IPL 2025:RCB vs MI ವಿರಾಟ್-ಪಾಟಿದಾರ್ ಮಿಂಚು ವಾಂಖೆಡೆದಲ್ಲಿ ಆರ್‌ಸಿಬಿಗೆ 10 ವರ್ಷಗಳ ನಂತರ ಭರ್ಜರಿ ಜಯ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ 12 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಕಳೆದ 10 ವರ್ಷಗಳಲ್ಲಿ ಆರ್‌ಸಿಬಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ದೊರೆತ ಮೊದಲ ಜಯವಾಗಿದ್ದು, ಪಾಯಿಂಟ್ ಟೇಬಲ್‌ನಲ್ಲಿ RCB ಅನ್ನು ಮೂರನೇ ಸ್ಥಾನಕ್ಕೆ ಏರಿದೆ.
ಟಾಸ್ ಮತ್ತು RCB ಬ್ಯಾಟಿಂಗ್ ಆರ್ಭಟ:
ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಆರ್‌ಸಿಬಿಯನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಲ್ಲೇ ಫಿಲ್ ಸಾಲ್ಟ್ ಔಟಾದರೂ, ವಿರಾಟ್ ಕೊಹ್ಲಿ (67) ಮತ್ತು ದೇವದತ್ ಪಡಿಕ್ಕಲ್ (37) ಉತ್ತಮ ಆರಂಭವನ್ನು ಒದಗಿಸಿದರು. ಇವರಿಬ್ಬರ ನಡುವೆ 91 ರನ್‌ಗಳ ಬಾರಿ ಜೊತೆ ಆಟ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾದರು
A #TATAIPL Classic in every sense 🔥#RCB hold their nerves to seal a win after 1️⃣0️⃣ years against #MI at Wankhede!
— IndianPremierLeague (@IPL) April 7, 2025
Scorecard ▶️ https://t.co/ArsodkwOfO#TATAIPL | #MIvRCB | @RCBTweets pic.twitter.com/uu98T8NtWE
RCB ಇನ್ನಿಂಗ್ಸ್ ತೀಕ್ಷ್ಣ ಆರಂಭ:
ವಿರಾಟ್ ಕೊಹ್ಲಿ ಪವರ್‌ಪ್ಲೇನಲ್ಲಿ 42 ಎಸೆತಗಳಲ್ಲಿ 67 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿ ಮಿಂಚಿದರು. ನಂತರದ ಓವರ್‌ಗಳಲ್ಲಿ ಮಿಡಲ್ ಆರ್ಡರ್ ಸ್ವಲ್ಪ ಕುಸಿತಕ್ಕೀಡಾದರೂ, ರಜತ್ ಪಾಟಿದಾರ್ (64 ರನ್ 32 ಎಸೆತಗಳಲ್ಲಿ, 5 ಬೌಂಡರಿ, 4 ಸಿಕ್ಸರ್) ಮತ್ತು ಜಿತೇಶ್ ಶರ್ಮಾ (40*) ಕೊನೆಯ ಓವರ್‌ಗಳಲ್ಲಿ ಬಿಗ್ ಹಿಟ್ಟಿಂಗ್ ಮೂಲಕ RCB ತಂಡವನ್ನು 221/5 ರನ್ ಗುರಿ ನೀಡಿದರು
ಮುಂಬೈ ಇನ್ನಿಂಗ್ಸ್ ಪ್ರಯತ್ನ:
221 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭವೇ ಕುಸಿತವಾಯಿತು. ರೋಹಿತ್ ಶರ್ಮಾ ಎರಡನೇ ಓವರ್‌ಲ್ಲೇ ಔಟಾದರು. ರಿಯಾನ್ ರಿಕೆಲ್ಟನ್ (17), ವಿಲ್ ಜಾಕ್ಸ್ (22) ಮತ್ತು ಸೂರ್ಯಕುಮಾರ್ ಯಾದವ್ (28) ಇಡೀ ಇನ್ನಿಂಗ್ಸ್‌ನಲ್ಲಿ ಕೆಲವರಷ್ಟು ನೆರವು ನೀಡಿದರು.
ತಿಲಕ್ ವರ್ಮಾ (56 ರನ್, 29 ಎಸೆತಗಳಲ್ಲಿ) ಹಾಗೂ ಹಾರ್ದಿಕ್ ಪಾಂಡ್ಯ (42 ರನ್, 15 ಎಸೆತಗಳಲ್ಲಿ) ತಂಡವನ್ನು ಗೆಲುವಿನ ಹತ್ತಿರ ತರುವುದು ಹೌದಾದರೂ, ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಮೂರು ವಿಕೆಟ್ ಕಬಳಿಸಿ ಕೇವಲ ಮೂರು ರನ್ ನೀಡಿ ದಿಟ್ಟ ಬೌಲಿಂಗ್‌ದಿಂದಾಗಿ MI ಗೆಲುವಿನ ಕನಸು ಹುಸಿಗೊಳಿಸಿದರು.

Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ
IPL 2025: RCB vs CSK: 16 ವರ್ಷಗಳ ಬಳಿಕ ಚೆಪಾಕ್‌ನಲ್ಲಿ RCB ಗೆ ಐತಿಹಾಸಿಕ ಜಯ!
RCB ಬೌಲಿಂಗ್ ಆಕ್ರಮಣ:
ಯಶ್ ದಯಾಲ್ (2/46), ಜೋಶ್ ಹ್ಯಾಜಲ್‌ವುಡ್ (2/37), ಮತ್ತು ಭುವನೇಶ್ವರ್ ಕುಮಾರ್ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಆದರೆ ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ ನಿರ್ಣಾಯಕವಾಗಿ ಮೂರು ವಿಕೆಟ್‌ಗಳನ್ನು ಕಬಳಿಸಿ ಏಕಾಂಗಿಯಾಗಿ MI ಹೋರಾಟವನ್ನು ತಡೆದರು.
ಪಂದ್ಯದ ಪ್ರಮುಖ ಕ್ಷಣಗಳು:
ವಿರಾಟ್ ಕೊಹ್ಲಿಯ ಆರಂಭಿಕ ಮಿಂಚು, ಪಾಟಿದಾರ್‌ನ ವೇಗದ ಅರ್ಧಶತಕ, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ರಿವೈವಲ್ ಇನ್ನಿಂಗ್ಸ್ ಕೃನಾಲ್ ಪಾಂಡ್ಯ ಅವರ ಸೂಪರ್ಬ್ ಬೌಲಿಂಗ್ ಪ್ರದರ್ಶನ ಪಂದ್ಯದ ಪ್ರಮುಖ ಕ್ಷಣಗಳಾಗಿದ್ದವು.
ಪಂದ್ಯ ಶ್ರೇಷ್ಠ ಪ್ರಶಸ್ತಿ
ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ರಜತ್ ಪಾಟಿದಾರ್ ಪಡೆದುಕೊಂಡರು. 64 ರನ್ ಗಳಿಸಿದ ಈ ಆಟಗಾರನ ಮ್ಯಾಚ್ ಪ್ರದರ್ಶನ RCB ಗೆ ಜಯ ತಂದುಕೊಟ್ಟಂತಾಯಿತು.

ಪಂದ್ಯದ ಶ್ರೇಷ್ಠ ಆಟಗಾರ (Player of the Match):
ರಜತ್ ಪಾಟಿದಾರ್ (RCB) – 64 ರನ್ (32 ಎಸೆತಗಳಲ್ಲಿ)
ಪೂರ್ಣ ಸ್ಕೋರ್‌ಕಾರ್ಡ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು – 221/5 (20 ಓವರ್)
- ವಿರಾಟ್ ಕೊಹ್ಲಿ – 67 ರನ್ (42 ಎಸೆತ), 8 ಬೌಂಡರಿ, 2 ಸಿಕ್ಸರ್
- ರಜತ್ ಪಾಟಿದಾರ್ – 64 ರನ್ (32 ಎಸೆತ), 5 ಬೌಂಡರಿ, 4 ಸಿಕ್ಸರ್
- ದೇವದತ್ ಪಡಿಕ್ಕಲ್ – 37 ರನ್ (22 ಎಸೆತ)
- ಜಿತೇಶ್ ಶರ್ಮಾ – 40 ರನ್ (19 ಎಸೆತ), ನಾಟೌಟ್
- ಹಾರ್ದಿಕ್ ಪಾಂಡ್ಯ – 4 ಓವರ್, 45 ರನ್, 2 ವಿಕೆಟ್
- ಟ್ರೆಂಟ್ ಬೌಲ್ಟ್ – 4 ಓವರ್, 57 ರನ್, 2 ವಿಕೆಟ್
- ವಿಘ್ನೇಶ್ ಪುತ್ತೂರು – 1 ಓವರ್, 10 ರನ್, 1 ವಿಕೆಟ್
ಮುಂಬೈ ಇಂಡಿಯನ್ಸ್ – 209/9 (20 ಓವರ್)
- ತಿಲಕ್ ವರ್ಮಾ – 56 ರನ್ (29 ಎಸೆತ), 4 ಬೌಂಡರಿ, 4 ಸಿಕ್ಸರ್
- ಹಾರ್ದಿಕ್ ಪಾಂಡ್ಯ – 42 ರನ್ (15 ಎಸೆತ), 3 ಬೌಂಡರಿ, 4 ಸಿಕ್ಸರ್
- ಸೂರ್ಯಕುಮಾರ್ ಯಾದವ್ – 28 ರನ್ (26 ಎಸೆತ)
- ರಿಯಾನ್ ರಿಕೆಲ್ಟನ್ – 17 ರನ್ (11 ಎಸೆತ)
- ಜಿತೇಶ್ ಶರ್ಮಾ – 40 ರನ್ (19 ಎಸೆತ), ನಾಟೌಟ್
- ಕ್ರುನಾಲ್ ಪಾಂಡ್ಯ – 4 ಓವರ್, 45 ರನ್, 4 ವಿಕೆಟ್
- ಜೋಶ್ ಹ್ಯಾಜಲ್‌ವುಡ್ – 4 ಓವರ್, 37 ರನ್, 2 ವಿಕೆಟ್
- ಯಶ್ ದಯಾಲ್ – 4 ಓವರ್, 46 ರನ್, 2 ವಿಕೆಟ್

#IPL2025 #RCBvsMI #ViratKohli #RajatPatidar #RCBVictory #WankhedeWin #KrunalPandya #TilakVarma #MIvsRCB #IPLNews #KannadaCricketNews #QuickNewzToday
IPL 2025 ಪಂದ್ಯದ ವಿವರಗಳು ಮತ್ತು ಬೇರೆ ಯಾವುದೇ ಮಾಹಿತಿಗಾಗಿ quicknewztoday.com ಅನ್ನು ಭೇಟಿ ಮಾಡಬಹುದು
One thought on “IPL 2025:RCB vs MI ವಿರಾಟ್-ಪಾಟಿದಾರ್ ಮಿಂಚು ವಾಂಖೆಡೆದಲ್ಲಿ ಆರ್‌ಸಿಬಿಗೆ 10 ವರ್ಷಗಳ ನಂತರ ಭರ್ಜರಿ ಜಯ”