DCET 2025: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳು ಮತ್ತು ವೃತ್ತಿಪರ ಡಿಪ್ಲೊಮಾ ಪದವೀಧರರ (Working Professionals)ಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (DCET)-2025 ಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತ ವೆಬ್‌ಸೈಟ್ kea.kar.nic.in ಮುಖಾಂತರ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಸರ್ಕಾರದ ಆದೇಶ ಮತ್ತು ಅರ್ಹತೆ:
- ಸರ್ಕಾರದ ಆದೇಶದಂತೆ, ಮೂರು ವರ್ಷಗಳ ಡಿಪ್ಲೊಮಾ ಇಂಜಿನಿಯರಿಂಗ್ ಕೋರ್ಸ್ ಪೂರೈಸಿರುವ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಮೂಲಕ ಯಾವುದೇ ಇಂಜಿನಿಯರಿಂಗ್ ಕೋರ್ಸ್‌ಗಳ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಪಡೆಯಬಹುದಾಗಿದೆ.
- ವೃತ್ತಿಪರ ಡಿಪ್ಲೊಮಾ ಪದವೀಧರರಿಗೂ ಇದೇ ಅವಕಾಶ ನೀಡಲಾಗಿದೆ. ಅವರ ಪ್ರವೇಶವು ಸರ್ಕಾರದ ಸೀಟ್ ಮ್ಯಾಟ್ರಿಕ್ಸ್ ಆಧಾರಿತವಾಗಿರುತ್ತದೆ.
DCET 2025 ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ: 25-04-2025
- ಅರ್ಜಿ ಸಲ್ಲಿಕೆ ಕೊನೆ ದಿನ: 10-05-2025 (ರಾತ್ರಿ 11:59 ಗಂಟೆ)
- ಅರ್ಜಿ ಶುಲ್ಕ ಪಾವತಿ ಕೊನೆ ದಿನ: 12-05-2025 (ಸಂಜೆ 6:00 ಗಂಟೆ)
- ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ: 20-05-2025ರಿಂದ
- DCET 2025 ಪರೀಕ್ಷೆ ದಿನಾಂಕ: 31-05-2025 (ಶನಿವಾರ)
Direct Links:
- ✅ ನೋಟಿಫಿಕೇಶನ್ ಲಿಂಕ್:
https://quicknewztoday.com/wp-content/uploads/2025/05/KEA_12X28Cms_kankannada.pdf - 🌐 ಅಧಿಕೃತ ವೆಬ್‌ಸೈಟ್:
https://cetonline.karnataka.gov.in/kea/ - 🌐ಅಪ್ಲೈ ಮಾಡಿ: ಆನ್‌ಲೈನ್ ಅರ್ಜಿ ಲಿಂಕ್:
https://cetonline.karnataka.gov.in/dipcet2025/Forms/appchecklist.aspx
How to Apply for DCET 2025 Online (ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ)
Steps | Instructions (English) | ವಿವರಣೆ (Kannada) |
---|---|---|
1. Visit Website | Go to the official KEA website: https://cetonline.karnataka.gov.in/kea | ಅಧಿಕೃತ ವೆಬ್‌ಸೈಟ್‌ಗಾಗಿ ಭೇಟಿನೀಡಿ: https://cetonline.karnataka.gov.in/kea |
2. Application Link | Click on the DCET-2025 application-cum-verification module link available from 25-04-2025. | 25-04-2025ರಿಂದ ಲಭ್ಯವಿರುವ DCET-2025 ಅರ್ಜಿ-ಪರಿಶೀಲನಾ ಲಿಂಕ್ ಮೇಲೆ ಕ್ಲಿಕ್ ಮಾಡಿ. |
3. Fill Details | Fill in personal details, upload recent photo, and provide academic details including school, medium of instruction, category, and income. | ವೈಯಕ್ತಿಕ ವಿವರಗಳು, ಇತ್ತೀಚಿನ ಭಾವಚಿತ್ರ, ಹಾಗೂ ಶಾಲಾ ವ್ಯಾಸಂಗ, ಕನ್ನಡ ಮಾಧ್ಯಮ, ಜಾತಿ/ಪ್ರವರ್ಗ, ವಾರ್ಷಿಕ ಆದಾಯ ಇತ್ಯಾದಿ ಮಾಹಿತಿ ನೀಡಿ. |
4. Upload Documents | Upload required academic and category-related documents as per instructions. | ಶೈಕ್ಷಣಿಕ ಮತ್ತು ಜಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸೂಚನೆಯಂತೆ ಅಪ್ಲೋಡ್ ಮಾಡಿ. |
5. Fee Payment | Pay the application fee online before the last date (12-05-2025). | ಅಂತಿಮ ದಿನಾಂಕಕ್ಕೂ ಮೊದಲು (12-05-2025) ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ. |
6. Final Submission | Review the application carefully and click on final submit. | ಅರ್ಜಿಯನ್ನು ಚೆಕ್ ಮಾಡಿ ಮತ್ತು ಅಂತಿಮವಾಗಿ ಸಲ್ಲಿಸಿ. |
7. Print Copies | Take at least 3 printouts of the submitted application for future reference. | ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ 3 ಪ್ರತಿಗಳನ್ನು ತೆಗೆದುಕೊಳ್ಳಿ. |
8. Save Receipt & Photo | Save the uploaded photo and fee payment receipt securely. | ಅಪ್ಲೋಡ್ ಮಾಡಿದ ಭಾವಚಿತ್ರ ಮತ್ತು ಪಾವತಿ ರಸೀದಿಯನ್ನು ಭದ್ರವಾಗಿ ಉಳಿಸಿಕೊಳ್ಳಿ. |
ಪಠ್ಯಕ್ರಮ:
ಪರೀಕ್ಷೆಯು ಎಲ್ಲಾ ಇಂಜಿನಿಯರಿಂಗ್ ಡಿಪ್ಲೊಮಾ ವಿಭಾಗಗಳಿಗೆ ಸಾಮಾನ್ಯವಾಗಿದ್ದು, ಈ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತದೆ:
- ಎಂಜಿನಿಯರಿಂಗ್ ಗಣಿತ
- ಅಂಕಶಾಸ್ತ್ರ ಮತ್ತು ವಿಶ್ಲೇಷಣೆ
- ಐಟಿ ಕೌಶಲ್ಯಗಳು
- ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ತತ್ವಗಳು
- ಯೋಜನಾ ನಿರ್ವಹಣಾ ಕೌಶಲ್ಯಗಳು
ದಿನಾಂಕ | ವಿಷಯಗಳು (ಎಲ್ಲಾ ಇಂಜಿನಿಯರಿಂಗ್ ವೃತ್ತಿಪರ ಪಠ್ಯಕ್ರಮಗಳಿಗೆ) | ಸಮಯ | ಅಂಕಗಳು |
---|---|---|---|
31-05-2025 ಶನಿವಾರ | a. ಎಂಜಿನಿಯರಿಂಗ್ ಗಣಿತ (Engineering Mathematics) b. ಅಂಕಶಾಸ್ತ್ರ ಮತ್ತು ವಿಶ್ಲೇಷಣೆ (Statistics & Analytics) c. ಐಟಿ ಕೌಶಲ್ಯಗಳು (IT Skills) d. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ತತ್ವಗಳು (Fundamentals of Electrical and Electronics Engineering) e. ಯೋಜನಾ ನಿರ್ವಹಣಾ ಕೌಶಲ್ಯಗಳು (Project Management Skills) | ಮಧ್ಯಾಹ್ನ 2.00 ರಿಂದ ಸಂಜೆ 5.00 ರವರೆಗೆ (3 ಘಂಟೆಗಳು) | 100 |
ಭಾಷಾ ಪರೀಕ್ಷೆ (ಕನ್ನಡ ಭಾಷಾ ಪಠ್ಯ – 4ನೇ ತರಗತಿ ಮಟ್ಟ) | ದಿನಾಂಕ ಮತ್ತು ಸಮಯ | ಅಂಕಗಳು |
---|---|---|
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳು (ಪರೀಕ್ಷಾ ಕೇಂದ್ರ: ಬೆಂಗಳೂರು ಮಾತ್ರ) | ದಿನಾಂಕ: 31-05-2025 ಶನಿವಾರ ಸಮಯ: ಬೆಳಗ್ಗೆ 10.30 ರಿಂದ 11.30 ರವರೆಗೆ | 50 |
ವಿಶೇಷ ಸೂಚನೆ:
- ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗಾಗಿ ಕನ್ನಡ ಭಾಷಾ ಪರೀಕ್ಷೆ (4ನೇ ತರಗತಿ ಮಟ್ಟ) ಬೆಂಗಳೂರು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ನಡೆಯಲಿದೆ.
- ಅರ್ಜಿ ಸಲ್ಲಿಕೆಯಲ್ಲಿ ನೀಡುವ ಎಲ್ಲಾ ಮಾಹಿತಿ ಅಂತಿಮವಾಗಿದ್ದು, ನಂತರದಲ್ಲಿ ಬದಲಾವಣೆ ಸಾಧ್ಯವಿಲ್ಲ.
- caste/income detail ಗಳು SATS ಮತ್ತು ಕಂದಾಯ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಪರಿಶೀಲನೆಯಾಗುತ್ತವೆ.
ಅಭ್ಯರ್ಥಿಗಳಿಗೆ ಸೂಚನೆ:
- ಅರ್ಹತೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಮತ್ತು ಪಠ್ಯಕ್ರಮವನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
- ಅರ್ಜಿ ಸಲ್ಲಿಸುವ ಮೊದಲು ಅರ್ಹತೆ ಹಾಗೂ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಾವತಿ ಮಾಡಿ, ಅರ್ಜಿಯ ಪ್ರತಿಯನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಿ.
Direct Links:
- ✅ ನೋಟಿಫಿಕೇಶನ್ ಲಿಂಕ್:
https://quicknewztoday.com/wp-content/uploads/2025/05/KEA_12X28Cms_kankannada.pdf - 🌐 ಅಧಿಕೃತ ವೆಬ್‌ಸೈಟ್:
https://cetonline.karnataka.gov.in/kea/ - 🌐ಅಪ್ಲೈ ಮಾಡಿ: ಆನ್‌ಲೈನ್ ಅರ್ಜಿ ಲಿಂಕ್:
https://cetonline.karnataka.gov.in/dipcet2025/Forms/appchecklist.aspx
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇