DRDO GTRE Apprentice Training 2025: ಐಟಿಐ/ಡಿಪ್ಲೊಮಾ ಮತ್ತು ಪದವೀಧರರಿಗೆ ಅರ್ಜಿ ಆಹ್ವಾನ

DRDO GTRE Apprentice Training 2025: ಐಟಿಐ/ಡಿಪ್ಲೊಮಾ ಮತ್ತು ಪದವೀಧರರಿಗೆ ಅರ್ಜಿ ಆಹ್ವಾನ
Share and Spread the love

DRDO GTRE Apprentice Training 2025: ಐಟಿಐ/ಡಿಪ್ಲೊಮಾ ಮತ್ತು ಪದವೀಧರರಿಗೆ ಅರ್ಜಿ ಆಹ್ವಾನ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ಬೆಂಗಳೂರು: ಭಾರತೀಯ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ ಡಿಆರ್‌ಡಿಒ (DRDO)ಯ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (GTRE), ಬೆಂಗಳೂರು—2025 ನೇ ಸಾಲಿನ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ತರಬೇತಿಗೆ ಐಟಿಐ, ಡಿಪ್ಲೊಮಾ ಹಾಗೂ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಯುವ ಪ್ರತಿಭೆಗಳಿಗೆ ಉದ್ಯೋಗಾನಂತರ ಪ್ರಾಯೋಗಿಕ ಪರಿಣತಿ ಗಳಿಸುವ ಉತ್ತಮ ಅವಕಾಶವಿದು.

Follow Us Section

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 8, 2025

DRDO GTRE Apprentice Training 2025

ಅರ್ಹತಾ ಮಾನದಂಡಗಳು:

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಐಟಿಐ, ಡಿಪ್ಲೊಮಾ, ಬಿಎ, ಬಿಕಾಂ, ಬಿಸಿಎ, ಬಿಎಸ್ಸಿ, ಬಿಇ ಅಥವಾ ಬಿಟೆಕ್ ಪದವಿ ಪೂರ್ಣಗೊಳಿಸಿರಬೇಕು.
  • ವಯೋಮಿತಿ: 18 ರಿಂದ 27 ವರ್ಷಗಳ ನಡುವೆ (ಆಸಕ್ತ ಅಭ್ಯರ್ಥಿಗಳು ಮೇ 8, 2025ರೊಳಗೆ ಈ ವಯೋಮಿತಿಯೊಳಗಿರಬೇಕು). ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.
  • ಅನುಭವ: ಈ ಹಿಂದೆ apprenticeship ಪೂರೈಸಿರುವ ಅಥವಾ ಪ್ರಸ್ತುತ apprenticeship ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿಲ್ಲ.

ಸ್ಟೈಪೆಂಡ್ ವಿವರಗಳು:

  • ಬಿಇ/ಬಿಟೆಕ್ ಹಾಗೂ ತಾಂತ್ರಿಕೇತರ ಪದವೀಧರರಿಗೆ: ರೂ. 9,000
  • ಡಿಪ್ಲೊಮಾ ಪದವೀಧರರಿಗೆ: ರೂ. 8,000
  • ಐಟಿಐ ಉತ್ತೀರ್ಣರಿಗೆ: ರೂ. 7,000

ಆಯ್ಕೆ ಪ್ರಕ್ರಿಯೆ:

  • ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಹಾಗೂ ಅಂಕಗಳಿಗೆ ಅನುಗುಣವಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
  • ತದನಂತರ ಅಂತಿಮವಾಗಿ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ವಿಭಾಗವಾರು ಹುದ್ದೆಗಳ ವಿವರ:

ತಾಂತ್ರಿಕೇತರ ಪದವಿ (Non-Technical Graduate): 30 ಹುದ್ದೆಗಳು

  • ಬಿಕಾಂ – 10
  • ಬಿಎಸ್ಸಿ – 5
  • ಬಿಸಿಎ – 5
  • ಬಿಎ – 5
  • ಬಿಎಡ್ – 5

ಡಿಪ್ಲೊಮಾ/ಇಂಜಿನಿಯರಿಂಗ್: 20 ಹುದ್ದೆಗಳು

  • ಮೆಕಾನಿಕಲ್/ಪ್ರೊಡಕ್ಷನ್/ಟೂಲ್ ಆ್ಯಂಡ್ ಡೈ ಡಿಸೈನ್ – 10
  • ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್/ಇನ್‌ಸ್ಟ್ರುಮೆಂಟೇಷನ್ – 7
  • ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಇಂಜಿನಿಯರಿಂಗ್/ಕಂಪ್ಯೂಟರ್ ನೆಟ್ವರ್ಕಿಂಗ್ – 3

ಐಟಿಐ: 25 ಹುದ್ದೆಗಳು

  • ಮಷಿನಿಸ್ಟ್ – 3
  • ಫಿಟ್ಟರ್ – 4
  • ಟರ್ನರ್ – 3
  • ಎಲೆಕ್ಟ್ರಿಶಿಯನ್ – 3
  • ವೆಲ್ಡರ್ – 2
  • ಶೀಟ್ ಮೆಟಲ್ ವರ್ಕರ್ – 2
  • ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA)– 7

ಅರ್ಜಿ ಸಲ್ಲಿಸುವ ವಿಧಾನ:

  • ಡಿಪ್ಲೊಮಾ ಮತ್ತು ಪದವೀಧರರು: nats.education.gov.in ನಲ್ಲಿ ಅರ್ಜಿ ಸಲ್ಲಿಸಬೇಕು.
  • ಐಟಿಐ ಅರ್ಹರು: apprenticeshipindia.org ಮೂಲಕ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ, ಅರ್ಜಿದಾರರು ತಮ್ಮ ಡಾಕ್ಯುಮೆಂಟ್‌ಗಳನ್ನು hrd.gtre@gov.in ಗೆ ಇಮೇಲ್ ಮೂಲಕ ಕಳುಹಿಸಬಹುದು.
  • ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಿರ್ದೇಶಕರು, ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (GTRE), DRDO, ಪೋಸ್ಟ್ ಬಾಕ್ಸ್ ಸಂಖ್ಯೆ 9302, ಬೆಂಗಳೂರು – 560093
  • ವಿಳಾಸಕ್ಕೆ ಮೇ 8ರೊಳಗೆ ಕಳುಹಿಸಬೇಕು.

Click Here:For More Information

ಪ್ರಮುಖ ಸೂಚನೆಗಳು:

  • ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
  • ಈ ತರಬೇತಿ ಕಾರ್ಯಕ್ರಮವು 12 ತಿಂಗಳ ಅವಧಿಯಾಗಿದೆ.
  • ತರಬೇತಿ ಪೂರ್ಣಗೊಂಡ ನಂತರ, DRDOನಲ್ಲಿ ಶಾಶ್ವತ ಉದ್ಯೋಗದ ಭರವಸೆ ಇಲ್ಲ.
  • ಅರ್ಜಿ ಸಲ್ಲಿಸುವ ಮುನ್ನ, ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಅಗತ್ಯ.​

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಪ್ರಾರಂಭ: ಏಪ್ರಿಲ್ 9, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 8, 2025
  • ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: ಮೇ 23, 2025
  • ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: ಜೂನ್ 20, 2025
  • ತರಬೇತಿ ಪ್ರಾರಂಭ ದಿನಾಂಕ: ಜುಲೈ 7, 2025

ಈ ಶಿಶಿಕ್ಷು ತರಬೇತಿ ಅವಕಾಶವು ಯುವ ಪ್ರತಿಭೆಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಉತ್ತಮ ವೇದಿಕೆಯಾಗಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಸಬಹುದು

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗NPCIL ನಲ್ಲಿ 400 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಏ.30ರೊಳಗೆ ಅರ್ಜಿ ಸಲ್ಲಿಸಿ

🔗NTPC ಅಂಗ ಸಂಸ್ಥೆ NGEL Recuirtment 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs