Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ರೈತರಿಗೆ ಬಿಗ್ ಶಾಕ್: ರಸಗೊಬ್ಬರ ದರ 2200 ರೂ.ಗೆ ಏರಿಕೆ! DAP ಮತ್ತು ಯೂರಿಯಾ ಮಾರಾಟ ಬ್ಯಾನ್!

  • Picture of Gundijalu Shwetha By Gundijalu Shwetha
  • Published On: May 21, 2026
Fertilizer Price Hike: ರೈತರಿಗೆ ಬಿಗ್ ಶಾಕ್: ರಸಗೊಬ್ಬರ ದರ 2200 ರೂ.ಗೆ ಏರಿಕೆ! DAP ಮತ್ತು ಯೂರಿಯಾ ಮಾರಾಟ ಬ್ಯಾನ್!

Fertilizer Price Hike: ರಾಜ್ಯದಲ್ಲಿ ರಸಗೊಬ್ಬರ (Fertilizer) ಅಭಾವದ ಜೊತೆಗೆ ದರ ಭಾರೀ ಏರಿಕೆಯಾಗಿದೆ. ಕಾಂಪ್ಲೆಕ್ಸ್ ಮತ್ತು ಪೊಟ್ಯಾಷ್ ಬೆಲೆ ₹2200 ತಲುಪಿದ್ದರೆ, ಯೂರಿಯಾ (Urea) ಮತ್ತು ಡಿಎಪಿ (DAP) ಮಾರಾಟಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ರೈತರಿಗೆ FID ಕಡ್ಡಾಯ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ರೈತರಿಗೆ ಬಿಗ್ ಶಾಕ್: ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ದಿಢೀರ್ ಏರಿಕೆ! ಯೂರಿಯಾ, ಡಿಎಪಿ ಸಿಗುತ್ತಿಲ್ಲವೇಕೆ?

ನಮಸ್ಕಾರ ರೈತ ಬಾಂಧವರೇ, ಈ ವರ್ಷ ಮುಂಗಾರು ಮಳೆ (Monsoon) ಚೆನ್ನಾಗಿ ಆಗುತ್ತೆ, ಒಳ್ಳೆ ಬೆಳೆ ತೆಗೆದು ಸಾಲ ತೀರಿಸಬಹುದು ಅಂತ ಅಂದುಕೊಂಡಿದ್ದ ಅನ್ನದಾತರಿಗೆ ಈಗ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಮಳೆಯೇನೋ ಸರಿಯಾದ ಸಮಯಕ್ಕೆ ಬರ್ತಿದೆ, ಆದರೆ ಬಿತ್ತನೆ ಮಾಡಲು ಮಾರುಕಟ್ಟೆಯಲ್ಲಿ ರಸಗೊಬ್ಬರವೇ (Fertilizer) ಸಿಗುತ್ತಿಲ್ಲ. ಒಂದ್ಕಡೆ ಗೊಬ್ಬರದ ತೀವ್ರ ಅಭಾವ, ಇನ್ನೊಂದ್ಕಡೆ ಗಗನಕ್ಕೇರುತ್ತಿರುವ ಬೆಲೆ! ಕಾಂಪ್ಲೆಕ್ಸ್, ಪೊಟ್ಯಾಷ್ ರಸಗೊಬ್ಬರಗಳ ದರ ತಿಂಗಳಲ್ಲೇ ಎರಡು ಬಾರಿ ಏರಿಕೆಯಾಗಿದ್ದು, ರೈತ ಸಮುದಾಯಕ್ಕೆ ಅಕ್ಷರಶಃ ಬರೆ ಎಳೆದಂತಾಗಿದೆ.

WhatsApp Channel
Join Now
Telegram Channel
Join Now

ಮುಂಗಾರು ಬಿತ್ತನೆಯ ಸಿದ್ಧತೆಯಲ್ಲಿರುವ ರೈತರಿಗೆ ರಸಗೊಬ್ಬರ ಸಿಗದೆ ಪರದಾಡುವಂತಾಗಿದೆ. ಅಷ್ಟೇ ಅಲ್ಲ, ದಿಢೀರ್ ಅಂತ ಸರ್ಕಾರ ಯೂರಿಯಾ (Urea) ಮತ್ತು ಡಿಎಪಿ (DAP) ಮಾರಾಟಕ್ಕೆ ನಿರ್ಬಂಧ ಹೇರಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸಗೊಬ್ಬರ ಅಭಾವಕ್ಕೆ ಕಾರಣವೇನು? ಬೆಲೆ ಎಷ್ಟು ಹೆಚ್ಚಾಗಿದೆ? ಎಫ್‌ಐಡಿ (FID) ಕಡ್ಡಾಯ ಮಾಡಿದ್ದೇಕೆ? ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ರಸಗೊಬ್ಬರ ದರದಲ್ಲಿ ಭಾರಿ ಏರಿಕೆ!

Fertilizer Price Hike: ರಸಗೊಬ್ಬರ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಈಗ ಮಧ್ಯಪ್ರಾಚ್ಯ (Middle East) ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾವಸ್ತುಗಳ ಬೆಲೆ ವಿಪರೀತ ಹೆಚ್ಚಾಗಿದೆ. ಇದರ ನೇರ ಪರಿಣಾಮ ನಮ್ಮ ರೈತರ ಮೇಲಾಗುತ್ತಿದೆ. ಯೂರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ, ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ (Subsidy) ನೀಡುವ ಮೂಲಕ ದರವನ್ನು ನಿಯಂತ್ರಣದಲ್ಲಿಟ್ಟಿದೆ. ಇದರಿಂದ ರೈತರಿಗೆ ಯೂರಿಯಾ, ಡಿಎಪಿ ಬೆಲೆ ಹೆಚ್ಚಳದ ಶಾಕ್ ತಟ್ಟಿಲ್ಲ.

ಆದರೆ, Potash fertilizer ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ಇವುಗಳಿಗೂ ಸಬ್ಸಿಡಿ ನೀಡಲಾಗುತ್ತಿದೆಯಾದರೂ ಅದು ಮಿತವಾಗಿದೆ. ಹೀಗಾಗಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾದಾಗಲೆಲ್ಲಾ ಕಂಪನಿಗಳು ರಸಗೊಬ್ಬರದ ಬೆಲೆಯನ್ನೂ ಹೆಚ್ಚಿಸುತ್ತಿವೆ. ಮೇ ತಿಂಗಳ ಆರಂಭದಲ್ಲಿ ಕೇವಲ ₹1,400 ಇದ್ದ ಒಂದು ಚೀಲ (50 ಕೆ.ಜಿ) ಕಾಂಪ್ಲೆಕ್ಸ್ ಮತ್ತು ಪೊಟ್ಯಾಷ್ ಗೊಬ್ಬರ, ಇದೀಗ ₹2,200 ಕ್ಕೆ ಜಿಗಿದಿದೆ! ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರೈತರಿಗೆ ಕಾದಿದೆ ಬಿಗ್ ಶಾಕ್! ಇರಾನ್-ಇಸ್ರೇಲ್ ಯುದ್ಧದಿಂದ ಭಾರತದಲ್ಲಿ ರಸಗೊಬ್ಬರಕ್ಕೆ ಭಾರಿ ಹಾಹಾಕಾರ?

ರಸಗೊಬ್ಬರಗಳ ಹಳೆಯ ಮತ್ತು ಹೊಸ ದರಗಳ ಪಟ್ಟಿ (ಪ್ರತಿ ಚೀಲಕ್ಕೆ):

ಗೊಬ್ಬರದ ಹೆಸರುಕಳೆದ ವರ್ಷದ ದರಈ ವರ್ಷದ ಹೊಸ ದರ
ಪೊಟ್ಯಾಷ್ (Potash fertilizer)₹1800₹1975 (ಹೊಸ ದಾಸ್ತಾನು ₹2200)
ಎನ್‌ಪಿಕೆ (NPK)₹1350₹1550
10:26:26₹2025₹2250
14:35:14₹2175₹2400
ಡಿಎಪಿ (DAP)₹1350₹1350 (ಬೆಲೆ ಏರಿಲ್ಲ)

(ಯೂರಿಯಾ ಮತ್ತು ಡಿಎಪಿಗೆ ಸರ್ಕಾರ ಅನುಕ್ರಮವಾಗಿ ₹1484 ಮತ್ತು ₹1490 ಸಬ್ಸಿಡಿ ನೀಡುತ್ತಿರುವುದರಿಂದ ಬೆಲೆ ಏರಿಕೆಯಾಗಿಲ್ಲ).

ಯೂರಿಯಾ, ಡಿಎಪಿ ಮಾರಾಟಕ್ಕೆ ಸರ್ಕಾರ ನಿರ್ಬಂಧ!

ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಬೆಳೆಯ ವೃದ್ಧಿಗೆ ಮತ್ತು ಫಸಲಿಗೆ ಇವು ಬೂಸ್ಟ್ ನೀಡುತ್ತವೆ ಎಂಬುದು ರೈತರ ನಂಬಿಕೆ. ಆದರೆ, ಸರ್ಕಾರ ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಈ ಗೊಬ್ಬರಗಳ ಮಾರಾಟಕ್ಕೆ ದಿಢೀರ್ ನಿರ್ಬಂಧ ಹೇರಿದೆ.

ಆಯಾ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕರು (JDA) ಗೊಬ್ಬರದ ಅಂಗಡಿ ಮಾಲೀಕರಿಗೆ ಖಡಕ್ ನೋಟಿಸ್ ನೀಡಿದ್ದಾರೆ. “ಯಾವುದೇ ಕಾರಣಕ್ಕೂ ಯೂರಿಯಾ, ಡಿಎಪಿ ಮಾರಾಟ ಮಾಡಕೂಡದು. ಒಂದು ವೇಳೆ ಮಾರಾಟ ಮಾಡಿದ್ದು ಕಂಡುಬಂದರೆ ಕೇಸ್ ಹಾಕಿ, ಅಂಗಡಿ ಲೈಸೆನ್ಸ್ ರದ್ದು ಮಾಡುತ್ತೇವೆ” ಎಂದು ಎಚ್ಚರಿಸಿದ್ದಾರೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ‘ರಸಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಿ’ ಎಂದು ಹೇಳಿಕೆ ನೀಡಿದ್ದು, ಮತ್ತು ರಸಗೊಬ್ಬರ ಆಮದು ಕಡಿಮೆಯಾಗಿರುವುದು ಈ ದಿಢೀರ್ ನಿರ್ಬಂಧಕ್ಕೆ ಕಾರಣ ಎನ್ನಲಾಗಿದೆ.

ರಸಗೊಬ್ಬರ ಮಾರಾಟಕ್ಕೆ ಸರ್ಕಾರದಿಂದ ದಿಢೀರ್ ಬ್ರೇಕ್! ಅಂಗಡಿ ಮಾಲೀಕರು ಮತ್ತು ರೈತರ ನಡುವೆ ಶುರುವಾಯ್ತು ವಾಗ್ವಾದ!

Fertilizer Price Hike: ರೈತರಿಗೆ ಬಿಗ್ ಶಾಕ್: ರಸಗೊಬ್ಬರ ದರ 2200 ರೂ.ಗೆ ಏರಿಕೆ! DAP ಮತ್ತು ಯೂರಿಯಾ ಮಾರಾಟ ಬ್ಯಾನ್!

ಯೂರಿಯಾ ಮತ್ತು ಡಿಎಪಿ ಸಿಗದ ಕಾರಣ ರೈತರು ಅನಿವಾರ್ಯವಾಗಿ ದುಬಾರಿ ಬೆಲೆಯ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಖರೀದಿಸಬೇಕಾಗಿದೆ. 1350 ರೂ. ಇರುತ್ತಿದ್ದ 20-20-0-13 ಕಾಂಪ್ಲೆಕ್ಸ್ ಗೊಬ್ಬರ ಈಗ 2100 ರೂ. ದಾಟಿದೆ. ಗೋದಾಮಿನಲ್ಲಿ ಡಿಎಪಿ, ಯೂರಿಯಾ ಇದ್ದರೂ ಅಂಗಡಿಯವರು ಕೇವಲ ಕಾಂಪ್ಲೆಕ್ಸ್ ಮಾತ್ರ ಮಾರಾಟ ಮಾಡುತ್ತಿರುವುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ನಮಗೆ ಕನಿಷ್ಠ ಮೂರಾಲ್ಕು ಚೀಲಗಳನ್ನಾದರೂ ಕೊಡಿ” ಎಂದು ಅಂಗಡಿ ಮಾಲೀಕರ ಜೊತೆ ರೈತರು ವಾಗ್ವಾದಕ್ಕೆ ಇಳಿಯುತ್ತಿರುವ ದೃಶ್ಯಗಳು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಮಾನ್ಯವಾಗಿವೆ.

ಈ ಬಗ್ಗೆ ಕೃಷಿ ಅಧಿಕಾರಿಗಳು ಪ್ರತಿಕ್ರಿಯಿಸಿ, “ಮೇಲಧಿಕಾರಿಗಳ ಸೂಚನೆ ಮೇರೆಗೆ ಸದ್ಯಕ್ಕೆ ಯೂರಿಯಾ, ಡಿಎಪಿ ಮಾರಾಟವನ್ನು ತಡೆಹಿಡಿಯಲಾಗಿದೆ. ಮುಂದಿನ ಆದೇಶದವರೆಗೂ ಇದು ಅನ್ವಯವಾಗಲಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈತರಿಗೆ ಬಿಗ್ ಶಾಕ್! ಇನ್ಮುಂದೆ ”ಫ್ರೂಟ್ಸ್ ಐಡಿ’ (FID)’ ನಂಬರ್ ಇಲ್ಲದಿದ್ದರೆ ರಸಗೊಬ್ಬರ ಖಂಡಿತಾ ಸಿಗಲ್ಲ! ಸರ್ಕಾರದ ಹೊಸ ರೂಲ್ಸ್ ಏನು?

ಎಫ್‌ಐಡಿ (FID) ಕಡ್ಡಾಯ: ಒಂದು ಎಕರೆಗೆ ಕೇವಲ 1 ಚೀಲ!

ಇನ್ನು ಮುಂದೆ ನೀವು ರಸಗೊಬ್ಬರ ಖರೀದಿಸಬೇಕಾದರೆ Farmer ID ಅಂದರೆ ಎಫ್‌ಐಡಿ (FID) ಕಡ್ಡಾಯ. ಕೃಷಿ ಇಲಾಖೆಯ ‘ಕೆ-ಕಿಸಾನ್’ (K-Kisan) ಆ್ಯಪ್ ಮೂಲಕ ನೋಂದಣಿ ಮಾಡಿ ಗೊಬ್ಬರ ಪಡೆಯಬೇಕು. ವಿಶೇಷ ಎಂದರೆ, ಈಗ ಎಫ್‌ಐಡಿ ಹೊಂದಿದ ರೈತರಿಗೆ ಎಕರೆಗೆ ಕೇವಲ 1 ಚೀಲ ಗೊಬ್ಬರವನ್ನು ಮಾತ್ರ ನೀಡಲಾಗುತ್ತಿದೆ. ನೀವು ಎಲ್ಲಿಯೇ ಖರೀದಿಸಿದರೂ, ಒಂದು ಚೀಲ ಖರೀದಿಯಾಗುತ್ತಿದ್ದಂತೆ ನಿಮ್ಮ ಎಫ್‌ಐಡಿ ಲಾಕ್ ಆಗುತ್ತದೆ.

ಒಂದು ವೇಳೆ 20 ಎಕರೆಗಿಂತ ಹೆಚ್ಚು ಜಮೀನು ಇರುವ ರೈತರಿಗೆ ಹೆಚ್ಚಿನ ಯೂರಿಯಾ ಬೇಕಿದ್ದರೆ, ಅವರು ಕಂದಾಯ ಇಲಾಖೆಯಿಂದ ‘ಬೆಳೆ ದೃಢೀಕರಣ ಪ್ರಮಾಣ ಪತ್ರ’ ಪಡೆದು ತಂದು ಕೊಡಬೇಕಾಗುತ್ತದೆ.

“ಗೊಬ್ಬರನೇ ಸಿಗ್ತಿಲ್ಲ, ಸಿಕ್ಕರೂ ಬೆಲೆ ಡಬಲ್ ಆಗಿದೆ. ಹೀಗಾದರೆ ಕೃಷಿ ಮಾಡುವುದೇ ಕಷ್ಟ” ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ರಸಗೊಬ್ಬರ ಪೂರೈಕೆಯನ್ನು ಸರಾಗಗೊಳಿಸಬೇಕು ಮತ್ತು ಬೆಲೆಯನ್ನು ನಿಯಂತ್ರಿಸಬೇಕು ಎಂಬುದು ಸಮಸ್ತ ರೈತ ಸಮುದಾಯದ ಆಗ್ರಹವಾಗಿದೆ.

ಇಂತಹ ಕೃಷಿ ಸಂಬಂಧಿಸಿದ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Karnataka Teacher Recruitment 2026: ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

KEA KSET 2026: ಡಿಗ್ರಿ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಬೇಕೆ? KEA ಯಿಂದ KSET 2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ!

ಡಿಗ್ರಿ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಬೇಕೆ? KEA ಯಿಂದ KSET 2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ!

Karnataka High Court SDA Recruitment 2026: ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್: ಕರ್ನಾಟಕ ಹೈಕೋರ್ಟ್‌ನಲ್ಲಿ 20 SDA ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಶುರು!

ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್: ಕರ್ನಾಟಕ ಹೈಕೋರ್ಟ್‌ನಲ್ಲಿ 20 SDA ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಶುರು!

SBI Junior Associate Recruitment 2026: SBI ಬ್ಯಾಂಕ್‌ನಲ್ಲಿ 9000+ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಬೃಹತ್ ನೇಮಕಾತಿ! ಪದವೀಧರರಿಗೆ ಬಂಪರ್ ಆಫರ್!

SBI ಬ್ಯಾಂಕ್‌ನಲ್ಲಿ 9000+ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಬೃಹತ್ ನೇಮಕಾತಿ! ಪದವೀಧರರಿಗೆ ಬಂಪರ್ ಆಫರ್!

Gas cylinder eKYC: ಆಗಸ್ಟ್ 16 ರೊಳಗೆ ಗ್ಯಾಸ್ eKYC ಮುಗಿಸದಿದ್ದರೆ ಸಿಲಿಂಡರ್ ರದ್ದಾಗುತ್ತೆ! ಮೊಬೈಲ್‌ನಲ್ಲೇ 2 ನಿಮಿಷದಲ್ಲಿ ಗ್ಯಾಸ್ eKYC ಕಂಪ್ಲೀಟ್ ಮಾಡಿ!

ಆಗಸ್ಟ್ 16 ರೊಳಗೆ ಗ್ಯಾಸ್ eKYC ಮುಗಿಸದಿದ್ದರೆ ಸಿಲಿಂಡರ್ ರದ್ದಾಗುತ್ತೆ! ಮೊಬೈಲ್‌ನಲ್ಲೇ 2 ನಿಮಿಷದಲ್ಲಿ ಗ್ಯಾಸ್ eKYC ಕಂಪ್ಲೀಟ್ ಮಾಡಿ!

PrevPreviousPUC/Degree ಪಾಸ್ ಆದವರಿಗೆ KEA ದಲ್ಲಿ ಭರ್ಜರಿ ಸರ್ಕಾರಿ ಕೆಲಸ: FDA/ SDA ಹುದ್ದೆಗಳಿಗೆ ಅರ್ಜಿ ಆಹ್ವಾನ!
Nextಬೆಳೆ ವಿಮೆಗೆ FID ನಂಬರ್ ಕಡ್ಡಾಯ: ನಿಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಜೋಡಣೆ ಮಾಡಿಸುವುದು ಹೇಗೆ?Next
Panasonic Ratti Chhatr Scholarship 2026: ಬಡ ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಇಂಜಿನಿಯರಿಂಗ್ ಓದಲು Panasonic ಸಂಸ್ಥೆಯಿಂದ ₹70250 ಸ್ಕಾಲರ್‌ಶಿಪ್!

ಬಡ ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಇಂಜಿನಿಯರಿಂಗ್ ಓದಲು Panasonic ಸಂಸ್ಥೆಯಿಂದ ₹70250 ಸ್ಕಾಲರ್‌ಶಿಪ್!

6 August 2026
Read More »
HDFC Parivartan ECSS Programme 2026-27: 1ನೇ ತರಗತಿಯಿಂದ ಡಿಗ್ರಿ ವರೆಗೆ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್‌ನಿಂದ ಸಿಗಲಿದೆ 75000 ರೂ. ವರೆಗೆ ಸ್ಕಾಲರ್‌ಶಿಪ್!

1ನೇ ತರಗತಿಯಿಂದ ಡಿಗ್ರಿ ವರೆಗೆ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್‌ನಿಂದ ಸಿಗಲಿದೆ 75000 ರೂ. ವರೆಗೆ ಸ್ಕಾಲರ್‌ಶಿಪ್!

6 August 2026
Read More »
KEA Land Surveyor Recruitment 2026: KEA ಯಿಂದ 750 'ಭೂಮಾಪಕ' ಹುದ್ದೆಗಳ ನೇಮಕಾತಿಗೆ ಅರ್ಜಿ ದಿನಾಂಕ ವಿಸ್ತರಣೆ: BE/ B.Sc/Diploma ಪಾಸಾದವರು ಕೂಡ ಅಪ್ಲೈ ಮಾಡಿ!

KEA ಯಿಂದ 750 ‘ಭೂಮಾಪಕ’ ಹುದ್ದೆಗಳ ನೇಮಕಾತಿಗೆ ಅರ್ಜಿ ದಿನಾಂಕ ವಿಸ್ತರಣೆ: BE/ B.Sc/Diploma ಪಾಸಾದವರು ಕೂಡ ಅಪ್ಲೈ ಮಾಡಿ!

6 August 2026
Read More »
Page1 Page2 Page3 Page4 … Page167
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs