Ericsson Scholarship 2025: ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್ಶಿಪ್ ಪ್ರೋಗ್ರಾಂ ಅಡಿಯಲ್ಲಿ IT/CS ಎಂಜಿನಿಯರಿಂಗ್ನ 2 ನೇ ವರ್ಷದ ವಿದ್ಯಾರ್ಥಿನಿಯರಿಗೆ ₹75,000 ಪಡೆಯಲು ಅರ್ಜಿ ಆಹ್ವಾನ. ಅರ್ಹತೆ (6.5 GPA, ₹6 ಲಕ್ಷ ಆದಾಯ), ಬೇಕಾದ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ. ಕೊನೆಯ ದಿನಾಂಕ: ನವೆಂಬರ್ 30, 2025.ಯಾರು ವಿದ್ಯಾರ್ಥಿವೇತನಕ್ಕೆ ಅರ್ಹರು? ಅರ್ಜಿ ಹೇಗೆ ಸಲ್ಲಿಸಬೇಕು? ಯಾವ ದಾಖಲೆಗಳು ಬೇಕು? ಕೊನೆಯ ದಿನ ಯಾವುದು? — ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು: ನಿಮ್ಮ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಅಡಚಣೆಯಾಗಿದೆಯೇ? ಇಲ್ಲಿದೆ ಎಂಜಿನಿಯರಿಂಗ್ ಓದುತ್ತಿರುವ ಪ್ರತಿಭಾವಂತ ಮಹಿಳಾ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ! ಎರಿಕ್ಸನ್ ಕಂಪನಿಯು 2025-2026 ನೇ ಸಾಲಿನ “ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್ಶಿಪ್ ಪ್ರೋಗ್ರಾಂ” ಅಡಿಯಲ್ಲಿ ₹75,000 ವಿದ್ಯಾರ್ಥಿವೇತನಕ್ಕೆ (Engineering scholarship for Girls) ಅರ್ಹ ಮಹಿಳಾ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮಾಹಿತಿ ತಂತ್ರಜ್ಞಾನ (IT), ಕಂಪ್ಯೂಟರ್ ಸೈನ್ಸ್ (CS), ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಅಥವಾ ದೂರಸಂಪರ್ಕ (Telecom) ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಇದು ದೊಡ್ಡ ಅವಕಾಶವಾಗಿದೆ. ನಿಮ್ಮ ಉನ್ನತ ಶಿಕ್ಷಣಕ್ಕೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ (Engineering support fund). ಅರ್ಜಿ ಸಲ್ಲಿಸಲು ನವೆಂಬರ್ 30, 2025 ಕೊನೆಯ ದಿನಾಂಕವಾಗಿದೆ!
ಎರಿಕ್ಸನ್ ವಿದ್ಯಾರ್ಥಿವೇತನ 2025: ಎಷ್ಟು ಹಣ ಸಿಗುತ್ತದೆ?
Engineering Scholarship for Girls: ಎರಿಕ್ಸನ್ನ ಈ ವಿಶೇಷ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಪ್ರತಿ ಅರ್ಹ ಮಹಿಳಾ ವಿದ್ಯಾರ್ಥಿನಿಗೆ ₹75,000 (ಎಪ್ಪತ್ತೈದು ಸಾವಿರ ರೂಪಾಯಿ) ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಬೇಕು:
- ಅರ್ಜಿದಾರರು ಭಾರತದ ಮಹಿಳಾ ವಿದ್ಯಾರ್ಥಿನಿಯಾಗಿರಬೇಕು.
- ಭಾರತದ ರಾಜ್ಯ/ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಕಾರ್ಯಕ್ರಮದ 2 ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಅಧ್ಯಯನ ವಿಭಾಗಗಳು: ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಅಥವಾ ದೂರಸಂಪರ್ಕ ಎಂಜಿನಿಯರಿಂಗ್ ವಿಭಾಗಗಳು.
- ಅಭ್ಯರ್ಥಿಯು ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 6.5 GPA ಅಂಕಗಳನ್ನು ಗಳಿಸಿರಬೇಕು.
- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷದ ಒಳಗಿರಬೇಕು.
- ವಿಶೇಷ ಆದ್ಯತೆ: ಅಂಗವಿಕಲರು (PwD), ಒಂಟಿ ಪೋಷಕರು (Single Parent) ಅಥವಾ ಅನಾಥರು (Orphans) ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಅನರ್ಹರು: ಎರಿಕ್ಸನ್ ಹಾಗೂ ಬಡ್ಡಿ4ಸ್ಟುಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್ಶಿಪ್ ಪ್ರೋಗ್ರಾಂ ಅರ್ಜಿಗೆ ಬೇಕಾದ ಪ್ರಮುಖ ದಾಖಲಾತಿಗಳು:
ಅರ್ಜಿ ಸಲ್ಲಿಸುವಾಗ ಈ ಕೆಳಗೆ ತಿಳಿಸಲಾದ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು:
- ಅಭ್ಯರ್ಥಿಯ ಆಧಾರ್ ಕಾರ್ಡ್ (Aadhar Card)
- 10 ಮತ್ತು 12 ನೇ ತರಗತಿಯ ಅಂಕಪಟ್ಟಿ (10th and 12th Marks Card)
- ಎಂಜಿನಿಯರಿಂಗ್ ಪ್ರಥಮ ವರ್ಷದ ಅಂಕಪಟ್ಟಿ (First year marks card)
- ಆದಾಯ ಪ್ರಮಾಣ ಪತ್ರ (Income certificate)
- ಶುಲ್ಕ ರಶೀದಿ (Fee receipt)
- ಬ್ಯಾಂಕ್ ಪಾಸ್ ಪುಸ್ತಕ (Bank Passbook)
- ಪಾಸ್ಪೋರ್ಟ್ ಅಳತೆಯ ಫೋಟೋ
- ಅಂಗವೈಕಲ್ಯ ಪ್ರಮಾಣ ಪತ್ರ (Disability Certificate) – ಅನ್ವಯಿಸಿದರೆ.
Ericsson Scholarship 2025: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ವಿದ್ಯಾರ್ಥಿನಿಯರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಹಂತಗಳನ್ನು ಅನುಸರಿಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು:
- ಹಂತ-1: ಮೊದಲಿಗೆ ಈ ಲಿಂಕ್ “Online Application” ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಹಂತ-2: ವೆಬ್ಸೈಟ್ಗೆ ಭೇಟಿ ನೀಡಿದ ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ.
- ಹಂತ-3: ನೀವು ಮೊದಲ ಬಾರಿಗೆ ಭೇಟಿ ನೀಡಿದ್ದರೆ, “Create an Account” ಆಯ್ಕೆ ಮಾಡಿ ಹೊಸ ಖಾತೆಯನ್ನು ತೆರೆಯಿರಿ. ನಂತರ, “Login” ಬಟನ್ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು.
- ಹಂತ-4: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಹಂತ-5: ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here.
To Apply Ericsson Empowering Girl Scholarship Program 2025-26 Online Direct Link: https://www.buddy4study.com/page/ericsson-empowering-girl-scholarship-program
Ericsson Empowering Girl Scholarship Program 2025-26, Ericsson Scholarship 2025, ಎರಿಕ್ಸನ್ ವಿದ್ಯಾರ್ಥಿವೇತನ, Engineering Scholarship for Girls, B.E. Scholarship 2025, ₹75000 Scholarship, EEDS Scholarship
Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ
Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button