Indian Air Force Agniveer 2025 : ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅಧಿಸೂಚನೆ ಪ್ರಕಟ! ಅರ್ಹತೆ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.
ಹಾಸನ, ಜುಲೈ 03, 2025: ಭಾರತೀಯ ವಾಯುಪಡೆಯಲ್ಲಿ ‘ಅಗ್ನಿವೀರ ವಾಯು’ (Agniveer Vayu) ಹುದ್ದೆಗಳ ನೇಮಕಾತಿಗಾಗಿ ವಿಸ್ತೃತ ಅಧಿಸೂಚನೆ ಪ್ರಕಟಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 11 ರಿಂದ ಜುಲೈ 31, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಪ್ರಕ್ರಿಯೆಗಳು ಸೆಪ್ಟೆಂಬರ್ 25, 2025 ರಿಂದ ಆನ್‌ಲೈನ್ ಪರೀಕ್ಷೆಯೊಂದಿಗೆ ಆರಂಭವಾಗಲಿವೆ ಎಂದು ವಾಯುಪಡೆ ತಿಳಿಸಿದೆ.
ಪ್ರತಿ ವರ್ಷ 2 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈ ಬಾರಿ ಅಗ್ನಿವೀರರ ಹುದ್ದೆಗಳ ಸಂಖ್ಯೆಯನ್ನು ವಾಯುಪಡೆ ಇನ್ನೂ ಸ್ಪಷ್ಟಪಡಿಸಿಲ್ಲ. ಕೇಂದ್ರದ ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಂತರ ದೃಢಪಡಿಸಲಾಗುವುದು.
Indian Air Force Agniveer 2025: Eligibilities: ಅರ್ಹತೆಗಳೇನು?
ಅಗ್ನಿವೀರ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೂ ಒಂದು ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು:
- ವಿಜ್ಞಾನ ವಿಷಯದೊಂದಿಗೆ ಪಿಯುಸಿ/12ನೇ ತರಗತಿ: ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇಕಡಾ 50 ಅಂಕಗಳನ್ನು ಪಡೆದಿರಬೇಕು.
- ಮೂರು ವರ್ಷಗಳ ಎಂಜಿನಿಯರಿಂಗ್ ಡಿಪ್ಲೋಮಾ: ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‌ಸ್ಟ್ರುಮೆಂಟೇಷನ್ ಟೆಕ್ನಾಲಜಿ ಅಥವಾ ಇನ್‌ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಮೂರು ವರ್ಷಗಳ ಡಿಪ್ಲೋಮಾ ಓದಿದವರು ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ವಿಷಯದಲ್ಲಿ ಶೇಕಡಾ 50 ಅಂಕಗಳನ್ನು ಪಡೆದಿರಬೇಕು.
- ಎರಡು ವರ್ಷಗಳ ವೊಕೇಶನಲ್ ಕೋರ್ಸ್: ಫಿಸಿಕ್ಸ್ ಮತ್ತು ಮ್ಯಾಥ್ ವಿಷಯಗಳೊಂದಿಗೆ ಎರಡು ವರ್ಷಗಳ ವೊಕೇಶನಲ್ ಕೋರ್ಸ್ ವ್ಯಾಸಂಗ ಮಾಡಿದವರು ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ವಿಷಯದಲ್ಲಿ ಶೇಕಡಾ 50 ಅಂಕಗಳನ್ನು ಪಡೆದಿರಬೇಕು.
- ವಿಜ್ಞಾನ ವಿಷಯದವರಲ್ಲದಿದ್ದರೆ: ಪಿಯುಸಿ ಅಥವಾ ಎರಡು ವರ್ಷಗಳ ವೊಕೇಶನಲ್ ಕೋರ್ಸ್ ವ್ಯಾಸಂಗ ಮಾಡಿದವರು ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಉತ್ತೀರ್ಣರಾಗಿ, ಇಂಗ್ಲಿಷ್‌ನಲ್ಲಿ ಶೇಕಡಾ 50 ಅಂಕ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಯೋಮಿತಿ: ಅಭ್ಯರ್ಥಿಗಳು 2005ರ ಜುಲೈ 02 ಮತ್ತು 2009ರ ಜನವರಿ 02ರ (ಈ ಎರಡೂ ದಿನಾಂಕಗಳು ಸೇರಿ) ನಡುವೆ ಜನಿಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಯಾವುದೇ ಕಾರಣಕ್ಕೂ 21 ವರ್ಷ ಮೀರಿರಬಾರದು.
ದೈಹಿಕ ಅರ್ಹತೆಗಳು: ಅಭ್ಯರ್ಥಿಗಳ ಕನಿಷ್ಠ ಎತ್ತರ 152.5 ಸೆಂ.ಮೀ. ಇರಬೇಕು ಮತ್ತು ಎದೆಯ ಸುತ್ತಳತೆ 77 ಸೆಂ.ಮೀ. ಇರಬೇಕು (ಉಸಿರು ತೆಗೆದುಕೊಂಡಾಗ 5 ಸೆಂ.ಮೀ. ವಿಸ್ತರಣೆ ಆಗಬೇಕು).
Indian Air Force Agniveer 2025: Application Fees and Selection Procedure: ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಎಲ್ಲಾ ವರ್ಗದ ಅಭ್ಯರ್ಥಿಗಳೂ ₹550 ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲಾಗುವುದಿಲ್ಲ.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆಗೆ ಪ್ರವೇಶಪತ್ರಗಳನ್ನು ಕಳುಹಿಸಲಾಗುತ್ತದೆ. ಪರೀಕ್ಷಾ ದಿನಾಂಕ ಮತ್ತು ಕೇಂದ್ರಗಳ ವಿವರಗಳನ್ನು ಅಭ್ಯರ್ಥಿಗಳ ಇ-ಮೇಲ್‌ಗೆ ಮುಂಚಿತವಾಗಿಯೇ ಕಳುಹಿಸಲಾಗುತ್ತದೆ.
- ಆನ್‌ಲೈನ್ ಪರೀಕ್ಷೆ: ಪ್ರಶ್ನೆಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರಲಿದ್ದು, ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಹೊಂದಿರುತ್ತವೆ. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ದ್ವಿತೀಯ ಪಿಯುಸಿ ಸಿಬಿಎಸ್‌ಇ ಪಠ್ಯಕ್ರಮವನ್ನು ಅನುಸರಿಸಿದ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಅಂಕಗಳು ಇರುತ್ತವೆ.
- ಭೌತಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ಪರೀಕ್ಷೆ: ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಈ ರ್ಯಾಲಿ/ದೈಹಿಕ ಪರೀಕ್ಷೆ ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್ https://agnipathvayu.cdac.in ಗೆ ಭೇಟಿ ನೀಡಬಹುದು. ಯಾವುದೇ ಸ್ಪಷ್ಟೀಕರಣಕ್ಕಾಗಿ ಸಹಾಯವಾಣಿ: 080-25503105 / 25503106 ಗೆ ಸಂಪರ್ಕಿಸಿ.
ಅರ್ಹ ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
🔗Important Links /Dates:
Indian Air Force Agniveer 2025 official Website/ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅಧಿಕೃತ ವೆಬ್‌ಸೈಟ್ | Click Here to official Website |
---|---|
Indian Air Force Agniveer 2025 Detailed Advertisement ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅಧಿಸೂಚನೆ | Click Here for Notification |
Last Date | ಜುಲೈ 11 ರಿಂದ ಜುಲೈ 31, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ |
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!
🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇