DCET 2025: ಎರಡನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ – ಆಗಸ್ಟ್ 2 ರೊಳಗೆ ಪ್ರವೇಶ ಪಡೆಯಲು KEA ಸೂಚನೆ!

DCET 2025: ಎರಡನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ - ಆಗಸ್ಟ್ 2 ರೊಳಗೆ ಪ್ರವೇಶ ಪಡೆಯಲು KEA ಸೂಚನೆ!
Share and Spread the love

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) DCET 2025 ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಒಟ್ಟು 12,282 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಆಗಸ್ಟ್ 1 ರೊಳಗೆ ಶುಲ್ಕ ಪಾವತಿಸಿ, ಆಗಸ್ಟ್ 2 ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು. ಪ್ರವೇಶ ವೇಳಾಪಟ್ಟಿ ಮತ್ತು KEA ಅಧಿಕೃತ ಸೂಚನೆಗಳ ವಿವರಗಳನ್ನು ಇಲ್ಲಿ ಪಡೆಯಿರಿ.

ಬೆಂಗಳೂರು, ಜುಲೈ 30, 2025: ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (DCET-2025) ಯ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಐಎಎಸ್ ಅಧಿಕಾರಿ ಎಚ್. ಪ್ರಸನ್ನ ಅವರು ನೀಡಿದ ಹೇಳಿಕೆಯ ಪ್ರಕಾರ, ಮೊದಲ ಮತ್ತು ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಒಟ್ಟು 12,282 ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ.

1000096585

ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಶುಲ್ಕ ಪಾವತಿಸಿ, ಹಂಚಿಕೆಯಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಎಚ್. ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ.

DCET 2025: ಪ್ರಮುಖ ದಿನಾಂಕಗಳು ಮತ್ತು ಸೂಚನೆಗಳು:

  • ಚಲನ್ ಡೌನ್‌ಲೋಡ್: ಜುಲೈ 30 ರಿಂದ ಜುಲೈ 31ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಶುಲ್ಕ ಪಾವತಿ: ಆಗಸ್ಟ್ 1ರೊಳಗೆ ಶುಲ್ಕ ಪಾವತಿಸಬೇಕು. ಮೊದಲ ಬಾರಿಗೆ ಶುಲ್ಕ ಪಾವತಿಸುವ ಅಥವಾ ಹಿಂದಿನ ಸುತ್ತಿನಿಂದ ಶುಲ್ಕ ಹೊಂದಾಣಿಕೆ ಮಾಡುವ ಅಭ್ಯರ್ಥಿಗಳು 30-07-2025 ರಿಂದ 01-08-2025 ರವರೆಗೆ (ಬ್ಯಾಂಕಿಂಗ್ ಸಮಯಗಳಲ್ಲಿ) ಪಾವತಿಸಬಹುದು.
  • ಸೀಟು ಖಚಿತತೆಯ ಚೀಟಿ ಡೌನ್‌ಲೋಡ್: ಜುಲೈ 30 ಮತ್ತು 31ರಂದು ಸೀಟು ಖಚಿತತೆಯ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಕಾಲೇಜುಗಳಿಗೆ ವರದಿ ಮಾಡಲು ಕೊನೆಯ ದಿನಾಂಕ: ಅಭ್ಯರ್ಥಿಗಳು ತಮ್ಮ ಹಂಚಿಕೆ ಮಾಡಿದ ಕಾಲೇಜುಗಳಿಗೆ ವರದಿ ಮಾಡಲು ಕೊನೆಯ ದಿನಾಂಕ 30-07-2025 ರಿಂದ 02-08-2025.

ಅಭ್ಯರ್ಥಿಗಳು ತಮ್ಮ ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದ್ದು, ಹಂಚಿಕೆಯಾದ ಸೀಟನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದು ಕೆಇಎ ತಿಳಿಸಿದೆ. ಅಲ್ಲದೆ, ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲು ಯಾವುದೇ “ಛಾಯ್ಸ್” (Choice) ಸೌಲಭ್ಯ ಇರುವುದಿಲ್ಲ. ಹಾಗಾಗಿ, ಈ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ದಿನಾಂಕಗಳಂದು ತಮ್ಮ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಂತೆ ನಿರ್ದೇಶಕರು ಸೂಚಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ

Navodaya Vidyalaya Class 11 Admission 2026: ನೇರ ಲಿಂಕ್, ಅರ್ಹತೆ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ

Navodaya Class 9 Lateral Entry 2026: ನವೋದಯ 9ನೇ ತರಗತಿಯ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಅರ್ಜಿ ಆಹ್ವಾನ! ನೇರ ಲಿಂಕ್, ಅರ್ಹತೆ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ!

LKG/UKG in Anganwadi’s: ಪೋಷಕರೇ ಇಲ್ಲಿದೆ ಸಿಹಿ ಸುದ್ದಿ! ಇನ್ಮೇಲೆ ದುಬಾರಿ ಫೀಸ್ ಚಿಂತೆ ಬಿಡಿ ಅಂಗನವಾಡಿಗಳಲ್ಲಿ ಪ್ರಾರಂಭವಾಗಲಿದೆ ಉಚಿತ LKG,UKG ಶಿಕ್ಷಣ!

PM Yasasvi 2025: ಪಿಎಂ ಯಶಸ್ವಿ ವಿದ್ಯಾರ್ಥಿವೇತನ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹1.25 ಲಕ್ಷದವರೆಗೆ ಆರ್ಥಿಕ ನೆರವು!

HDFC Bank Parivartan’s ECSS Scholarship : ಶಿಕ್ಷಣಕ್ಕೆ ಹಣದ ಚಿಂತೆ ಬಿಡಿ! 1 ರಿಂದ PG ವರೆಗೆ HDFC ಬ್ಯಾಂಕ್‌ನಿಂದ ಭರ್ಜರಿ ವಿದ್ಯಾರ್ಥಿವೇತನ! ಹೇಗೆ ಪಡೆಯುವುದು? ಸಂಪೂರ್ಣ ವಿವರ ಇಲ್ಲಿದೆ

Karnataka Scholarships 2025; ಕರ್ನಾಟಕ ಸರ್ಕಾರದ ಪ್ರಮುಖ ವಿದ್ಯಾರ್ಥಿವೇತನ (Scholarship) ಯೋಜನೆಗಳು: ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ!

Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ

ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: 2025ರಲ್ಲಿ NSP ಸ್ಕಾಲರ್‌ಶಿಪ್‌ಗಾಗಿ ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ!

Jawahar Navodaya Vidyalaya Class 6: ಪ್ರತಿಭಾನ್ವಿತ ಗ್ರಾಮೀಣ ಮಕ್ಕಳಿಗೆ ಸುವರ್ಣಾವಕಾಶ: ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ (JNVST 2026-27) ಕ್ಕೆ ಅರ್ಜಿ ಆಹ್ವಾನ!

Navodaya Class 6 Admission 2026: ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 13ರ ತನಕ ವಿಸ್ತರಣೆ!

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs