IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ ‘ಕಾಂತಾರ’ ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB

IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ 'ಕಾಂತಾರ' ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB
Share and Spread the love

IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ ‘ಕಾಂತಾರ’ ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಟೂರ್ನಿಯ ಟೇಬಲ್ ಟಾಪರ್ ಆಗಿದೆ. ಈ ಜಯದಲ್ಲಿ ವಿರಾಟ್ ಕೊಹ್ಲಿಯ ತಾಳ್ಮೆಯ ಆಟ ಮತ್ತು ‘ಕಾಂತಾರ’ ಶೈಲಿಯ ಸೆಲೆಬ್ರೇಷನ್ ಹೈಲೈಟ್ ಆಗಿದೆ.ತವರಿನಲ್ಲೇ ಸೋತಿದ್ದ RCB, ಡೆಲ್ಲಿಯ ವಿರುದ್ಧ ಈ ಬಾರಿ ಆರ್‌ಸಿಬಿ ಆಕ್ರಮಣಕಾರಿ ಆಟ ತೋರಿತು. ಭುವನೇಶ್ವರ್ ಕುಮಾರ್ ಮಿಂಚಿನ ಬೌಲಿಂಗ್ ಮತ್ತು ಕೊಹ್ಲಿ-ಕೃನಾಲ್ ಪಾಂಡ್ಯ ಜತೆಯ ಬ್ಯಾಟಿಂಗ್ ಆಧಾರದ ಮೇಲೆ, ಬೆಂಗಳೂರು ತಂಡ 6 ವಿಕೆಟ್‌ನ ಭರ್ಜರಿ ಜಯವನ್ನು ದಕ್ಕಿಸಿಕೊಂಡಿತು. ಇದರೊಂದಿಗೆ 9 ಎಸೆತ ಬಾಕಿಯಿರುವಾಗಲೇ ಗುರಿ ಮುಟ್ಟಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿಯಿತು.

Follow Us Section

ಆರ್‌ಸಿಬಿ ಆರಂಭಿಕ ಶಾಕ್, ನಂತರ ಕೊಹ್ಲಿ-ಕೃನಾಲ್ ಭರ್ಜರಿ ಜೊತೆಯಾಟ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 162 ರನ್ ಗುರಿ ನೀಡಿತ್ತು. ಆದರೆ ಆರ್‌ಸಿಬಿ ಆರಂಭದಲ್ಲಿ ತೀವ್ರ ಆಘಾತ ಅನುಭವಿಸಿತು. ಜೆಕೊಬ್ ಬೆಥೆಲ್ ಕೇವಲ 12 ರನ್ ಗಳಿಸಿ ಔಟಾದರು. ನಂತರ ದೇವದತ್ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟೀದಾರ್ ಕೂಡ ಒಂದಂಕಿಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ಹೊತ್ತಿಗೆ ಆರ್‌ಸಿಬಿ 26 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

ಅದರಲ್ಲಿ ನಿಂತುಕೊಂಡವರು ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ. ಈ ಜೋಡಿ ಶುರೂಯಿಂದಲೂ ಜಾಣ್ಮೆಯಿಂದ ಬ್ಯಾಟಿಂಗ್ ನಡೆಸಿ, ಪಿಚ್‌ಗೆ ಹೊಂದಿಕೊಂಡ ಬಳಿಕ ಮೈಚಳಿ ಬಿಟ್ಟರು. ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅವರು, ನಾಲ್ಕನೇ ವಿಕೆಟ್‌ಗೆ 84 ಎಸೆತಗಳಲ್ಲಿ 119 ರನ್ ಗಳಿಸಿದ ಸ್ಫೋಟಕ ಜತೆಯಾಟ ನಡೆಸಿದರು. ಕೊನೆಗೆ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಸಿಡಿಸಿ ಔಟಾದರು. ಇನ್ನೊಂದು ತುದಿಯಲ್ಲಿ ಕೃನಾಲ್ ಪಾಂಡ್ಯ ಅಜೇಯ 73 ರನ್ ಬಾರಿಸಿದರು.

ಕೊಹ್ಲಿ-ಕೃನಾಲ್ ಭರ್ಜರಿ ಜೊತೆಯಾಟ:ಕೃನಾಲ್ ಪಂದ್ಯ ಶ್ರೇಷ್ಠ ಆಟಗಾರ

ಭುವಿ ದಾಳಿ, ಡೆಲ್ಲಿ ಸೀಮಿತ ಮೊತ್ತಕ್ಕೆ ಕಡಿವಾಣ:

ಡೆಲ್ಲಿ ಬ್ಯಾಟಿಂಗ್‌ನಲ್ಲಿ ಅಭಿಷೇಕ್ ಪೊರೆಲ್ (28), ಫಾಫ್ ಡು ಪ್ಲೆಸಿ (22), ಹಾಗೂ ಕೆ.ಎಲ್. ರಾಹುಲ್ (41) ಮಾತ್ರ ಸ್ವಲ್ಪ ಹೋರಾಟ ತೋರಿದರು. ಆದರೆ ಭುವನೇಶ್ವರ್ ಕುಮಾರ್ ಡೆತ್ ಓವರ್‌ಗಳಲ್ಲಿ 3 ವಿಕೆಟ್ ತೆಗೆದು ಡೆಲ್ಲಿ ತಂಡವನ್ನು ಸಾಧಾರಣ ಮೊತ್ತಕ್ಕೆ ತಗ್ಗಿಸಿದರು. ಜೋಶ್ ಹೇಜಲ್‌ವುಡ್ 2 ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಮತ್ತು ಯಶ್ ದಯಾಳ್ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ:IPL 2025: RCB vs PBKS: ಪಡಿಕಲ್–ಕೊಹ್ಲಿ ಜೋಡಿ ಟಾಪ್ ಫಾರ್ಮ್‌ – ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ RCB

ಕಾಂತಾರ ಶೈಲಿಯಲ್ಲಿ ಕೊಹ್ಲಿಯಿಂದ ರಾಹುಲ್‌ಗೆ ಸ್ಪೆಷಲ್ ರಿಯಾಕ್ಷನ್:

ಮ್ಯಾಚ್ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಮೊದಲು, ವಿರಾಟ್ ಕೊಹ್ಲಿ ತಮ್ಮ ಸ್ನೇಹಿತ ಹಾಗೂ ಡೆಲ್ಲಿ ಆಟಗಾರ ಕೆ ಎಲ್ ರಾಹುಲ್ ಎದುರೇ ಕಾಂತಾರ ಚಿತ್ರದ ಪ್ರಸಿದ್ಧ ದೃಶ್ಯ ಶೈಲಿಯಲ್ಲಿ ಶೋ ಮಾಡಿದ ದೃಶ್ಯ ಎಲ್ಲರ ಗಮನಸೆಳೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ.

ಹೀಗಾಗಿ ರಾಹುಲ್ ಪ್ರತಿಕ್ರಿಯೆ ನೀಡುತ್ತಾ, “ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಅದು ನನ್ನ ನೆಚ್ಚಿನ ಚಿತ್ರ. ನಾನು ಬೆಳೆದ ನಾಡಿನಲ್ಲಿ ಆ ಶೈಲಿ ಮೆಚ್ಚುಗೆಯಾಗಿದೆ” ಎಂದು ಹಂಚಿಕೊಂಡಿದ್ದಾರೆ.

ಆರೆಂಜ್ ಕ್ಯಾಪ್ ಕೊಹ್ಲಿಯದ್ದೇ:

ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕೊಹ್ಲಿ, ತಮ್ಮ ಆರೆಂಜ್ ಕ್ಯಾಪ್ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಈಗ 10 ಪಂದ್ಯಗಳಲ್ಲಿ 443 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ (427 ರನ್) ಅವರನ್ನು ಹಿಂದಿಕ್ಕಿದ ಕೊಹ್ಲಿ, ಮತ್ತೆ ತಮ್ಮ ಅದೃಷ್ಟವನ್ನು ತೋರಿಸಿದ್ದಾರೆ.

IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ ‘ಕಾಂತಾರ’ ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB

ಪರ್ಪಲ್ ಕ್ಯಾಪ್ ಕೂಡಾ RCB ಗೆ:

ಈ ಪಂದ್ಯದಲ್ಲಿ ಜೋಶ್ ಹೇಜಲ್‌ವುಡ್ 2 ವಿಕೆಟ್ ಪಡೆದು, ಒಟ್ಟಾರೆ ಟೂರ್ನಿ ಯಲ್ಲಿ 18 ವಿಕೆಟುಗಳನ್ನು ಪಡೆದು ಪರ್ಪಲ್ ಕ್ಯಾಪ್ ಸ್ಥಾನವನ್ನು ಪಡೆದುಕೊಂಡರು. ಈ ಮೂಲಕ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಎರಡರಲ್ಲೂ RCB ಮಿಂಚಿದೆ.

IPL 2025:RCB vs DC: ಡೆಲ್ಲಿಯಲ್ಲಿ ರಾಹುಲ್ ಎದುರೇ ‘ಕಾಂತಾರ’ ಶೈಲಿಯಲ್ಲಿ ಫುಲ್ ಶೋ ಹಾಕಿದ ವಿರಾಟ್ ಕೊಹ್ಲಿ: ಆರೆಂಜ್ ಅಂಡ್ ಪರ್ಪಲ್ ಕ್ಯಾಪ್ ನಮ್ದೆ ಅಂದ RCB

ಆರ್‌ಸಿಬಿ ತಂಡ ತೀವ್ರ ಒತ್ತಡದ ನಡುವೆ ಎಚ್ಚರಿಕೆಯ ಆಟವಾಡಿ, ನಂತರ ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಗೆ ಬೀರಿತು. ಕೊಹ್ಲಿ-ಕೃನಾಲ್ ಭರ್ಜರಿ ಬ್ಯಾಟಿಂಗ್, ಭುವನೇಶ್ವರ್ ಕುಮಾರ್ ಬೌಲಿಂಗ್ ಮಿಂಚು, ಜೊತೆಗೆ ಕೊಹ್ಲಿಯ ಕಾಂತಾರ ಶೈಲಿಯ ಸೆಲೆಬ್ರೇಷನ್ ಎಲ್ಲವನ್ನೂ ಸೇರಿಸಿಕೊಂಡು ಈ ಪಂದ್ಯ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

Points Table of IPL 2025 after the match of RCB vs DC

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ👇

🔗IPL 2025: RCB vs RR: ಕೊಹ್ಲಿ-ಪಡಿಕ್ಕಲ್ ಗಿಮಿಕ್-ಹ್ಯಾಸಲ್‌ವುಡ್ ಮ್ಯಾಜಿಕ್ – ಚಿನ್ನಸ್ವಾಮಿಯಲ್ಲಿ RCB ಗೆ ಮೊದಲ ಜಯ!

🔗IPL 2025: RCB vs DC:ಕೆ.ಎಲ್ ರಾಹುಲ್‌ ಅವರ ಅಜೇಯ 93 ರನ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ಗೆ RCB ವಿರುದ್ಧ ರೋಚಕ ಗೆಲುವು.

ಇಂತಹ ಕ್ರೀಡಾ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *