವಾಡಿ ಹುದ್ದೆಗಳ ನೇಮಕಾತಿ – SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ! ಅರ್ಜಿ ಪ್ರಕ್ರಿಯೆ, ಅರ್ಹತೆ, ಮತ್ತು ನೇಮಕಾತಿ ವಿವರ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ Karnataka Women And Child Development (WCD Karnataka) ವತಿಯಿಂದ 2025ನೇ ಸಾಲಿನ ಅಂಗನವಾಡಿ ಟೀಚರ್ (ಕಾರ್ಯಕರ್ತೆ) ಮತ್ತು ಸಹಾಯಕಿಯ ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ (PUC) ಪಾಸಾದ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಕ್ಕಿಸಿಕೊಳ್ಳಬಹುದಾದ ಈ ಉತ್ತಮ ಅವಕಾಶದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Anganwadi Recruitment 2025: ಬೆಳಗಾವಿ ಜಿಲ್ಲೆ ಅಂಗನವಾಡಿ ಹುದ್ದೆಗಳ ನೇಮಕಾತಿ – SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ!

Short Highlight Points:

  • ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
  • ಶೈಕ್ಷಣಿಕ ಅರ್ಹತೆ: SSLC ಅಥವಾ PUC ಪಾಸ್
  • ಹುದ್ದೆಗಳ ಸಂಖ್ಯೆ: 558 (ಬೆಳಗಾವಿ ಜಿಲ್ಲೆ)
  • ಅರ್ಜಿ ಸಲ್ಲಿಕೆ ಕ್ರಮ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು.
  • ಕೊನೆಯ ದಿನಾಂಕ: 20-05-2025
  • ನೇಮಕಾತಿ ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD Karnataka)
Follow Us Section

Apply Application Click: Here

Governement Guideline for Anganwadi Worker/Mini Anganawadi Workers /Anganawadi Helper Recruitment /ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆಯರು/ಅಂಗನವಾಡಿ ಸಹಾಯಕರ ನೇಮಕಾತಿಗೆ ಸರ್ಕಾರದ ಮಾರ್ಗಸೂಚಿಗಳಿಗೆ ಇಲ್ಲಿ ಕ್ಲಿಕ್ ಮಾಡಿ For Guidelines click Here

ಅಂತಿಮ ದಿನಾಂಕ: 20.05.2025

ಹುದ್ದೆಗಳ ಹೆಸರು:

  • ಅಂಗನವಾಡಿ ಕಾರ್ಯಕರ್ತೆ
  • ಅಂಗನವಾಡಿ ಸಹಾಯಕಿ

ಶೈಕ್ಷಣಿಕ ಅರ್ಹತೆ:

  • ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ 10ನೇ ತರಗತಿ (SSLC) ಪಾಸಾಗಿರಬೇಕು.
  • ಸಹಾಯಕಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 8ನೇ ತರಗತಿ ಪಾಸಾಗಿರಬೇಕು.
  • ಕೆಲವು ಸ್ಥಳಗಳಲ್ಲಿ ಪಿಯುಸಿ (12ನೇ ತರಗತಿ) ಪಾಸಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಲಿಂಗ:

  • ಮಹಿಳೆಯರಿಗೆ ಮಾತ್ರ ಅವಕಾಶ.

ವಯೋಮಿತಿ:

  • ಕನಿಷ್ಠ 18 ವರ್ಷ ಮತ್ತು ಗರಿಷ್ಟ 35 ವರ್ಷ.
  • ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
  • ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿವೆ.

ಇದನ್ನೂ ಓದಿ: BMRCL: ನಮ್ಮ ಮೆಟ್ರೋದಲ್ಲಿ ಎಂಜಿನಿಯರ್ ನೇಮಕಾತಿ: ಕನ್ನಡಿಗರಿಗೆ ಆದ್ಯತೆ, ಅರ್ಜಿ ಸಲ್ಲಿಸಲು ಮೇ 7 ಕೊನೆಯ ದಿನ

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ 672 ಅಂಗನವಾಡಿ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏಪ್ರಿಲ್ 30-2025

ಹುದ್ದೆಗಳ ಲಭ್ಯತೆ – ಜಿಲ್ಲಾವಾರು ವಿವರ

ಈ ಬಾರಿ ಬೆಳಗಾವಿ ಜಿಲ್ಲೆಗಳಾದ್ಯಂತ ಹುದ್ದೆಗಳ ಭರ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆ:

  • ಒಟ್ಟು ಹುದ್ದೆಗಳು: 558
  • ನೇಮಕಾತಿ ನಡೆಯುವ ಪ್ರಮುಖ ತಾಲ್ಲೂಕುಗಳು:
    • ಅರಬಾವಿ, ಅಥಣಿ, ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಕಾಗವಾಡ, ಖಾನಾಪುರ, ಕಿತ್ತೂರು, ನಿಪ್ಪಾಣಿ, ರಾಯಬಾಗ, ರಾಮದುರ್ಗ, ಸವದತ್ತಿ, ಯರಗಟ್ಟೆ

(Anganwadi Recruitment 2025)ಅಂಗನವಾಡಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

  • ಮೊದಲಿಗೆ ಅಧಿಕೃತ ವೆಬ್‌ಸೈಟ್ “karnemakaone.kar.nic.in/abcd/ApplicationForm_JA_org.aspx” ಗೆ ಭೇಟಿ ನೀಡಿ.
  • ನಂತರ, ಉದ್ಯೋಗ ಬಯಸುವ ಜಿಲ್ಲೆಯಾಗಿ ಬೆಳಗಾವಿ ಆಯ್ಕೆಮಾಡಿ.
  • ಅದರ ಬಳಿಕ ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) ಆಯ್ಕೆ ಮಾಡಿ.
  • ಅಧಿಸೂಚನೆ ಸಂಖ್ಯೆ ಮತ್ತು ಹುದ್ದೆಯ ಪ್ರಕಾರ ಆಯ್ಕೆಮಾಡಿ.
  • ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಆರ್‌ಡಿ (RD) ಸಂಖ್ಯೆ ನಮೂದಿಸಿ.
  • ಆಯ್ದ ತಾಲ್ಲೂಕಿನಲ್ಲಿ ನಿಮ್ಮ ವರ್ಗಕ್ಕೆ ಅಂಗನವಾಡಿ ಹುದ್ದೆಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ.
  • ಲಭ್ಯವಿದ್ದರೆ, ಆಸಕ್ತ ತಾಲ್ಲೂಕಿನಲ್ಲಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆಮಾಡಿ.
  • ಹೀಗೆ ಆಯ್ಕೆ ಮಾಡಿದ ನಂತರ ಆನ್‌ಲೈನ್ ಅರ್ಜಿ ಫಾರ್ಮ್ ತೆರೆಯುತ್ತದೆ.
  • ಫಾರ್ಮ್‌ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ತಲಾ ವಿಭಾಗದ ಮುಂದೆ ಇರುವ ಅಪ್‌ಲೋಡ್ ಬಟನ್ ಮೂಲಕ ಅಪ್‌ಲೋಡ್ ಮಾಡಿ.
  • ಎಲ್ಲಾ ವಿವರಗಳು ಸರಿಯಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಂಡ ನಂತರ, ಅರ್ಜಿಯನ್ನು ಸಲ್ಲಿಸಿ.

(Anganwadi Recruitment 2025) ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಾಗುವ ದಾಖಲೆಗಳು ಮತ್ತು ವಿವರಗಳು

  1. ಜನನ ಪ್ರಮಾಣ ಪತ್ರ ಅಥವಾ ಜನ್ಮದಿನಾಂಕ ಇರುವ ಎಸ್‌ಎಸ್‌ಎಲ್‌ಸಿ(SSLC)/ಪಿಯುಸಿ(PUC) ಅಂಕಪಟ್ಟಿ.
  2. ವೈಯಕ್ತಿಕ ವಿವರಗಳು (ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮೊದಲಾದವು).
  3. ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ (SSLC/PUC ಪಾಸು ಪ್ರಮಾಣ ಪತ್ರ).
  4. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯ ದೃಢೀಕರಣ.
  5. ಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ.
  6. ವಿಧವಾ ಮಹಿಳೆಯರಿಗೋಸ್ಕರ ಪತಿಯ ಮರಣ ಪ್ರಮಾಣ ಪತ್ರ.
  7. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು ಅರ್ಜಿ ಹಾಕುತ್ತಿದ್ದರೆ, ಉಪವಿಭಾಗಾಧಿಕಾರಿಗಳಿಂದ ಪಡೆಯುವ ವಿಶೇಷ ಪ್ರಮಾಣ ಪತ್ರ.
  8. ಯೋಜನಾ ನಿರಾಶ್ರಿತರಾಗಿದ್ದರೆ, ಅದರ ದೃಢೀಕರಣ ಪ್ರಮಾಣ ಪತ್ರ.
  9. ವಿಚ್ಛೇದಿತರಾಗಿದ್ದರೆ, ವಿಚ್ಛೇದನಾ ಪ್ರಮಾಣ ಪತ್ರ.
  10. ವಾಸಸ್ಥಳ ದೃಢೀಕರಣ ಪತ್ರ (ಅಡ್ರೆಸ್ ಪ್ರೂಫ್).

ನಿಮ್ಮ ಹಳ್ಳಿ, ನಿಮ್ಮ ಕೆಲಸ – ಇದೀಗ ಅರ್ಜಿ ಹಾಕಿ. ಹೆಣ್ಣುಮಕ್ಕಳಿಗೆ ಸ್ವಾವಲಂಬನೆಯ ಹಾದಿಯಲ್ಲಿ ಹೆಜ್ಜೆ ಇಡುವ ಉತ್ತಮ ಅವಕಾಶವಿದು. ಸಮಾಜಮುಖಿ ಸೇವೆಯನ್ನು ಬಯಸುವ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯಾಗಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಬೆಳಗಾವಿ ಜಿಲ್ಲೆಗಳ ಮಹಿಳೆಯರು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ!

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಳಿಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗DRDO GTRE Apprentice Training 2025: ಐಟಿಐ/ಡಿಪ್ಲೊಮಾ ಮತ್ತು ಪದವೀಧರರಿಗೆ ಅರ್ಜಿ ಆಹ್ವಾನ

🔗NPCIL ನಲ್ಲಿ 400 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಏ.30ರೊಳಗೆ ಅರ್ಜಿ ಸಲ್ಲಿಸಿ
🔗NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

🔗RTE Free Education 2025–26: ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಕೆ ಆರಂಭ

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *