IPL 2025: GT vs RCB:ಗುಜರಾತ್ ಟೈಟನ್ಸ್ ವಿರುದ್ಧ RCBಗೆ ತವರಿನಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ನಿನ್ನೆ (ಏಪ್ರಿಲ್ 2, 2025) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 14ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (GT) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಿತು. ತನ್ನ ಅಭಿಮಾನಿಗಳ ಮುಂದೆ RCB ತವರಿನಲ್ಲಿ ಹೀನಾಯವಾಗಿ ಸೋತಿದೆ.RCB ಅಭಿಮಾನಿಗಳಿಗೆ ಈ ಸೋಲು ನಿರಾಸೆಯನ್ನು ತಂದಿದೆ. ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಉತ್ತಮ ಲಯಕ್ಕೆ ಮರಳಿದೆ.

ಆರ್‌ಸಿಬಿ ಬ್ಯಾಟಿಂಗ್ ಪತನ – ಕೇವಲ 169/8 ರನ್
ಗುಜರಾತ್ ಟೈಟನ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 169/8 ರನ್ ಗಳಿಸಿತು. ಆರಂಭಿಕ ಆಟಗಾರರು ವೇಗವಾಗಿ ವಿಕೆಟ್ ಕಳೆದುಕೊಂಡರು. ಕೆಪ್ಟನ್ ರಜತ್ ಪಾಟಿದಾರ್ 12 ರನ್, ವಿರಾಟ್ ಕೊಹ್ಲಿ 7 ರನ್ ಮತ್ತು ಫಿಲ್ ಸಾಲ್ಟ್ 14 ರನ್ ಮಾತ್ರ ಗಳಿಸಿ GT ಬೌಲಿಂಗ್ ಎದುರು ತವರಿನಲ್ಲಿ ಸಪ್ಪೆ ಆದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರ 54 (36) ರನ್ ಗಳಿಂದ ಆರ್‌ಸಿಬಿ ತಂಡವು ಚೇತರಿಸಿಕೊಳ್ಳಲು ಪ್ರಯತ್ನಿಸಿತು. ಜಿತೇಶ್ ಶರ್ಮಾ 33 (21) ಮತ್ತು ಟಿಮ್ ಡೇವಿಡ್ 32 (18) ರನ್ ಗಳಿಸಿದರು. ಅಂತಿಮವಾಗಿ ತಂಡ 169/8 ರನ್ ಗಳಿಸಿ ಸೀಮಿತವಾಯಿತು.
They came to Bengaluru with a motive 💪
— IndianPremierLeague (@IPL) April 2, 2025
And they leave with 2⃣ points 🥳@gujarat_titans complete a comprehensive 8⃣-wicket victory ✌️
Scorecard ▶ https://t.co/teSEWkWPWL #TATAIPL | #RCBvGT pic.twitter.com/czVroSNEml
ಗುಜರಾತ್ ಟೈಟನ್ಸ್ ಪರ ಬೌಲರ್ ಮೋಹಮ್ಮದ್ ಸಿರಾಜ್ 3/19 ಆರ್ಭಟಿಸಿದರೆ, ಸಾಯಿ ಕಿಶೋರ್ 2/22 ಮತ್ತು ಪ್ರಸಿದ್ಧಿ ಕೃಷ್ಣ ಉತ್ತಮ ಪ್ರದರ್ಶನ ನೀಡಿದರು ಆದರೆ ಸ್ಟಾರ್ ಬೌಲರ್ ರಶೀದ್ ಖಾನ್ 54 ರನ್ ನೀಡಿ ಭಾರಿ ದುಬಾರಿ ಆದರು.
ಗುಜರಾತ್ ಟೈಟನ್ಸ್ – ಸುಲಭ ಗೆಲುವು 17.5 ಓವರ್‌ಗಳಲ್ಲಿ ಚೇಸ್ ಕಂಪ್ಲೀಟ್
170 ರನ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಜೋಸ್ ಬಟ್ಲರ್ 73 (39) ರನ್ ಗಳಿಸಿ ಅಜೇಯರಾಗಿದ್ದು, ಕ್ಯಾಪ್ಟನ್ ಶುಬ್ನಾನ್ ಗಿಲ್ ಜೊತೆ ಒಳ್ಳೆ ಪಾರ್ಟನರ್ಶಿಪ್ ಬಂದಿದ್ದು ಸಾಯಿ ಸುಧರ್ಶನ್ 49 (35) ರನ್ ಗಳಿಸಿದರು. ಅಂತಿಮವಾಗಿ ಶೇರ್ಫೇನ್ ರುಥರ್‌ಫರ್ಡ್ 30 (18) ರನ್ ಗಳಿಸಿ ತಂಡವನ್ನು 17.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.
— Gujarat Titans (@gujarat_titans) April 2, 2025
ಆರ್‌ಸಿಬಿ ಪರ ಭುವನೇಶ್ವರ ಕುಮಾರ್ ಮತ್ತು ಹಸೆಲ್ವುಡ್ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಗೆಲುವು ನೀಡಲು ಪ್ರಯತ್ನಿಸಿದರು. ಆದರೆ ಗುಜರಾತ್ ಆಟಗಾರರ ಉತ್ತಮ ಪ್ರದರ್ಶನದಿಂದ ಆರ್‌ಸಿಬಿಗೆ ಸೋಲು ತಪ್ಪಲಿಲ್ಲ.
ಮ್ಯಾನ್ ಆಫ್ ದಿ ಮ್ಯಾಚ್
ಗುಜರಾತ್ ಟೈಟನ್ಸ್ ಪರ ಬೌಲರ್ ಮೋಹಮ್ಮದ್ ಸಿರಾಜ್ 3/19 ಆಟಕ್ಕೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪುರಸ್ಕೃತರಾದರು.

ಅಂಕಪಟ್ಟಿಯ ಸ್ಥಿತಿ
- ಗುಜರಾತ್ ಟೈಟನ್ಸ್ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿತು.
- ಆರ್‌ಸಿಬಿ ಸೋಲಿನ ನಂತರ 4ನೇ ಸ್ಥಾನಕ್ಕೆ ಕುಸಿಯಿತು.
- ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ, ಮತ್ತು ಗುಜರಾತ್ ಟೈಟನ್ಸ್ ಸನ್ ರೈಸರ್ ಹೈದರಾಬಾದ್ ವಿರುದ್ಧ ಆಡಲಿದೆ.
RCB ಅಭಿಮಾನಿಗಳಿಗೆ ಈ ಸೋಲು ನಿರಾಸೆಯನ್ನು ತಂದಿದೆ. ಮುಂದಿನ ಪಂದ್ಯದಲ್ಲಿ ತಂಡ ಮತ್ತಷ್ಟು ಸರ್ವಶಕ್ತಿಯಾಗಿ ಆಡಬೇಕಿದೆ!
ನೀವು ಈ ವಿಚಾರದ ಬಗ್ಗೆ ನಿಮಗೆ ಏನು ಅನಿಸುತ್ತದೆ ಕಮೆಂಟ್ ನಲ್ಲಿ ತಿಳಿಸಿರಿ. ಹೊಸ ಮಾಹಿತಿ ಹಾಗೂ news ಅಪ್‌ಡೇಟ್‌ಗಾಗಿ quicknewztoday.com ಅನ್ನು ಭೇಟಿ ಮಾಡಿ.ನಿಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ಮಾಡಿ

2 thoughts on “IPL 2025: GT vs RCB:ಗುಜರಾತ್ ಟೈಟನ್ಸ್ ವಿರುದ್ಧ RCBಗೆ ತವರಿನಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು”