Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಡಿಗ್ರಿ ಪಾಸಾದವರಿಗೆ ಬಂಪರ್ ಆಫರ್: BSF/ CRPF ನಲ್ಲಿ 1167 ‘ಸಬ್-ಇನ್ಸ್‌ಪೆಕ್ಟರ್’ ಹುದ್ದೆಗಳ ಬೃಹತ್ ನೇಮಕಾತಿ ಶುರು!

  • Picture of Gundijalu Shwetha By Gundijalu Shwetha
  • Published On: November 13, 2026
CAPF SI Recruitment 2026: ಡಿಗ್ರಿ ಪಾಸಾದವರಿಗೆ ಬಂಪರ್ ಆಫರ್: BSF/ CRPF ನಲ್ಲಿ 1167 'ಸಬ್-ಇನ್ಸ್‌ಪೆಕ್ಟರ್' ಹುದ್ದೆಗಳ ಬೃಹತ್ ನೇಮಕಾತಿ ಶುರು!

CAPF SI Recruitment 2026: ಕೇಂದ್ರ ಗೃಹ ಸಚಿವಾಲಯದ (MHA) ಅಧೀನದಲ್ಲಿರುವ BSF, CRPF, ITBP ಮತ್ತು SSB ಪಡೆಗಳಲ್ಲಿ 2026-27ನೇ ಸಾಲಿನ 1167 ‘ಸಬ್-ಇನ್ಸ್‌ಪೆಕ್ಟರ್’ (Sub-Inspector – LDCE) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿ (Degree) ಮುಗಿಸಿದ, ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಡಿಸೆಂಬರ್ 31, 2026 ರೊಳಗೆ ಅರ್ಜಿ ಸಲ್ಲಿಸಬಹುದು. ವೇತನ, ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

📅 Last Date to Apply Online 31.12.2026

ಡಿಗ್ರಿ ಪಾಸಾದವರಿಗೆ ಬಂಪರ್ ಆಫರ್: ಬಿಎಸ್‌ಎಫ್ (BSF) ನೇತೃತ್ವದಲ್ಲಿ 1167 ‘ಸಬ್-ಇನ್ಸ್‌ಪೆಕ್ಟರ್’ ಹುದ್ದೆಗಳಿಗೆ ಅರ್ಜಿ ಆಹ್ವಾನ!

ನಮಸ್ಕಾರ ನಾಡಿನ ಸಮಸ್ತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಹಾಲಿ ಪೊಲೀಸ್ ಸಿಬ್ಬಂದಿಗೆ! ಕೇಂದ್ರ ಗೃಹ ಸಚಿವಾಲಯದ (MHA) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ’ (CAPF) ಸೇವೆ ಸಲ್ಲಿಸುತ್ತಿರುವ ಹಾಗೂ ಉನ್ನತ ಹುದ್ದೆಗೇರಲು ಕಾಯುತ್ತಿರುವ ಯುವಜನತೆಗೆ ಗಡಿ ಭದ್ರತಾ ಪಡೆಯು (BSF) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ (CAPFs) ಬಿಎಸ್‌ಎಫ್ (BSF), ಸಿಆರ್‌ಪಿಎಫ್ (CRPF), ಐಟಿಬಿಪಿ (ITBP) ಮತ್ತು ಎಸ್‌ಎಸ್‌ಬಿ (SSB) ಗಳಲ್ಲಿ ಖಾಲಿ ಇರುವ ಒಟ್ಟು 1167 ಸಬ್-ಇನ್ಸ್‌ಪೆಕ್ಟರ್ (Sub-Inspector – GD) ಹುದ್ದೆಗಳನ್ನು ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ (Limited Departmental Competitive Examination – LDCE) ಮೂಲಕ ಭರ್ತಿ ಮಾಡಲು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

WA WhatsApp Channel
Join Now
TG Telegram Channel
Join Now
FB Facebook Page
Follow Now

ನೀವು ಇಂಟರ್ನೆಟ್‌ನಲ್ಲಿ ಪ್ರಸ್ತುತ CAPF SI Recruitment 2026 ಅಥವಾ BSF Sub Inspector Jobs ಕುರಿತು ಹುಡುಕುತ್ತಿದ್ದರೆ, ನಿಮಗಾಗಿ ಸಿಕ್ಕಿರುವ ಅತ್ಯಂತ ನಿಖರವಾದ ಉದ್ಯೋಗ ಮಾಹಿತಿ ಇದಾಗಿದೆ. ಕೇವಲ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್, ಹೆಡ್-ಕಾನ್ಸ್‌ಟೇಬಲ್, ಎಎಸ್‌ಐ (ASI) ಗಳಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದ್ದು, ಹೊಸಬರು (Freshers) ಅರ್ಜಿ ಸಲ್ಲಿಸುವಂತಿಲ್ಲ. ನಮ್ಮ ಬೆಂಗಳೂರು ಘಟಕಕ್ಕೂ (ಯಲಹಂಕ) ನೇಮಕಾತಿ ಪರೀಕ್ಷೆ ನಡೆಯುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಕರ್ಷಕ ವೇತನ ಶ್ರೇಣಿ, ಪರೀಕ್ಷಾ ಮಾದರಿ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ಸರಳವಾಗಿ ವಿವರಿಸಲಾಗಿದೆ, ಪೂರ್ತಿಯಾಗಿ ಓದಿ.

CAPF SI Recruitment 2026: ಡಿಗ್ರಿ ಪಾಸಾದವರಿಗೆ ಬಂಪರ್ ಆಫರ್: BSF/ CRPF ನಲ್ಲಿ 1167 ‘ಸಬ್-ಇನ್ಸ್‌ಪೆಕ್ಟರ್’ ಹುದ್ದೆಗಳ ಬೃಹತ್ ನೇಮಕಾತಿ ಶುರು!

ಯಾವ್ಯಾವ ಪಡೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ? (Vacancy Details of CAPF SI Recruitment 2026 /BSF Sub Inspector Jobs)

ಈ ಅಧಿಸೂಚನೆಯಡಿ 2026ನೇ ಸಾಲಿಗೆ ದೇಶಾದ್ಯಂತ ಒಟ್ಟು 1167 ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಪಡೆಗಳ ಅನುಸಾರ ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಪಡೆಯ ಹೆಸರು (Force)ಪುರುಷರ ಹುದ್ದೆಗಳು (Male)ಮಹಿಳೆಯರ ಹುದ್ದೆಗಳು (Female)ಒಟ್ಟು ಹುದ್ದೆಗಳು (Total)
ಐಟಿಬಿಪಿ (ITBP)34730377
ಸಿಆರ್‌ಪಿಎಫ್ (CRPF)22312235
ಬಿಎಸ್‌ಎಫ್ (BSF)43000430
ಎಸ್‌ಎಸ್‌ಬಿ (SSB)12500125
ಒಟ್ಟಾರೆ ಒಟ್ಟು ಹುದ್ದೆಗಳು1167

(ಗಮನಿಸಿ: ಈ 1167 ಹುದ್ದೆಗಳ ಪೈಕಿ SC-171, ST-87 ಹಾಗೂ ಸಾಮಾನ್ಯ ವರ್ಗಕ್ಕೆ (UR) 909 ಹುದ್ದೆಗಳನ್ನು ಮೀಸಲಿಡಲಾಗಿದೆ).

BSF-Notification-for-1167-Sub-Inspector-Posts-2Download

ಆಕರ್ಷಕ ವೇತನ ಶ್ರೇಣಿ (Salary Structure of CAPF SI Recruitment 2026/ BSF Sub Inspector Jobs)

ಆಯ್ಕೆಯಾದ ಸಬ್-ಇನ್ಸ್‌ಪೆಕ್ಟರ್ (Sub-Inspector) ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7th CPC) ಲೆವೆಲ್-6 ರ ಅಡಿಯಲ್ಲಿ ಅತ್ಯಾಕರ್ಷಕವಾದ ವೇತನ ಶ್ರೇಣಿ ಲಭ್ಯವಿದೆ:

  • ಮೂಲ ವೇತನ ಶ್ರೇಣಿ (Basic Pay Scale): ₹ 35,400 ದಿಂದ ₹ 1,12,400/- ವರೆಗೆ ಇರುತ್ತದೆ.
  • (ಮೂಲ ವೇತನದ ಜೊತೆಗೆ ಕೇಂದ್ರ ಸರ್ಕಾರದ ನಿಯಮಾನುಸಾರ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ, ಸಮವಸ್ತ್ರ ಭತ್ಯೆ ಮತ್ತು ರಿಸ್ಕ್ ಅಲೋಯೆನ್ಸ್ ಸೇರಿ ಕೈಗೆ ಭರ್ಜರಿ ಮಾಸಿಕ ವೇತನ ಸಿಗಲಿದೆ).

ಅರ್ಜಿ ಸಲ್ಲಿಸಲು ಕಡ್ಡಾಯ ವಿದ್ಯಾರ್ಹತೆ ಮತ್ತು ಅರ್ಹತೆಗಳು (Eligibility Criteria of CAPF SI Recruitment 2026/ BSF Sub Inspector Jobs)

ನೀವು BSF SI LDCE Vacancy ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

1. ಸೇವಾ ಅರ್ಹತೆ (Service Eligibility):

  • BSF, CRPF, ITBP ಮತ್ತು SSB ಪಡೆಗಳಲ್ಲಿ ಕಾನ್ಸ್‌ಟೇಬಲ್ (GD), ಕಾನ್ಸ್‌ಟೇಬಲ್ (ಟ್ರೇಡ್ಸ್‌ಮ್ಯಾನ್), ಹೆಡ್-ಕಾನ್ಸ್‌ಟೇಬಲ್ (GD) ಅಥವಾ ASI (GD) ಆಗಿ ಕನಿಷ್ಠ 4 ವರ್ಷಗಳ ಕಾಲ ನಿಯಮಿತ ಸೇವೆ (Basic Training ಸೇರಿ) ಸಲ್ಲಿಸಿರಬೇಕು.
  • ಕಳೆದ 5 ವರ್ಷಗಳ APARs (Annual Performance Assessment Reports) ನಲ್ಲಿ ಕನಿಷ್ಠ ‘ಗುಡ್’ (Good) ಗ್ರೇಡಿಂಗ್ ಹೊಂದಿರಬೇಕು ಹಾಗೂ ಯಾವುದೇ ಶಿಸ್ತು ಕ್ರಮ (Clean Record) ಎದುರಿಸಿರಬಾರದು.

2. ಶೈಕ್ಷಣಿಕ ಅರ್ಹತೆ (Educational Qualification):

  • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಯಾವುದೇ ಪದವಿ (Degree / Graduation) ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

3. ವಯೋಮಿತಿ (Age Limit):

  • ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ (31.12.2026), ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷಗಳು ಮೀರಿರಬಾರದು.
  • ವಯೋಮಿತಿ ಸಡಿಲಿಕೆ: SC ಮತ್ತು ST ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮದಂತೆ 5 ವರ್ಷಗಳ (ಗರಿಷ್ಠ 37 ವರ್ಷ) ವಯೋಸಡಿಲಿಕೆ ಇರುತ್ತದೆ.

ದೈಹಿಕ ಅರ್ಹತೆಗಳು (Physical Standards)

ಈ ಹುದ್ದೆಗಳಿಗೆ ಕಟ್ಟುನಿಟ್ಟಾದ ದೈಹಿಕ ಅರ್ಹತೆಗಳನ್ನು (SHAPE-I ಮೆಡಿಕಲ್ ಕ್ಯಾಟಗರಿ) ನಿಗದಿಪಡಿಸಲಾಗಿದೆ:

  • ಎತ್ತರ (Height): ಪುರುಷರಿಗೆ ಕನಿಷ್ಠ 170 ಸೆಂ.ಮೀ, ಮಹಿಳೆಯರಿಗೆ 157 ಸೆಂ.ಮೀ. (ಕರ್ನಾಟಕ, ಮಹಾರಾಷ್ಟ್ರ ಇತ್ಯಾದಿ ಪ್ರದೇಶದವರಿಗೆ 165 ಸೆಂ.ಮೀ, ಹಾಗೂ SC/ST ಅಭ್ಯರ್ಥಿಗಳಿಗೆ ಪುರುಷರಿಗೆ 162.5 ಸೆಂ.ಮೀ ಮತ್ತು ಮಹಿಳೆಯರಿಗೆ 154 ಸೆಂ.ಮೀ ಸಡಿಲಿಕೆ ಇದೆ).
  • ಎದೆ ಸುತ್ತಳತೆ (Chest): ಕೇವಲ ಪುರುಷರಿಗೆ – ಕನಿಷ್ಠ 80 ಸೆಂ.ಮೀ ಇರಬೇಕು, ಉಸಿರೆಳೆದಾಗ ಕನಿಷ್ಠ 5 ಸೆಂ.ಮೀ ವಿಸ್ತರಣೆ (85 ಸೆಂ.ಮೀ) ಆಗಬೇಕು (SC/ST ಗೆ 77-82 ಸೆಂ.ಮೀ).
Sub-Inspector (GD) via LDCE 1SI(GD)/2026Opened12 Nov 2026Last date31 Dec 2026OPENApply Here

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ (Selection Process & Exam Pattern)

ಈ ನೇಮಕಾತಿಯು ಎರಡು ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ:

1. ಮೊದಲ ಹಂತ (Computer Based Test – CBT):

  • ಎಲ್ಲಾ ಅಭ್ಯರ್ಥಿಗಳಿಗೆ 3 ಗಂಟೆ 30 ನಿಮಿಷಗಳ ಏಕ-ಹಂತದ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ನಡೆಯಲಿದೆ.
  • ಒಟ್ಟು 200 ಪ್ರಶ್ನೆಗಳಿದ್ದು (200 ಅಂಕ), ಇದರಲ್ಲಿ ಸಾಮಾನ್ಯ ಜ್ಞಾನ (50), ಕಮ್ಯುನಿಕೇಶನ್ ಸ್ಕಿಲ್ (50), ಗಣಿತ (50) ಮತ್ತು ಪ್ರೊಫೆಷನಲ್ ನಾಲೆಡ್ಜ್ (50) ಪ್ರಶ್ನೆಗಳಿರುತ್ತವೆ.
  • ಪರೀಕ್ಷೆಯಲ್ಲಿ ಪಾಸ್ ಆಗಲು ಪ್ರತಿಯೊಂದು ವಿಭಾಗದಲ್ಲೂ ಕನಿಷ್ಠ 45% ಮತ್ತು ಒಟ್ಟಾರೆ 50% ಅಂಕ ಪಡೆಯುವುದು ಕಡ್ಡಾಯ (SC/ST ಗೆ 5% ಸಡಿಲಿಕೆ ಇದೆ).

2. ಎರಡನೇ ಹಂತ (PET, PST & Medical):

  • ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (PET) ಇರುತ್ತದೆ.
  • ಪುರುಷರಿಗೆ: 16 ಸೆಕೆಂಡುಗಳಲ್ಲಿ 100 ಮೀ. ಓಟ, 6 ನಿಮಿಷ 30 ಸೆಕೆಂಡುಗಳಲ್ಲಿ 1.6 ಕಿ.ಮೀ ಓಟ, 12 ಅಡಿ ಉದ್ದ ಜಿಗಿತ ಹಾಗೂ 3.9 ಅಡಿ ಎತ್ತರ ಜಿಗಿತ.
  • ಮಹಿಳೆಯರಿಗೆ: 18 ಸೆಕೆಂಡುಗಳಲ್ಲಿ 100 ಮೀ. ಓಟ, 4 ನಿಮಿಷಗಳಲ್ಲಿ 800 ಮೀ. ಓಟ, 9 ಅಡಿ ಉದ್ದ ಜಿಗಿತ ಹಾಗೂ 3 ಅಡಿ ಎತ್ತರ ಜಿಗಿತ.
  • ನಂತರ ಡಾಕ್ಯುಮೆಂಟ್ ವೆರಿಫಿಕೇಶನ್ (DV) ಮತ್ತು ಮೆಡಿಕಲ್ ಎಕ್ಸಾಮಿನೇಷನ್ ನಡೆಸಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to apply online for BSF)

🔗 Official Notification of BSF Recruitment 2026 👉 Click Here to Apply Online for BSF Recruitment 2026

ನೀವು CAPF Sub Inspector Jobs ಪಡೆಯಲು ಆಸಕ್ತಿ ಹೊಂದಿದ್ದರೆ, ಈ ಕೆಳಗಿನ ಹಂತಗಳನ್ನು ಪಾಲಿಸಿ:

  1. ಮೊದಲಿಗೆ ಗಡಿ ಭದ್ರತಾ ಪಡೆಯ (BSF) ಅಧಿಕೃತ ಪೋರ್ಟಲ್: [https://bsf.mha.gov.in] ಗೆ ಭೇಟಿ ನೀಡಿ.
  2. Step 1 (One Time Registration – OTR): ನೀವು ಹೊಸ ಅಭ್ಯರ್ಥಿಯಾಗಿದ್ದರೆ ಮೊದಲು ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‌ಗೆ ಬರುವ Registration ID ಮತ್ತು Password ಪಡೆಯಿರಿ.
  3. Step 2: ಲಾಗಿನ್ ಆಗಿ ‘Apply Here’ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ವೈಯಕ್ತಿಕ ಮಾಹಿತಿ, 10ನೇ ತರಗತಿ, ಪಿಯುಸಿ, ಹಾಗೂ ಡಿಗ್ರಿ ಅಂಕಗಳು ಮತ್ತು ಸೇವಾ ವಿವರಗಳನ್ನು ನಿಖರವಾಗಿ ನಮೂದಿಸಿ.
  4. ಅಗತ್ಯ ದಾಖಲೆಗಳ ಅಪ್‌ಲೋಡ್: ಇತ್ತೀಚಿನ ಫೋಟೋ (30-100KB), ಸಹಿ (20-50KB), ಹೆಬ್ಬೆಟ್ಟಿನ ಗುರುತು (Thumb impression), ಜಾತಿ ಪ್ರಮಾಣಪತ್ರ ಹಾಗೂ ನಿಮ್ಮ ಮೇಲಧಿಕಾರಿಯಿಂದ ಪಡೆದ NOC (Annexure-V) ಮತ್ತು ಸೇವಾ ದೃಢೀಕರಣ ಪತ್ರ (Annexure-III) ಗಳನ್ನು PDF ರೂಪದಲ್ಲಿ (30-100KB) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
  5. ಎಲ್ಲವನ್ನು ಪರಿಶೀಲಿಸಿ ಆನ್‌ಲೈನ್ ಅರ್ಜಿಯನ್ನು ಸಬ್ಮಿಟ್ (Submit) ಮಾಡಿ, ಅಂತಿಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ (ಯಾವುದೇ ಫೀಸ್ ಇರುವುದಿಲ್ಲ ಹಾಗೂ ಹಾರ್ಡ್ ಕಾಪಿ ಕಳುಹಿಸುವಂತಿಲ್ಲ).

ಪ್ರಮುಖ ದಿನಾಂಕಗಳು (Important Dates of CAPF Sub Inspector Jobs 2026)

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12 ನವೆಂಬರ್ 2026 (12.11.2026 – 00:01 hrs)
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2026 (ರಾತ್ರಿ 23:59 ರವರೆಗೆ) (ಪರೀಕ್ಷೆಯ ದಿನಾಂಕವನ್ನು ನಂತರ ಇಮೇಲ್ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಕೇವಲ 3 ಬಾರಿಯ ಅವಕಾಶವಿರುತ್ತದೆ).

ಸಶಸ್ತ್ರ ಪಡೆಗಳಲ್ಲಿ ಅತ್ಯುತ್ತಮ ವೇತನದೊಂದಿಗೆ ‘ಸಬ್-ಇನ್ಸ್‌ಪೆಕ್ಟರ್’ ಆಗಿ ಸೇವೆ ಸಲ್ಲಿಸಲು ಇದೊಂದು ಸುವರ್ಣಾವಕಾಶ. ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಿ, ಪರೀಕ್ಷಾ ಸಿದ್ಧತೆ ಶುರುಮಾಡಿ. ಶುಭವಾಗಲಿ!

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
CAPF SI Recruitment 2026 /BSF Recruitment 2026 
Official Notification PDF
Notification PDF : Click Here

Official Website: 
https://bsf.mha.gov.in/
CAPF SI Recruitment 2026 /BSF Recruitment 2026 
Apply Online Direct Link
Apply Online: Click Here
Last Date to Apply Online31-12-2026
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

Job Description Last Date Apply Now
RRB Station Master Recruitment 2026 – 1215 Posts 25 Nov 2026 Apply Online
SWR GDCE Recruitment 2026 – 258 Posts 08 Dec 2026 Apply Online
KEA FDA SDA Recruitment 2026 – 2798 Posts 25 Nov 2026 Apply Online

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

ICAR Recruitment 2026: ಡಿಗ್ರಿ (B.Sc/B.E) ಪಾಸಾದವರಿಗೆ ಬಂಪರ್ ಆಫರ್: ICAR ಅಡಿಯಲ್ಲಿ 1393 'ಟೆಕ್ನಿಕಲ್ ಅಸಿಸ್ಟೆಂಟ್' ಹುದ್ದೆಗಳ ಬೃಹತ್ ನೇಮಕಾತಿ ಶುರು!

ಡಿಗ್ರಿ (B.Sc/B.E) ಪಾಸಾದವರಿಗೆ ಬಂಪರ್ ಆಫರ್: ICAR ಅಡಿಯಲ್ಲಿ 1393 ‘ಟೆಕ್ನಿಕಲ್ ಅಸಿಸ್ಟೆಂಟ್’ ಹುದ್ದೆಗಳ ಬೃಹತ್ ನೇಮಕಾತಿ ಶುರು!

BEL Trainee Engineer-I Recruitment 2026: B.E/B.Tech ಫ್ರೆಶರ್ಸ್‌ಗೆ ಬಂಪರ್ ಆಫರ್: BEL ನಲ್ಲಿ 23 'ಟ್ರೈನಿ ಇಂಜಿನಿಯರ್' ಹುದ್ದೆಗಳ ನೇಮಕಾತಿ ಶುರು! ವೇತನ ₹50,000!

B.E/B.Tech ಫ್ರೆಶರ್ಸ್‌ಗೆ ಬಂಪರ್ ಆಫರ್: BEL ನಲ್ಲಿ 23 ‘ಟ್ರೈನಿ ಇಂಜಿನಿಯರ್’ ಹುದ್ದೆಗಳ ನೇಮಕಾತಿ ಶುರು! ವೇತನ ₹50,000!

CAPF SI Recruitment 2026: ಡಿಗ್ರಿ ಪಾಸಾದವರಿಗೆ ಬಂಪರ್ ಆಫರ್: BSF/ CRPF ನಲ್ಲಿ 1167 'ಸಬ್-ಇನ್ಸ್‌ಪೆಕ್ಟರ್' ಹುದ್ದೆಗಳ ಬೃಹತ್ ನೇಮಕಾತಿ ಶುರು!

ಡಿಗ್ರಿ ಪಾಸಾದವರಿಗೆ ಬಂಪರ್ ಆಫರ್: BSF/ CRPF ನಲ್ಲಿ 1167 ‘ಸಬ್-ಇನ್ಸ್‌ಪೆಕ್ಟರ್’ ಹುದ್ದೆಗಳ ಬೃಹತ್ ನೇಮಕಾತಿ ಶುರು!

RRB Isolated Categories Recruitment 2026: ಡಿಗ್ರಿ, ಸ್ನಾತಕೋತ್ತರ ಪದವೀಧರರಿಗೆ ಬಂಪರ್ ಆಫರ್: ರೈಲ್ವೆಯಲ್ಲಿ 191 ಅಧಿಕಾರಿ ಹುದ್ದೆಗಳಿಗೆ ಬೃಹತ್ ನೇಮಕಾತಿ!

ಡಿಗ್ರಿ, ಸ್ನಾತಕೋತ್ತರ ಪದವೀಧರರಿಗೆ ಬಂಪರ್ ಆಫರ್: ರೈಲ್ವೆಯಲ್ಲಿ 191 ಅಧಿಕಾರಿ ಹುದ್ದೆಗಳಿಗೆ ಬೃಹತ್ ನೇಮಕಾತಿ!

Property Rights in India: ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ: ಆಸ್ತಿ ವಿವಾದಗಳ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ: ಆಸ್ತಿ ವಿವಾದಗಳ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

PrevPreviousಡಿಗ್ರಿ, ಸ್ನಾತಕೋತ್ತರ ಪದವೀಧರರಿಗೆ ಬಂಪರ್ ಆಫರ್: ರೈಲ್ವೆಯಲ್ಲಿ 191 ಅಧಿಕಾರಿ ಹುದ್ದೆಗಳಿಗೆ ಬೃಹತ್ ನೇಮಕಾತಿ!
NextB.E/B.Tech ಫ್ರೆಶರ್ಸ್‌ಗೆ ಬಂಪರ್ ಆಫರ್: BEL ನಲ್ಲಿ 23 ‘ಟ್ರೈನಿ ಇಂಜಿನಿಯರ್’ ಹುದ್ದೆಗಳ ನೇಮಕಾತಿ ಶುರು! ವೇತನ ₹50,000!Next
Tulu Language: ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆ ಘೋಷಣೆಗೆ ಸಮಿತಿ ರಚನೆ: 3 ತಿಂಗಳಲ್ಲಿ ವರದಿ ಸಲ್ಲಿಕೆಗೆ ಆದೇಶ!

Tulu Language: ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆ ಘೋಷಣೆಗೆ ಸಮಿತಿ ರಚನೆ: 3 ತಿಂಗಳಲ್ಲಿ ವರದಿ ಸಲ್ಲಿಕೆಗೆ ಆದೇಶ!

1 August 2025
Read More »
Supreme Court Work Accident Compensation 2025: ನೌಕರರು ಕೆಲಸಕ್ಕೆ ಹೋಗುವಾಗ ಸಂಭವಿಸಿದ ಅಪಘಾತಕ್ಕೂ ಪರಿಹಾರ: ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

Supreme Court Work Accident Compensation 2025: ನೌಕರರು ಕೆಲಸಕ್ಕೆ ಹೋಗುವಾಗ ಸಂಭವಿಸಿದ ಅಪಘಾತಕ್ಕೂ ಪರಿಹಾರ: ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

31 July 2025
Read More »
Shani Shingnapur: Unknown Facts & Doorless Village Mystery – Secrets of the Open-Air Deity Revealed

Shani Shingnapur: Unknown Facts & Doorless Village Mystery – Secrets of the Open-Air Deity Revealed

27 July 2025
Read More »
Page1 … Page182 Page183 Page184 Page185 Page186 … Page192
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs