Free Toilet Scheme 2025: ಸ್ವಚ್ಛ ಭಾರತ ಮಿಷನ್ (Swachh Bharat Mission) ಅಡಿಯಲ್ಲಿ ಕೇಂದ್ರ ಸರ್ಕಾರವು ಶೌಚಾಲಯ ನಿರ್ಮಾಣಕ್ಕೆ ₹12,000 ವರೆಗೆ ಸಹಾಯಧನ ನೀಡುತ್ತದೆ. ಈ ಯೋಜನೆಯ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಓದಿ.
ನವದೆಹಲಿ: ಭಾರತವನ್ನು ಬಯಲು ಶೌಚಮುಕ್ತ (ODF – Open Defecation Free) ರಾಷ್ಟ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ 2014ರಲ್ಲಿ ಆರಂಭವಾದ ಸ್ವಚ್ಛ ಭಾರತ ಮಿಷನ್ (Swachh Bharat Mission) ದೇಶದ ನೈರ್ಮಲ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಈ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರವು ₹12,000 ವರೆಗೆ ಆರ್ಥಿಕ ಸಹಾಯಧನವನ್ನು ಒದಗಿಸುತ್ತಿದೆ.
Free Toilet Scheme 2025: ಸ್ವಚ್ಛ ಭಾರತ ಮಿಷನ್ (Swachh Bharat Mission) ಯೋಜನೆಯ ಪ್ರಮುಖ ಉದ್ದೇಶಗಳು
- ದೇಶದಾದ್ಯಂತ ನೈರ್ಮಲ್ಯವನ್ನು ಸುಧಾರಿಸುವುದು ಮತ್ತು ಬಯಲು ಶೌಚವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.
- ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಉತ್ತೇಜನ ನೀಡುವುದು.
- ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದು.
- ಭಾರತವನ್ನು ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
ಶೌಚಾಲಯಗಳನ್ನು ನಿರ್ಮಿಸುವ ಮೂಲಕ ದೇಶದಲ್ಲಿ ಬಯಲು ಶೌಚಮುಕ್ತ (Open Defecation Free) ಸಾಧನೆ, ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವ ಗುರಿ ಹೊಂದಿ ಈ ಯೋಜನೆ ಜಾರಿಗೆ ಬಂದಿದೆ
ಸಹಾಯಧನ ಮೊತ್ತ ಮತ್ತು ವಿತರಣಾ ಪ್ರಕ್ರಿಯೆ
- ಒಟ್ಟು ಮೊತ್ತ: ಪ್ರತಿ ವೈಯಕ್ತಿಕ ಶೌಚಾಲಯದ ನಿರ್ಮಾಣಕ್ಕೆ ಒಟ್ಟು ₹12,000 ಸಹಾಯಧನವನ್ನು ನೀಡಲಾಗುತ್ತದೆ.
- ಹಂಚಿಕೆ: ಈ ಮೊತ್ತದಲ್ಲಿ ಕೇಂದ್ರ ಸರ್ಕಾರವು ₹7,200 (ಶೇ 60) ಮತ್ತು ರಾಜ್ಯ ಸರ್ಕಾರವು ₹4,800 (ಶೇ 40) ಪಾಲನ್ನು ಭರಿಸುತ್ತವೆ.
- ಹಂತಗಳು: ಸಹಾಯಧನವನ್ನು ಎರಡು ಹಂತಗಳಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಮೊದಲ ಹಂತದಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪ್ರಾರಂಭಿಸಲು ಶೇ 50ರಷ್ಟು ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ. ಉಳಿದ ಶೇ 50ರಷ್ಟು ಮೊತ್ತವನ್ನು ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಿದ ನಂತರ ನೀಡಲಾಗುತ್ತದೆ.
ಗಮನಿಸಿ: ಹಣವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಮಾತ್ರ ವರ್ಗಾಯಿಸಲಾಗುತ್ತದೆ. ಯಾವುದೇ ನಗದು ಅಥವಾ ಚೆಕ್ ಮೂಲಕ ಪಾವತಿ ಇರುವುದಿಲ್ಲ.
ಅಗತ್ಯ ದಾಖಲೆಗಳು
ಅರ್ಜಿಯನ್ನು ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿರಬೇಕು:
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ: ಸಹಾಯಧನವನ್ನು ನೇರವಾಗಿ ಜಮಾ ಮಾಡಲು ಬ್ಯಾಂಕ್ ಪಾಸ್‌ಬುಕ್‌ನ ಪ್ರತಿ ಅಥವಾ ಬ್ಯಾಂಕ್ ಖಾತೆಯ ವಿವರಗಳು.
- ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
- ರೇಷನ್ ಕಾರ್ಡ್ ಪ್ರತಿ
- ನಿವಾಸಿ ದೃಢೀಕರಣ
- ಆದಾಯ ಪ್ರಮಾಣ ಪತ್ರ
How to Apply Free Toilet Scheme 2025 via online: ಸ್ವಚ್ಛ ಭಾರತ ಮಿಷನ್ (Swachh Bharat Mission) ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸ್ವಚ್ಛ ಭಾರತ್ ಮಿಷನ್ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ ಈ ಕ್ರಮವನ್ನು ಅನುಸರಿಸಬೇಕು.
ಹಂತ 1: ಅಧಿಕೃತ ಜಾಲತಾಣ ಪ್ರವೇಶಿಸಿ
ಮೊದಲಿಗೆ 👉 https://swachhbharatmission.gov.in ತೆರೆಯಿರಿ.
- ಗ್ರಾಮೀಣ ಪ್ರದೇಶದವರು SBM-Gramin ವಿಭಾಗವನ್ನು ಕ್ಲಿಕ್ ಮಾಡಿ.
- ನಗರ ಪ್ರದೇಶದವರು SBM-Urban ವಿಭಾಗವನ್ನು ಕ್ಲಿಕ್ ಮಾಡಿ.
ಹಂತ 2: ನೋಂದಣಿ (Registration)
- ನಿಮ್ಮ Mobile Number ನಮೂದಿಸಿ.
- “Get OTP” ಮೇಲೆ ಕ್ಲಿಕ್ ಮಾಡಿ.
- ಮೊಬೈಲ್‌ಗೆ ಬಂದ OTP ನಮೂದಿಸಿ.
- “Sign-in” ಮೇಲೆ ಕ್ಲಿಕ್ ಮಾಡಿ.
ಹಂತ 3: ಅರ್ಜಿ ನಮೂನೆ (Application Form)
ಲಾಗಿನ್ ಆದ ನಂತರ ಅಧಿಕೃತ Application Form ತೆರೆದುಕೊಳ್ಳುತ್ತದೆ.
- ನಿಮ್ಮ ಹೆಸರು, ವಿಳಾಸ, ವಯಸ್ಸು, ಕುಟುಂಬದ ಮಾಹಿತಿ ನಮೂದಿಸಿ.
- ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸೇರಿಸಿ.
ಹಂತ 4: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು:
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್‌ಬುಕ್ ಪ್ರತಿ
- ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ನಿವಾಸಿ ದೃಢೀಕರಣ
- ಪಾಸ್‌ಪೋರ್ಟ್ ಸೈಜ್ ಫೋಟೋ
ಹಂತ 5: Submit ಅರ್ಜಿ
- ಎಲ್ಲಾ ಮಾಹಿತಿಯನ್ನು ಚೆಕ್ ಮಾಡಿದ ಬಳಿಕ Submit ಬಟನ್ ಕ್ಲಿಕ್ ಮಾಡಿ.
- ಸಲ್ಲಿಸಿದ ನಂತರ ನಿಮ್ಮ Acknowledgement / Application ID ದೊರೆಯುತ್ತದೆ.
- ಮುಂದಿನ ಪ್ರಕ್ರಿಯೆಗಾಗಿ ಈ ಐಡಿ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಯಾರು ಅರ್ಹರು?
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸಹಾಯಧನ ಪಡೆಯಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು:
- ಭಾರತೀಯ ನಾಗರಿಕರಾಗಿರಬೇಕು.
- ತಮ್ಮ ಹೆಸರಿನಲ್ಲಿ ಈಗಾಗಲೇ ಶೌಚಾಲಯ ಇರಬಾರದು.
- ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಬಿಪಿಎಲ್ (BPL) ಕುಟುಂಬಗಳು ಮತ್ತು ಗುರುತಿಸಲಾದ ಎಪಿಎಲ್ (APL) ಕುಟುಂಬಗಳು (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ಸಣ್ಣ ಮತ್ತು ಅತಿ ಸಣ್ಣ ರೈತರು, ಹಾಗೂ ಮಹಿಳಾ ಮುಖ್ಯಸ್ಥರನ್ನೊಳಗೊಂಡ ಕುಟುಂಬಗಳು) ಈ ಯೋಜನೆಯಡಿ ಆದ್ಯತೆ ಪಡೆಯುತ್ತವೆ.
ಈ ಯೋಜನೆಯಡಿ ಸಹಾಯಧನ ಪಡೆಯಲು ಆಸಕ್ತರು ತಮ್ಮ ಗ್ರಾಮ ಪಂಚಾಯತಿ ಅಥವಾ ಸ್ಥಳೀಯ ನಗರಾಡಳಿತ ಸಂಸ್ಥೆಯನ್ನು ಸಂಪರ್ಕಿಸಬಹುದು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ, ಯೋಜನೆಯ ಲಾಭ ಪಡೆಯಬಹುದು. ಹೆಚ್ಚು ಮಾಹಿತಿಗಾಗಿ, ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭಗೊಂಡಿದ್ದು, ಕೊನೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು.
ಸಹಾಯವಾಣಿ ಸಂಖ್ಯೆ
ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ: 1800 180 0404 ಗೆ ಸಂಪರ್ಕಿಸಬಹುದು.
Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
Crop Survey App: ರೈತರು ಈಗ ತಮ್ಮ ಬೆಳೆ ಮಾಹಿತಿಯನ್ನು ನೇರವಾಗಿ ತಮ್ಮ ಮೊಬೈಲ್ನಲ್ಲೇ ಪಹಣಿಗೆ ದಾಖಲಿಸಲು ಅವಕಾಶ!
Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ
(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್ಗಳು!
Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್ಲೈನ್ನಲ್ಲಿ ಲಭ್ಯ!
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು ನಮ್ಮ WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button