
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದು ವಿವಾದಕ್ಕೆ ಕೇಂದ್ರಬಿಂದುವಾದ ಕಾಂಗ್ರೆಸ್ ಸರ್ಕಾರ!
2022ರ ಏಪ್ರಿಲ್‌ನಲ್ಲಿ ಹಳೆ ಹುಬ್ಬಳ್ಳಿಯಲ್ಲಿ ಪೇಗಂಬರ್ ಮುಹಮ್ಮದ್ ಕುರಿತು ಸೀಮಿತ್ ಕುಮಾರ್ ಎಂಬಾತನು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ಗೆ ಪ್ರತಿಯಾಗಿ ಬೃಹತ್ ಗಲಭೆ ಎದ್ದಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆ, ಸಾರ್ವಜನಿಕ ಸೌಲಭ್ಯಗಳು ಮತ್ತು ವಾಹನಗಳಿಗೆ ಹಾನಿ ಮಾಡಲಾಗಿತ್ತು. ಹಲವಾರು ಜನರನ್ನು ಬಂಧಿಸಲಾಗಿತ್ತು. ಈಗ ಈ ಗಲಭೆ ಪ್ರಕರಣವನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಯುವ ವಕೀಲರ ತಂಡವು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ…