ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ: ಬೆಂಗಳೂರು ಆಸ್ತಿ ಮಾಲೀಕರು ಈಗ ಬಿ-ಖಾತಾದಿಂದ ಎ-ಖಾತಾ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ 30 ದಿನದಲ್ಲಿ ಅಧಿಕೃತ ದಾಖಲೆ ಪಡೆಯಬಹುದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು: ರಾಜ್ಯ ಸರಕಾರವು ನಗರ ಮತ್ತು ಗ್ರಾಮೀಣ ಆಸ್ತಿ ಮಾಲೀಕರಿಗೆ ಭರ್ಜರಿ ಸುದ್ದಿ ನೀಡಿದೆ. ಇನ್ನು ಮುಂದೆ ಬಿ-ಖಾತಾ (B-Khata) ಹೊಂದಿರುವ ಆಸ್ತಿಯ ಮಾಲೀಕರು ತಮ್ಮ ಆಸ್ತಿ ದಾಖಲೆಯನ್ನು ಎ-ಖಾತಾ (A-Khata) ಗೆ ಪರಿವರ್ತನೆ ಮಾಡಿಕೊಳ್ಳಲು ಸಂಪೂರ್ಣ ಆನ್ಲೈನ್ ವ್ಯವಸ್ಥೆಯನ್ನು ಬಳಸಬಹುದು. ಈ ವ್ಯವಸ್ಥೆಯ ಮೂಲಕ ಸಾರ್ವಜನಿಕರು ತಮ್ಮ ಮನೆ ಅಥವಾ ಕಂಪ್ಯೂಟರ್ ಸೆಂಟರ್ನಿಂದಲೇ ಅರ್ಜಿ ಸಲ್ಲಿಸಿ, 30 ದಿನದೊಳಗೆ ಅಧಿಕೃತ ಎ-ಖಾತಾ ದಾಖಲೆ ಪಡೆಯಬಹುದು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಬೆಂಗಳೂರು ಆಸ್ತಿ ಮಾಲೀಕರಿಗೆ ದೀಪಾವಳಿ ಉಡುಗೊರೆ: ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾವನ್ನು ಇನ್ಮುಂದೆ ಆನ್ಲೈನ್ನಲ್ಲಿ ಸುಲಭವಾಗಿ ಪಡೆಯಬಹುದು” ಎಂದು ತಿಳಿಸಿದ್ದಾರೆ.
B-Khata to A-Khata Online ಅರ್ಜಿ ಸಲ್ಲಿಸುವ ಹಂತಗಳು
Step 1: BBMP ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ “A-Khata Online Application” ಕ್ಲಿಕ್ ಮಾಡಿ.
Step 2: ಲಾಗಿನ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ್ ಕೋಡ್ ಹಾಕಿ, “Send OTP” ಕ್ಲಿಕ್ ಮಾಡಿ, OTP ನಮೂದಿಸಿ Verify ಮಾಡಿ.
Step 3: “Create New Request” ಕ್ಲಿಕ್ ಮಾಡಿ, ನಿಮ್ಮ eKhata ID ನಮೂದಿಸಿ “Fetch” ಮಾಡಿ, eKYC Verification ಮಾಡಬೇಕು. ತೋರಿಸಿದ ಸ್ಥಳ ವಿವರ ಸರಿಯಾಗಿದೆಯೇ ಎಂದು ಪರಿಶೀಲಿಸಿ, ನಂತರ “Save and Continue” ಕ್ಲಿಕ್ ಮಾಡಿ.
Step 4:
- Revenue Survey No Verification
- DC Conversion Details ಮತ್ತು Order Copy ಅಪ್ಲೋಡ್
- Property Use Type Selection ನಲ್ಲಿ ಎಲ್ಲಾ ವಿವರ ಭರ್ತಿ ಮಾಡಿ
- ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ
ಗಮನ: ಅರ್ಜಿ ಸಲ್ಲಿಸಿದ ನಂತರ, BBMP ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅರ್ಹರು 30 ದಿನದೊಳಗೆ A-Khata ಪಡೆಯಬಹುದಾಗಿದೆ.
ಇದನ್ನೂ ಓದಿ/Read More: A-Khata/B-Khata/E-Khata ಅಂದ್ರೆ ಏನು? ಪ್ರಾಪರ್ಟಿ ಖರೀದಿಸುವ ಮೊದಲು ಈ ಖಾತಾಗಳ ವಿಚಾರ ತಿಳಿದಿಲ್ಲ ಅಂದ್ರೆ ನಷ್ಟ ಖಚಿತ!
B-Khata to A-Khata Online ಅರ್ಜಿ ಸಲ್ಲಿಸುವ ಬೇಕಾಗಿರುವ ಅಗತ್ಯ ದಾಖಲೆಗಳು
- ಅರ್ಜಿದಾರರ ಆಧಾರ್ ಕಾರ್ಡ್
- ಇ-ಖಾತಾ ID
- ಜಮೀನಿ ಪರಿವರ್ತನೆಗೆ DC ಆದೇಶ ಪ್ರತಿ ಬೇಕಾಗಿರುತ್ತದೆ.
- ಜಾಗದ ನಕ್ಷೆ
- ರಸ್ತೆ ವಿವರ
- ಮೊಬೈಲ್ ನಂಬರ್ ಮತ್ತು OTP
ಗಮನಿಸಿ: 2000 ಚದರ ಮೀಟರ್ಗಿಂತ ಮೇಲು ಜಾಗಗಳಿಗೆ ಅರ್ಜಿ ಸಲ್ಲಿಸಲು ಈ ಆನ್ಲೈನ್ ವ್ಯವಸ್ಥೆ ಲಭ್ಯವಿಲ್ಲ. ಈ ಜಾಗಗಳಿಗೆ, ನೋಂದಾಯಿತ ಇಂಜಿನಿಯರ್ ಮೂಲಕ bpas.bbmp.gov.in ನಲ್ಲಿ ಅರ್ಜಿ ಸಲ್ಲಿಸಬೇಕು.
B-Khata to A-Khata ಅರ್ಜಿ ವಿಲೇವಾರಿ ಪ್ರಕ್ರಿಯೆ
- ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ BBMP ಅಧಿಕಾರಿಗಳು ಆಸ್ತಿಯ ಸ್ಥಳ ಪರಿಶೀಲನೆ ನಡೆಸುತ್ತಾರೆ.
- ಪರಿಶೀಲನೆ ನಂತರ ಅರ್ಹರಿಗೂ A-Khata ದಾಖಲೆ ಆನ್ಲೈನ್ ಮೂಲಕ ವಿತರಣೆ ಮಾಡಲಾಗುತ್ತದೆ.
ಇದನ್ನೂ ಓದಿ/Read More: ಜುಲೈ 1ರಿಂದ ಇ-ಖಾತಾ (E-Khata)ಕಡ್ಡಾಯ! ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಿಗೆ ಮಹತ್ವದ ಹೊಸ ನಿಯಮ ಜಾರಿ
B-Khata to A-Khata ಪಡೆಯುವುದರಿಂದ ಪ್ರಯೋಜನಗಳು
1. ಆಸ್ತಿ ಮಾಲೀಕತ್ವ ಅಧಿಕೃತವಾಗುತ್ತದೆ
2. ಬ್ಯಾಂಕ್ ಸಾಲ ಪಡೆಯಲು ದಾಖಲೆ ಕಡ್ಡಾಯವಾಗುತ್ತದೆ
3. ಜಾಗ ಮಾರಾಟ ಸಮಯದಲ್ಲಿ ಖರೀದಿದಾರರಿಗೆ ಅಧಿಕೃತ ದಾಖಲೆ ತೋರಿಸಬಹುದು
4. ನಗರದ ನಿರ್ಮಾಣ ನಿಯಮಗಳನ್ನು ಅನುಸರಿಸಿ ಹೊಸ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಸೌಕರ್ಯ
ಇ-ಆನ್ಲೈನ್ ವ್ಯವಸ್ಥೆಯ ಮೂಲಕ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಈಗ ಸುಲಭ, ವೇಗವಾದ ಮತ್ತು ಪಾರದರ್ಶಕ ಪ್ರಕ್ರಿಯೆಯಾಗಿದ್ದು, 30 ದಿನದಲ್ಲಿ ಅಧಿಕೃತ ದಾಖಲೆ ಪಡೆಯಲು ಅವಕಾಶ ಕಲ್ಪಿಸುತ್ತದೆ. BBMP ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸುವುದು ಬಹಳ ಸರಳವಾಗಿದೆ, ಮತ್ತು ಸಾರ್ವಜನಿಕರಿಗೆ ಸಹಜವಾಗಿ ಎಲ್ಲಾ ಮಾಹಿತಿಯನ್ನು ಲಭ್ಯವಿದೆ.
B Khata, A Khata, B Khata to A Khata, Online A Khata Application, BBMP Land Records, Bangalore Property, Karnataka Land Conversion, Digital Property Certificate, Property Ownership, Land Registration Karnataka
#BKhataToAKhata #AKhataOnlineApplication #BBMP #BangaloreProperty #LandConversion #OnlinePropertyCertificate #BKhata #AKhata #KarnatakaProperty #DigitalPropertyCertificate
Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
ಕಚೇರಿಗೆ ಹೋಗೋ ಕಿರಿಕಿರಿ ಬಿಡಿ! UIDAI SSUP Portal ಮೂಲಕ ಇನ್ನೂ ಮನೆಯಿಂದಲೇ ಹೆಸರು, ವಿಳಾಸ ಮತ್ತು ಫೋಟೋ ಬದಲಾಯಿಸಿ!
PMAY-U 2.0 ಬಂಪರ್ ಕೊಡುಗೆ: ₹1.80 ಲಕ್ಷ ಸಬ್ಸಿಡಿ; ಗೃಹ ಸಾಲದ ಮೇಲೆ ₹4 ಲಕ್ಷದವರೆಗೆ ಲಾಭ ಪಡೆಯುವುದು ಹೇಗೆ?
Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್ಗಳು!
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು ನಮ್ಮ Facebook, WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button