ಕರ್ನಾಟಕದಲ್ಲಿ Class 1 ಪ್ರವೇಶಕ್ಕೆ ವಯೋಮಿತಿ ತಿದ್ದುಪಡಿ: ವಯೋಮಿತಿಗೆ ತಾತ್ಕಾಲಿಕ ವಿನಾಯಿತಿ – ಈ ವರ್ಷ ಮಾತ್ರ ಅನುಮತಿ

ಕರ್ನಾಟಕದಲ್ಲಿ Class 1 ಪ್ರವೇಶಕ್ಕೆ ವಯೋಮಿತಿ ತಿದ್ದುಪಡಿ: ವಯೋಮಿತಿಗೆ ತಾತ್ಕಾಲಿಕ ವಿನಾಯಿತಿ – ಈ ವರ್ಷ ಮಾತ್ರ ಅನುಮತಿ
Share and Spread the love

ಕರ್ನಾಟಕದಲ್ಲಿ Class 1 ಪ್ರವೇಶಕ್ಕೆ ವಯೋಮಿತಿ ತಿದ್ದುಪಡಿ: ವಯೋಮಿತಿಗೆ ತಾತ್ಕಾಲಿಕ ವಿನಾಯಿತಿ – ಈ ವರ್ಷ ಮಾತ್ರ ಅನುಮತಿ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

Follow Us Section

ಬೆಂಗಳೂರು: ಮಕ್ಕಳ ವಿದ್ಯಾಭ್ಯಾಸ ಆರಂಭದ ಮಹತ್ವದ ಹಂತವಾದ ಮೊದಲನೇ ತರಗತಿಯ ಪ್ರವೇಶಕ್ಕೆ ಸಂಬಂಧಿಸಿದಂತೆ, ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕ ಸರ್ಕಾರ ಮಹತ್ವದ ತಿದ್ದುಪಡಿ ಜಾರಿಗೆ ತಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏಪ್ರಿಲ್ 16ರಂದು ಪ್ರಕಟಿಸಿದ ಮಹತ್ವದ ಘೋಷಣೆಯಲ್ಲಿ, ಈ ಶೈಕ್ಷಣಿಕ ವರ್ಷದಲ್ಲಿ (2024-25) 5 ವರ್ಷ 5 ತಿಂಗಳ ವಯಸ್ಸಿರುವ ಮಕ್ಕಳಿಗೂ ಮೊದಲನೇ ತರಗತಿಗೆ ಪ್ರವೇಶ ನೀಡಲು ಅವಕಾಶ ನೀಡಲಾಗಿದೆ.

ಪಾಲಕರ ಮನವಿಗೆ ಸ್ಪಂದನೆ:

ಈ ನಿರ್ಧಾರವು ರಾಜ್ಯದ ಸಾವಿರಾರು ಪಾಲಕರಿಗೆ ಶ್ವಾಸವಾಗಿ ಪರಿಣಮಿಸಿದೆ. ಈ ವರ್ಷ ಅನೇಕ ಪಾಲಕರು ತಮ್ಮ ಮಕ್ಕಳಿಗೆ ಮೊದಲನೇ ತರಗತಿಯಲ್ಲಿ ಪ್ರವೇಶ ಸಿಗದೆ ಸಂಕಷ್ಟಕ್ಕೀಡಾಗಿದ್ದರು. ಹಲವು ಮಕ್ಕಳ ವಯಸ್ಸು 6 ವರ್ಷಕ್ಕೆ ತಲುಪದ ಕಾರಣ, ಪ್ರವೇಶ ನಿರಾಕರಿಸಲಾಗುತ್ತಿತ್ತು. ಇದರಿಂದ ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದ ಪಾಲಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಸರ್ಕಾರ ಅವರ ಈ ಮನವಿಗೆ ಸ್ಪಂದನೆ ನೀಡಿದ್ದು, ತಾತ್ಕಾಲಿಕವಾಗಿ ವಯೋಮಿತಿಗೆ ವಿನಾಯಿತಿ ಘೋಷಿಸಿದೆ. ಈ ನಿರ್ಧಾರದಿಂದಾಗಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ 5 ವರ್ಷ 5 ತಿಂಗಳ ಅಥವಾ ಅದಕ್ಕಿಂತ ಮೇಲಾಗಿರುವ ಮಕ್ಕಳಿಗೂ Class 1 ಪ್ರವೇಶಕ್ಕೆ ಅವಕಾಶ ದೊರೆಯಲಿದೆ.

Read More News/ ಇನ್ನಷ್ಟು ಸುದ್ದಿ ಓದಿ

UKG ಮುಗಿಸಿದ ಮಕ್ಕಳಿಗೆ ಶಾಕ್: 1ನೇ ತರಗತಿಗೆ Age Limit Issue ನಿಂದ Admission ನಿರಾಕರಣೆ!

ತಾತ್ಕಾಲಿಕವಾಗಿ ಮಾತ್ರ – ಶಾಶ್ವತವಲ್ಲ ಸಚಿವರಿಂದ ಸ್ಪಷ್ಟ:

ಇದು ಶಾಶ್ವತ ನಿರ್ಧಾರವಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. “ಈ ತಿದ್ದುಪಡಿ ಕೇವಲ ಈ ಶೈಕ್ಷಣಿಕ ವರ್ಷದವರಗೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ (2025-26) ಯಾವುದೇ ವಯೋಮಿತಿ ವಿನಾಯಿತಿ ಇಲ್ಲದೆ 6 ವರ್ಷ ವಯಸ್ಸು ಹೊಂದಿರುವ ಮಕ್ಕಳಿಗಷ್ಟೇ Class 1 ಪ್ರವೇಶ ದೊರೆಯುತ್ತದೆ,” ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಕರ್ನಾಟಕದಲ್ಲಿ Class 1 ಪ್ರವೇಶಕ್ಕೆ ವಯೋಮಿತಿ ತಿದ್ದುಪಡಿ: ವಯೋಮಿತಿಗೆ ತಾತ್ಕಾಲಿಕ ವಿನಾಯಿತಿ – ಈ ವರ್ಷ ಮಾತ್ರ ಅನುಮತಿ

NEP ಅಡಿಯಲ್ಲಿ ನಿಗದಿಯಾದ ನಿಯಮ:

ರಾಷ್ಟ್ರೀಯ ಶಿಕ್ಷಣ ನೀತಿಯ (NEP-2020) ಪ್ರಕಾರ, ಮಕ್ಕಳಿಗೆ ಕಡ್ಡಾಯವಾಗಿ 6 ವರ್ಷ ವಯಸ್ಸಾಗಿರಬೇಕು ಎಂಬ ನಿಯಮ ಜಾರಿಗೆ ಬಂದಿದೆ. ಈ ನಿಯಮದ ಭಾಗವಾಗಿ ಕಳೆದ ಕೆಲವು ವರ್ಷಗಳಿಂದ 6 ವರ್ಷ ಪೂರ್ಣವಾದ ಮಕ್ಕಳಿಗಷ್ಟೇ ಪ್ರವೇಶ ನೀಡಲಾಗುತ್ತಿತ್ತು. ಆದರೆ ಈ ವರ್ಷದ ವಿಶೇಷ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಶಿಫಾರಸು ಜಾರಿಗೆ ತರಲಾಗಿದೆ.

ಶಾಲೆಗಳಿಗೂ ಆದೇಶ:

ಶಿಕ್ಷಣ ಇಲಾಖೆ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಈ ತಿದ್ದುಪಡಿ ಕುರಿತಾದ ಅಧಿಕೃತ ಆದೇಶವನ್ನು ರಾಜ್ಯದ ಎಲ್ಲಾ ಶಾಲೆಗಳಿಗೆ ಕಳುಹಿಸಲಾಗುವುದು. ಶಾಲೆಗಳು ಈ ಆದೇಶದ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಈ ಮೂಲಕ ವಯೋಮಿತಿ ಸಂಬಂಧಿತ ಯಾವುದೇ ಗೊಂದಲವಿಲ್ಲದೆ ಮಕ್ಕಳಿಗೆ ಪ್ರವೇಶ ಸಿಗುವಂತಾಗುತ್ತದೆ.

ಪಾಲಕರ ಸಂತೋಷ

ಈ ತಾತ್ಕಾಲಿಕ ತಿದ್ದುಪಡಿಯನ್ನು ಕೇಳಿದ ಹಲವು ಪಾಲಕರು ಸಂತೋಷ ವ್ಯಕ್ತಪಡಿಸಿದ್ದಾರೆ. “ನಮ್ಮ ಮಗುವಿಗೆ 6 ವರ್ಷ ಆಗಿಲ್ಲ, ಆದರೆ ಶಾಲೆಗೆ ಹೋಗುವಲ್ಲಿಯೇ ಇರುವುದು. ಈ ನಿರ್ಧಾರದಿಂದಾಗಿ ಅಳಲು ನೀಗಿದೆ,” ಎಂದು ಶಿವಮೊಗ್ಗದ ಒಬ್ಬ ಪೋಷಕನಾದ ರಘುನಾಥ ಹೇಳಿದ್ದಾರೆ.

ಇತರೆ ರಾಜ್ಯಗಳಲ್ಲಿಯೂ ಆಗಿರುವ ಉದಾಹರಣೆ:

ಇಂತಹ ತಾತ್ಕಾಲಿಕ ವಯೋಮಿತಿ ವಿನಾಯಿತಿ ಈ ಹಿಂದೆ ಕೆಲ ರಾಜ್ಯಗಳಲ್ಲಿ ಕೂಡ ಜಾರಿಗೆ ಬಂದಿತ್ತು. ಪೋಷಕರ ಒತ್ತಾಯ ಹಾಗೂ ಮಕ್ಕಳ ಶೈಕ್ಷಣಿಕ ಹಿನ್ನಡೆ ತಪ್ಪಿಸಲು ಈ ರೀತಿಯ ತಾತ್ಕಾಲಿಕ ನಿರ್ಧಾರಗಳನ್ನು ಸರ್ಕಾರಗಳು ತೆಗೆದುಕೊಂಡಿವೆ

ಈ ವರ್ಷ (2024-25) ಶೈಕ್ಷಣಿಕ ಸಾಲಿನಲ್ಲಿ 5 ವರ್ಷ 5 ತಿಂಗಳ ವಯಸ್ಸು ಹೊಂದಿರುವ ಮಕ್ಕಳು Class 1 ಪ್ರವೇಶ ಪಡೆಯಬಹುದಾಗಿದೆ. ಆದರೆ ಇದು ತಾತ್ಕಾಲಿಕ ವಿನಾಯಿತಿಯಾಗಿದ್ದು, ಮುಂದಿನ ವರ್ಷದಿಂದ ಮತ್ತೆ 6 ವರ್ಷ ವಯೋಮಿತಿಯ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು.

Read More News/ ಇನ್ನಷ್ಟು ಸುದ್ದಿ ಓದಿ

2025-26 ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶ ವಯೋಮಿತಿಯ ನಿರ್ಧಾರ ಯಾವಾಗ? ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs