BMRCL Namma Metro Jobs: ಬೆಂಗಳೂರು ಮೆಟ್ರೋದಲ್ಲಿ 150 ಐಟಿಐ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಬೆಂಗಳೂರು: ರಾಜ್ಯದ ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಸುಧಾರಿತ ಉದ್ಯೋಗಾವಕಾಶ ಒದಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇದೀಗ ತನ್ನ ಆಪರೇಷನ್ಸ್ ಮತ್ತು ಮೆಂಟೈನನ್ಸ್ ವಿಭಾಗದಲ್ಲಿ 150 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳು ಗುತ್ತಿಗೆ ಆಧಾರಿತವಾಗಿದ್ದು, ಪ್ರಾರಂಭದಲ್ಲಿ ಐದು ವರ್ಷಗಳ ಅವಧಿಗೆ ನೇಮಕಾತಿ ನಡೆಯಲಿದ್ದು, ಬಳಿಕ ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದಲ್ಲಿ ಸೇವಾವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
👉Click here to view the Notification
👉Procedure to Apply: Click Here
BMRCL Namma Metro Jobs: ನೇಮಕಾತಿ ವಿವರಗಳು:
- ಒಟ್ಟು ಹುದ್ದೆಗಳು: 150
- ವಿಭಾಗ: ಆಪರೇಷನ್ಸ್ ಮತ್ತು ಮೆಂಟೈನನ್ಸ್
- ನೇಮಕಾತಿ ಅವಧಿ: 5 ವರ್ಷ (ಕಾರ್ಯಕ್ಷಮತೆ ಆಧಾರಿತ ವಿಸ್ತರಣೆ ಸಾಧ್ಯ)
- ನೇಮಕಾತಿಯ ಸ್ವರೂಪ: ಗುತ್ತಿಗೆ ಆಧಾರಿತ
- ವಯೋಮಿತಿ: ಅರ್ಜಿ ಸಲ್ಲಿಸಲು 50 ವರ್ಷದವರೆಗೂ ಅವಕಾಶವಿದೆ.
ಅರ್ಹತೆ:
ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸಾಗಿರುವುದು ಹಾಗೂ ಕೆಳಕಂಡ ಐಟಿಐ (ITI) ತಾಂತ್ರಿಕ ಟ್ರೇಡ್‌ಗಳಲ್ಲಿ ಕೋರ್ಸ್ ಪೂರೈಸಿರಬೇಕು:
- ಎಲೆಕ್ಟ್ರೀಷಿಯನ್
- ಇನ್‌ಸ್ಟ್ರುಮೆಂಟ್ ಮೆಕಾನಿಕ್
- ಎಲೆಕ್ಟ್ರಾನಿಕ್ಸ್ ಮೆಕಾನಿಕ್
- ವೈರ್‌ಮನ್
- ಫಿಟ್ಟರ್
- ಮೆಕಾನಿಕ್ ಕಂಪ್ಯೂಟರ್ ಹಾರ್ಡ್‌ವೇರ್
- ಮೆಕಾನಿಕ್ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್
- ಇನ್‌ಫಾರ್ಮೆಶನ್ ಟೆಕ್ನಾಲಜಿ & ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಮೆಂಟೈನನ್ಸ್
- ಕಮ್ಯೂನಿಕೇಷನ್ ಇಕ್ವಿಪ್‌ಮೆಂಟ್ ಮೆಂಟೈನನ್ಸ್
- ಮೆಕಾನಿಕ್ ಮೆಕ್‌ಟ್ರಾನಿಕ್ಸ್
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ಅಧಿಕೃತ ವೆಬ್‌ಸೈಟ್ www.bmrc.co.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 2025 ಮೇ 22. ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ ಮುದ್ರಿತ ಪ್ರತಿಯನ್ನು ಈ ವಿಳಾಸಕ್ಕೆ ಮೇ 29ರೊಳಗಾಗಿ ಕಳುಹಿಸಬೇಕು:
The General Manager (HR),
Bangalore Metro Rail Corporation Limited,
III Floor, BMTC Complex, K.H Road,
Shanthinagar, Bengaluru – 560027.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಶ್ನೆಪತ್ರಿಕೆ ಇಂಗ್ಲಿಷ್‌ನಲ್ಲಿ ಇರುತ್ತದೆ ಮತ್ತು ನೆಗೆಟಿವ್ ಮಾರ್ಕಿಂಗ್ ಕೂಡ ಇರಲಿದೆ (ಪ್ರತಿ ತಪ್ಪು ಉತ್ತರಕ್ಕೆ ¼ ಅಂಕ ಕಡಿತ).
ಪರೀಕ್ಷೆಯು ಮೂರು ವಿಭಾಗಗಳನ್ನು ಹೊಂದಿರಲಿದೆ:
- ಜನರಲ್ ನಾಲೆಡ್ಜು– 30 ಅಂಕ
- ರೀಸನಿಂಗ್ ಮತ್ತು ಅನಾಲಿಟಿಕಲ್ ಆಬಿಲಿಟಿ – 30 ಅಂಕ
- ಟೆಕ್ನಿಕಲ್ ಪ್ರೊಫಿಶಿಯನ್ಸಿ – 40 ಅಂಕ
ಒಟ್ಟು 100 ಅಂಕಗಳ ಪ್ರಶ್ನೆಪತ್ರಿಕೆ ಇರುತ್ತದೆ.
ಅಭ್ಯರ್ಥಿಗಳಿಗೆ ಸಲಹೆ:
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಬಿಎಂಆರ್‌ಸಿಎಲ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಡಿ: www.bmrc.co.in
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಿ.
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗RITES Field Engineer Recruitment 2025: ಬೆಂಗಳೂರು ಕಚೇರಿಯಲ್ಲಿ 14 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ!
🔗BARC JRF Recruitment 2025: 105 ಫೆಲೋಶಿಪ್ ಹುದ್ದೆಗಳು-ಮೇ 19 ಕೊನೆಯ ದಿನಾಂಕ
🔗CISF Recruitment 2025: ಹಾಕಿ ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ
🔗ISRO Scientist/Engineer Jobs: 63 ವಿಜ್ಞಾನಿ ಮತ್ತು ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇