GAIL Recruitment 2025: GAIL (India) Limited ನಿಂದ 29 ಬ್ಯಾಕ್ಲಾಗ್ ಹುದ್ದೆಗಳಿಗೆ (Chief Manager, Senior Officer, Engineer) ವಿಶೇಷ ನೇಮಕಾತಿ ಅಧಿಸೂಚನೆ ಪ್ರಕಟ. SC/ST/OBC/PwBD ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕ 23.12.2025. ವಿದ್ಯಾರ್ಹತೆ, ಸಂಬಳ (₹50,000 ರಿಂದ) ಮತ್ತು ಆನ್ಲೈನ್ ಅರ್ಜಿ ಲಿಂಕ್ ವಿವರಗಳು ಇಲ್ಲಿವೆ
ಭಾರತದ ಪ್ರಮುಖ ಮಹಾರತ್ನ PSU ಮತ್ತು ನೈಸರ್ಗಿಕ ಅನಿಲ ಕಂಪನಿಯಾದ GAIL (India) Limited ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗ (OBC-NCL), ಮತ್ತು ವಿಕಲಚೇತನ ಅಭ್ಯರ್ಥಿಗಳಿಗಾಗಿ (PwBD) ವಿವಿಧ ವಿಭಾಗಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ಡ್ರೈವ್ ಕುರಿತು ಅಧಿಸೂಚನೆ ಹೊರಡಿಸಿದೆ. ಅರ್ಹ ಭಾರತೀಯ ಪ್ರಜೆಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರಮುಖ ದಿನಾಂಕಗಳು ಮತ್ತು ಹುದ್ದೆಗಳ ವಿವರ: GAIL Recruitment 2025 Important Dates and Vacancy Details):
- ಆನ್ಲೈನ್ ಅರ್ಜಿ ನೋಂದಣಿ ಪ್ರಾರಂಭ: 24.11.2025 (ಬೆಳಗ್ಗೆ 11:00 ರಿಂದ)
- ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.12.2025 (ಸಂಜೆ 18:00 ರವರೆಗೆ)
ಈ ವಿಶೇಷ ನೇಮಕಾತಿ ಡ್ರೈವ್ ಅಡಿಯಲ್ಲಿ ಒಟ್ಟು 29 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಮುಖ್ಯ ಹುದ್ದೆಗಳು ಮತ್ತು ಶ್ರೇಣಿಗಳು (GAIL Recruitment 2025 Grade)
- ಚೀಫ್ ಮ್ಯಾನೇಜರ್ (ಕಾನೂನು) (Chief Manager (Law)): E-5 ಶ್ರೇಣಿ (1 ಹುದ್ದೆ – OBC)
- ಸೀನಿಯರ್ ಆಫೀಸರ್ (Senior Officer): E-2 ಶ್ರೇಣಿ (F&A, F&S, BIS, C&P, ಮಾರ್ಕೆಟಿಂಗ್, HR, ಕಾನೂನು, ವೈದ್ಯಕೀಯ ಸೇವೆಗಳು)
- ಸೀನಿಯರ್ ಇಂಜಿನಿಯರ್ (Senior Engineer) : E-2 ಶ್ರೇಣಿ (ಗೈಲ್ಟೆಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಇನ್ಸ್ಟ್ರುಮೆಂಟೇಶನ್, ಬಾಯ್ಲರ್ ಆಪರೇಷನ್ಸ್, ಸಿವಿಲ್, ಪರಿಸರ ಇಂಜಿನಿಯರಿಂಗ್)
- ಆಫೀಸರ್ (Officer) (ಅಧಿಕೃತ ಭಾಷೆ): E-1 ಶ್ರೇಣಿ
ವಿದ್ಯಾರ್ಹತೆ ಮತ್ತು ಅನುಭವ (Essential Qualifications & Experience)
ಎಲ್ಲಾ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಲೆಕ್ಕಹಾಕಲು ಕೊನೆಯ ದಿನಾಂಕ 23.12.2025 ಆಗಿರುತ್ತದೆ. SC/ST/OBC(NCL)/PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಪ್ರಮುಖ ಹುದ್ದೆಗಳ ಅರ್ಹತೆಗಳು:
- ಚೀಫ್ ಮ್ಯಾನೇಜರ್ (ಕಾನೂನು) (E-5):
- ವಿದ್ಯಾರ್ಹತೆ: ಕನಿಷ್ಠ 55% ಅಂಕಗಳೊಂದಿಗೆ ಪದವಿ ಮತ್ತು LLB (3 ವರ್ಷ) ಅಥವಾ 5 ವರ್ಷಗಳ ಇಂಟಿಗ್ರೇಟೆಡ್ LLB (ಕನಿಷ್ಠ 55% ಅಂಕಗಳು).
- ಅನುಭವ: ಕಾನೂನು ಕಾರ್ಯನಿರ್ವಾಹಕರಾಗಿ ಕನಿಷ್ಠ 12 ವರ್ಷಗಳ ಅನುಭವ.
- ಗರಿಷ್ಠ ವಯಸ್ಸು: OBC(NCL) ಗೆ 46 ವರ್ಷಗಳು.
- ಸೀನಿಯರ್ ಇಂಜಿನಿಯರ್ (E-2) (ಎಲ್ಲಾ ವಿಭಾಗಗಳು):
- ವಿದ್ಯಾರ್ಹತೆ: ಸಂಬಂಧಿತ ಇಂಜಿನಿಯರಿಂಗ್ ಪದವಿ (ಕನಿಷ್ಠ 60% ಅಂಕಗಳು).
- ಅನುಭವ: ಪ್ರಾಜೆಕ್ಟ್ ಕಮಿಷನಿಂಗ್/ನಿರ್ವಹಣೆ/O&M ಕಾರ್ಯಗಳಲ್ಲಿ ಕನಿಷ್ಠ 1 ವರ್ಷದ ಅನುಭವ.
- ಗರಿಷ್ಠ ವಯಸ್ಸು: SC/ST ಗೆ 33 ವರ್ಷಗಳು (E-2 ಹುದ್ದೆಗಳಿಗೆ).
- ಸೀನಿಯರ್ ಆಫೀಸರ್ (ಫೈನಾನ್ಸ್ & ಅಕೌಂಟ್ಸ್) (E-2):
- ವಿದ್ಯಾರ್ಹತೆ: CA/CMA (ICWA) ಅಥವಾ B.Com/ಇಂಜಿನಿಯರಿಂಗ್ ಪದವಿ ಜೊತೆಗೆ ಫೈನಾನ್ಸ್ನಲ್ಲಿ 2 ವರ್ಷಗಳ MBA (ಕನಿಷ್ಠ 60% ಅಂಕಗಳು).
- ಅನುಭವ: ಫೈನಾನ್ಸ್/ಅಕೌಂಟ್ಸ್ನಲ್ಲಿ ಕನಿಷ್ಠ 1 ವರ್ಷದ ಅನುಭವ.
ವೇತನ ಶ್ರೇಣಿ ಮತ್ತು ಭತ್ಯೆಗಳು:
ಆಯ್ಕೆಯಾದ ಅಭ್ಯರ್ಥಿಗಳು ಶ್ರೇಣಿಯ ಪ್ರಕಾರ ಈ ಕೆಳಗಿನ ಆರಂಭಿಕ ಮೂಲ ವೇತನವನ್ನು ಪಡೆಯುತ್ತಾರೆ:
- E-5 ಶ್ರೇಣಿ (Chief Manager): ಆರಂಭಿಕ ಮೂಲ ವೇತನ ₹90,000/- (ಶ್ರೇಣಿ: ₹90,000 – 2,40,000/-).
- E-2 ಶ್ರೇಣಿ (Senior Officer/Engineer): ಆರಂಭಿಕ ಮೂಲ ವೇತನ ₹60,000/- (ಶ್ರೇಣಿ: ₹60,000 – 1,80,000/-).
- E-1 ಶ್ರೇಣಿ (Officer): ಆರಂಭಿಕ ಮೂಲ ವೇತನ ₹50,000/- (ಶ್ರೇಣಿ: ₹50,000 – 1,60,000/-).
ಈ ವೇತನದ ಜೊತೆಗೆ ವೇರಿಯಬಲ್ ಡಿಯರ್ನೆಸ್ ಅಲೌನ್ಸ್ (VDA), ಭತ್ಯೆಗಳು, ವಸತಿ/HRA, ವೈದ್ಯಕೀಯ ಸೌಲಭ್ಯ, ಮತ್ತು ಗ್ರೂಪ್ ವಿಮೆಯಂತಹ ಇತರ ಪ್ರಯೋಜನಗಳು ಲಭ್ಯವಿರುತ್ತವೆ.
ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ: (How To Apply Online for GAIL Recruitment 2025):
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು GAIL ವೆಬ್ಸೈಟ್ (https://gailonline.com) ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
- ನೋಂದಣಿ —>ಲಾಗ್ ಇನ್ —> ಹುದ್ದೆ ಆಯ್ಕೆ —–>ಮಾಹಿತಿ ಭರ್ತಿ——>ಶುಲ್ಕ ಪಾವತಿ —-> ಸಲ್ಲಿಸಿ ಎಂಬ ಹಂತಗಳನ್ನು ಅನುಸರಿಸಬೇಕು.
- ಅರ್ಜಿ ಶುಲ್ಕ: OBC (NCL) ಅಭ್ಯರ್ಥಿಗಳಿಗೆ ₹200/-. SC/ST/PwBD ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
- ಫಾರ್ಮ್ ಸಲ್ಲಿಸುವ ಮೊದಲು “Final Preview” ಬಳಸಿ ಎಲ್ಲಾ ವಿವರಗಳನ್ನು ಪರಿಶೀಲಿಸಿ, ಏಕೆಂದರೆ ಒಮ್ಮೆ ಸಲ್ಲಿಸಿದ ನಂತರ ಎಡಿಟ್ ಮಾಡಲು ಸಾಧ್ಯವಿಲ್ಲ.
ಆಯ್ಕೆ ಪ್ರಕ್ರಿಯೆ:
- ಅರ್ಹ ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಕರೆಯಲಾಗುತ್ತದೆ.
- ಹೆಚ್ಚಿನ ಹುದ್ದೆಗಳಿಗೆ ಗ್ರೂಪ್ ಡಿಸ್ಕಷನ್ (GD) ಮತ್ತು/ಅಥವಾ ಸಂದರ್ಶನ (Interview) ಪ್ರಕ್ರಿಯೆ ಇರುತ್ತದೆ.
- ವಿಶೇಷ ಹುದ್ದೆಗಳಿಗೆ:
- ಸೀನಿಯರ್ ಆಫೀಸರ್ (F&S) ಗೆ ದೈಹಿಕ ಸಹಿಷ್ಣುತಾ ಪರೀಕ್ಷೆ (PET) ಮತ್ತು ಸಂದರ್ಶನ.
- ಆಫೀಸರ್ (ಅಧಿಕೃತ ಭಾಷೆ) ಗೆ ಕೌಶಲ್ಯ ಪರೀಕ್ಷೆ (ಭಾಷಾಂತರ ಕೌಶಲ್ಯ) ಮತ್ತು ಸಂದರ್ಶನ.
- ಕನಿಷ್ಠ ಅರ್ಹತಾ ಅಂಕಗಳು: ಸಂದರ್ಶನದಲ್ಲಿ UR/OBC(NCL) ಗೆ 60%, SC/ST ಗೆ 55%, ಮತ್ತು PwBD ಗೆ 50% ಕನಿಷ್ಠ ಅಂಕಗಳು ಕಡ್ಡಾಯ.
ನಿಮ್ಮ ಅರ್ಹತೆಗೆ ಅನುಗುಣವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ GAIL ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
GAIL-Notification-for-29-Senior-Officer-Engineer-Posts Download Here:
ಪ್ರಮುಖ ಲಿಂಕ್ ಗಳು/Important Links:
| ವಿವರ (Details) | ಡೌನ್ಲೋಡ್ ಲಿಂಕ್ (Download Link) |
| GAIL (India) Limited ನಿಂದ 29 ಬ್ಯಾಕ್ಲಾಗ್ ಹುದ್ದೆಗಳಿಗೆ (Senior Officer, Engineer, Chief Manager) ವಿಶೇಷ ನೇಮಕಾತಿ ಅಧಿಕೃತ ಅಧಿಸೂಚನೆ PDF (GAIL Recruitment 2025 Official Notification PDF ) | Official Notification PDF file: Download Here |
| GAIL (India) Limited ನಿಂದ 29 ಬ್ಯಾಕ್ಲಾಗ್ ಹುದ್ದೆಗಳಿಗೆ (Senior Officer, Engineer, Chief Manager) ವಿಶೇಷ ನೇಮಕಾತಿಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನೇರ ಲಿಂಕ್ (GAIL Recruitment 2025 Apply Online Here) | Apply online Here |
| ಕೊನೆಯ ದಿನಾಂಕ (Last Date) | 23.12.2025 |
| ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ | https://quicknewztoday.com/category/jobs/ |
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
Bank of Baroda Recruitment 2025: 50 ಮ್ಯಾನೇಜರ್ ಹುದ್ದೆಗಳಿಗೆ ಬೃಹತ್ ಅವಕಾಶ! ₹1.20 ಲಕ್ಷದವರೆಗೆ ವೇತನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button