Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ? ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಮಸೂದೆ 2025 ಹಿಂಪಡೆಯಲು ಆಗ್ರಹ; ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ!

  • Picture of Gundijalu Shwetha By Gundijalu Shwetha
  • Published On: February 12, 2026
Electricity Amendment Bill 2025 strike: ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ? ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಮಸೂದೆ 2025 ಹಿಂಪಡೆಯಲು ಆಗ್ರಹ; ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ!

Electricity Amendment Bill 2025 strike: ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಮಸೂದೆ 2025 ಮತ್ತು ರಾಷ್ಟ್ರೀಯ ವಿದ್ಯುತ್ ನೀತಿ 2026ರ ವಿರುದ್ಧ ದೇಶಾದ್ಯಂತ ವಿದ್ಯುತ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಖಾಸಗೀಕರಣ, ಸ್ಮಾರ್ಟ್ ಮೀಟರ್ ಮತ್ತು ಸಬ್ಸಿಡಿ ಕಡಿತದ ಬಗ್ಗೆ ನೀವು ತಿಳಿಯಬೇಕಾದ ಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯುತ್ ಕ್ಷೇತ್ರ ಮಾರಾಟಕ್ಕಿದೆಯಾ? ಇಂದಿನ ಮುಷ್ಕರದ ಅಸಲಿ ಸತ್ಯ ಇಲ್ಲಿದೆ!

ಬೆಂಗಳೂರು: ಇಂದು (ಫೆಬ್ರವರಿ 12, 2026) ಇಡೀ ದೇಶದ ವಿದ್ಯುತ್ ವಲಯದಲ್ಲಿ ಒಂದು ರೀತಿಯ ಸಂಚಲನ ಉಂಟಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮನೆಯಲ್ಲಿ ಕರೆಂಟ್ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ವಿದ್ಯುತ್ ಕಚೇರಿಗಳ ಮುಂದೆ ಮಾತ್ರ ‘ಖಾಸಗೀಕರಣ ಬೇಡ’ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ Electricity Amendment Bill 2025 (ವಿದ್ಯುತ್ ತಿದ್ದುಪಡಿ ಮಸೂದೆ) ಮತ್ತು ರಾಷ್ಟ್ರೀಯ ವಿದ್ಯುತ್ ನೀತಿ 2026ರ ವಿರುದ್ಧ ದೇಶಾದ್ಯಂತ ಸುಮಾರು 27 ಲಕ್ಷ ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳು ಕೆಲಸ ಬಿಟ್ಟು ಬೀದಿಗಿಳಿದಿದ್ದಾರೆ.

ಕರ್ನಾಟಕದಲ್ಲೂ ಇದರ ಬಿಸಿ ಜೋರಾಗಿಯೇ ತಟ್ಟಿದೆ. ನಮ್ಮ ರಾಜ್ಯದ ಎಸ್ಕಾಂ (ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ) ನೌಕರರು, ಇಂಜಿನಿಯರ್‌ಗಳು ಕಚೇರಿ ಕೆಲಸಗಳನ್ನು ಬದಿಗಿಟ್ಟು ಪ್ರತಿಭಟನೆಗೆ ಧುಮುಕಿದ್ದಾರೆ. ಇದು ಕೇವಲ ನೌಕರರ ಹೋರಾಟವಲ್ಲ, ಇದು ರಾಜ್ಯದ ಪ್ರತಿಯೊಬ್ಬ ವಿದ್ಯುತ್ ಗ್ರಾಹಕನ ಉಳಿವಿನ ಪ್ರಶ್ನೆ ಎಂದು ನೌಕರರ ಸಂಘಗಳು ಹೇಳುತ್ತಿವೆ.

ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ? ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಮಸೂದೆ 2025 ಹಿಂಪಡೆಯಲು ಆಗ್ರಹ; ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ!
WhatsApp Channel
Join Now
Telegram Channel
Join Now

ಏನಿದು ವಿವಾದ? ಸರ್ಕಾರ ಏನು ಮಾಡುತ್ತಿದೆ?

ವಿಷಯ ಇಷ್ಟೇ, ಕೇಂದ್ರ ಸರ್ಕಾರವು ವಿದ್ಯುತ್ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತರುತ್ತೇವೆ ಎಂದು ಹೇಳಿ ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಆದರೆ ನೌಕರರ ಸಂಘಟನೆಗಳ ಪ್ರಕಾರ, ಇದು ಸುಧಾರಣೆ ಅಲ್ಲ, ಬದಲಾಗಿ ‘ಮಾರಾಟ’. ಸರ್ಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ಕಂಪನಿಗಳನ್ನು ಖಾಸಗಿ ಬಂಡವಾಳಶಾಹಿಗಳಿಗೆ (ಅಂಬಾನಿ, ಅದಾನಿ ಅಂತಹ ಕಾರ್ಪೊರೇಟ್ ಕಂಪನಿಗಳಿಗೆ) ಹಸ್ತಾಂತರಿಸುವ ಹುನ್ನಾರ ಇದು ಎಂಬುದು ಇವರ ನೇರ ಆರೋಪ.

ವಿದ್ಯುತ್ ತಿದ್ದುಪಡಿ ಮಸೂದೆ 2025 ಏನು?

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿದ್ಯುತ್ (ತಿದ್ದುಪಡಿ) ಮಸೂದೆ 2025ಯಲ್ಲಿ ವಿತರಣಾ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವ್ಯವಸ್ಥೆ ತರಲು ಹಾಗೂ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ.

ಆದರೆ ನೌಕರರ ಸಂಘಟನೆಗಳ ಅಭಿಪ್ರಾಯದಂತೆ, ಇದು ಕ್ರಮೇಣ ಖಾಸಗೀಕರಣಕ್ಕೆ ದಾರಿ ಮಾಡಿಕೊಡಬಹುದು ಮತ್ತು ಸರ್ಕಾರಿ ಡಿಸ್ಕಾಂಗಳಿಗೆ ಆರ್ಥಿಕ ಒತ್ತಡ ಹೆಚ್ಚಿಸಬಹುದು.

ರಾಷ್ಟ್ರೀಯ ವಿದ್ಯುತ್ ನೀತಿ 2026 ಬಗ್ಗೆ ಏನು ವಿವಾದ?

ರಾಷ್ಟ್ರೀಯ ವಿದ್ಯುತ್ ನೀತಿ 2026 ಮೂಲಕ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ. ಆದರೆ, ಸಬ್ಸಿಡಿ ಕಡಿತ, ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವುದು ಹಾಗೂ ಖಾಸಗಿ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕ್ರಮಗಳ ಬಗ್ಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೆಲ ಸಂಘಟನೆಗಳು ಹೇಳುವಂತೆ, ಈ ಕ್ರಮಗಳು ಭವಿಷ್ಯದಲ್ಲಿ ಗ್ರಾಹಕರ ಮೇಲೆ ಆರ್ಥಿಕ ಭಾರ ಹೆಚ್ಚಿಸಬಹುದು ಎಂಬ ಆತಂಕವೂ ಇದೆ.

ಖಾಸಗೀಕರಣದ ಬಗ್ಗೆ ನೌಕರರ ಆತಂಕ

ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದರೆ:

  • ಸರ್ಕಾರಿ ಉದ್ಯೋಗಗಳ ಭದ್ರತೆ ಕುಗ್ಗುವ ಸಾಧ್ಯತೆ
  • ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಗುಣಮಟ್ಟದ ಪ್ರಶ್ನೆ
  • ಸಬ್ಸಿಡಿ ವ್ಯವಸ್ಥೆಯಲ್ಲಿ ಬದಲಾವಣೆ
  • ದರ ನಿರ್ಧಾರದಲ್ಲಿ ಬದಲಾವಣೆ ಸಾಧ್ಯತೆ

ಇವೆಲ್ಲವು ಪ್ರಮುಖ ಆತಂಕಗಳಾಗಿ ಹೊರಹೊಮ್ಮಿವೆ.

ಈಗಾಗಲೇ ಚಂಡೀಗಢ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಖಾಸಗೀಕರಣದ ಪ್ರಯೋಗ ಮಾಡಲಾಗಿದೆ. ಅಲ್ಲಿನ ಜನರು ಮತ್ತು ನೌಕರರು ಪಡುತ್ತಿರುವ ಪಾಡು ನೋಡಿದರೆ ಎಂಥವರಿಗೂ ಭಯವಾಗುತ್ತದೆ. ಲಾಭದಲ್ಲಿರುವ ಪ್ರದೇಶಗಳನ್ನು ಖಾಸಗಿಯವರಿಗೆ ಕೊಟ್ಟು, ನಷ್ಟದಲ್ಲಿರುವ ಹಳ್ಳಿಗಳನ್ನು ಸರ್ಕಾರಿ ಎಸ್ಕಾಂಗಳಿಗೆ ಉಳಿಸುವ ತಂತ್ರವೇ ಈ ಹೊಸ ಮಸೂದೆಗಳ ಹೂರಣ.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ (KEBEA) ಕರೆ

ನಮ್ಮ ರಾಜ್ಯದ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘ (ರಿ), ಬೆಂಗಳೂರು, ಇಂದಿನ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಬೆಂಗಳೂರಿನಲ್ಲಿ ಬೆಳಿಗ್ಗೆ 10 ಗಂಟೆಗೆ ಆನಂದರಾವ್ ವೃತ್ತದಲ್ಲಿರುವ ‘ಇಂಧನ ಭವನ’ದ (KPTCL ಕೇಂದ್ರ ಕಚೇರಿ) ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದಾರೆ, ಇನ್ನುಳಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು, ವಿಭಾಗೀಯ ಕಚೇರಿಗಳ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ.

“ವಿದ್ಯುತ್ ಸುಧಾರಣಾ ಕಾಯ್ದೆ-2026 ರ ಮೂಲಕ ಸರ್ಕಾರಿ ಕಂಪನಿಗಳನ್ನು ಖಾಸಗೀಕರಣಗೊಳಿಸುವುದನ್ನು ನಾವು ಸಹಿಸುವುದಿಲ್ಲ. ಇದು ಜನವಿರೋಧಿ ನೀತಿ,” ಎಂದು ಸಂಘ ಸ್ಪಷ್ಟಪಡಿಸಿದೆ.

ವಿದ್ಯುತ್ ನೌಕರರ ಮುಷ್ಕರಕ್ಕೆ ಪ್ರಮುಖ ಕಾರಣಗಳು (ನೌಕರರ ಬೇಡಿಕೆಗಳು)

Electricity Amendment Bill 2025 strike: ಈ ಮುಷ್ಕರ ಸುಮ್ಮನೆ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ವಿದ್ಯುತ್ ನೀತಿ 2026 (National Electricity Policy 2026) ಮತ್ತು ತಿದ್ದುಪಡಿ ಮಸೂದೆಯಲ್ಲಿರುವ ಕೆಲವು ಅಪಾಯಕಾರಿ ಅಂಶಗಳನ್ನು ವಿರೋಧಿಸಿ ಈ 8 ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ:

  1. ವಿದ್ಯುತ್ ತಿದ್ದುಪಡಿ ಮಸೂದೆ 2025 ವಾಪಸ್ ಪಡೆಯಿರಿ: ಈ ಮಸೂದೆಯು ವಿದ್ಯುತ್ ವಿತರಣೆಯಲ್ಲಿ ‘ಮಲ್ಟಿ ಲೈಸೆನ್ಸ್’ (Multi-licensing) ತರಲಿದೆ. ಅಂದರೆ, ಒಂದೇ ಏರಿಯಾದಲ್ಲಿ ಸರ್ಕಾರಿ ಎಸ್ಕಾಂ ಜೊತೆಗೆ ಖಾಸಗಿ ಕಂಪನಿಯೂ ಕರೆಂಟ್ ಕೊಡಬಹುದು. ಕೇಳೋಕೆ ಚೆನ್ನಾಗಿದೆ ಅಲ್ವಾ? ಆದರೆ ಇಲ್ಲಿರೋ ಮರ್ಮ ಬೇರೆ. ಖಾಸಗಿಯವರು ಲಾಭ ಬರುವ ಕೈಗಾರಿಕೆಗಳು, ಕಮರ್ಷಿಯಲ್ ಏರಿಯಾಗಳಿಗೆ ಮಾತ್ರ ಕರೆಂಟ್ ಕೊಡ್ತಾರೆ. ಬಡವರು, ರೈತರು ಇರುವ ಕಡೆ ಅವರು ಬರಲ್ಲ. ಆಗ ಸರ್ಕಾರಿ ಎಸ್ಕಾಂಗಳು ಬರೀ ನಷ್ಟ ಅನುಭವಿಸಿ ಮುಚ್ಚಿಹೋಗುತ್ತವೆ.
  2. ಖಾಸಗೀಕರಣ ನಿಲ್ಲಿಸಿ: ‘ವಿದ್ಯುತ್ ಖಾಸಗೀಕರಣ ಬೇಡ’ (No Privatization of Electricity): ದೇಶದ ಆಸ್ತಿಯಾಗಿರುವ ವಿದ್ಯುತ್ ವಲಯವನ್ನು PPP ಮಾಡೆಲ್ ಹೆಸರಿನಲ್ಲಿ ಮಾರಾಟ ಮಾಡಬಾರದು. ಇದು ದೇಶದ ಭದ್ರತೆಗೂ ಅಪಾಯ. privatization of electricity India
  3. ಸ್ಮಾರ್ಟ್ ಮೀಟರ್ ಹಾವಳಿ ಬೇಡ: ಬಲವಂತವಾಗಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇದು ಖಾಸಗಿ ಕಂಪನಿಗಳಿಗೆ ದಾರಿ ಮಾಡಿಕೊಡುವ ಕುತಂತ್ರ. ರೈತರ ಪಂಪ್‌ಸೆಟ್‌ಗಳಿಗೂ ಮೀಟರ್ ಬಂದರೆ, ನಾಳೆ ಉಚಿತ ವಿದ್ಯುತ್ ನಿಲ್ಲಬಹುದು ಅಥವಾ ಸಬ್ಸಿಡಿ ಕಟ್ ಆಗಬಹುದು. ಇದನ್ನು Smart Meter Installation ಎಂದು ಕರೆಯಲಾಗುತ್ತಿದೆ, ಆದರೆ ನೌಕರರ ಪ್ರಕಾರ ಇದೊಂದು ‘ಸ್ಮಾರ್ಟ್ ಲೂಟಿ’.
  4. ಹಳೆ ಪಿಂಚಣಿ ಯೋಜನೆ (OPS) ಬೇಕು: ಜೀವ ಪಣಕ್ಕಿಟ್ಟು ಕಂಬ ಹತ್ತುವ ಲೈನ್‌ಮ್ಯಾನ್‌ಗಳಿಗೆ ನಿವೃತ್ತಿಯ ನಂತರ ಭದ್ರತೆ ಇಲ್ಲದಂತಾಗಿದೆ. NPS ರದ್ದು ಮಾಡಿ ಹಳೆ ಪಿಂಚಣಿಯನ್ನೇ ಜಾರಿ ಮಾಡಬೇಕು.
  5. ಗುತ್ತಿಗೆ ನೌಕರರ ಕಾಯಂರಾತಿ: ವಿದ್ಯುತ್ ಇಲಾಖೆಯ ಅರ್ಧದಷ್ಟು ಕೆಲಸ ನಡೆಯುತ್ತಿರೋದೇ ಗುತ್ತಿಗೆ ನೌಕರರ ಹೆಗಲ ಮೇಲೆ. ಅವರನ್ನು ಕಾಯಂಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

ಗ್ರಾಹಕರಿಗೆ ಇದರಿಂದ ಏನು ಎಫೆಕ್ಟ್?

ಸಾಮಾನ್ಯ ಜನರಿಗೆ ಅನಿಸಬಹುದು, “ಇದೇನಪ್ಪಾ ಇವರು ಸ್ಟ್ರೈಕ್ ಮಾಡಿದ್ರೆ ನಮಗೇನು?” ಅಂತ. ಆದರೆ ಹುಷಾರ್! ಈ ಹೊಸ ಮಸೂದೆ ಜಾರಿಯಾದರೆ:

  • ಕರೆಂಟ್ ಬಿಲ್ ಸಿಕ್ಕಾಪಟ್ಟೆ ಏರಿಕೆಯಾಗಲಿದೆ. ಸಬ್ಸಿಡಿ (Cross-subsidy) ರದ್ದು ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ.
  • ಭಾಗ್ಯ ಜ್ಯೋತಿ, ಕುಠೀರ ಜ್ಯೋತಿ, ರೈತರ ಪಂಪ್‌ಸೆಟ್ ಯೋಜನೆಗಳು ಮಾಯವಾಗಬಹುದು.
  • ಪ್ರಿಪೇಯ್ಡ್ ಮೀಟರ್ ಬಂದರೆ, ಮೊಬೈಲ್ ರೀಚಾರ್ಜ್ ಮುಗಿದ ತಕ್ಷಣ ಫೋನ್ ಕಟ್ ಆಗುವಂತೆ, ಮನೆಯ ಕರೆಂಟ್ ಕೂಡ ಕಟ್ ಆಗುತ್ತೆ. ರಾತ್ರಿ ಹೊತ್ತು ಕರೆಂಟ್ ಹೋದ್ರೆ ಯಾರು ದಿಕ್ಕು?

ಕೇಂದ್ರ ಸರ್ಕಾರದ ವಾದವೇನು?

ಕೇಂದ್ರ ಇಂಧನ ಸಚಿವಾಲಯ ಬಿಡುಗಡೆ ಮಾಡಿರುವ ಕರಡು ಪ್ರತಿಯಲ್ಲಿ, “ವಿಕಸಿತ ಭಾರತ 2047” ರ ಕನಸನ್ನು ನನಸು ಮಾಡಲು ಈ ಬದಲಾವಣೆ ಬೇಕು ಎನ್ನಲಾಗಿದೆ. 2030ರ ಹೊತ್ತಿಗೆ ಪ್ರತಿಯೊಬ್ಬರೂ 2000 ಯೂನಿಟ್ ಕರೆಂಟ್ ಬಳಸುವಂತಾಗಬೇಕು, ಹಳ್ಳಿಗಳಿಗೂ 24 ಗಂಟೆ ಕರೆಂಟ್ ಸಿಗಬೇಕು, ಅದಕ್ಕೆ ಖಾಸಗಿ ಬಂಡವಾಳ ಬೇಕು ಎಂಬುದು ಸರ್ಕಾರದ ವಾದ. ಆದರೆ, ಲಾಭದ ಆಸೆ ಇರುವ ಖಾಸಗಿಯವರು ಹಳ್ಳಿಗೆ ಬಂದು ಸೇವೆ ಮಾಡ್ತಾರಾ? ಎಂಬುದು ಯಕ್ಷ ಪ್ರಶ್ನೆ.

ಇಂದಿನ ಪರಿಸ್ಥಿತಿ ಹೇಗಿದೆ?

NCCOEEE ಬರೆದ ಪತ್ರದ ಪ್ರಕಾರ, ಸರ್ಕಾರ ನೌಕರರ ಜೊತೆ ಮಾತುಕತೆ ನಡೆಸದೆ ಏಕಾಏಕಿ ಈ ನಿರ್ಧಾರಗಳನ್ನು ಹೇರುತ್ತಿದೆ. “ನಾವು ದೇಶದ ಪ್ರಗತಿಗೆ ವಿರೋಧಿಯಲ್ಲ, ಆದರೆ ಜನರ ಆಸ್ತಿಯನ್ನು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ,” ಎಂದು ನೌಕರರು ಶಪಥ ಮಾಡಿದ್ದಾರೆ.

ನಮ್ಮ ಅಭಿಪ್ರಾಯ: ವಿದ್ಯುತ್ ಎನ್ನುವುದು ಕೇವಲ ವ್ಯಾಪಾರದ ಸರಕಲ್ಲ, ಅದು ಅತ್ಯಗತ್ಯ ಸೇವೆ. ಇದನ್ನು ಲಾಭದ ದೃಷ್ಟಿಯಿಂದ ನೋಡುವ ಕಾರ್ಪೊರೇಟ್ ಕೈಗೆ ಕೊಡುವುದು ಎಷ್ಟು ಸರಿ? ಇಂದಿನ ಮುಷ್ಕರ ಕೇವಲ ನೌಕರರ ಸಂಬಳದ ವಿಷಯವಲ್ಲ, ಇದು ನಮ್ಮ ನಿಮ್ಮೆಲ್ಲರ ಜೇಬಿನ ವಿಷಯವೂ ಹೌದು. ನೀವೂ ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದರಿಂದ, ನಿಮ್ಮ ಧ್ವನಿ ಸರ್ಕಾರಕ್ಕೆ ತಲುಪಲಿ. ರೈತರ, ಬಡವರ ಹಿತ ಕಾಪಾಡುವ ಈ ಹೋರಾಟಕ್ಕೆ ಜಯ ಸಿಗಲಿ.

ಇನ್ನಷ್ಟು ಅಪ್‌ಡೇಟ್ಸ್‌ಗಳಿಗಾಗಿ ನಮ್ಮ ಪೇಜ್ ಫಾಲೋ ಮಾಡಿ.

Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

ಕೇಂದ್ರ ಬಜೆಟ್ 2026: ಬೆಂಗಳೂರಿಗೆ ಸಿಕ್ತು ಹೈಸ್ಪೀಡ್ ರೈಲು ಭಾಗ್ಯ! ಜನಸಾಮಾನ್ಯರಿಗೆ ಮತ್ತು ರೈತರಿಗೆ ಸಿಕ್ಕಿದ್ದೇನು?

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು ನಮ್ಮ WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

BEML Trainee Recruitment 2026: ಐಟಿಐ ಮತ್ತು ಡಿಪ್ಲೊಮಾ ಓದಿದ್ದೀರಾ? ಬೆಂಗಳೂರಿನ BEML ನಲ್ಲಿ ಖಾಲಿ ಇರುವ ಟ್ರೈನಿ ಹುದ್ದೆಗಳಿಗೆ ಇಂದೇ ಆನ್‌ಲೈನ್ ಅರ್ಜಿ ಹಾಕಿ!

ಐಟಿಐ ಮತ್ತು ಡಿಪ್ಲೊಮಾ ಓದಿದ್ದೀರಾ? ಬೆಂಗಳೂರಿನ BEML ನಲ್ಲಿ ಖಾಲಿ ಇರುವ ಟ್ರೈನಿ ಹುದ್ದೆಗಳಿಗೆ ಇಂದೇ ಆನ್‌ಲೈನ್ ಅರ್ಜಿ ಹಾಕಿ!

NIC Recruitment 2026: BE/MCA ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: NIC ಯಲ್ಲಿ 'ಸೈಂಟಿಸ್ಟ್-ಬಿ' (Scientist-B) ಹುದ್ದೆಗೆ ಬೃಹತ್ ನೇಮಕಾತಿ!

BE/MCA ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: NIC ಯಲ್ಲಿ ‘ಸೈಂಟಿಸ್ಟ್-ಬಿ’ (Scientist-B) ಹುದ್ದೆಗೆ ಬೃಹತ್ ನೇಮಕಾತಿ!

NMPA Recruitment 2026: ಡಿಗ್ರಿ ಮುಗಿಸಿದವರಿಗೆ ಬಂಪರ್ ಆಫರ್! ಮಂಗಳೂರು ಪೋರ್ಟ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ 2.2 ಲಕ್ಷ ರೂ. ಸಂಬಳ! ಇಂದೇ ಅರ್ಜಿ ಹಾಕಿ!

ಡಿಗ್ರಿ ಮುಗಿಸಿದವರಿಗೆ ಬಂಪರ್ ಆಫರ್! ಮಂಗಳೂರು ಪೋರ್ಟ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ 2.2 ಲಕ್ಷ ರೂ. ಸಂಬಳ! ಇಂದೇ ಅರ್ಜಿ ಹಾಕಿ!

Digital Census 2026: ಮನೆಯಲ್ಲೇ ಕೂತು ಮೊಬೈಲ್‌ನಲ್ಲೇ ಜನಗಣತಿ ಮಾಡಿ! ಏಪ್ರಿಲ್ 1 ರಿಂದ ಆನ್‌ಲೈನ್ ಸ್ವಯಂ ಗಣತಿ ಶುರು! ಲಿಂಕ್ ಇಲ್ಲಿದೆ ನೋಡಿ!

ಮನೆಯಲ್ಲೇ ಕೂತು ಮೊಬೈಲ್‌ನಲ್ಲೇ ಜನಗಣತಿ ಮಾಡಿ! ಏಪ್ರಿಲ್ 1 ರಿಂದ ಆನ್‌ಲೈನ್ ಸ್ವಯಂ ಗಣತಿ ಶುರು! ಲಿಂಕ್ ಇಲ್ಲಿದೆ ನೋಡಿ!

CBIC Recruitment 2026: ಕೇಂದ್ರ ಸರ್ಕಾರಿ ನೌಕರಿ: ಸಿಬಿಐಸಿ (CBIC) ಯಲ್ಲಿ 172 ಅಧಿಕಾರಿಗಳ ಹುದ್ದೆಗೆ ಬಂಪರ್ ನೇಮಕಾತಿ!

ಕೇಂದ್ರ ಸರ್ಕಾರಿ ನೌಕರಿ: ಸಿಬಿಐಸಿ (CBIC) ಯಲ್ಲಿ 172 ಅಧಿಕಾರಿಗಳ ಹುದ್ದೆಗೆ ಬಂಪರ್ ನೇಮಕಾತಿ!

PrevPrevious2030ರ ವೇಳೆಗೆ ಜಗತ್ತೇ ಬದಲಾಗಲಿದೆ! ನಿಮ್ಮ ಕೆಲಸಕ್ಕೆ ಕುತ್ತು ತರುತ್ತಾ ಎಐ? ನಿಮ್ಮ ಉದ್ಯೋಗ ಸೇಫ್ ಆಗಿದೆಯಾ? ಇಲ್ಲಿದೆ ಬೆಚ್ಚಿಬೀಳಿಸುವ ಸತ್ಯ
Nextರೈತರಿಗೆ ಬಂಪರ್ ನ್ಯೂಸ್! ತೋಟಗಾರಿಕೆ ಬೆಳೆಗಳಿಗೆ ಶೇ. 100ರಷ್ಟು ಸಬ್ಸಿಡಿ: ಅರ್ಜಿ ಹಾಕುವುದು ಹೇಗೆ? ಯಾವೆಲ್ಲಾ ಬೆಳೆಗಳಿಗೆ ಸಿಗುತ್ತೆ ಧನಸಹಾಯ?Next
A-Khata/B-Khata/E-Khata ಅಂದ್ರೆ ಏನು? ಪ್ರಾಪರ್ಟಿ ಖರೀದಿಸುವ ಮೊದಲು ಈ ಖಾತಾಗಳ ವಿಚಾರ ತಿಳಿದಿಲ್ಲ ಅಂದ್ರೆ ನಷ್ಟ ಖಚಿತ!

A-Khata/B-Khata/E-Khata ಅಂದ್ರೆ ಏನು? ಪ್ರಾಪರ್ಟಿ ಖರೀದಿಸುವ ಮೊದಲು ಈ ಖಾತಾಗಳ ವಿಚಾರ ತಿಳಿದಿಲ್ಲ ಅಂದ್ರೆ ನಷ್ಟ ಖಚಿತ!

21 July 2025
Read More »
LKG/UKG in Anganwadi's: ಪೋಷಕರೇ ಇಲ್ಲಿದೆ ಸಿಹಿ ಸುದ್ದಿ ಇನ್ಮೇಲೆ ದುಬಾರಿ ಫೀಸ್ ಚಿಂತೆ ಬಿಡಿ ಅಂಗನವಾಡಿಗಳಲ್ಲಿ ಪ್ರಾರಂಭವಾಗಲಿದೆ ಉಚಿತ LKG,UKG ಶಿಕ್ಷಣ!

LKG/UKG in Anganwadi’s: ಪೋಷಕರೇ ಇಲ್ಲಿದೆ ಸಿಹಿ ಸುದ್ದಿ! ಇನ್ಮೇಲೆ ದುಬಾರಿ ಫೀಸ್ ಚಿಂತೆ ಬಿಡಿ ಅಂಗನವಾಡಿಗಳಲ್ಲಿ ಪ್ರಾರಂಭವಾಗಲಿದೆ ಉಚಿತ LKG,UKG ಶಿಕ್ಷಣ!

20 July 2025
Read More »
Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ!

Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ!

19 July 2025
Read More »
Page1 … Page100 Page101 Page102 Page103 Page104 … Page107
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs