ವಿದ್ಯುತ್ (ತಿದ್ದುಪಡಿ) ಮಸೂದೆ 2025: ಖಾಸಗೀಕರಣಕ್ಕೆ ದಾರಿ! ಕರ್ನಾಟಕದಲ್ಲಿ ರೈತರ ಹಾಗೂ ಬಡ ಗ್ರಾಹಕರ ಉಚಿತ ವಿದ್ಯುತ್ ರದ್ದಾಗುವ ಭೀತಿ!

ವಿದ್ಯುತ್ (ತಿದ್ದುಪಡಿ) ಮಸೂದೆ 2025: ಖಾಸಗೀಕರಣಕ್ಕೆ ದಾರಿ! ಕರ್ನಾಟಕದಲ್ಲಿ ರೈತರ ಹಾಗೂ ಬಡ ಗ್ರಾಹಕರ ಉಚಿತ ವಿದ್ಯುತ್ ರದ್ದಾಗುವ ಭೀತಿ!

ವಿದ್ಯುತ್ (ತಿದ್ದುಪಡಿ) ಮಸೂದೆ 2025 (The Electricity (Amendment) Bill 2025) ಖಾಸಗೀಕರಣದ ದಾರಿಯನ್ನು ತೆರೆಯಲಿದೆ. ರೈತರಿಗೆ ಉಚಿತ ವಿದ್ಯುತ್ ಯೋಜನೆ ರದ್ದಾಗುವ ಭೀತಿ ಹೆಚ್ಚಾಗಿದೆ. ಈ ಮಸೂದೆ ಜಾರಿಗೆ ಬಂದರೆ, ಕರ್ನಾಟಕದ ಎಸ್ಕಾಂಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು/ಚೆನ್ನೈ: ಕೇಂದ್ರ ಸರ್ಕಾರ ಮಂಡಿಸಲಿರುವ ‘ವಿದ್ಯುತ್ (ತಿದ್ದುಪಡಿ) ಮಸೂದೆ 2025’ ದೇಶದ ಇಂಧನ ವಲಯದ ಸಂಪೂರ್ಣ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ವಿದ್ಯುತ್ ಇಂಜಿನಿಯರ್‌ಗಳ ಸಂಘಟನೆ ಅಖಿಲ ಭಾರತ ವಿದ್ಯುತ್ ಇಂಜಿನಿಯರ್ಸ್ ಫೆಡರೇಶನ್ (AIPEF) ಎಚ್ಚರಿಸಿದೆ. ಈ ಮಸೂದೆಯು ಜಾರಿಯಾದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರಿಗೆ ವಿದ್ಯುತ್ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ವಿದ್ಯುತ್ (ತಿದ್ದುಪಡಿ) ಮಸೂದೆ 2025 (The Electricity (Amendment) Bill 2025) ಪ್ರಮುಖ ಅಂಶಗಳು: ಖಾಸಗಿ ಕಂಪನಿಗಳಿಗೆ ಸರ್ಕಾರಿ ನೆಟ್‌ವರ್ಕ್ ಬಳಕೆ ಹಕ್ಕು

AIPEF ಅಧ್ಯಕ್ಷ ಶೈಲೇಂದ್ರ ದುಬೆ ಅವರ ಪ್ರಕಾರ, ತಿದ್ದುಪಡಿಯ ವಿಭಾಗ 14, 42 ಮತ್ತು 43 ರ ಅಡಿಯಲ್ಲಿ ಖಾಸಗಿ ಕಂಪನಿಗಳಿಗೆ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಗಳ ಜಾಲವನ್ನು ಬಳಸುವ ಹಕ್ಕು ನೀಡಲಾಗಿದೆ.

  • ಖಾಸಗಿ ಕಂಪನಿಗಳು ಸರ್ಕಾರಿ ಜಾಲದ ಮೂಲಕ ವಿದ್ಯುತ್ ಪೂರೈಸಲು ಕೇವಲ ನಾಮಮಾತ್ರದ ‘ವೀಲಿಂಗ್ ಶುಲ್ಕ’ ಪಾವತಿಸಬೇಕು.
  • ಆದರೆ, ಇವು ಲಾಭದಾಯಕ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಮಾತ್ರ ವಿದ್ಯುತ್ ಪೂರೈಸುವ ಸಾಧ್ಯತೆ ಇದೆ.
  • ಇದರ ಪರಿಣಾಮವಾಗಿ ರೈತರು ಮತ್ತು ಬಡ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಜವಾಬ್ದಾರಿ ಸರ್ಕಾರದ ವಿದ್ಯುತ್ ವಿತರಣಾ ಸಂಸ್ಥೆಗಳ (Discoms) ಮೇಲೆ ಉಳಿಯುತ್ತದೆ.

“ಸರ್ಕಾರಿ ಕಂಪನಿಗಳು ರೈತರು ಹಾಗೂ ಬಡ ಗ್ರಾಹಕರಿಗೆ ವಿದ್ಯುತ್ ನೀಡಬೇಕಾಗುತ್ತದೆ, ಆದರೆ ಲಾಭದಾಯಕ ಗ್ರಾಹಕರನ್ನು ಖಾಸಗಿ ಕಂಪನಿಗಳು ಕಸಿದುಕೊಳ್ಳುತ್ತವೆ. ಇದು ಸರ್ಕಾರಿ ವಿತರಣಾ ಕಂಪನಿಗಳ ದಿವಾಳಿತನ ದಾರಿ ಪಡೆಯಲಿದೆ .” ಎಂದು AIPEF ಅಧ್ಯಕ್ಷ ಶೈಲೇಂದ್ರ ದುಬೆ ಅವರು ಎಚ್ಚರಿಕೆ ನೀಡಿದ್ದಾರೆ.

ಕ್ರಾಸ್-ಸಬ್ಸಿಡಿ ರದ್ದು: ರೈತರಿಗೆ ಮತ್ತು ಬಡ ಗ್ರಾಹಕರಿಗೆ ಭಾರೀ ಹೊರೆ:

ತಿದ್ದುಪಡಿಯ ವಿಭಾಗ 61(g) ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಕ್ರಾಸ್-ಸಬ್ಸಿಡಿ ಸಂಪೂರ್ಣ ರದ್ದುಗೊಳ್ಳಲಿದೆ. ಅಂದರೆ, ಕೈಗಾರಿಕಾ ಗ್ರಾಹಕರಿಂದ ಹೆಚ್ಚುವರಿ ದರ ವಸೂಲಿ ಮಾಡಿ ರೈತರಿಗೆ ಮತ್ತು ಬಡವರಿಗೆ ಸಬ್ಸಿಡಿ ನೀಡುವ ವ್ಯವಸ್ಥೆ ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಮಸೂದೆಯ ಪ್ರಕಾರ ವಿದ್ಯುತ್ ದರಗಳು “Cost Reflective” ಆಗಿರಬೇಕು — ಅಂದರೆ ಯಾವುದೇ ಗ್ರಾಹಕರಿಗೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಬಾರದು, ಇವುಗಳ ಜೊತೆಗೆ

AIPEF ವರದಿ ಪ್ರಕಾರ —

  • 5 (HP Pump Set) ಅಶ್ವಶಕ್ತಿಯ ಪಂಪ್‌ಸೆಟ್‌ ಬಳಸಿ ಕೃಷಿ ಮಾಡುವ ರೈತನಿಗೆ ಪ್ರತಿ ತಿಂಗಳು ₹12,000 ವಿದ್ಯುತ್ ಬಿಲ್ ಬರುವ ಸಾಧ್ಯತೆ ಇದೆ.
  • ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪ್ರತಿ ಯೂನಿಟ್‌ಗೆ ₹8 ರಿಂದ ₹10 ದರ ಅನಿವಾರ್ಯವಾಗಲಿದೆ.

ಕರ್ನಾಟಕದಲ್ಲಿ ಪರಿಣಾಮ: ರೈತರಿಗೆ ಉಚಿತ ವಿದ್ಯುತ್ ಯೋಜನೆಗೆ ಧಕ್ಕೆಯ ಆತಂಕ

ಕರ್ನಾಟಕ ಸರ್ಕಾರವು ಪ್ರಸ್ತುತ ರೈತರಿಗೆ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಿದೆ. ಈ ತಿದ್ದುಪಡಿ ಮಸೂದೆ ಜಾರಿಯಾದರೆ, ಕ್ರಾಸ್-ಸಬ್ಸಿಡಿ ರದ್ದಾದ ಕಾರಣದಿಂದ ಈ ಯೋಜನೆಗಳು ನಿಲ್ಲುವ ಅಥವಾ ಆರ್ಥಿಕ ಒತ್ತಡ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು.

  • ಉಚಿತ ವಿದ್ಯುತ್ ರದ್ದು: ರೈತರು ಕೃಷಿ ಪಂಪ್‌ಸೆಟ್ ಬಳಕೆಗಾಗಿ ಸಂಪೂರ್ಣ ದರ ಪಾವತಿಸಬೇಕಾಗಬಹುದು.
  • ತಿಂಗಳ ಖರ್ಚು: ಒಂದು ಪಂಪ್‌ಸೆಟ್‌ನಿಗೆ ಪ್ರತಿ ತಿಂಗಳು ₹10,000 ರಿಂದ ₹12,000 ಬಿಲ್ ಬರುವ ಸಾಧ್ಯತೆ ಇದೆ.
  • ಸಬ್ಸಿಡಿ ಭಾರ: ರಾಜ್ಯ ಸರ್ಕಾರವೇ ಸಬ್ಸಿಡಿ ನೀಡಲು ಸಿದ್ಧವಿಲ್ಲದಿದ್ದರೆ, ರೈತರು ನೇರ ಹೊರೆ ಎದುರಿಸಬೇಕಾಗುತ್ತದೆ.

ಸಾಮಾನ್ಯ ಗ್ರಾಹಕರಿಗೂ ದರ ಏರಿಕೆಯ ಶಾಕ್ ಮತ್ತು ಉಚಿತ ವಿದ್ಯುತ್ ರದ್ದಾಗುವ ಭೀತಿ!

ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಮತ್ತು ಮಧ್ಯಮ ವರ್ಗದ ಮನೆಗಳಿಗೆ ಕ್ರಾಸ್-ಸಬ್ಸಿಡಿಯ ಪ್ರಯೋಜನದಿಂದ ವಿದ್ಯುತ್ ಕಡಿಮೆ ದರದಲ್ಲಿ ಸಿಗುತ್ತಿದೆ. ಆದರೆ ಈ ವ್ಯವಸ್ಥೆ ರದ್ದಾದರೆ,

  • ಗೃಹಬಳಕೆಯ ಗ್ರಾಹಕರಿಗೆ ದರಗಳು ₹8–₹10 ಪ್ರತಿ ಯೂನಿಟ್ ತಲುಪುವ ಸಾಧ್ಯತೆ ಇದೆ.
  • ಖಾಸಗಿ ಕಂಪನಿಗಳು ಲಾಭದಾಯಕ ನಗರ ಪ್ರದೇಶಗಳ (ಬೆಂಗಳೂರು, ಮಂಗಳೂರು) ಗ್ರಾಹಕರನ್ನು ಮಾತ್ರ ಗುರಿಯಾಗಿಸಬಹುದು, ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಗ್ರಾಹಕರಿಗೆ ನಿರ್ಲಕ್ಷ್ಯ ಉಂಟಾಗಬಹುದು.

ಕರ್ನಾಟಕದ ಎಸ್ಕಾಂಗಳ ಆರ್ಥಿಕ ಸ್ಥಿತಿ ಮತ್ತಷ್ಟು ದುರ್ಬಲ:

ಕರ್ನಾಟಕದ BESCOM, MESCOM, HESCOM, GESCOM ಮತ್ತು CESC ಸೇರಿದಂತೆ ಸರ್ಕಾರಿ ವಿತರಣಾ ಸಂಸ್ಥೆಗಳು ಈಗಾಗಲೇ ನಷ್ಟದಲ್ಲಿವೆ. ಹೊಸ ಮಸೂದೆಯು —

  • ನೆಟ್‌ವರ್ಕ್ ನಿರ್ವಹಣೆ ಮತ್ತು ಅಭಿವೃದ್ಧಿಯ ಹೊರೆ ಸರ್ಕಾರಿ ಸಂಸ್ಥೆಗಳ ಮೇಲೆ ಉಳಿಸುತ್ತದೆ.
  • ಖಾಸಗಿ ಕಂಪನಿಗಳು ಲಾಭದಾಯಕ ಗ್ರಾಹಕರನ್ನು ತೆಗೆದುಕೊಂಡರೆ, Discom‌ಗಳು ಕೇವಲ ನಷ್ಟದ ರೈತರು ಮತ್ತು ಬಡ ಗ್ರಾಹಕರಿಗೆ ವಿದ್ಯುತ್ ಪೂರೈಸಬೇಕಾಗುತ್ತದೆ.
  • ಇದರ ಪರಿಣಾಮವಾಗಿ ಎಸ್ಕಾಂಗಳು ಆರ್ಥಿಕ ದಿವಾಳಿಯಾಗುವ ಅಪಾಯ ಎದುರಿಸಬಹುದು.

ತಜ್ಞರ ಪ್ರಕಾರ, “ಕರ್ನಾಟಕದ ವಿದ್ಯುತ್ ವಲಯದ ಸಬ್ಸಿಡಿ ನೀತಿಗಳ ಮೇಲೆ ಈ ಮಸೂದೆ ದೊಡ್ಡ ಹೊಡೆತ ನೀಡಲಿದೆ. ಉಚಿತ ವಿದ್ಯುತ್ ಯೋಜನೆಗಳ ಮುಂದಿನ ಸ್ಥಿತಿ ಅನುಮಾನಾಸ್ಪದ ಆಗಲಿದೆ.”

ಸಂವಿಧಾನಾತ್ಮಕ ವಿವಾದ: ರಾಜ್ಯಗಳ ಹಕ್ಕಿಗೆ ಧಕ್ಕೆಯ ಆತಂಕ!

ವಿದ್ಯುತ್ ವಿಚಾರವು ಸಂಯುಕ್ತ ಪಟ್ಟಿ (Concurrent List) ಯಲ್ಲಿದೆ. ಆದರೆ ಈ ಮಸೂದೆಯು ದರ ನಿರ್ಧಾರ ಮತ್ತು ವಿತರಣೆಯಲ್ಲಿ ಕೇಂದ್ರದ ನೇರ ಹಸ್ತಕ್ಷೇಪಕ್ಕೆ ಅವಕಾಶ ನೀಡುತ್ತದೆ.
AIPEF ಪ್ರಕಾರ, ಇದು ಸಂವಿಧಾನದ ಸಂಯುಕ್ತ ಸ್ಫೂರ್ತಿ (Federal Spirit)ಗೆ ವಿರುದ್ಧವಾಗಿದೆ. ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಈ ಕ್ರಮದ ವಿರುದ್ಧ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಲು ಸಜ್ಜಾಗಿವೆ.

Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

ಕಚೇರಿಗೆ ಹೋಗೋ ಕಿರಿಕಿರಿ ಬಿಡಿ! UIDAI SSUP Portal ಮೂಲಕ ಇನ್ನೂ ಮನೆಯಿಂದಲೇ ಹೆಸರು, ವಿಳಾಸ ಮತ್ತು ಫೋಟೋ ಬದಲಾಯಿಸಿ!

PMAY-U 2.0 ಬಂಪರ್ ಕೊಡುಗೆ: ₹1.80 ಲಕ್ಷ ಸಬ್ಸಿಡಿ; ಗೃಹ ಸಾಲದ ಮೇಲೆ ₹4 ಲಕ್ಷದವರೆಗೆ ಲಾಭ ಪಡೆಯುವುದು ಹೇಗೆ

6 ರಾಜ್ಯಗಳಿಗೆ ಕೇಂದ್ರದಿಂದ ಎಚ್ಚರಿಕೆ: ವಿದ್ಯುತ್ ಕಂಪನಿಗಳ (DISCOM) ಖಾಸಗೀಕರಣ ಕಡ್ಡಾಯ, ಇಲ್ಲವಾದರೆ ಆರ್ಥಿಕ ನೆರವು ಕಟ್!

Birth Certificate online: ಇನ್ಮುಂದೆ ಕಚೇರಿಗಳಿಗೆ ಅಲೆಯಬೇಕಿಲ್ಲ! ಜನನ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲೇ ಸುಲಭವಾಗಿ ಡೌನ್‌ಲೋಡ್ ಮಾಡಿ!

EPFO New Rules 2025: PF ಹಣಕ್ಕಾಗಿ ಉದ್ಯೋಗದಾತರ ಅನುಮತಿ ಇನ್ಮುಂದೆ ಬೇಕಿಲ್ಲ! ಪಿಎಫ್‌ ವರ್ಗಾವಣೆ, ವಿತ್‌ಡ್ರಾಗೆ ಹೊಸ ರೂಲ್ಸ್!

LPG Portability: ಕಳಪೆ ಸೇವೆಗೆ ಗುಡ್‌ಬೈ! ಇನ್ಮುಂದೆ ಮೊಬೈಲ್ SIM ನಂತೆ ಗ್ಯಾಸ್ ಸಂಪರ್ಕವನ್ನು ಪೋರ್ಟ್ ಮಾಡಿ-ವಿಳಂಬವಿಲ್ಲದೆ ಸಿಲಿಂಡರ್ ಪಡೆಯಿರಿ!

KUSUM-B Subsidy Scheme: ಕೇವಲ ಶೇ.20% ವೆಚ್ಚದಲ್ಲಿ ಸೌರ ಪಂಪ್‌ಸೆಟ್‌ಗಳು! ಸಿದ್ದರಾಮಯ್ಯನವರಿಂದ ‘ಕುಸುಮ್ ಬಿ’ ಯೋಜನೆಗೆ ಗ್ರೀನ್ ಸಿಗ್ನಲ್!

PMFBY: ರೈತರಿಗೆ ಕೊನೆಯ ಅವಕಾಶ: ಫಸಲ್ ಬಿಮಾ ನೋಂದಣಿಗೆ ಜುಲೈ 31ರ ಗಡುವು! ಬೆಳೆ ವಿಮೆ ಮಾಡಿಸಿಕೊಳ್ಳಿರಿ ವಿಮಾ ಭದ್ರತೆ ಪಡೆಯಿರಿ!

Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?

DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್‌ಗಳು!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು ನಮ್ಮ Facebook, WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

Follow Us Section
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs