Indian Army TGC 142 Recruitment 2025: ಭಾರತೀಯ ಸೇನೆ 142ನೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ 2025 ನೇಮಕಾತಿಗೆ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನ!

Indian Army TGC 142 Recruitment 2025: ಭಾರತೀಯ ಸೇನೆ 142ನೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ 2025 ನೇಮಕಾತಿಗೆ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನ!
Share and Spread the love

Indian Army TGC 142 Recruitment 2025: ಭಾರತೀಯ ಸೇನೆಯಲ್ಲಿ ತಂತ್ರಜ್ಞರಾಗಲು ಇಂಜಿನಿಯರಿಂಗ್ ಪದವೀಧರರಿಗೆ ಅವಕಾಶ – 142ನೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ ನೇಮಕಾತಿ ಪ್ರಕಟಣೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ಭಾರತೀಯ ಸೇನೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತರಾದ ಯುವ ಇಂಜಿನಿಯರ್‌ಗಳಿಗೆ ಸೂಪರ್ ಅವಕಾಶವನ್ನು ನೀಡಿದೆ. 2026ರ ಜನವರಿಯಲ್ಲಿ ಆರಂಭಗೊಳ್ಳುವ 142ನೇ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ (TGC 142) ಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025ರ ಮೇ 29 ಆಗಿದೆ.

Follow Us Section

ಭಾರತೀಯ ಸೇನೆಯು ಪ್ರತಿವರ್ಷ ಇಂಜಿನಿಯರಿಂಗ್ ಪದವೀಧರರಿಗಾಗಿ ಈ ನೇಮಕಾತಿಯನ್ನು ಹಮ್ಮಿಕೊಳ್ಳುತ್ತದೆ. ಈ ವೇಳೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷದ ಪರಿಷ್ಕೃತ ಮತ್ತು ಕಠಿಣ ತರಬೇತಿ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಅಭ್ಯರ್ಥಿಗಳನ್ನು ಲೆಫ್ಟಿನೆಂಟ್ ಹುದ್ದೆಗೆ ನೇಮಕ ಮಾಡಲಾಗುತ್ತದೆ.

ಹುದ್ದೆಗಳ ವಿವರ

ಈ ನೇಮಕಾತಿಯಲ್ಲಿ ವಿವಿಧ ತಾಂತ್ರಿಕ ಶಾಖೆಗಳಾದ ಸಿವಿಲ್, ಮೆಕಾನಿಕಲ್, ಎಲೆಕ್ಟಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿಯೇ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. ಒಟ್ಟಾರೆ ಹುದ್ದೆಗಳ ವಿವರ ಹೀಗಿದೆ:

  • ಕಂಪ್ಯೂಟರ್ ಸೈನ್ಸ್ : 08 ಹುದ್ದೆಗಳು
  • ಸಿವಿಲ್ ಇಂಜಿನಿಯರಿಂಗ್ : 06 ಹುದ್ದೆಗಳು
  • ಎಲೆಕ್ಟಿಕಲ್ ಇಂಜಿನಿಯರಿಂಗ್ : 02 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ : 06 ಹುದ್ದೆಗಳು
  • ಮೆಕಾನಿಕಲ್ ಇಂಜಿನಿಯರಿಂಗ್ : 06 ಹುದ್ದೆಗಳು
  • ಒಟ್ಟು ಹುದ್ದೆಗಳು : 30
Indian Army TGC 142 Recruitment 2025

ಅರ್ಹತೆ ಮತ್ತು ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್, ಮೆಕಾನಿಕಲ್, ಆರ್ಕಿಟೆಕ್ಚರ್, ಎಲೆಕ್ಟಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಶಾಖೆಗಳಲ್ಲಿ ಪದವೀಧರರಾಗಿರಬೇಕು. ಪದವಿ ವ್ಯಾಸಂಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ

2026ರ ಜನವರಿ 1ರ ಅವಧಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 20 ರಿಂದ 25 ವರ್ಷಗಳ ನಡುವೆ ವಯಸ್ಸು ಹೊಂದಿರಬೇಕು. ಅಂದರೆ 1999ರ ಜನವರಿ 2 ರಿಂದ 2005ರ ಜನವರಿ 1ರ ನಡುವೆ ಜನಿಸಿದ್ದವರೇ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವೇತನ ಮತ್ತು ಭತ್ಯೆಗಳು

ತರಬೇತಿ ಅವಧಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 56,100/- ಸ್ಟೈಪೆಂಡ್ ನೀಡಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ರೂ. 56,700 ರಿಂದ ರೂ. 1,77,500/- ಪರ್ ಅನಂ ವೇತನ ಶ್ರೇಣಿಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಜತೆಗೆ DA, HRA, ಲಿವ್ ಅಲವುನ್ಸ್, ರೇಷನ್ ಅಲವುನ್ಸ್, ಟ್ರಾವೆಲ್ ಅಲವುನ್ಸ್ ಸೇರಿದಂತೆ ಸೇನೆಯ ಎಲ್ಲಾ ಅನ್ಯ ಭತ್ಯೆಗಳೂ ಅನ್ವಯವಾಗಲಿದೆ.

ದೈಹಿಕ ಸಾಮರ್ಥ್ಯ ಪ್ರಮಾಣ

ಅಭ್ಯರ್ಥಿಗಳು ನಿಗದಿತ ದೈಹಿಕ ಸಾಮರ್ಥ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಇದರ ವಿವರ ಹೀಗಿದೆ:

  • 2.4 ಕಿಮೀ ಓಟವನ್ನು 10 ನಿಮಿಷ 30 ಸೆಕೆಂಡ್ಗಳೊಳಗೆ ಪೂರ್ಣಗೊಳಿಸಬೇಕು.
  • 40 ಸಿಟ್ ಅಪ್ಸ್, 30 ಪುಷ್ ಅಪ್ಸ್, 6 ಪುಲ್ ಅಪ್ಸ್ ಯಶಸ್ವಿಯಾಗಿ ಪೂರೈಸಬೇಕು.
  • ಈಜು ಸಾಮರ್ಥ್ಯ ಬೇಕು.

ಅರ್ಜಿ ಸಲ್ಲಿಕೆ ವಿಧಾನ

ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ನಲ್ಲಿ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ ಆಧಾರ್ ಕಾರ್ಡ್ ಮತ್ತು SSLC ಪ್ರಮಾಣಪತ್ರಗಳು ಕಡ್ಡಾಯವಾಗಿ ಅಟ್ಯಾಚ್ ಮಾಡಬೇಕು. ಎಲ್ಲಾ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಿದ ರೀತಿಯಲ್ಲೇ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು

🔗Important Links /Dates:

Indian Army TGC 142 Recruitment 2025 Apply OnlineApply Here Online
Indian Army TGC 142 Recruitment 2025 Detailed AdvertisementClick Here for PDF Notification
Last Date29/05/2025

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗RITES Field Engineer Recruitment 2025: ಬೆಂಗಳೂರು ಕಚೇರಿಯಲ್ಲಿ 14 ಹುದ್ದೆಗಳು – ಈಗಲೇ ಅರ್ಜಿ ಸಲ್ಲಿಸಿ!

🔗BARC JRF Recruitment 2025: 105 ಫೆಲೋಶಿಪ್ ಹುದ್ದೆಗಳು-ಮೇ 19 ಕೊನೆಯ ದಿನಾಂಕ

🔗CISF Recruitment 2025: ಹಾಕಿ ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ

🔗ISRO Scientist/Engineer Jobs: 63 ವಿಜ್ಞಾನಿ ಮತ್ತು ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇

Follow Us Section
Share and Spread the love
Gundijalu Shwetha  के बारे में
Gundijalu Shwetha ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ. Read More
For Feedback - quicknewztoday@gmail.com