ಬೆಸ್ಕಾಂನ ಜನಸ್ನೇಹಿ ವಿದ್ಯುತ್ ಸೇವೆಗಳ ಅಡಿಯಲ್ಲಿ ಎಲ್‌ಟಿ 1 ಮತ್ತು ಎಲ್‌ಟಿ 3 ಸಂಪರ್ಕ ಪಡೆಯಲು ಇಲ್ಲಿದೆ ಸರಳ ಮಾರ್ಗದರ್ಶಿ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲೆಲ್ಲ ಬೆಸ್ಕಾಂ ಹೊಸ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಬೆಸ್ಕಾಂ ಸರಳ ಮಾರ್ಗದರ್ಶಿ ಬಿಡುಗಡೆ ಮಾಡಿದೆ – ಇಲ್ಲಿದೆ ಅರ್ಜಿ ಸಲ್ಲಿಕೆ ವಿಧಾನ, ದಾಖಲೆಗಳ ಪಟ್ಟಿ ಮತ್ತು ಷರತ್ತುಗಳು ಮತ್ತು ಇತರ ಎಲ್ಲಾ ಮಾಹಿತಿಗಳು.
ಬೆಂಗಳೂರು: ಬೆಂಗಳೂರು ನಗರ ಮತ್ತು ಸುತ್ತಲ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಜನತೆಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆಧುನಿಕ ಸೌಲಭ್ಯಗಳನ್ನು ಒದಗಿಸಿದೆ. ಜನಸ್ನೇಹಿ ವಿದ್ಯುತ್ ಸೇವೆಗಳ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ 18 ಕಿಲೋವ್ಯಾಟ್ ವರೆಗಿನ ಎಲ್‌ಟಿ 1 ಮತ್ತು ಎಲ್‌ಟಿ 3 ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
BESCOM new connection ಯಾರಿಗೆ ಈ ಸೇವೆ ಅನ್ವಯಿಸುತ್ತದೆ?
ಬೆಸ್ಕಾಂನ ಜನಸ್ನೇಹಿ ವಿದ್ಯುತ್ ಸೇವೆಗಳ ಅಡಿಯಲ್ಲಿ ಸಾಮಾನ್ಯ ಮನೆಗಳಲ್ಲಿ ಬಳಕೆಯ ಎಲ್‌ಟಿ 1 ಮತ್ತು ವಾಣಿಜ್ಯ ಬಳಕೆಯ ಎಲ್‌ಟಿ 3 ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, 18 ಕಿಲೋವ್ಯಾಟ್ ಮೀರಿದ ಲೋಡ್, ಎಚ್‌ಟಿ ವರ್ಗ ಸಂಪರ್ಕಗಳು, 15 ಮೀಟರ್‌ಗಿಂತ ಎತ್ತರದ ಕಟ್ಟಡಗಳು, ಅಥವಾ 500 ಚದರ ಮೀಟರ್‌ಗಿಂತ ದೊಡ್ಡ ಆವರಣ ಹೊಂದಿರುವ ಕಟ್ಟಡಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ.
ಇದನ್ನೂ ಓದಿ: BDA Flats Mela 2025: ಬೆಂಗಳೂರು ನಗರದಲ್ಲಿ ಕನಸಿನ ಮನೆ ಖರೀದಿಸಲು ಚಿನ್ನದಂತ ಅವಕಾಶ | ಸ್ಥಳದಲ್ಲಿಯೇ ಹಂಚಿಕೆ ಮತ್ತು ಬ್ಯಾಂಕ್ ಸಾಲ ಸೌಲಭ್ಯ!
BESCOM new connection ಅರ್ಜಿ ಸಲ್ಲಿಕೆ ವಿಧಾನ:
ಅರ್ಜಿದಾರರು ಬೆಸ್ಕಾಂನ ಅಧಿಕೃತ ವೆಬ್‌ಸೈಟ್ (https://bescom.karnataka.gov.in) ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಅಥವಾ ಸಮೀಪದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ತೆರಳಿ ಆಫ್‌ಲೈನ್ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಜೆರಾಕ್ಸ್ ದಾಖಲೆಗಳನ್ನು ಸ್ಥಳ ಪರಿಶೀಲನೆಯ ವೇಳೆ ಮೂಲ ದಾಖಲೆಗಳೊಂದಿಗೆ ತೋರಿಸಬೇಕು.
ಅಗತ್ಯವಿರುವ ದಾಖಲೆಗಳು:
- ಗುರುತಿನ ಚೀಟಿ (ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ)
- ಆಕ್ಯುಪೆನ್ಸಿ ಪುರಾವೆ (ಸೇಲ್ ಡೀಡ್, ಖಾತಾ, ತೆರಿಗೆ ಪಾವತಿ ರಸೀದಿ)
- ಕಟ್ಟಡದ ವೈರಿಂಗ್ ಕಾಮಗಾರಿ ಪೂರ್ಣಗೊಂಡಿರುವುದು ಹಾಗೂ ಪರೀಕ್ಷೆ ವರದಿ (Completion-cum-test certificate)
- ಸ್ಥಳದ ಲಾಂಗಿಟ್ಯೂಡ್ ಮತ್ತು ಲ್ಯಾಟಿಟ್ಯೂಡ್ ವಿವರಗಳು
ಅರ್ಜಿ ಸಲ್ಲಿಕೆ ಸಂದರ್ಭಗಳ ನಿಯಮಗಳು:
- ತಾತ್ಕಾಲಿಕ ಸಂಪರ್ಕ ಇದ್ದರೆ ಅದನ್ನು ಹಸ್ತಾಂತರಿಸಬೇಕು.
- ಸ್ಥಳ ಪರಿಶೀಲನೆಯ ಸಮಯದಲ್ಲಿ ಬಾಕಿ ಉಳಿದ ಶುಲ್ಕಗಳನ್ನು ಪಾವತಿಸಬೇಕು.
- KERC ನಿಯಮಗಳ ಪ್ರಕಾರ ಠೇವಣಿ ಮತ್ತು ಎಲ್ಲಾ ಶುಲ್ಕ ಪಾವತಿಸುವುದು ಕಡ್ಡಾಯ.
- ವಿದ್ಯುತ್ ಒಪ್ಪಂದ ಪತ್ರದ ಮೇಲೆ ಸಹಿ ಮಾಡಬೇಕು.
- 600 ಚದರ ಅಡಿಗಿಂತ ದೊಡ್ಡ ವಸತಿ ಕಟ್ಟಡಗಳಿಗೆ ಸೋಲಾರ್ ವಾಟರ್ ಹೀಟರ್ ಇನ್‌ಸ್ಟಾಲೇಷನ್ ಕಡ್ಡಾಯ.
ಅರ್ಜಿ ತಿರಸ್ಕಾರದ ಸಂದರ್ಭಗಳು:
ಅರ್ಜಿದಾರರು ಮೇಲಿನ ಷರತ್ತುಗಳನ್ನು ಪೂರೈಸದಿದ್ದರೆ, ಅಥವಾ ಕಾನೂನುಬದ್ಧ ಲೇಔಟ್ ಇಲ್ಲದ ಪ್ರದೇಶಗಳಲ್ಲಿ ಸಂಪರ್ಕ ಕೋರುತ್ತಿದ್ದರೆ, ಬೆಸ್ಕಾಂ ಅರ್ಜಿಯನ್ನು ತಿರಸ್ಕರಿಸಲಿದೆ. ಇಂತಹ ಸಂದರ್ಭಗಳಲ್ಲಿ ನೋಂದಣಿ ಮತ್ತು GST ಹೊರತುಪಡಿಸಿ ಉಳಿದ ಎಲ್ಲಾ ಠೇವಣಿ ಹಣಗಳನ್ನು ಮರುಪಾವತಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕ್ರಮ ಹೀಗಿದೆ:
- ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಸಿಂಗಲ್ ಅಥವಾ ಮಲ್ಟಿ ಕನೆಕ್ಷನ್ ಆಯ್ಕೆ ಮಾಡಬೇಕು.
- ವೈಯಕ್ತಿಕ ಅಥವಾ ಕಂಪನಿ ವಿವರಗಳು, ಸಂಪರ್ಕ ವಿಳಾಸ, ಇಮೇಲ್ ಐಡಿ, ಫೋನ್ ಸಂಖ್ಯೆ ಮತ್ತು ಗುರುತಿನ ಚೀಟಿ ವಿವರಗಳು ನಮೂದಿಸಬೇಕು.
- ವಿದ್ಯುತ್ ಸಂಪರ್ಕ ಬೇಕಾದ ಸ್ಥಳದ ವಿಳಾಸ ಮತ್ತು ನಕ್ಷೆ ವಿವರಗಳನ್ನು ನಮೂದಿಸಬೇಕು.
- ಅಗತ್ಯವಿರುವ ವಿದ್ಯುತ್ ಲೋಡ್, ಹಂತ (Single/Three Phase), ವೋಲ್ಟೇಜ್, ಬಳಕೆಯ ವಿಧ (Motiv/Lighting/Heat) ಆಯ್ಕೆ ಮಾಡಬೇಕು.
- ಎಲ್ಲಾ ದಾಖಲೆಗಳನ್ನು JPG, PDF, PNG, GIF ಮೊದಲಾದ ಮಾದರಿಯಲ್ಲಿ 4 MB ಗಾತ್ರದೊಳಗೆ ಅಪ್‌ಲೋಡ್ ಮಾಡಬೇಕು.
- ಅರ್ಜಿ ಸಲ್ಲಿಸಿದ ಬಳಿಕ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.
ಸಾರ್ವಜನಿಕರಿಗೆ ಪ್ರಮುಖ ಸೂಚನೆ:
ಬೆಸ್ಕಾಂ ಹೊಸ ಸಂಪರ್ಕದ ಅರ್ಜಿ ಸಲ್ಲಿಸಲು ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ನೀವು ಸ್ವತಃ ಆನ್‌ಲೈನ್ ಅಥವಾ ಅಧಿಕೃತ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಅನುಮಾನಗಳಿದ್ದರೆ, ಬೆಸ್ಕಾಂ ಹೋಮ್ ಪೇಜ್‌ನಲ್ಲಿ ನೀಡಿರುವ ಸಂಪರ್ಕ ಸಂಖ್ಯೆಗಳು ಅಥವಾ ಹತ್ತಿರದ ಉಪ ವಿಭಾಗ ಕಚೇರಿ ಸಂಪರ್ಕಿಸಬಹುದು.
👉Read More Govt Schemes News/ ಇನ್ನಷ್ಟು ಸರ್ಕಾರಿ ಯೋಜನೆ ಸುದ್ದಿ
🔗(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇