Crop Loss Compensation: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಹೆಚ್ಚಿಸಲು ರಾಜ್ಯ ಸರಕಾರ ಸಿದ್ಧ. ಪ್ರಸ್ತುತ ಮಳೆಯಾಶ್ರಿತ ಬೆಳೆ 8,500 ರೂ., ನೀರಾವರಿ ಬೆಳೆ 17,000 ರೂ., ತೋಟಗಾರಿಕಾ ಬೆಳೆ 22,500 ರೂ. ನೀಡಲಾಗುತ್ತಿದೆ. ಪರಿಹಾರ ಪರಿಷ್ಕರಣೆ ಕುರಿತ ಅಂತಿಮ ನಿರ್ಧಾರ ಸಂಪುಟದಲ್ಲಿ ಶೀಘ್ರ ಆಗಲಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಬೆಂಗಳೂರು: ರಾಜ್ಯದ ಹಲವೆಡೆ ಅತಿವೃಷ್ಟಿ ಪರಿಣಾಮವಾಗಿ ಸಾವಿರಾರು ರೈತರು ತೀವ್ರ ನಷ್ಟ ಅನುಭವಿಸಿದ್ದು, ಈ ಹಿನ್ನೆಲೆ ಸರ್ಕಾರ ರೈತರಿಗೆ ನೀಡುವ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಹೆಚ್ಚಿಸಲು ತೀರ್ಮಾನ ಕೈಗೊಂಡಿದೆ. ಸುಮಾರು 5.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯ ಅಂದಾಜು ಮಾಡಲಾಗಿದ್ದು, ಪ್ರಸ್ತುತ ನೀಡಲಾಗುತ್ತಿರುವ ಎಸ್ಡಿಆರ್ಎಫ್ ಮಾರ್ಗಸೂಚಿಯ ಪರಿಹಾರ ಸಾಲದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅತಿವೃಷ್ಟಿಯಿಂದ ಬೆಳೆ ಹಾನಿ – 5.20 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ತೀವ್ರ ನಷ್ಟ
ಕೃಷಿ ಮತ್ತು ಕಂದಾಯ ಇಲಾಖೆಯ ಪ್ರಾಥಮಿಕ ಸಮೀಕ್ಷೆಯ ಪ್ರಕಾರ, 4,80,256 ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 40,407 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿದ್ದು, ಒಟ್ಟು 5,20,663 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಅಂದಾಜು ಪ್ರಕಾರ ಈಗಾಗಲೇ ಸುಮಾರು 550 ಕೋಟಿ ರೂ. ನಷ್ಟವಾಗಿದೆ.
ಮಳೆ ಆರಂಭದಲ್ಲಿ ಉತ್ತಮ ಮುಂಗಾರು ಹಿನ್ನೆಲೆ ಬಿತ್ತನೆ ಕಾರ್ಯ ಜೋರಾಗಿತ್ತು. ಆದರೆ ಮಧ್ಯಂತರ ಬರ ಹಾಗೂ ನಂತರ ಅತಿವೃಷ್ಟಿ ಕಾರಣದಿಂದ ಸಾವಿರಾರು ಎಕರೆ ಬೆಳೆಗಳು ನಾಶವಾಗಿವೆ. ಕೆಲ ರೈತರು ಮರುಬಿತ್ತನೆಗೂ ಮುಂದಾದರೂ, ನಿರಂತರ ಮಳೆಯ ಆರ್ಭಟದಿಂದ ಮತ್ತೆ ನಷ್ಟ ಅನುಭವಿಸಿದ್ದಾರೆ. ಇದರಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಪರಿಹಾರ ಹೆಚ್ಚಳದ ನಿರ್ಧಾರ – ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ
ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಡಳಿತಗಳೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
“ಅತಿವೃಷ್ಟಿಯಿಂದಾಗಿ ರಾಜ್ಯದ ಬಹುಭಾಗಗಳಲ್ಲಿ ವ್ಯಾಪಕವಾಗಿ ಬೆಳೆ ಹಾನಿಯಾಗಿದೆ. ರೈತರಿಗೆ ಎಸ್ಡಿಆರ್ಎಫ್ ಮಾರ್ಗಸೂಚಿಗಿಂತ ಹೆಚ್ಚಿನ ಪರಿಹಾರ ನೀಡುವ ಕುರಿತಂತೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಘೋಷಿಸಿದರು.
ರಾಜ್ಯ ಸರ್ಕಾರ ಸುಮಾರು 5 ವರ್ಷಗಳ ಬಳಿಕ ಮತ್ತೊಮ್ಮೆ ಪರಿಹಾರ ಪರಿಷ್ಕರಣೆ ಮಾಡಲು ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿತ್ತು. ಈಗ ಮತ್ತೆ ಹೆಚ್ಚಳಕ್ಕೆ ಒತ್ತಡ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಪ್ರಸ್ತುತ ನೀಡಲಾಗುತ್ತಿರುವ ಪರಿಹಾರ ಮೊತ್ತ
ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಪ್ರಸ್ತುತ ರೈತರಿಗೆ ನೀಡಲಾಗುತ್ತಿರುವ ಪರಿಹಾರ (ಪ್ರತಿ ಹೆಕ್ಟೇರ್ಗೆ):
- ಮಳೆಯಾಶ್ರಿತ ಬೆಳೆ: ₹8,500
- ನೀರಾವರಿ ಪ್ರದೇಶದ ಬೆಳೆ: ₹17,000
- ತೋಟಗಾರಿಕಾ (ದೀರ್ಘಾವಧಿ) ಬೆಳೆ: ₹22,500
ಮನೆ ಹಾನಿಗೆ ಸರ್ಕಾರದ ಪರಿಹಾರ
ಬೆಳೆ ಹಾನಿಯೊಂದಿಗೆ ಮನೆಗಳಿಗೆ ಆಗಿರುವ ಹಾನಿಗೂ ಪರಿಹಾರ ನೀಡಲಾಗುತ್ತಿದೆ:
- ಸಣ್ಣ ಪ್ರಮಾಣದ ಹಾನಿ – ₹6,500
- 20% ರಿಂದ 50% ಹಾನಿ – ₹30,000
- 50% ರಿಂದ 75% ಹಾನಿ – ₹50,000
- ಸಂಪೂರ್ಣ ಮನೆ ಹಾನಿ – ₹1,20,000
ಕೇಂದ್ರವನ್ನು ಅವಲಂಬಿಸದ ನಿರ್ಧಾರ
ಸಿಎಂ ಸಿದ್ದರಾಮಯ್ಯ ಅವರು, “ಕೇಂದ್ರ ಸರ್ಕಾರ ಇನ್ನೂ ಹಿಂದಿನ ಅನಾವೃಷ್ಟಿ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಅತಿವೃಷ್ಟಿ ಪರಿಹಾರಕ್ಕಾಗಿ ಕೇಂದ್ರವನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ರಾಜ್ಯದ ಖಜಾನೆ ಬಲವಾಗಿದ್ದು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಪಿಡಿ ಖಾತೆಗಳಲ್ಲಿ ಈಗಾಗಲೇ ₹1,354 ಕೋಟಿ ಲಭ್ಯವಿದೆ. ರೈತರಿಗೆ ಹೆಚ್ಚುವರಿ ಪರಿಹಾರವನ್ನು ರಾಜ್ಯವೇ ಭರಿಸಲಿದೆ” ಎಂದು ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರದ ಮಾದರಿ ಮುಂದುವರಿಕೆ
ಬಿಜೆಪಿ ಆಡಳಿತದ ಅವಧಿಯಲ್ಲಿ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಲಾಗಿತ್ತು. ಅದಕ್ಕೆ ತಗುಲುವ ಹೆಚ್ಚುವರಿ ಹೊರೆಯನ್ನು ರಾಜ್ಯವೇ ಭರಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೂ ಆ ವ್ಯವಸ್ಥೆಯನ್ನು ಮುಂದುವರಿಸಲಾಗಿತ್ತು. ಈಗ ಮತ್ತೊಮ್ಮೆ ರೈತರ ಒತ್ತಡ ಹಾಗೂ ಬೆಳೆ ನಷ್ಟದ ಗಂಭೀರ ಪರಿಸ್ಥಿತಿಯನ್ನು ಮನಗಂಡು ಪರಿಹಾರ ಹೆಚ್ಚಳಕ್ಕೆ ಸರ್ಕಾರ ಸಜ್ಜಾಗಿದೆ.
ರೈತರ ನಿರೀಕ್ಷೆ
ರಾಜ್ಯಾದ್ಯಂತ ರೈತರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದರೂ, ಪರಿಹಾರ ಮೊತ್ತವನ್ನು ಶೀಘ್ರವೇ ರೈತರ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿದ್ದಾರೆ. ಏಕೆಂದರೆ ನಷ್ಟ ಅನುಭವಿಸಿದ ರೈತರು ತಕ್ಷಣದ ಆರ್ಥಿಕ ನೆರವಿಗಾಗಿ ಕಾಯುತ್ತಿದ್ದಾರೆ.
Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
Crop Survey App: ರೈತರು ಈಗ ತಮ್ಮ ಬೆಳೆ ಮಾಹಿತಿಯನ್ನು ನೇರವಾಗಿ ತಮ್ಮ ಮೊಬೈಲ್ನಲ್ಲೇ ಪಹಣಿಗೆ ದಾಖಲಿಸಲು ಅವಕಾಶ!
Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ
(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್ಗಳು!
Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್ಲೈನ್ನಲ್ಲಿ ಲಭ್ಯ!
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು ನಮ್ಮ WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button