IPL 2025: GT vs RR: ಸಾಯಿ ಸುದರ್ಶನ್ ಅಬ್ಬರ – ಗುಜರಾತ್ ಟೈಟಾನ್ಸ್ ಗೆ ಭರ್ಜರಿ ಗೆಲುವು ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ IPL 2025 ರ 23ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಮ್ಮ ಶಕ್ತಿ ಮತ್ತು ಸಮರ್ಥತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ ರಾಜಸ್ಥಾನ್ ರಾಯಲ್ಸ್ (RR) ತಂಡದ ವಿರುದ್ಧ 58 ರನ್‌ಗಳ ಭರ್ಜರಿ ಜಯ ಗಳಿಸಿತು. ಈ ಪಂದ್ಯದಲ್ಲಿ ಸಾಯಿ ಸುದರ್ಶನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನೊಂದಿಗೆ ಉತ್ತಮ ಆಟಗಾರನಾಗಿ ಹೊರಹೊಮ್ಮಿದರು.ಈ ಗೆಲುವಿನೊಂದಿಗೆ GT ಅಂಕಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ
🔝 of their Game. 🔝 of the Table. 💙#GT roar to the top of the points table with another strong display of cricket 💪
— IndianPremierLeague (@IPL) April 9, 2025
Scorecard ▶ https://t.co/raxxjzYH5F#TATAIPL | #GTvRR | @gujarat_titans pic.twitter.com/ZDRsDqoMAT
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ GT, ಆರಂಭದಿಂದಲೇ ಆಕ್ರಮಣಶೀಲಕಾರಿ ಆಟವಾಡಿತು. ಸಾಯಿ ಸುದರ್ಶನ್ 82 ರನ್ ಗಳಿಸಿದರು, 8 ಬೌಂಡರಿ ಮತ್ತು 3 ಸಿಕ್ಸರ್ ಗಳ ಸಹಿತ ಅವರ ಆಟ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಜೊತೆಗೆ ಶಾರುಖ್ ಖಾನ್ (36), ಜೋಸ್ ಬಟ್ಲರ್ (36) ಅವರ ಪ್ರಮುಖ ಕೊಡುಗೆ ತಂಡಕ್ಕೆ ಮತ್ತಷ್ಟು ಉತ್ಸಾಹ ತುಂಬಿತು. ಕೊನೆ ಓವರ್‌ಗಳಲ್ಲಿ ರಾಹುಲ್ ತೆವಾಟಿಯಾ (24) ಮತ್ತು ರಶೀದ್ ಖಾನ್ (12)* ಸೇರಿ ತಂಡವನ್ನು ಬಲಿಷ್ಠ 217/6 ರನ್‌ಗಳಿಗೆ ತಲುಪಿಸಿದರು.

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ
IPL 2025:GT vs SRH ಸಿರಾಜ್ ಗಿಲ್ ಮ್ಯಾಜಿಕ್ ಗುಜರಾತ್ ಟೈಟಾನ್ಸ್ ಗೆ ಗೆಲುವು ಹ್ಯಾಟ್ರಿಕ್
ಬೌಲಿಂಗ್‌ನಲ್ಲಿ RR ತಂಡ ತೀವ್ರವಾಗಿ ಪರದಾಡಿತು. ತುಷಾರ್ ದೇಶಪಾಂಡೆ 2 ವಿಕೆಟ್ ಪಡೆದರೂ, GT ಬ್ಯಾಟರ್‌ಗಳ ವಿರುದ್ಧ ಅವರ ಬೌಲಿಂಗ್ ಸೂಕ್ತ ಪರಿಣಾಮ ನೀಡಲಿಲ್ಲ. ಮಹೇಶ್ ತೀಕ್ಷಣ, ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು ಬಾರಿ ದುಬಾರಿ ಆದರು.
ಚೇಸಿಂಗ್ ಆರಂಭಿಸಿದ RR, ನಾಯಕ ಸಂಜು ಸ್ಯಾಮ್ಸನ್ (41) ಅವರಿಂದ ಉತ್ತಮ ಆರಂಭ ಕಂಡಿತು. ಆದರೆ ತಂಡದ ಇತರ ಆಟಗಾರರು ನಿರಂತರವಾಗಿ ವಿಕೆಟ್ ಕಳೆದುಕೊಂಡರು. ರಿಯಾನ್ ಪರಾಗ್ (26) ಮತ್ತು ಶಿಮ್ರಾನ್ ಹೆಟ್ಮೆಯರ್ (52) ಸ್ವಲ್ಪ ಮಟ್ಟಿಗೆ ಹೋರಾಟ ನೀಡಿದರು. ಹೆಟ್ಮೆಯರ್ ಅವರ ಆಕರ್ಷಕ ಆಟ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಕಿರುನಿರೀಕ್ಷೆ ಹುಟ್ಟುಹಾಕಿದರೂ, ಸಾಕಷ್ಟು ನೆರವು ದೊರಕದೆ RR 19.2 ಓವರ್‌ಗಳಲ್ಲಿ ಕೇವಲ 159 ರನ್‌ಗೆ ಆಲೌಟ್ ಆಯಿತು.
GT ಬೌಲಿಂಗ್ ದಾಳಿಯಲ್ಲಿ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದು ಮೈದಾನದಲ್ಲಿ ಮಿಂಚಿದರು. ಅವರ ಜೊತೆಗೆ ಸಾಯಿ ಕಿಶೋರ್ ಮತ್ತು ರಶೀದ್ ಖಾನ್ ತಲಾ 2 ವಿಕೆಟ್ ಪಡೆದು RR ಗೆ ಗೆಲ್ಲಲು ಯಾವುದೇ ಅವಕಾಶ ನೀಡಲಿಲ್ಲ. ಸಿರಾಜ್, ಅರ್ಷದ್ ಖಾನ್ ಮತ್ತು ಕುಲ್ವಂತ್ ಖೆಜ್ರೋಲಿಯಾ ತಲಾ ಒಂದು ವಿಕೆಟ್ ಪಡೆದು ಉತ್ತಮ ಬೌಲಿಂಗ್ ನಿಂದ RR ಗೆ ತೀವ್ರ ಪೆಟ್ಟು ನೀಡಿದರು.
ಈ ಗೆಲುವಿನೊಂದಿಗೆ GT ಅಂಕಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸಾಯಿ ಸುದರ್ಶನ್ ಅವರನ್ನು ಪಂದ್ಯದ ಶ್ರೇಷ್ಠ ಆಟಗಾರ ಎಂದು ಘೋಷಿಸಲಾಯಿತು.

ಸ್ಕೋರ್ ಕಾರ್ಡ್:
ಗುಜರಾತ್ ಟೈಟಾನ್ಸ್: 217/6 (20 ಓವರ್)
ಸಾಯಿ ಸುದರ್ಶನ್ – 82 (8×4, 3×6)
ತುಷಾರ್ ದೇಶಪಾಂಡೆ – 2/53
ರಾಜಸ್ಥಾನ್ ರಾಯಲ್ಸ್: 159/10 (19.2 ಓವರ್)
ಶಿಮ್ರಾನ್ ಹೆಟ್ಮೆಯರ್ – 52 (4×4, 3×6)
ಪ್ರಸಿದ್ಧ್ ಕೃಷ್ಣ – 3/24
IPL 2025 ಪಂದ್ಯದ ವಿವರಗಳು ಮತ್ತು ಬೇರೆ ಯಾವುದೇ ಮಾಹಿತಿಗಾಗಿ quicknewztoday.com ಅನ್ನು ಭೇಟಿ ಮಾಡಬಹುದು
One thought on “IPL 2025: GT vs RR: ಸಾಯಿ ಸುದರ್ಶನ್ ಅಬ್ಬರ – ಗುಜರಾತ್ ಟೈಟಾನ್ಸ್ ಗೆ ಭರ್ಜರಿ ಗೆಲುವು”